ಪಹಣಿ 4,5,6,7 ಕಾಲಂ ಗಳು ಏನೇನು ಹೇಳುತ್ತೆ? ಭಾಗ 2 ರೈತರು ಈ ಮಾಹಿತಿಯನ್ನು ತಿಳಿದುಕೊಳ್ಳಿ, ಮೋಸ ಹೋಗಬೇಡಿ!!
ರೈತ ಬಾಂಧವರೇ ನೀವು ಪಾಣಿಯ ಮಾಹಿತಿಯನ್ನು ತಿಳಿದುಕೊಳ್ಳುವುದು ಅತಿವಶವಾಗಿದ್ದು ನಾವು ಸಂಪೂರ್ಣವಾಗಿ ಮಾಹಿತಿಯನ್ನು ಈ ಲೇಖನದಲ್ಲಿ ಉಲ್ಲೇಖಿಸಿದ್ದೇವೆ.
ಪಹಣಿ ಎಂದರೇನು?
ಜಮೀನಿನ ಮಾಲೀಕತ್ವವನ್ನು ತೋರಿಸುವ ಪತ್ರ. ಇಂಗ್ಲಿಷ್ ನಲ್ಲಿ ಆರ್ ಟಿ ಸಿ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಫಾರ್ಮ್ 16 ಎಂತಲೂ ಕರೆಯುತ್ತಾರೆ.
ಇದರಲ್ಲಿ ಒಟ್ಟು 16 ಕಾಲಂ ಗಳು ಇರುತ್ತವೆ.
ಈಗಾಗಲೇ ಮೂರನೇ ಕಾಲಂ ವರೆಗೆ ತಿಳಿದುಕೊಂಡಿದ್ದು ಮುಂದಿನ ಕಾಲಂಗಳ ಬಗ್ಗೆ ಈ ಕೆಳಗೆ ಉದಾಹರಣೆ ಸಹಿತ ಅವುಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ.
4) ನಾಲ್ಕನೇ ಕಾಲಂನಲ್ಲಿ ನಿಮ್ಮ ಜಮೀನಿನ ಕಂದಾಯದರ, ನೀರಿನ ದರ ವಿದ್ಯುತ್ ದರ ಕೊನೆಯಲ್ಲಿ ಏನಾದರೂ ರಿಯಾಯಿತಿ ಇದ್ದರೆ ಅದರ ವಿವರ ಇರುತ್ತದೆ.
ಗಮನಿಸಿ: ಸಾಮೂಹಿಕವಾಗಿ ಜಮೀನುಗಳನ್ನು ರೀಸರ್ವೇ ಮಾಡಿದಾಗ ಕಂದಾಯದರ ಪರಿಷ್ಕೃತವಾಗುತ್ತದೆ. ಆದರೆ ಕರ್ನಾಟಕದಲ್ಲಿ ಕಳೆದ 30 ವರ್ಷಗಳಿಂದ ಸರ್ವೆ ಮಾಡಲಾಗಿಲ್ಲ ಆದ್ದರಿಂದ ಹಳೆಯ ಕಂದಾಯ ದರವೇ ಚಾಲ್ತಿಯಲ್ಲಿರುತ್ತದೆ.
ಕಂದಾಯವನ್ನು ಗ್ರಾಮ ಲೆಕ್ಕಾಧಿಕಾರಿಗಳು ವಸೂಲಿ ಮಾಡುತ್ತಾರೆ.
5) 5ನೇ ಕಾಲಂನಲ್ಲಿ ನಿಮ್ಮ ಜಮೀನಿನ ಮಣ್ಣಿನ ವಿಧದ ವಿವರ ಇರುತ್ತದೆ ಅಥವಾ ಅದರ ಬಣ್ಣದ ವಿವರ ಇರುತ್ತದೆ. ಅಂದರೆ ನಿಮ್ಮ ಜಮೀನು ಕಪ್ಪು ಜೇಡಿ ಕೆಂಪು ಅಥವಾ ಸೇಡಿ ಇಂದು ಕೊಟ್ಟಿರುತ್ತಾರೆ ಇದು ಕಂದಾಯದರ ನಿಗದಿ ಮಾಡಲು ತುಂಬಾ ಅವಶ್ಯಕ
6) ಆರನೇ ಕಾಲಂನಲ್ಲಿ ನಿಮ್ಮ ಜಮೀನಿನ ಮೂಲ ಇತಿಹಾಸದ (ಪಟ್ಟಾ) ವಿವರ ಇರುತ್ತದೆ. ಅಂದರೆ ಈ ಜಮೀನು ಖಾಸಗಿ ಅಥವಾ ಸರ್ಕಾರದ್ದು ಅಥವಾ ಇನಾಮು ಕೊಟ್ಟದ್ದೊ ಎಂಬ ಮಾಹಿತಿ ಒದಗಿಸುತ್ತದೆ
7) ಏಳನೇ ಕಾಲಂನಲ್ಲಿ ನಿಮ್ಮ ಜಮೀನಿನಲ್ಲಿ ಎಷ್ಟು ಮರಗಳಿವೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ. ಹಾಗೂ ಸರ್ಕಾರದ ಮರಗಳಿದ್ದರೆ(ಈಚಲ ಹಾಗೂ ನೀಲಗಿರಿ ಇತ್ಯಾದಿ) ಅವುಗಳ ಮೇಲೆ ಯಾವುದೇ ಅಧಿಕಾರವಿರುವುದಿಲ್ಲ ಎಂಬ ಬಗ್ಗೆ ಮಾಹಿತಿ ಇರುತ್ತದೆ
ಜಮೀನು ಹೊಂದಿರುವ ಪ್ರತಿಯೊಬ್ಬ ರೈತನಿಗೂ ತನ ಜಮೀನಿನ ಅತಿ ಮುಖ್ಯ ದಾಖಲೆಯಾದ ಪಹಣಿ ಪತ್ರದ ಬಗ್ಗೆ ತಿಳಿದುಕೊಳ್ಳೋದು ಅತಿ ಮುಖ್ಯ.
ಆದ್ದರಿಂದ ಪಹಣಿ ಪತ್ರದಲ್ಲಿರುವ ಪ್ರತಿಯೊಂದು ಕಾಲಮ್ ಏನೇನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.
ಆದ್ದರಿಂದ ಉದಾಹರಣೆ ಸಹಿತ ಅವುಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ.
ಪಹಣಿ ಬಗ್ಗೆ ತಿಳಿದುಕೊಳ್ಳಲು ಮುಂಚೆ ಅದರ ಹಿನ್ನೆಲೆಯನ್ನು ಗಮನಿಸೋಣ
ಪಹಣಿ ಜಾರಿಗೆ ಬಂದಿದ್ದು ಹೇಗೆ?
ಈ ಹಿಂದಿನ ಬ್ರಿಟಿಷ್ ಇಂಡಿಯಾ ಸರ್ಕಾರ ಆಡಳಿತದಲ್ಲಿದ್ದಾಗ ಬೇರೆ ಬೇರೆ ರೀತಿಯಾದ ಭೂಕಂದಾಯ ನೀತಿ ಇತ್ತು.
ಆಗಿನ ಕಾಲದಲ್ಲಿ ರೈತರಿಗೆ ತಮ್ಮ ಜಮೀನಿನ ಗಡಿ ಗುರುತಿಸುವುದು ಕಷ್ಟವಾಗಿತ್ತು. ಅದರ ಫಲವಾಗಿ ಬಲಾಢ್ಯ ರೈತರು ಹಾಗೂ ಜಮೀನ್ದಾರರು ಸಾಲ ಹಾಗೂ ಕಂದಾಯದ ನೆಪದಲ್ಲಿ ಬಡ ರೈತರ ಜಮೀನನ್ನು ಕಸಿದುಕೊಳ್ಳುತ್ತಿದ್ದರು.
ಆಗಿನ ಕಾಲದ ಮದ್ರಾಸ್ ಸಂಸ್ಥಾನದ ಗೌರ್ನರ್ ಆದಂತಹ ಪ್ರಸಿದ್ಧ ಭೂ ಸುಧಾರಕ ಥಾಮಸ್ ಮುನ್ರೊ ರವರು ಕಂದಾಯ ನೀತಿಯಿಂದಾಗಿ ಅಂದಿನ ಬ್ರಿಟಿಷ್ ಸರ್ಕಾರ ಅನೇಕ ಭೂ ಸುಧಾರಣೆಗಳನ್ನು ತಂದಿತು.
ಅದರ ಫಲವಾಗಿ ಪ್ರತಿಯೊಬ್ಬ ರೈತರ ಜಮೀನನ್ನು ಗುರುತಿಸಿ ಸಂಬಂಧಪಟ್ಟ ಹಕ್ಕು ಪತ್ರಗಳನ್ನು ನೀಡಲು ಪ್ರಾರಂಭಿಸಿದರು ಅದಕ್ಕೆ ಗಟ ಎಂದು ಕರೆಯಲಾಗುತ್ತಿತ್ತು.
ಹಾಗೂ 19ನೇ ಶತಮಾನದ ಅಂತ್ಯದಲ್ಲಿ ಭೂಮಿಯನ್ನು ಅಳತೆ ಮಾಡಿ ಪ್ರತಿಯೊಂದು ಜಮೀನಿಗೂ ಸರ್ವೆ ನಂಬರ್ ಕೊಡಲು ಪ್ರಾರಂಭಿಸಿದರು.
ಪಹಣಿ ಎಂದರೇನು?
ಜಮೀನಿನ ಮಾಲೀಕತ್ವವನ್ನು ತೋರಿಸುವ ಪತ್ರ. ಇಂಗ್ಲಿಷ್ ನಲ್ಲಿ ಆರ್ ಟಿ ಸಿ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಫಾರ್ಮ್ 16 ಎಂತಲೂ ಕರೆಯುತ್ತಾರೆ.
ಇದರಲ್ಲಿ ಒಟ್ಟು 16 ಕಾಲಂ ಗಳು ಇರುತ್ತವೆ.
ಪಹಣಿ ಬಗ್ಗೆ ಗಮನಿಸಬೇಕಾದ ಅತಿ ಮುಖ್ಯ ವಿಷಯಗಳು ಏನು?
*ಪಹಣಿ ಅತಿ ಮುಖ್ಯ ದಾಖಲೆಯಾಗಿರುವುದರಿಂದ ವರ್ಷಕ್ಕೊಮ್ಮೆ ತೆಗೆದುಕೊಂಡು ಪರಿಶೀಲಿಸುವುದು ಸೂಕ್ತ.
* ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮೂಲ ಸರ್ವೆ ಆರಂಭವಾಗಿದ್ದು ನಮ್ಮ ಮೈಸೂರು ಸಂಸ್ಥಾನದಲ್ಲಿ
* ಸರ್ವೆ ಮಾಡುವುದು ಹೇಗೆ ಬಂತು?
ಗ್ರಾಮ ಪ್ರದೇಶವನ್ನು ಹೊರತುಪಡಿಸಿ ಉತ್ತರ ದಿಕ್ಕಿನಿಂದ ಪೂರ್ವಕ್ಕೆ ಪ್ರಾರಂಭಿಸಿ ಅಂದರೆ ಒಂದನೇ ಸರ್ವೇ ನಂಬರ್ ಎಂದು ಗುರುತಿಸಿ ಹೀಗೆ ಪೂರ್ವದಿಂದ ದಕ್ಷಿಣ ದಿಕ್ಕುಗಳಿಗೆ ಹಾಗೂ ಕೊನೆಯಲ್ಲಿ ಪಶ್ಚಿಮ ದಿಕ್ಕಿಗೆ ಸವೇ೯ ಮಾಡಲಾಗುತ್ತಿತ್ತು.
* ಸರ್ವೆ ನಂಬರ್ 1 ಎಲ್ಲಿರುತ್ತದೆಯೋ ಅದರ ಪಕ್ಕದಲ್ಲಿಯೇ ಗ್ರಾಮದ ಕೊನೆಯ ಸರ್ವೆ ನಂಬರ್ ಇರುತ್ತದೆ.
ಹೀಗೆ ನಿಮ್ಮ ಜಮೀನಿನ ಪಹಣಿ ಪತ್ರದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ