No Fertilizer,10 Kg Per Plant :: ಈ ರೀತಿ ಕೃಷಿ ಮಾಡಿದರೆ ಅಡಿಕೆ ತೋಟಕ್ಕೆ ಗೊಬ್ಬರ ಹಾಕೋದೇ ಬೇಡ! ಗೊಬ್ಬರ ಇಲ್ಲ ಅಂದ್ರು 10 ಕೆಜಿ ಅಡಿಕೆ ಗೊನೆ ಪಡೆಯಬಹುದು!
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಡಿಕೆ (Arecanut) ಬೆಳೆ ವಿಸ್ತರಣೆ ಆಗುತ್ತಿದ್ದು ಇದಕ್ಕೆ ಪ್ರಮುಖ ಕಾರಣ ಅಡಿಕೆ ದರ. ಚಿನ್ನದ ದರದಂತೆ ಯಾವಾಗಲೂ ಏರುಗತಿಯಲ್ಲಿರುವ ಅಡಿಕೆ ದರವು ರೈತರನ್ನು
ಅಡಿಕೆ ಕೃಷಿ ಮಾಡುವಂತೆ ಕೈಬೀಸಿ ಕರೆಯುತ್ತದೆ. ಹಾಗಾಗಿ ಇತ್ತೀಚಿಗೆ ರೈತರು ಬೇರೆ ಬೇರೆ ಕೃಷಿ ಮಾಡುವುದನ್ನು ಬಿಟ್ಟು ಅಡಿಕೆ ತೋಟಗಳನ್ನು ಮಾಡುತ್ತಿದ್ದಾರೆ.
ಆದರೆ ಅಡಿಕೆ(Arecanut) ತೋಟ ಮಾಡಿದರು ಎಂದಾಕ್ಷಣ ಎಲ್ಲಾ ಅಡಿಕೆ ಬೆಳೆಗಾರರಿಗೂ ಕೂಡ ಸಮಾನವಾಗಿ ಆದಾಯ ಬರುತ್ತದೆ ಎಂದಲ್ಲ.
ಅಡಿಕೆ ಬೆಳೆಗಾರರು ಕೂಡ ಬೇರೆ ಬೇರೆ ವಿಧಗಳಲ್ಲಿ ಕೃಷಿ ಮಾಡುತ್ತಾರೆ ಅವರು ಯಾವ ರೀತಿಯಲ್ಲಿ ಅಡಿಕೆ ಮರಗಳನ್ನು ಬೆಳೆಸುತ್ತಾರೆ ಎಂಬುದರ ಮೇಲೆ ಅವರ ಆದಾಯ ನಿಂತಿರುತ್ತದೆ.
ಮುಖ್ಯವಾಗಿ ಅವರು ತೋಟದಲ್ಲಿ ಮಣ್ಣಿನ ಫಲವತ್ತತೆ, ಮರಗಳಿಗೆ ಗೊಬ್ಬರ ಹೀಗೆ ಮರಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಯಾವ ರೀತಿಯಲ್ಲಿ ಕೊಡುತ್ತಾರೆ ಎಂಬುದರ ಮೇಲೆ ಅಡಿಕೆಯ ನಿಂತಿರುತ್ತದೆ.
ರಸಗೊಬ್ಬರ(chemical fertilizers) ಉಳುಮೆಯಿಂದ ಲಾಭವಾ? ನಷ್ಟವಾ?
ನಾವು ಇದನ್ನೆಲ್ಲ ಏಕೆ ಹೇಳುತ್ತಿದ್ದೇವೆಂದರೆ ಇತ್ತೀಚಿಗೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆದಾಯ ಗಳಿಸಬೇಕೆಂದು ತೋಟಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ.
ತೋಟಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಉಳುಮೆ ಮಾಡುತ್ತಾರೆ. ಆದರೆ ಇದರಿಂದ ಅಡಿಕೆ ಬೆಳಗಾರರಿಗೆ ನಿಶ್ಚಿತವಾಗಿ ಲಾಭವಾಗುತ್ತದೆ ಎಂದು ಹೇಳಲಾಗುವುದಿಲ್ಲ.
ರೈತ ವಿಶ್ವನಾಥ್ ಮಾಡಿದ ಕಮಾಲ್!
ನಾವು ಇದೀಗ ನಿಮಗೆ ಒಬ್ಬರು ಯಶಸ್ವಿ ರೈತರ ಬಗ್ಗೆ ಹೇಳುತ್ತಿದ್ದೇವೆ. ಇವರು ಕಳೆದ 10 ವಷ೯ಗಳಿಂದ ತಮ್ಮ ಅಡಿಕೆ (Arecanut) ತೋಟಕ್ಕೆ ಯಾವುದೇ ರೀತಿಯ ಗೊಬ್ಬರ ಹಾಕಿಲ್ಲ ಅದು ಕುರಿ ಕೋಳಿ ಗೊಬ್ಬರವು ಸೇರಿ ಯಾವ ರೀತಿಯ ಗೊಬ್ಬರವನ್ನು ಬಳಸಿಲ್ಲ.
ಅಲ್ಲದೆ ತೋಟದಲ್ಲಿ ಉಳುಮೆ ಕೂಡ ಮಾಡಿಲ್ಲ. ಏನಿದು ವಿಚಿತ್ರ ಎಂದುಕೊಳ್ಳುತ್ತಿದ್ದೀರಾ? ಆದರೆ ಇದು ನಿಜ. ತುಮಕೂರಿನ ಮಧುಗಿರಿ ತಾಲೂಕಿನ ನಿವಾಸಿ ವಿಶ್ವನಾಥ್ ರವರು
ಈ ರೀತಿ ತೋಟದಲ್ಲಿ ಯಾವುದೇ ರೀತಿಯ ಗೊಬ್ಬರ ಬಳಸದೆ ಉಳುಮೆ ಮಾಡದೆ ತಮ್ಮ ತೋಟದಲ್ಲಿ ಎಷ್ಟು ಅದ್ಭುತವಾಗಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ ಎಂದು ವಿವರಿಸಿದ್ದು, ಇದು ಬೇರೆ ಅಡಿಕೆ ಬೆಳೆಗಾರರಿಗೆ ದಾರಿ ದೀಪವಾಗಲಿದೆ.
ವಿಶ್ವನಾಥ್ ರವರು ಸಾವಯವ ಕೃಷಿ (Organic farming) ಪದ್ಧತಿಯನ್ನು ಅಳವಡಿಸಿಕೊಂಡಿದ್ದು ತೋಟದಲ್ಲಿ ಯಾವುದೇ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ.
ಈ ರೀತಿಯ ರಸಗೊಬ್ಬರಗಳನ್ನು ಬಳಸಿದರೆ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಪ್ರಾರಂಭದಲ್ಲಿ ರಸಗೊಬ್ಬರಗಳು ಸಹಾಯಕ ಎನಿಸಿದರು ಕೂಡ ಎರಡು ಮೂರು ವರ್ಷಗಳಲ್ಲಿ ಭೂಮಿಯ ಫಲವತ್ತತೆ ಕಡಿಮೆಯಾಗಿ,
ನೀರಿನ ಮಟ್ಟ ಕುಸಿದಿರುತ್ತದೆ. ಹಾಗಾಗಿ ಒಂದು ಹಂತದ ನಂತರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಈಗ ಅಂತಜ೯ಲ ಮಟ್ಟವೂ ಕೂಡ ಕಡಿಮೆಯಾಗಿದ್ದು, ಬರಗಾಲದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಇಲ್ಲವೆಂದಮೇಲೆ
ಯಾವ ಬೆಳೆ ತಾನೇ ಹೆಚ್ಚಿನ ಇಳುವರಿ ಕೊಡಲು ಸಾಧ್ಯ ಅಲ್ಲವೇ?
ಗೊಬ್ಬರ ಬೇಕಿಲ್ಲ! ಕಸಕಡ್ಡಿ ತೆಗೆದುಹಾಕಲ್ಲ!
ಹೀಗಾಗಿ ವಿಶ್ವನಾಥ್ ರವರು ತಮ್ಮ ತೋಟದಲ್ಲಿ ಯಾವತ್ತೂ ರಸಗೊಬ್ಬರಗಳನ್ನು ಬಳಸಿಲ್ಲ. ಅವರ ತೋಟದಲ್ಲಿ ಉಳುಮೆ ಮಾಡಿ ತೋಟವನ್ನು ಸ್ವಚ್ಛವಾಗಿಡುವ ಬದಲು ಅಲ್ಲಿನ ಕಸ ಕಡ್ಡಿಗಳನ್ನು ಅಲ್ಲಿಯ ಬಿಡುತ್ತಾರೆ.
ಒಂದು ಕಡ್ಡಿಯನ್ನು ಕೂಡ ಎತ್ತಿ ಹೊಲದಿಂದ ಆಚೆ ಬಿಸಾಡುವುದಿಲ್ಲ. ಅದನ್ನು ಮತ್ತೆ ಮರದ ಬುಡಕ್ಕೆ ಹಾಕಿ ಮರಕ್ಕೆ ಅದೇ ಗೊಬ್ಬರವಾಗಿ ಪರಿಣಮಿಸುವಂತೆ ಮಾಡುತ್ತಾರೆ.
ಅಡಿಕೆ ತೋಟಗಳಿಗೆ ಬೆಸ್ಟ್ ಡಾಕ್ಟರ್ ಇದ್ದಾರೆ!
ಇವರು ಸಾವಯವ ಕೃಷಿ ಪದ್ಧತಿಯಲ್ಲಿ ಅಡಿಕೆ ಮರಗಳು ಚೆನ್ನಾಗಿರುವಂತೆ ಮಾಡಲು ಮುಖ್ಯವಾಗಿ ಬಳಸುವ ಒಂದೇ ಒಂದು ಪದಾರ್ಥ ಎಂದರೆ ಅದು ಜೀವಾಮೃತ.
ನಿರ್ದಿಷ್ಟವಾಗಿ ಹೇಳಬೇಕೆಂದರೆ ಇವರು ಬಳಸುವುದು ಡಾಕ್ಟರ್ ಸಾಯಿಲ್(doctor soil) ಜೀವಾಮೃತ. ಈ ಜೀವಾಮೃತವನ್ನು ಬಳಸುವುದರಿಂದ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
ಮನೆನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಎಷ್ಟೇ ಮಳೆ ಬಂದರೂ ಕೂಡ ನೀರು ಇಂಗುತ್ತದೆ. ಮಳೆ ನೀರು ಕೊಚ್ಚಿ ಹೋಗದೆ ಇಂಗಿ ಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
ಅವರು ಅಡಿಕೆ ತೋಟ ಮಾಡಿದಾಗಿನಿಂದಲೂ ಕೇವಲ ಡಾಕ್ಟರ್ ಸಾಯಿಲ್ ಅನ್ನು ಮಾತ್ರ ಬಳಸುತ್ತಿದ್ದು, ಇದೊಂದರ ಬಳಕೆಯಿಂದ ಮಣ್ಣಿನ ಫಲವತ್ತತೆ
ಉಳಿಸಿಕೊಳ್ಳುವುದರ ಜೊತೆಗೆ ವರ್ಷದಿಂದ ವರ್ಷಕ್ಕೆ ಇರುವರೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು. ಕಳೆದ ಹತ್ತು ವರ್ಷಗಳಿಂದಲೂ ಕೂಡ ಇಳುವರಿ ಪ್ರತಿ ವರ್ಷ ಡಬ್ಬಲ್ ಆಗುತ್ತಾ ಬಂದಿದೆ ಎನ್ನುತ್ತಾರೆ ವಿಶ್ವನಾಥ್.
ಅಡಿಕೆ (Arecanut) ತೋಟ ನಿರ್ವಹಣೆ ಕಷ್ಟ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ ಎನ್ನುವ ರೈತರಿಗೆ ವಿಶ್ವನಾಥ್ ಮಾದರಿಯಾಗಿದ್ದು,
ಅತ್ಯಂತ ಕಡಿಮೆ ಖರ್ಚಿನಲ್ಲಿ ಅಡಿಕೆ ತೋಟವನ್ನು ನಿರ್ವಹಣೆ ಮಾಡುತ್ತಾ ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡಿದ್ದಾರೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಇಳುವರಿ ಯನ್ನು ಕೂಡ ಪಡೆಯುತ್ತಿದ್ದಾರೆ.
ಬೇರೆ ರೈತರು ಕೂಡ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಭೂಮಿಯನ್ನು ಕಾಪಾಡಿಕೊಳ್ಳುವುದರೊಂದಿಗೆ ಹೆಚ್ಚಿನ ಆದಾಯ ಪಡೆಯಬಹುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ