"Agriculture is our CULTURE"

Old Age Pension Rules:: ಪಿಂಚಣಿದಾರರಿಗೆ ಹೊಸ ವಷ೯ದ ಬಂಪರ್ ಕೊಡುಗೆ! ಪಿಂಚಣಿ ಏರಿಕೆಗೆ ಕ್ರಮ! ಕನಿಷ್ಟ ಪಿಂಚಣಿ 5000/- ಏರಿಕೆ! 

ಹೊಸ ವರ್ಷಕ್ಕೆ ಕೇಂದ್ರ ಸರ್ಕಾರವು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಭರ್ಜರಿ ಕೊಡುಗೆಯನ್ನು ನೀಡಿದ್ದು, ಇದುವರೆಗೂ ನೀಡಲಾಗುತ್ತಿದ್ದ ಪಿಂಚಣಿಯನ್ನು ಹೆಚ್ಚಿಸಲಾಗುವುದು ಎಂದು ಆದೇಶ ನೀಡಿದೆ.

ಹೌದು, ವಯೋ ವೃದ್ಧರಿಗೆ ನಿವೃತ್ತಿ ನಂತರ ಸಿಗುವ ಪಿಂಚಣಿ ಹಣದ ಅವಶ್ಯಕತೆ ಹೆಚ್ಚಾಗಿದ್ದು, ಅವರ ಆರೋಗ್ಯ, ಆರೈಕೆ, ದಿನನಿತ್ಯದ ವೆಚ್ಚ ಭರಿಸಲು ಪ್ರಸ್ತುತ ಕೊಡಲಾಗುತ್ತಿರುವ ಪಿಂಚಣಿ ಸಾಕಾಗುತ್ತಿಲ್ಲ.

ಆದ್ದರಿಂದ ಈಗಿದ್ದ ಪಿಂಚಣಿ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.

ಪಿಂಚಣಿದಾರರಿಗೆ(Pensioners) ಹೊಸ ನಿಯಮಗಳು ಹಾಗೂ ಸೌಲಭ್ಯಗಳು:-

* ಮುಖ್ಯವಾಗಿ ಆರಂಭಿಕ ಕನಿಷ್ಟ ಪಿಂಚಣಿಯನ್ನು 5000/- ಗಳಿಗೆ ಏರಿಸಲು ಕೇಂದ್ರ ಸಕಾ೯ರ ತೀಮಾ೯ನಿಸಿದೆ.

*ವಷ೯ದಿಂದ ವಷ೯ಕ್ಕೆ ಹಣದುಬ್ಬರ ಹೆಚ್ಚಾಗುತ್ತಿದ್ದು, ಬರುವ ಪಿಂಚಣಿ ಮಾತ್ರ ಅಷ್ಟೇ ಇರುತ್ತಿದ್ದರಿಂದ ಪಿಂಚಣಿದಾರರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು.

ಆದ್ದರಿಂದ ಇನ್ನು ಮುಂದೆ ಹಣದುಬ್ಬರಕ್ಕೆ ಅನುಗುಣವಾಗಿ ಪಿಂಚಣಿಯನ್ನು ಕೂಡ ಹೆಚ್ಚಿಸಲಾಗುವುದು. ಇದರ ಪ್ರಮಾಣ 5 ರಿಂದ 7% ಇರಲಿದೆ ಎಂದು ಕೇಂದ್ರ ಸಕಾ೯ರ ತಿಳಿಸಿದೆ.

*ಪಿಂಚಣಿ ಪಾವತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುತ್ತದೆ.

*ಸಕಾಲದಲ್ಲಿ ಪಿಂಚಣಿ ಪಾವತಿ ಅಂದರೆ ಪ್ರತಿ ತಿಂಗಳು 1 ನೇ ತಾರೀಖಿನೊಳಗಾಗಿ ಪಿಂಚಣಿಯನ್ನು ಪಿಂಚಣಿದಾರರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

*ಹೊಸ ಪಿಂಚಣಿಗೆ ಅಜಿ೯ ಸಲ್ಲಿಸುವವರು ಆನ್ಲೈನ್ ಮೂಲಕ ಸುಲಭವಾಗಿ ಅಜಿ೯ ಸಲ್ಲಿಸಬಹುದು

*ಪಿಂಚಣಿದಾರರು ಆ್ಯಪ್ ಮೂಲಕ ತಮ್ಮ ಪಿಂಚಣಿಯ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಪಡೆಯಲು ಅನುಕೂಲ ಮಾಡಿಕೊಡಲಾಗುವುದು.

*ಪಿಂಚಣಿ ಪಡೆಯಲು ಜೀವಿತ ಪ್ರಮಾಣ ಪತ್ರ(Life Certificate) ಕೊಡುವುದು ಮುಖ್ಯವಾಗಿದ್ದು, ಇನ್ನು ಮುಂದೆ ಡಿಜಿಟಲ್ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.

*ಅಂಗವಿಕಲ ಪಿಂಚಣಿಯನ್ನು ಅಂಗವಿಕಲತೆಯ ಆಧಾರದ ಮೇಲೆ ಹೆಚ್ಚುವರಿ ಬಡ್ತಿ ಕೊಡಲಾಗುವುದು. ಅಂದರೆ ಅಂಗವಿಕಲತೆಯ ಆಧಾರದ ಮೇಲೆ 10 ರಿಂದ 25% ವರೆಗೆ ಹೆಚ್ಚುವರಿ ಪಿಂಚಣಿ ಬಡ್ತಿ ನೀಡಲಾಗುವುದು ಹಾಗೂ ವಿಶೇಷ ಆರೋಗ್ಯ ವಿಮೆ, 5 ಲಕ್ಷದವರೆಗಿನ ಆರೋಗ್ಯ ವಿಮೆ ಸಹಾಯಕ ಸಾಧನಗಳ ಮೇಲೆ ಸಬ್ಸಿಡಿ ಗಾಲಿ ಕುರ್ಚಿಗಳು ಶ್ರಾವಣ ಸಾಧನಗಳು ಇತ್ಯಾದಿಗಳ ಮೇಲೆ 50% ಸಬ್ಸಿಡಿ.

* 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿ ದಾರರಿಗೆ ಹೆಚ್ಚುವರಿ ಪಿಂಚಣಿ ದರ, ಮೂಲ ಪಿಂಚಣಿಯ ಮೇಲೆ 20% ಹೆಚ್ಚುವರಿ ಮೊತ್ತ ನೀಡಲಾಗುವುದು.

*ಹೂಡಿಕೆ ಮಾಡಲು ಪ್ರೋತ್ಸಾಹ: ವಿಶೇಷ ಬಡ್ಡಿದರಗಳ ಮೂಲಕ ಪಿಂಚಣಿದಾರರಿಗೆ ಹೂಡಿಕೆ ಮಾಡಲು ಹಲವು ಆಯ್ಕೆಗಳನ್ನು ಒದಗಿಸಲಾಗುವುದು

* ಗೃಹಸೇವೆಗಳು: ಪಿಂಚಣಿ ಸಂಬಂಧಿಸಿದ ದಾಖಲೆಗಳಿಗಾಗಿ ಗೃಹ ಆಧಾರಿತ ಸೇವೆಗಳು ಲಭ್ಯವಿವೆ.

*ಆರೋಗ್ಯ ಸೇವೆಗಳು: ಸಕಾ೯ರಿ ಆಸ್ಪತ್ರೆಗಳಲ್ಲಿ ವಿಶೇಷ ಕೌಂಟರ್ ಗಳು ಸ್ಥಾಪನೆ

*ಪಿಂಚಣಿ ಅಜಿ೯ ಸಲ್ಲಿಕೆಯಲ್ಲಿ ಸರಳೀಕರಣ ಮಾಡಲಾಗುವುದು. ಇದು ಸಂಪೂರ್ಣ ಆನ್ಲೈನ್ ಮೂಲಕ ನಡೆಯುತ್ತಿದ್ದು ಇದರಿಂದ ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ.

ಪೋಟ೯ಲ್ ನಲ್ಲಿ ನೊಂದಣಿ ಮಾಡುವುದು ಹೇಗೆ? 

ಸಕಾ೯ರದ ಅಧಿಕೃತ ಪೋಟ೯ಲ್ ನಲ್ಲಿ ನಿಮ್ಮನ್ನು ನೊಂದಾಯಿಸಿ. ನಿಮ್ಮ ವೈಯಕ್ತಿಕ ವಿವರಗಳನ್ನು ಹಾಕಿ ಹಾಗೂ ಸೇವಾ ಸಂಬಂಧಿತ ವಿವರಗಳನ್ನು ಹಾಕಿ

*ಕೇಳಲಾದ ದಾಖಲೆಗಳನ್ನು ಅಪ್ಲೋಡ್ (Upload) ಮಾಡಿ

*ನಂತರ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಅಜಿ೯ಯನ್ನು ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ:-

ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಆನ್ಲೈನ್ ಮೂಲಕ ಟ್ರ್ಯಾಕ್ ಮಾಡಬಹುದು. ಈ ಹೊಸ ಕ್ರಮದಿಂದಾಗಿ ಪಿಂಚಣಿ ಸೌಲಭ್ಯ ಒದಗಿಸುವಲ್ಲಿ 30 ದಿನಗಳ ಪ್ರಕ್ರಿಯೆ ಕಡಿಮೆಯಾಗುತ್ತದೆ. ಪಿಂಚಣಿದಾರರ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಬಲವಾದ ಕುಂದು ಕೊರತೆ ವಿಧಾನವನ್ನು ಸ್ಥಾಪಿಸಲಾಗುವುದು.

ಅದಕ್ಕಾಗಿ ಸಹಾಯವಾಣಿ ಆರಂಭಿಸಲಾಗುವುದು. ದೂರುಗಳನ್ನು ಸಲ್ಲಿಸಲು ಪೋಟ೯ಲ್ ನಲ್ಲಿ ಅವಕಾಶವಿದೆ. ಅಜಿ೯ಯ ಸ್ಥಿತಿ ಟ್ಯ್ರಾಕ್ ಮಾಡಲು ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗುವುದು. ಹಾಗೂ ದೂರುಗಳನ್ನು 7 ದಿನಗಳಲ್ಲಿಯೇ ಪರಿಹರಿಸಲಾಗುವುದು.

 ಈ ತಿಂಗಳಿನ ನಿಮ್ಮ ಪಿಂಚಣಿ ಸ್ಥಿತಿಯನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳುವುದು ಹೇಗೆ? 

Step 1: ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಡೈರೆಕ್ಟ್ ಲಿಂಕ್( Direct Link ) ಮೇಲೆ ಕ್ಲಿಕ್ ಮಾಡಿ

https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011

Step 2: ನಂತರ ಅಲ್ಲಿ ನೀವು ಗ್ರಾಮೀಣದವರಾಗಿದ್ದರೆ ಗ್ರಾಮೀಣ ಎಂಬುದರ ಪಕ್ಕದ ವೃತ್ತದ ಮೇಲೆ ಅಥವಾ ನಗರ ಎಂಬುದರ ಪಕ್ಕದ ವೃತ್ತದ ಮೇಲೆ ಕ್ಲಿಕ್ ಮಾಡಿ

Step 3: ನಂತರ ನಿಮ್ಮ ಜಿಲ್ಲೆ( District ) , ತಾಲ್ಲೂಕು( Taluk ) , ಹೋಬಳಿ( Hobli ) ಹಾಗೂ ಗ್ರಾಮ( Village )ವನ್ನು ಸೆಲೆಕ್ಟ್ ಮಾಡಿ ಸಬ್ಮಿಟ್( Submit ) ಮೇಲೆ ಕ್ಲಿಕ್ ಮಾಡಿ

Step 4: ನಂತರ ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ ಪಿಂಚಣಿ ಪಡೆಯುತ್ತಿದ್ದಾರೋ ಎಲ್ಲರ ಲಿಸ್ಟ್(list) ಓಪನ್ ಆಗುತ್ತದೆ. ಆಗ ಅದರಲ್ಲಿ ನಿಮ್ಮ ಹೆಸರನ್ನು ಹುಡುಕಿ ಅದರಲ್ಲಿ ನಿಮ್ಮ ಹೆಸರು, ಜಾತಿ, ನಿಮಗೆ ಯಾವ ಯೋಜನೆಯಲ್ಲಿ ಪಿಂಚಣಿ ಬರುತ್ತಿದೆ ಎಂಬುದರ ಬಗ್ಗೆ ಮಾಹಿತಿ ಇರುತ್ತದೆ.

Step 5: ಆ ಲಿಸ್ಟ್ ನಲ್ಲಿ ಮುಂದಕ್ಕೆ ಸರಿಸಿದರೆ ಮುಂಭಾಗದಲ್ಲಿ ಪಿಂಚಣಿ ವಿವರ ಎಂದು ನೀಲಿ ಬಾಕ್ಸ್ನಲ್ಲಿ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಯಾವಾಗಿನಿಂದ ಪಿಂಚಣಿ ಬರುತ್ತದೆ ಎಂಬ ಮಾಹಿತಿ ಸಿಗುತ್ತದೆ.

ಹಾಗೂ ಅಲ್ಲಿ ರನ್ನಿಂಗ್( Running ) ಎಂಬ ಆಯ್ಕೆ ಇರುತ್ತದೆ. ಈ ರೀತಿಯಿದ್ದರೆ ನಿಮಗೆ ಈಗಲೂ ಪಿಂಚಣಿ ಬರುತ್ತಿದೆ ಎಂದು ಅಥ೯ ಸ್ಟಾಪ್( Stop )ಅಥವಾ ಹೋಲ್ಡ್( Hold ) ಎಂದು ಇದ್ದರೆ ನಿಮಗೆ ಪಿಂಚಣಿ ಬರುತ್ತಿಲ್ಲ ಎಂದು ಅಥ೯.

ಒಂದು ವೇಳೆ ಸ್ಟಾಪ್ / ಹೋಲ್ಡ್ ಎಂದು ಇದ್ದರೆ ನೀವು ತಹಸೀಲ್ದಾರ್ ಕಛೇರಿಗೆ ಹೋಗಿ ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಬಹುದು.ಅಲ್ಲಿ ಕೆಳಗೆ ಕ್ಲೋಸ್ ಬಟನ್(close)ಮೇಲೆ ಕ್ಲಿಕ್ ಮಾಡಿದರೆ ಲಿಸ್ಟ್ ಇರುವ ಪೇಜ್ ಗೆ ಬರುತ್ತೀರಿ

Step 6: ನಂತರ ಅದರ ಮುಂದಿನ ಬಾಕ್ಸ್ ಪಿಂಚಣಿ ಖಾತಾ ಪುಸ್ತಕ ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇದುವರೆಗೂ ಯಾವ ಕಂತಿನ ಹಣ ಬಂದಿದೆ ಎಂದು ತಿಳಿಯುತ್ತದೆ.

ಸಾಮಾನ್ಯವಾಗಿ ನಿಮಗೆ ಪಿಂಚಣಿ ಪ್ರಾರಂಭವಾದಾಗಿನಿಂದ ಹಿಡಿದು ಒಂದು ವಷ೯ದ ಹಿಂದಿನವರೆಗೆ ಎಲ್ಲಾ ಮಾಹಿತಿ ಅಲ್ಲಿ ಸಿಗುತ್ತದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"