APL Ration card:: ಬಿಪಿಎಲ್ ನಂತರ ಎಪಿಎಲ್ ಕಾಡ್೯ಗಳೂ ರದ್ದು! ರದ್ದಾಗಬಾರದೆಂದರೆ ಕೂಡಲೇ ಈ ಕೆಲಸ ಮಾಡಿ!
ರಾಜ್ಯದಲ್ಲಿ ಈಗಾಗಲೇ ಬಿಪಿಎಲ್ ಕಾರ್ಡ್ಗಳ ರದ್ದು ಕಾರ್ಯಕ್ರಮ ಜೋರಾಗಿದ್ದು, ಮೂಲಗಳ ಪ್ರಕಾರ 22 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಅಲ್ಲದೆ ಎಪಿಎಲ್ ಕಾರ್ಡ್ದಾರರಿಗೂ ಕೂಡ ರಾಜ್ಯ ಸಕಾ೯ರ ಶಾಕ್ ನೀಡಿದ್ದು, ಆಧಾರ ಕಾಡ್೯ ನೊಂದಿಗೆ ಜೊಡಣೆ ಮಾಡಿಸಿ ಇ-ಕೆವೈಸಿ ಮಾಡಿಸದ ಕುಟುಂಬಗಳಿಗೆ ರೇಷನ್ ನಿಲ್ಲಿಸಿದ್ದು, ಇದೀಗ ಆ ಎಪ್ಎಲ್ ಕಾಡು೯ಗಳನ್ನು ರದ್ದು ಮಾಡಲು ಮುಂದಾಗಿದೆ.
ಎಪಿಎಲ್ ಕಾಡ್೯ ರದ್ದಾದರೆ ಈ ಸೇವೆಗಳು ಸಿಗಲ್ಲ!
* ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿದ್ದ ಹಣ ಸಿಗಲ್ಲ
* ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ
*ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ
*ವಿವಿಧ ಸರ್ಕಾರಿ ಸೌಲಭ್ಯಗಳು ಸಿಗಲ್ಲ
ಆಯುಷ್ಮಾನ್ ಭಾರತಯೋಜನೆ ಲಾಭ ಪಡೆಯಲು ಸಾಧ್ಯವಾಗಲ್ಲ
* ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ
*ಕೇಂದ್ರ ಸರ್ಕಾರದ ಮೀಸಲಾತಿ ಸಿಗಲ್ಲ.
ಎಪಿಎಲ್ ಬಿಪಿಎಲ್ ಎಲ್ಲಾ ಕಾಡು೯ಗಳು ರದ್ದತಿಗೆ ಸಕಾ೯ರ ಕ್ರಮ!
ಈ ಹಿಂದೆ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಗಳನ್ನು ಜೋಡಿಸುವುದು ಕಡ್ಡಾಯ ಎಂದು ನಿಯಮವನ್ನು ಜಾರಿಗೊಳಿಸಿದ್ದು ಆಗ ಶೇಕಡ ನೂರರಷ್ಟು ಕುಟುಂಬಗಳು ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡನ್ನು ಜೋಡಣೆ ಮಾಡಿದ್ದರು.
ಆ ಸಮಯದಲ್ಲಿ ಲಕ್ಷಾಂತರ ಬೊಗಸ್ ರೇಷನ್ ಕಾರ್ಡ್ ಗಳು ರದ್ದಾಗಿದ್ದವು. ಅಲ್ಲದೆ ಇ-ಕೆವೈಸಿ ಮಾಡಿಸದ APL ಹಾಗೂ ಬಿಪಿಎಲ್ ಕಾರ್ಡ್ ಗಳು ಹಾಗೂ ಅಂತ್ಯೋದಯ ಕಾಡು೯ಗಳು ಕೂಡ ರದ್ದಾಗಿದ್ದವು.
ಆದರೆ ಈ ಗ್ಯಾರಂಟಿ ಯೋಜನೆಗಳಿಂದಾಗಿ ಮತ್ತೆ ನಕಲಿ ರೇಷನ್ ಕಾರ್ಡ್ ಗಳ ಹಾವಳಿ ಹೆಚ್ಚಾಗಿದ್ದು, ಕೇವಲ ಬಿಪಿಎಲ್ ಕಾರ್ಡ್ ಮಾತ್ರವಲ್ಲದೆ
ಎಪಿಎಲ್ ಕಾರ್ಡ್ಗಳನ್ನು ಮಾಡಿಸಿಕೊಂಡು ಇ-ಕೆವೈಸಿ ಮಾಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ಈಕೆವೈಸಿ ಮಾಡಿಸದೆ ಇರುವ ಎಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ.
22 ಲಕ್ಷ ಕಾರ್ಡ್ ರದ್ದು!
ಆಹಾರ ಇಲಾಖೆಯು ಕುಟುಂಬ ತಂತ್ರಾಂಶದ ಮೂಲಕ 22,62,413 ಅನಹ೯ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ರದ್ದುಪಡಿಸಿತ್ತು. ಇದರಲ್ಲಿ *10,97,621 ಅನಹ೯ ಬಿಪಿಎಲ್ ಹಾಗೂ 1,06,152 ಅಂತ್ಯೋದಯ ಕಾರ್ಡ್‌ದಾರರು ಆದಾಯ ತೆರಿಗೆ ಪಾವತಿದಾರರು,
* 10,54,368 ಕಾಡ್೯ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹಾಗೂ
*4,272 ಚೀಟಿ ಕೆಜಿಐಡಿ, ಎಚ್‌ಆರ್‌ಎಂಎಸ್‌ನಲ್ಲಿ ಜೋಡಣೆಯಾಗಿರುವವರು ಆಗಿದ್ದರು.
ಆದ್ದರಿಂದ ಅವರ ರೇಷನ್ ಕಾಡ್೯ಗಳನ್ನು ಡಿಲೀಟ್ ಮಾಡಿತ್ತು. ಈಗ ಮತ್ತೇ ಇದೇ ಮಾನದಂಡಗಳ ಮೇಲೆ ಬಿಪಿಎಲ್, ಎಪಿಎಲ್ ಕಾಡ್೯ಗಳನ್ನು ರದ್ದು ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಸರ್ಕಾರವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾರು ರೇಷನ್ ಕಾಡ್೯ ಹೊಂದಿದ್ದಾರೆ ಎಂದು ಲಿಸ್ಟ್ ಕೊಟ್ಟಿದ್ದಾರೆ.
ಈ ಲಿಸ್ಟನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ.ಲೇಖನವನ್ನು ಸಂಪೂರ್ಣವಾಗಿ ಓದಿ.
ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?
*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ನೀವು ಯಾವ ರೇಷನ್ ಕಾಡ್೯ ಹೊಂದಿದ್ದೀರಿ ಎಂಬ ಮಾಹಿತಿ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚