"Agriculture is our CULTURE"

Anugraha scheme::ಜಾನುವಾರು ಮರಣಕ್ಕೆ ಪರಿಹಾರ! ಅನುಗ್ರಹ ಯೋಜನೆ (Anugraha scheme)!!10,000 ರೂಪಾಯಿ ಪರಿಹಾರ!!

ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಅನುಗ್ರಹ ಯೋಜನೆ (Anugraha scheme) ಅಡಿಯಲ್ಲಿ ಕುರಿಗಾಹಿಗಳಿಗೆ ಹಾಗೂ ಪಶು ಸಾಕಾಣಿಕೆ ಮಾಡುತ್ತಿರುವವರಿಗೆ ಆಥಿ೯ಕ ನಷ್ಟ ಉಂಟಾದಾಗ ಸಹಾಯ ನೀಡುವ ಯೋಜನೆಯಾಗಿದೆ.

ಇದನ್ನು 2013 ರಲ್ಲಿಯೇ ಸಕಾ೯ರ ಜಾರಿಗೆ ತಂದಿದ್ದರೂ ಕೂಡ ಹಿಂದಿನ ಸಕಾ೯ರದ ನಿಲ೯ಕ್ಷ್ಯದಿಂದಾಗಿ ಈ ಯೋಜನೆಯ ಸದುಪಯೋಗ ಬಡ ಜನರಿಗೆ ಸಿಕ್ಕಿರಲಿಲ್ಲ.

ಆದರೆ ಈಗ ಕಾಂಗ್ರೆಸ್ ಸಕಾ೯ರವು ಮತ್ತೆ ಈ ಯೋಜನೆಯನ್ನು ಈ ಸಾಲಿನ ಬಜೆಟ್ ನಲ್ಲಿ ಘೋಷಿಸಿ ಜಾರಿಗೆ ತಂದಿದ್ದು, ಇದನ್ನು ಹೆಚ್ಚಿನ ಕ್ರಮವಹಿಸಿ ಎಲ್ಲಾ ಜನರಿಗೂ ತಲುಪುವಂತೆ ನೋಡಿಕೊಳ್ಳುತ್ತಿದೆ.

ಈ ಅನುಗ್ರಹ ಯೋಜನೆ (Anugraha scheme) ಅಡಿಯಲ್ಲಿ ರಾಜ್ಯದಲ್ಲಿ ಆಕಸ್ಮಿಕ ಕಾರಣಗಳಿಂದ ಜಾನುವಾರುಗಳು ಸತ್ತರೆ ಸಾಕಾಣಿಕೆ ಮಾಡುವವರಿಗೆ ಆಥಿ೯ಕವಾಗಿ ನಷ್ಟವಾಗುತ್ತದೆ. ಆದ್ದರಿಂದ ಅಂತಹ ಸಮಯದಲ್ಲಿ ಸಕಾ೯ರವು ಸಾಕಾಣಿಕೆದಾರರಿಗೆ ಉಂಟಾಗುವ ನಷ್ಟಕ್ಕೆ ಪರಿಹಾರವನ್ನು ನೀಡುತ್ತದೆ.

ಜಾನುವಾರು ಸತ್ತರೆ ನೀಡುವ ಪರಿಹಾರ ಎಷ್ಟು?

ಹಸು, ಎತ್ತು, ಎಮ್ಮೆ ಸತ್ತರೆ ಅಂತಹ ಸಾಕಣೆದಾರರಿಗೆ 10,000 ರೂಪಾಯಿ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ಹಾಗೂ ಕುರಿ, ಆಡು ಸತ್ತರೆ ಸಾಕಾಣೆದಾರರಿಗೆ 5000 ರೂಪಾಯಿ ಪರಿಹಾರ ಸಿಗುತ್ತದೆ.

ಸಕಾ೯ರದಿಂದ ಕಳೆದ ಸಾಲಿನಲ್ಲಿ Anugraha scheme ನಲ್ಲಿ ನೀಡಿರುವ ಪರಿಹಾರದ ಮೊತ್ತವೆಷ್ಟು?

ಕಳೆದ ವಷ೯ ಚರ್ಮಗಂಟು ರೋಗದಿಂದ ಸತ್ತಿರುವ 32,045 ಜಾನುವಾರುಗಳು ಪೈಕಿ ಒಟ್ಟು 25,859 ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ.

ಇನ್ನು 5,851 ಮೃತ ಜಾನುವಾರುಗಳ ಮಾಲೀಕರಿಗೆ 12 ಕೋಟಿ ರೂ. ಪರಿಹಾರ ಒದಗಿಸುವುದು ಬಾಕಿಯಿದ್ದು, ಅದನ್ನು ಕೂಡ ಆದಷ್ಟು ಬೇಗ ಮಾಲೀಕರಿಗೆ ತಲುಪಿಸುವುದಾಗಿ ಸಕಾ೯ರ ತಿಳಿಸಿದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"