"Agriculture is our CULTURE"

ಅಡಿಕೆ ತೋಟ ಮಾಡಿ ಕೈಸುಟ್ಟುಕೊಳ್ಳಬೇಡಿ..!! ಅಡಿಕೆ ರೈತರು ತೋಟ ಮಾಡುವ ಮುನ್ನ ಈ ನಿಯಮವನ್ನು ಪಾಲಿಸಿ!!

ಕೊಳವೆ ಬಾವಿಯಲ್ಲಿ ನೀರು ಸಿಕ್ಕ ತಕ್ಷಣ ಅಡಿಕೆ ತೋಟ ಮಾಡುವ ರೈತರೆ ಸ್ವಲ್ಪ ಗಮನಸಿ!

ತೋಟ ಮಾಡುವ ಮೊದಲು ನೀರು ಮತ್ತು ಮಣ್ಣು ಪರೀಕ್ಷಿಸಿ ಇಲ್ಲವಾದರೆ ನಿಮ್ಮ ಹಣ ಮತ್ತು ಶ್ರಮ ವ್ಯರ್ಥವಾಗುವುದರಲ್ಲಿ ಸಂದೇಹವೇ ಇಲ್ಲ.

ಅಡಿಕೆಗೆ ತೋಟ ಕಟ್ಟಲು ಮಣ್ಣಿನ ಲವಣಾಂಶ 1dS/m ಗಿಂತ ಕಡಿಮೆ ಇರಬೇಕು ಆದರೆ

ಈ ಚಿತ್ರದಲ್ಲಿ ಇರುವ ತೋಟದ ಮಣ್ಣಿನ ಲವಣಾಂಶವು 3dS/m ಇರುವುದರಿಂದ ಗಿಡಗಳು ಈ ಚಿತ್ರ ತೋರಿಸಿರುವ ರೀತಿ ಒಣಗುತ್ತಿವೆ. ಇಂತಹ ತೋಟದ ನಿರ್ವಹಣೆ ಬಹಳ ಕಷ್ಟಕರ.

ಕಡಿಮೆ ನೀರಾವರಿ ಪ್ರದೇಶ ಹೊಂದಿರುವ ಬಯಲು ಸೀಮೆ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬೆಳೆಗಳೆಂದರೆ

ವಣ ಬೇಸಾಯ ಬೆಳೆಗಳು ಜೋಳ ಗೋಧಿ ಗೋವಿನ ಜೋಳ ಮೆಕ್ಕೆಜೋಳ ಶೇಂಗಾ ಹೀಗೆ ಇತರೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ

ಆದರೆ ಮಲನಾಡು ಭಾಗಗಳಲ್ಲಿ ಅಡಿಕೆ ತೆಂಗುಗಳನ್ನು ಬೆಳೆಯಲಾಗುತ್ತದೆ.

Arecanut protection 

ಬಯಲು ಸೀಮೆ ಬಾಗಗಳಲ್ಲಿ ಎಷ್ಟು ಕಷ್ಟಪಟ್ಟು ಬೆಳೆ ಬೆಳೆದರು ಸಿಗುವ ಲಾಭ ಕಮ್ಮಿ ಆದ್ದರಿಂದ ಇತ್ತೀಚಿಗೆ,

ಸ್ವಲ್ಪ ನೀರಾವರಿ ಬಯಲು ಸೀಮೆ ಬಾಗಗಳ ರೈತರು ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ ಅಡಿಕೆ ಬೆಳೆಗಾರರ ಬದುಕಿನಲ್ಲಾಗುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಗಳಿಂದ ಪ್ರಭಾವಿತರಾಗುತ್ತಿರುವ

ಈ ಭಾಗದ ರೈತರು ಹೆಚ್ಚು ಆದಾಯ ಪಡೆಯಬೇಕು ಎಂಬ ಕನಸಿನ ಬೆನ್ನೇರಿ ಅಡಿಕೆ ತೋಟ ಮಾಡುತ್ತಿದ್ದಾರೆ ಇವರು ಮೇಲೆ ಕ್ರಮಗಳನ್ನು ಪಾಲಿಸಿದರೆ ಅತಿ ಹೆಚ್ಚು ಆದಾಯ ಪಡೆಯುವುದು.

ಧನ್ಯವಾದಗಳು

ಅಡಿಕೆ ಕಳ್ಳತನಕ್ಕೆ ಬ್ರೇಕ್ ಹಾಕಲು ಇಲ್ಲಿದೆ ಉಪಾಯ!

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆಂಪು ಅಡಿಕೆ ದೇಶ ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧವಾಗಿದ್ದು ಏಕೆಂದರೆ ಅಲ್ಲಿನ ನೀರು ಮಣ್ಣಿನ ಫಲವತ್ತತೆ ಹಾಗೂ

ಆ ಅಡಿಕೆಯ ರುಚಿಯಿಂದಾಗಿ ಕೆಂಪಡಿಕೆಗೆ ಬೇಡಿಕೆ ಹೆಚ್ಚಿದೆ.

ಆದರೆ ಈಗ ರೈತರಿಗೆ ದೊಡ್ಡ ತಲೆನೋವು ಶುರುವಾಗಿದ್ದು ಅಡಿಕೆ ಕಳ್ಳತನವಾಗುತ್ತಿದೆ.

ಸುಮಾರು ತಿಂಗಳಿನಿಂದ ತೋಟಗಳಲ್ಲಿ ಅಡಿಕೆಯನ್ನು ಕದ್ದು ಮಾರಾಟ ಮಾಡಲಾಗುತ್ತಿದ್ದು ಇದರಿಂದ ರೈತರು ಬೇಸತ್ತಿದ್ದಾರೆ.

ರಾತ್ರಿ ಹೊತ್ತು ನಿದ್ದೆ ಇಲ್ಲದೆ ತೋಟಗಳನ್ನು ಕಾಯುತ್ತಾ ಕುಳಿತುಕೊಳ್ಳುವ ಸಂದರ್ಭ ಒದಗಿದೆ. ರೈತರಿಗೆ ಇರುವ ಸಮಸ್ಯೆಗಳಲ್ಲದೆ ಹೀಗೆ  ಹೊಸದಾಗಿ ಸಮಸ್ಯೆಗಳು  ಉದ್ಭವಗೊಳ್ಳುತ್ತಿವೆ.

ಒಂದೇ ತಿಂಗಳಿನಲ್ಲಿ ಹತ್ತಕ್ಕೂ ಹೆಚ್ಚು ಕಡೆ ಕಳ್ಳತನವಾಗಿದ್ದು ಹತ್ತಕ್ಕೂ ಹೆಚ್ಚು ಕಂಪ್ಲೇಂಟ್ ಗಳು ರಿಜಿಸ್ಟರ್ ಆಗಿವೆ.

ಇಂತಹ ಪರಿಸ್ಥಿತಿಯಲ್ಲಿ ಯುವ ರೈತನೊಬ್ಬ ಮಾಸ್ಟರ್​ ಪ್ಲಾನ್ ಮಾಡಿದ್ದಾನೆ. ಯಾರೇ ಕಳ್ಳರು ಅಡಿಕೆ ತೋಟ ಪ್ರವೇಶ ಮಾಡಿದರೆ ಸಾಕು ಮೊಬೈಲ್​ಗೆ ಸಂದೇಶ ಬರುತ್ತದೆ.

ಹೌದು ತಾಲೂಕಿನ ಎಲೇಬೇತೂರು ಗ್ರಾಮದ ಜಿ.ಎಂ.ಬಸವರಾಜ್ ಅವರ ಪುತ್ರ ನಂದೀಶ್ ಮೂರೂವರೆ ಎಕರೆ ಅಡಿಕೆ ತೋಟಕ್ಕೆ 30,000 ವೆಚ್ಚದಲ್ಲಿ ನಾಲ್ಕು ಅಲ್ಟ್ರಾ ಎಚ್‌.ಡಿ. ಸಾಮರ್ಥ್ಯದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದಾರೆ.

ತಮ್ಮ ತೋಟದ ಸುತ್ತಮುತ್ತಲು ನಡೆದಿರುವ ಕಳ್ಳತನ ಪ್ರಕರಣಗಳ  ಬಗ್ಗೆ ಹಾಗೂ ಇವರ ತೋಟದಲ್ಲಿಯೂ ಸಹ ಕಳ್ಳತನ ಮಾಡಲು ನಡೆದಿರುವ ಪ್ರಯತ್ನದ ಬಗ್ಗೆ ಎಚ್ಚೆತ್ತುಕೊಂಡು ಕ್ಯಾಮೆರಾ ಮೊರೆ ಹೋಗಿದ್ದಾರೆ.

ಇವರ ತೋಟದ  ಕ್ಯಾಮೆರಾಗಳು ಫೋಕಸ್ ಲೈಟ್ ವ್ಯವಸ್ಥೆಯನ್ನೂ ಒಳಗೊಂಡಿವೆ.

ರಾತ್ರಿ ವೇಳೆ  ಹೆಚ್ಚು ಪ್ರಖರತೆ ಹೊಂದಿದ್ದು ಹೆಚ್ಚು ಬೆಳಕಿನಿಂದಾಗಿ ಕಳ್ಳರು  ತೋಟದೊಳಗೆ ಬರಲು ಹೆದರುತ್ತಾರೆ.

ಇತ್ತೀಚೆಗೆ  ಇವರ ಪಕ್ಕದ ತೋಟಕ್ಕೆ  ಕದಿಯಲು ಬಂದಿದ್ದ ಕಳ್ಳರು  ಇವರ ತೋಟದ ಲೈಟ್ ನೋಡಿ ನಮ್ಮ ತೋಟಕ್ಕೆ ಬರುವ ಧೈರ್ಯ ಮಾಡಲಿಲ್ಲ. ಎಂದು ನಂದೀಶ್  ತಿಳಿಸಿದ್ದಾರೆ.

ತೋಟಕ್ಕೆ ಅಳವಡಿಸಲಾದ ಕ್ಯಾಮೆರಾ ಲಿಂಕ್​ನ್ನು ವೈಫೈ ಮೂಲಕ ಮೊಬೈಲ್‌ ಫೋನ್‌ಗೆ ಸಂಪರ್ಕಿಸಿ, ಮನೆಯಲ್ಲಿಯೇ ಕುಳಿತುಕೊಂಡು ತೋಟವನ್ನ  ವೀಕ್ಷಿಸಬಹುದಾಗಿದ್ದು,

ಇನ್ನು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು 30 ದಿನಗಳವರೆಗೆ ಸಂಗ್ರಹಿಸಿಡಬಹುದು ಜೊತೆಗೆ ಮೊಬೈಲ್‌ನಲ್ಲಿ ಒಂದು ದಿನದ ರೆಕಾರ್ಡಿಂಗ್ ಕೂಡ ವೀಕ್ಷಿಸಬಹುದಾಗಿದೆ.

ಪೋಲಿಸ್ ಇಲಾಖೆಯಿಂದ ಕಳ್ಳರನ್ನು ಅತಿ ಹೆಚ್ಚಲು ಕ್ರಮ ಕೈಗೊಂಡಿದ್ದು  ಆಯಾ ಗ್ರಾಮ ಪಂಚಾಯತ್ ಸಹಾಯದಿಂದ ಸಿಸಿಟಿವಿ ಅಳವಡಿಸಲು ಸೂಚಿಸಲಾಗಿದೆ ಹಾಗೂ ರಾತ್ರಿ ಹೊತ್ತು ಪೋಲಿಸ್ ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗಿದೆ.

ಆದರೂ ಕೂಡ ಕಿಲಾಡಿ ಕಳ್ಳರು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಳ್ಳತನಕ್ಕೆ ಯತ್ನಿಸಿದ್ದರು. ಅದನ್ನು ತಪ್ಪಿಸಲು ಇದೀಗ ಯುಪಿಎಸ್‌ ಅಳವಡಿಸಿದ್ದೇವೆ.

ನಮ್ಮಂತೆಯೇ ಜಿಲ್ಲೆಯ ವಿವಿಧೆಡೆ ಅನೇಕ ರೈತರು ಫಸಲು ಉಳಿಸಿಕೊಳ್ಳಲು ತೋಟಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು, ಕಳ್ಳರ ಪತ್ತೆಗೆ ನೆರವಾಗುತ್ತಿವೆ ಎನ್ನುತ್ತಿದ್ದಾರೆ.

ಈಗಾಗಲೇ ರೈತರ ಕೊಳೆ ರೋಗ ಹಾಗೂ ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇನ್ನೊಂದೆಡೆ, ಕಳ್ಳರ ಕಾಟ ಹೆಚ್ಚಿರುವುದು ರೈತರನ್ನು ಕಂಗಾಲಾಗಿಸಿದೆ.

ಚಿಲ್ಲರೆ ಖರೀದಿದಾರರ ಮೇಲೆ  ಪೋಲಿಸರ ನಿಗಾ

ಅಡಿಕೆ ಕದ್ದವರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿರುವ ಮೂರು ಪ್ರಕರಣಗಳು ಪತ್ತೆಯಾಗಿವೆ.

ಸೆಪ್ಟಂಬರ್‌ನಲ್ಲಿ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಬಳಿ ಒಣಗಿಸಲು ಇಟ್ಟಿದ್ದ ಅಡಿಕೆಯನ್ನೇ ಕಳ್ಳರು ಹೊತ್ತೊಯ್ದಿದ್ದರು.

ಮಾಯಕೊಂಡ ಸಮೀಪದ ಸುಲ್ತಾನಿಪುರದಲ್ಲಿ ತೋಟದಲ್ಲಿ ಇರಿಸಿದ್ದ 1.50 ಕ್ವಿಂಟಲ್ ಹಸಿ ಅಡಿಕೆಯನ್ನು ಕದಿಯುವಾಗ ರೈತರೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಈ ರೀತಿ ಜಿಲ್ಲೆಯಲ್ಲಿ ಹಲವು ಕಳ್ಳತನ ಪ್ರಕರಣಗಳು ನಡೆದಿವೆ. ಮಾಯಕೊಂಡದಲ್ಲಿ 6 ಪ್ರಕರಣ ಆಗಿದ್ದು,  ಸಂತೇಬೆನ್ನೂರು 4 ಇದರಲ್ಲಿ 3 ಪ್ರಕರಣ ಪತ್ತೆಯಾಗಿವೆ.

ಬಿಕಾಂ ಓದಿರುವ ನಂದೀಶ್ ಇಂತಹ ಹೊಸ ಪ್ರಯೋಗ ಮಾಡಿ ತಮ್ಮ ತೋಟಕ್ಕೆ ಮಾತ್ರವಲ್ಲ ಅಕ್ಕ ಪಕ್ಕದ ತೋಟಗಳಿಗೆ ಅಸರೆ ಆಗಿದ್ದಾನೆ.

ಇತ್ತೀಚಿಗೆ ತೋಟಕ್ಕೆ ಕೆಲ ಕಳ್ಳರು ನುಗ್ಗಿದ್ದರು. ಈ ವಿಚಾರ ಗೊತ್ತಾಗಿ ತೋಟದ ಮಾಲೀಕರು ಬರುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಆದರೆ ಕಳ್ಳತನ ಆಗಿಲ್ಲ.

ಕೇವಲ 30 ಸಾವಿರ ರೂಪಾಯಿ ವೆಚ್ಚ ಮಾಡಿದ್ದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಬಾಳು ಅಡಿಕೆ ಕಳ್ಳರ ಕೈಯಿಂದ ಉಳಿಯುತ್ತಿದೆ.

ಲಕ್ಷಾಂತರ ರೂಪಾಯಿ ಬೆಲೆ ಅಡಿಕೆ ಕಳ್ಳರ ಪಾಲಾಗುವುದು ತಪ್ಪುತ್ತಿದೆ ಇದರಿಂದ ರೈತರು ಸ್ವಲ್ಪಮಟ್ಟಿಗೆ ನೆಮ್ಮದಿ ಪಡೆಯಬಹುದಾಗಿದೆ ಆದ್ದರಿಂದ ಕೂಡಲೇ ಎಲ್ಲರೂ

ರೈತರು ಇಂತಹ ಕ್ರಮಗಳನ್ನು ಕೈಗೊಂಡು ಅಡಿಕೆಗಳನ್ನು ರಕ್ಷಿಸಿಕೊಂಡು ಕಳ್ಳತನ ವಾಗದಂತೆ ಜಾಗೃತಿ ವಹಿಸಿ ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿಕೆ

ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ


"Agriculture is our CULTURE"