Rabi Crop Insurance:: ಬೆಳೆ ವಿಮೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ! ಕೂಡಲೇ ವಿಮೆ ಮಾಡಿಸಿ!
ರಾಜ್ಯದಲ್ಲಿ ಪ್ರತಿ ವರ್ಷ ಅನಿರೀಕ್ಷಿತ ಪ್ರಕೃತಿ ವಿಕೋಪಗಳಿಂದ ಬರಗಾಲ ನೆರೆಹಾವಳಿ ಉಂಟಾಗಿ ಬೆಳೆದ ಬೆಳೆ ಕೈಗೆ ಸಿಗದೇ ರೈತರಿಗೆ ಸಾಕಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ರೈತರು ತೈವು ಬೆಳೆಯುವ ಬೆಳೆಗಳಿಗೆ ವಿಮೆ ಮಾಡಿಸುವುದು ಅತ್ಯಗತ್ಯವಾಗಿದ್ದು, ರೈತರು ಬೇಜವಾಬ್ದಾರಿ ತೋರದೇ ತಮ್ಮ ಮುಂದಿನ ಆಥಿ೯ಕ ಪರಿಸ್ಥಿತಿ ಬಗ್ಗೆ ಎಚ್ಚರವಹಿಸಿ ಕೂಡಲೇ ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವುದು ಉತ್ತಮ
ರಾಜ್ಯದಲ್ಲಿ ಸಧ್ಯಕ್ಕೆ ಹಿಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ಬೆಳೆ ಬಿತ್ತನೆ ಮಾಡುವಲ್ಲಿ ನಿರತರಾಗಿದ್ದಾರೆ. ತಾವು ಬೆಳೆಯುತ್ತಿರುವ ಬೆಳೆಗಳಿಗೆ ವಿಮೆ ಮಾಡಿಸಲು ಸಕಾ೯ರ ಈಗಾಗಲೇ ಕೊನೆಯ ದಿನಾಂಕಗಳನ್ನು ನಿಗದಿಪಡಿಸಿದ್ದು, ಬೆಳೆ ವಿಮೆ ಮಾಡಿಸುವುದು ಪ್ರತಿ ಜಿಲ್ಲಾವಾರು ಬೇರೆ ಬೇರೆಯಾಗಿದೆ. ಕೊನೆಯ ದಿನಾಂಕಗಳು ಸಮೀಪಿಸುತ್ತಿದ್ದು, ಕೂಡಲೇ ನಿಮ್ಮ ಬೆಳೆಗಳಿಗೆ ವಿಮೆ ಮಾಡಿಸಿ ಇಲ್ಲವಾದಲ್ಲಿ ಬೆಳೆ ಹಾನಿಯಾದರೆ ಆಗ ಸಂಕಷ್ಟ ಎದುರಿಸಬೇಕಾಗುತ್ತದೆ. ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ಯಾವಾಗ ವಿಮೆ ಮಾಡಿಸಲು ಕೊನೆಯ ದಿನಾಂಕವಾಗಿದೆ ಎಂದು ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು ಅದಕ್ಕಾಗಿ ಲೇಖನವನ್ನು ಸಂಪರ್ಕವಾಗಿ ಓದಿ
ಜಿಲ್ಲಾವಾರು ಕೊನೆಯ ದಿನಾಂಕಗಳ ಮಾಹಿತಿ ಪಡೆಯುವುದು ಹೇಗೆ?
* ಅದಕ್ಕಾಗಿ ನಿಮ್ಮ ಮೊದಲು ಸಂರಕ್ಷಣೆ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
* ಅಲ್ಲಿ ವರ್ಷ ಹಾಗೂ ಋತುವನ್ನು ಸೆಲೆಕ್ಟ್ ಮಾಡಬೇಕಾಗಿದ್ದು ಈಗಾಗಲೇ ವರ್ಷ 2024-25 ಹಾಗೂ ಋತು ರಾಬಿ ಎಂದು ಸೆಲೆಕ್ಟ್ ಆಗಿರುತ್ತದೆ.
ಅದನ್ನು ನೋಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ನಂತರ ಓಪನ್ ಆಗುವ ಪೇಜ್ ನಲ್ಲಿ ಫಾರ್ಮರ್ಸ್ ಎಂಬ ಕಾಲಂ ಇದ್ದು, ಅದರಲ್ಲಿ ಸ್ವಲ್ಪ ಕೆಳಗಡೆ ಸ್ಕ್ರಾಲ್ ಮಾಡಿದರೆ ವ್ಹೀವ್ ಕಟ್ ಆಫ್ ಡೇಟ್ (view cut off dates) ಎಂಬ ಹಾಗೆ ಇದೆ ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆಯನ್ನು ಸೆಲೆಕ್ಟ್ ಮಾಡುವ ಆಯ್ಕೆಯಿದ್ದು ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ
* ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿದ ನಂತರ ನಿಮ್ಮ ಜಿಲ್ಲೆಯಲ್ಲಿ ಯಾವ ಬೆಳೆಗೆ ಯಾವಾಗ ಬೆಳೆ ವಿಮೆ ಪ್ರಾರಂಭವಾಗಿದೆ ಯಾವಾಗ ಕೊನೆಯಾಗುತ್ತದೆ ಹಾಗೂ ಇನ್ನು ಎಷ್ಟು ದಿನಗಳು ಬಾಕಿ ಇದೆ ಎಂಬ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ನೀಡುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬೆಳೆಗಳ ಬಗ್ಗೆ ಮಾಹಿತಿ ಇದ್ದು ನೀವು ಯಾವ ಬೆಳೆಯನ್ನು ಬೆಳೆಯುತ್ತಿದ್ದೀರಿ ಎಂದು ನೋಡಿಕೊಂಡು ಆ ಬೆಳಗ್ಗೆ ಯಾವಾಗ ಬೆಳೆವಿಮೆ ಪಾವತಿಸುವ ಕೊನೆಯ ದಿನಾಂಕ ಇದೆ ಇನ್ನು ಎಷ್ಟು ದಿನ ಬಾಕಿ ಇದೆ ಎಂಬುದನ್ನು ನೋಡಿಕೊಂಡು ಬೆಳೆ ವಿಮೆ ಮಾಡಿಸಬಹುದು.
ಬೆಳೆವಿಮೆ ಮಾಡಿಸುವುದು ಹೇಗೆ?
ಹತ್ತಿರದ ಗ್ರಾಮ ಒನ್ ಕೇಂದ್ರಗಳಲ್ಲಿ ನೀವು ಬೆಳೆ ವಿಮೆ ಮಾಡಿಸಬಹುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ