Land registration rules :: ಇಂತಹ ಜಮೀನುಗಳಿಗೆ ಖಾತೆ ಮಾಡಲು ಆಗುವುದಿಲ್ಲ!!
Our Land, Our Right New Strength for Public Property Protection!!
ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಿದ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕಕ್ಕೆ ಸಂಬಂಧಿಸಿದಂತೆ::
ಸರ್ಕಾರಿ ಜಮೀನುಗಳ ಸಂರಕ್ಷಣೆ ಮತ್ತು ಮೇಲ್ಮನವಿ ಪ್ರಕ್ರಿಯೆಗೆ ಸಂಬಂಧಿಸಿದಂತೆ:-
Protection of Government Property:-
* ಅಧಿಕಾರ ಹಂಚಿಕೆಯ ಕುರಿತು – ಈ ಮೊದಲು ಜಮೀನುಗಳ ಖಾತೆ ಅಥವಾ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಜಿಲ್ಲಾಧಿಕಾರಿಗಳಿಗೆ (DC) ಇದ್ದಂತಹ ಅಧಿಕಾರವನ್ನು ಪ್ರಸ್ತುತವಾಗಿ ಸಹಾಯಕ ಆಯುಕ್ತರ (AC) ಮಟ್ಟಕ್ಕೆ ವರ್ಗಾಯಿಸಲಾಗಿದೆ.
• ಇದರ ಉದ್ದೇಶ: ಒಂದು ವೇಳೆ ಜಿಲ್ಲಾಧಿಕಾರಿಗಳು (DC) ಆದೇಶವನ್ನು ನೀಡಿದರೆ ನೇರವಾಗಿ ಹೈಕೋರ್ಟ್‌ಗೆ ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಆದರೆ ಈಗ ಸಹಾಯಕ ಆಯುಕ್ತರು (AC) ಆದೇಶವನ್ನು ನೀಡಿದರೆ,
ಅದರ ವಿರುದ್ಧವಾಗಿ ಜಿಲ್ಲಾಧಿಕಾರಿಗಳಿಗೆ (DC) ಮೇಲ್ಮನವಿಯನ್ನು ಸಲ್ಲಿಸಲು ಸರ್ಕಾರಕ್ಕೆ ಒಂದು ಅವಕಾಶ ದೊರೆಯುತ್ತದೆ.
ಇದರಿಂದಾಗಿ ಸರ್ಕಾರಿ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳು ಕಬಳಿಸದಂತೆ ತಡೆಯುವುದಕ್ಕೆ ಸರ್ಕಾರಕ್ಕೆ ಹೆಚ್ಚಿನ ಸಮಯ ಮತ್ತು ಕಾನೂನಾತ್ಮಕ ಅವಕಾಶಗಳು ಲಭ್ಯವಾಗುತ್ತವೆ.
• ಮೇಲ್ಮನವಿ ಹಂತಗಳು ಹೇಗಿವೆ ಎಂದರೆ – ಮೊದಲನೆಯ ಮೇಲ್ಮನವಿಯನ್ನು ಸಹಾಯಕ ಆಯುಕ್ತರಿಗೆ (AC), ಎರಡನೆಯದನ್ನು ಜಿಲ್ಲಾಧಿಕಾರಿಗಳಿಗೆ (DC) ಮತ್ತು ಮೂರನೆಯದನ್ನು ಕರ್ನಾಟಕ ಅಪೀಲೇಟ್ ಟ್ರಿಬ್ಯುನಲ್‌ಗೆ (KAT) ಸಲ್ಲಿಸುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಒತ್ತುವರಿ ತೆರವುಗೊಳಿಸುವ ಅಧಿಕಾರದ ಕುರಿತು:-
About Removing Encroachments:-
• ತಹಸೀಲ್ದಾರರಿಗೆ ಸ್ಪಷ್ಟವಾದ ಅಧಿಕಾರ – ಈ ಹಿಂದೆ ಕಾಲುವೆ, ಕೆರೆ ಅಥವಾ ಸಾರ್ವಜನಿಕ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸುವ ವಿಷಯದಲ್ಲಿ ತಹಸೀಲ್ದಾರರಿಗೆ ಇದ್ದಂತಹ ಗೊಂದಲಮಯ ಅಧಿಕಾರವನ್ನು ಪ್ರಸ್ತುತವಾಗಿ ಸರಳೀಕರಣ ಮಾಡಲಾಗಿದೆ.
ಸಾರ್ವಜನಿಕ ಆಸ್ತಿ ಎಂದು ಏನು ಘೋಷಣೆಯಾಗಿದೆಯೋ ಅಂತಹ ಜಮೀನನ್ನು ತೆರವುಗೊಳಿಸುವುದಕ್ಕೆ ತಹಸೀಲ್ದಾರರಿಗೆ ಈಗ ನೇರವಾದ ಅಧಿಕಾರವಿರುತ್ತದೆ.
ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಭೂ ಪರಿವರ್ತನೆ (Land Conversion) ಪ್ರಕ್ರಿಯೆಯ ಸರಳೀಕರಣ:-
Ease of Doing Business for Small Industries :-
* ಕನ್ವರ್ಷನ್ ಅಗತ್ಯವಿಲ್ಲದಿರುವ ಬಗ್ಗೆ – ಕೈಗಾರಿಕಾ ವಲಯ (Industrial Zone) ಎಂದು ಮೊದಲೇ ಗುರುತಿಸಲಾಗಿರುವ ಪ್ರದೇಶಗಳಲ್ಲಿ 2 ಎಕರೆವರೆಗಿನ ಜಮೀನಿಗೆ ಪ್ರತ್ಯೇಕವಾದ ಭೂ ಪರಿವರ್ತನೆಯ (Conversion) ಅವಶ್ಯಕತೆಯು ಇರುವುದಿಲ್ಲ.
• ಸಣ್ಣ ಉದ್ದಿಮೆದಾರರು ನೇರವಾಗಿ ಕೈಗಾರಿಕಾ ನಕ್ಷೆಯ ಅನುಮೋದನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದು ‘ಈಸ್ ಆಫ್ ಡೂಯಿಂಗ್ ಬಿಸಿನೆಸ್‘ಗೆ ಹೆಚ್ಚು ಪೂರಕವಾಗುವಂತೆ ಮಾಡುತ್ತದೆ.
ಪ್ರತಿಪಕ್ಷಗಳ ಸಲಹೆಗಳು ಏನು ಎಂದರೆ:-
Suggestion from opposition :-
* ಲೀಗಲ್ ಸೆಲ್ ಸ್ಥಾಪನೆಯ ಬಗ್ಗೆ – ಆರ್. ಅಶೋಕ್ ಅವರು ಮಾತನಾಡುತ್ತಾ, ಬೆಲೆಬಾಳುವ ಸರ್ಕಾರಿ ಜಮೀನುಗಳನ್ನು ಉಳಿಸಿಕೊಳ್ಳುವುದಕ್ಕೆ ಕಂದಾಯ ಇಲಾಖೆಯಲ್ಲಿ ಪ್ರತ್ಯೇಕವಾದ ‘ಲೀಗಲ್ ಸೆಲ್’ ಅನ್ನು ಸ್ಥಾಪಿಸಿ, ಸಮರ್ಥ ವಕೀಲರನ್ನು ನೇಮಿಸಬೇಕು ಎಂದು ಸಲಹೆಯನ್ನು ನೀಡಿದರು.
• ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ – ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅವಕಾಶವನ್ನು ನೀಡದಂತೆ ಮತ್ತು ಕಾಲುದಾರಿ, ಬಂಡಿದಾರಿಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಇತರ ಶಾಸಕರು ಒತ್ತಾಯವನ್ನು ಮಾಡಿದರು.
ಕಂದಾಯ ಕ್ರಾಂತಿ:-
Revenue Revolution:-
ಈ ಬದಲಾವಣೆಗಳ ಮಸೂದೆಯು ಜನರಿಗೆ ಸಹಾಯ ಮಾಡುತ್ತದೆ. ಮೊದಲನೆಯದಾಗಿ, ಭೂಮಿಯ ದಾಖಲೆಗಳ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಈಗ ಮೂರು ಹಂತದ ಮೇಲ್ಮನವಿ ಅವಕಾಶಗಳು (AC, DC ಮತ್ತು ಟ್ರಿಬ್ಯೂನಲ್) ಇರುವುದರಿಂದ,
ಜನರಿಗೆ ಸ್ಥಳೀಯವಾಗಿಯೇ ನ್ಯಾಯ ಸಿಗುತ್ತದೆ. ತಮ್ಮ ಹಕ್ಕುಗಳನ್ನು ಸಾಬೀತುಪಡಿಸಲು ಹೆಚ್ಚು ಸಮಯ ಮತ್ತು ಅವಕಾಶ ಸಿಗುತ್ತದೆ. ಎರಡನೆಯದಾಗಿ, ಸಣ್ಣ ಉದ್ಯಮ ಮಾಡುವವರಿಗೆ ಎರಡು ಎಕರೆಯವರೆಗೆ ಭೂಮಿಯನ್ನು ಪರಿವರ್ತಿಸುವ (Conversion) ಅಗತ್ಯವಿಲ್ಲ.
ಇದರಿಂದ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ ಮತ್ತು ಕೈಗಾರಿಕೆಗಳನ್ನು ಬೇಗನೆ ಪ್ರಾರಂಭಿಸಬಹುದು. ಮೂರನೆಯದಾಗಿ, ರಾಜಕಾಲುವೆ ಮತ್ತು ಕೆರೆಗಳಂತಹ ಸಾರ್ವಜನಿಕ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿದ್ದರೆ, ಅದನ್ನು ತೆರವುಗೊಳಿಸಲು ತಹಸೀಲ್ದಾರರಿಗೆ ನೇರವಾದ ಅಧಿಕಾರ ಇರುತ್ತದೆ.
ಇದರಿಂದ ಪ್ರವಾಹದಂತಹ ತೊಂದರೆಗಳು ಕಡಿಮೆಯಾಗುತ್ತವೆ ಮತ್ತು ಜನರಿಗೆ ಉತ್ತಮ ಸೌಲಭ್ಯಗಳು ಸಿಗುತ್ತವೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಬರುತ್ತದೆ ಮತ್ತು ಸಾಮಾನ್ಯ ಜನರ ಕೆಲಸಗಳು ಸುಲಭವಾಗುತ್ತವೆ.
This set of changes to the law assists people in a few important ways. First, when there are disagreements about land records, people can now appeal to three different authorities (AC, DC, and Tribunal).
This means they can seek fairness without having to travel far. It also gives them more time and chances to show that they own the land. Second, small business owners do not need to change the land designation if they only use up to two acres.
This saves them from visiting government offices and lets them start their businesses faster. Third, Tahsildars can now immediately remove illegal constructions on public lands, such as storm-water drains (Rajakaluve) and lakes.
This helps prevent problems like floods and improves public amenities. As a result, these updates make the government more open and simplify everyday tasks for the average person.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply