SSP Schalorship Update :: ಕರ್ನಾಟಕ ರಾಜ್ಯ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಅಪ್ಡೇರ್!! ಹಣ ಯಾವಾಗ ಜಮಾ ಆಗುತ್ತೆ??
SSP ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ:: ಕರ್ನಾಟಕ ರಾಜ್ಯ ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ!!!
SSP ( STATE SCHOLARSHIP PORTAL) Is the one of the best initiative from government to empower Students by giving financial assistance. SSP is not only a scholarship but it Providing huge amount to students to meet their college fees and study expenses.
But due to some technical issues in recent days applications are not moving to next step of verification, this cause tense in students.
ಕರ್ನಾಟಕ ರಾಜ್ಯ ಶಿಷ್ಯವೇತನ ತಂತ್ರಾಂಶವು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಾ ಬಂದಿದೆ ಈ ಎಸ್ ಎಸ್ ಪಿ ಸ್ಕಾಲರನ್ನು ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣದ ಅನುಗುಣವಾಗಿ ಸಂಬಂಧಪಟ್ಟ ಆಯಾ ಇಲಾಖೆಗಳು ಸ್ಕಾಲರ್ಶಿಪ್ ಹಣವನ್ನು ಬಿಡುಗಡೆಗೊಳಿಸುತ್ತವೆ
ಉದಾಹರಣೆಗೆ ಪರಿಶಿಷ್ಟ ಜಾತಿ ವರ್ಗದವರಿಗೆ ಸಮಾಜ ಕಲ್ಯಾಣ ಇಲಾಖೆಯು ಹಣ ಬಿಡುಗಡೆ ಮಾಡಿದರೆ ಪರಿಶಿಷ್ಟ ಪಂಗಡದ ವರ್ಗದ ವಿದ್ಯಾರ್ಥಿಗಳಿಗೆ ಪರಿಶಿಷ್ಟ ಪಂಗಡ ಇಲಾಖೆಯು ಹಣ ಬಿಡುಗಡೆಗೊಳಿಸುತ್ತದೆ ಇಸ್ ಸ್ಕಾಲರ್ಶಿಪ್ ಕೇವಲ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಹಣವನ್ನು ನೀಡಲಾಗುತ್ತದೆ.
ಈ ರೀತಿಯಾಗಿ ಹಣವನ್ನು ಪ್ರೋತ್ಸಾಹ ಧನವನ್ನಾಗಿ ನೀಡುತ್ತಾ ಬಂದಾಗ ವಿದ್ಯಾರ್ಥಿಗಳ ಓದಿನ ಖರ್ಚುಗಳನ್ನು ಸರಿದೂಗಿಸುತ್ತ ಉನ್ನತ ಶಿಕ್ಷಣದ ಕಡೆಗೆ ಮುಖ ಮಾಡಬಹುದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
SSPಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?
How to apply SSP scholarship?
Step 1:- SSP ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿಧಾನ ಬಹಳ ಸರಳ ಮತ್ತು ಸುಲಭವಾಗಿದೆ.
ಮೊದಲಿಗೆ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಪೇಜ್ ಗೆ ಹೋಗಬೇಕು.
https://ssp.postmatric.karnataka.gov.in/homepage.aspx
Click above given link
Step 2 :- ಅಧಿಕೃತ ವೆಬ್ ಪೇಜ್ ಅನ್ನು ತಲುಪಿದ ನಂತರ ಅಲ್ಲಿ ಕಾಣಿಸುವ “ಮೆಟ್ರಿಕ್ ಪೂರ್ವ ಅಥವಾ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಖಾತೆ ಸೃಜಿಸಲು” ಇಲ್ಲಿ ಕ್ಲಿಕ್ ಮಾಡಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
Step 3:- ನಂತರ ಅಭ್ಯರ್ಥಿಗಳು ತಮ್ಮ ಸ್ವವಿವಾರಗಳು ಮತ್ತು ಆಧಾರ್ ಕಾರ್ಡಿನ “e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿ” ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ SSP ಖಾತೆಯನ್ನು ಸೃಷ್ಟಿಸಬೇಕು.
Step 4:- ಖಾತೆ ಸೃಷ್ಟಿಸಿದ ನಂತರ, SSP ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಸಿಕೊಂಡು ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.
Step 5:- ಈ ರೀತಿಯಾಗಿ ಖಾತೆ ಸೃಷ್ಟಿಸಲಾಗಿನ್ ಆದ ನಂತರ ವಿದ್ಯಾರ್ಥಿಯ ಡ್ಯಾಶ್ ಬೋರ್ಡ್ ಕಾಣಿಸುತ್ತದೆ ಇಲ್ಲಿ ವಿದ್ಯಾರ್ಥಿಯು 10ನೇ ತರಗತಿ ಗಿಂತ ಕಡಿಮೆ ವರ್ಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ,
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಎನ್ನುವ ಕ್ಲಿಕ್ ಮೇಲೆ ಕ್ಲಿಕ್ ಮಾಡಬೇಕು ಅಥವಾ ಹತ್ತನೇ ತರಗತಿ ಗಿಂತ ಹೆಚ್ಚಿನ ವರ್ಗದಲ್ಲಿ ಓದುತ್ತಿದ್ದರೆ ಅಂತಹ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ತಮ್ಮ ಡ್ಯಾಶ್ ಬೋರ್ಡ್ ಗಳಿಗೆ ಪ್ರವೇಶ ಪಡೆಯಬೇಕು.
Step 6:- ಆಗ ಅಭ್ಯರ್ಥಿಗಳ “ಡ್ಯಾಶ್ ಬೋರ್ಡ್” ನಲ್ಲಿ ಅ ಪ್ಲೇಫರ್ ಪೋಸ್ಟ್ ಮೆಟ್ರಿಕ್ ಎನ್ನುವ ಆಯ್ಕೆ ಕಾಣುತ್ತದೆ ಆ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಅರ್ಜಿ ಸಲ್ಲಿಸಿದ ನಂತರ ಕನಿಷ್ಠ ಆರು ತಿಂಗಳ ಒಳಗಾಗಿ SSP ಹಣದ ಅರ್ಜಿಯ ಸಂಪೂರ್ಣ ಸ್ಥಿತಿ ಗತಿಯನ್ನು ತಿಳಿಯಬಹುದು ಅಂದರೆ ಅರ್ಜಿ ಯಾವ ಹಂತದಲ್ಲಿ ಪರಿಶೀಲನೆ ಆಗುತ್ತಿದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಎಷ್ಟು ಹಣ ಜಮಾ ಆಗುತ್ತದೆ ಹಾಗೂ ಅರ್ಜಿ ಸಲ್ಲಿಸಿದ ನಂತರ ಹಣ ಬಿಡುಗಡೆಗೆ ಸಾಮಾನ್ಯ ಎಷ್ಟು ದಿನಗಳ ಅವಶ್ಯಕತೆ ಇದೆ ಎಂದು ಅಂದಾಜಿಸಬಹುದು ಹೀಗಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು?
What are the qualifications need to apply for scholarship scheme?
ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
“SC/ST ಮತ್ತು OBC” ವರ್ಗಕ್ಕೆ ಸೇರಿರಬೇಕು.
SC ಅಭ್ಯರ್ಥಿಗಳಿಗೆ ವಾರ್ಷಿಕ ಕುಟುಂಬದ ಆದಾಯ “2.5 ಲಕ್ಷಕ್ಕಿಂತ ಕಡಿಮೆ” ಇರಬೇಕು.
SC ಅಭ್ಯರ್ಥಿಗಳಿಗೆ “ಕಳೆದ ಪರೀಕ್ಷೆಯಲ್ಲಿ ಶೇ. 50” ರಷ್ಟು ಅಂಕಗಳನ್ನು ಗಳಿಸಿರಬೇಕು.
ಕುಟುಂಬದ ವಾರ್ಷಿಕ ಆದಾಯವು ST ಅಭ್ಯರ್ಥಿಗೆ 2 ಲಕ್ಷ ಮತ್ತು ಒಬಿಸಿ – 1 ಲಕ್ಷಕ್ಕಿಂತ ಕಡಿಮೆ ಇರಬೇಕು .
ಅರ್ಜಿಯ ಸ್ಥಿತಿ ಪರಿಶೀಲಿಸುವುದು ಹೇಗೆ? How to check application Status?
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಕೆಲವು ದಿನಗಳ ನಂತರ ತಮ್ಮ “ಸ್ಟೂಡೆಂಟ್ ಐಡಿ ಹಾಗೂ ಪಾಸ್ವರ್ಡ್” ಅನ್ನು ಬಳಸಿಕೊಂಡು ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಬೇಕು.
ಲಾಗಿನ್ ಆದ ನಂತರ ಅಲ್ಲಿ ಕಾಣಿಸುವ ಡ್ಯಾಶ್ ಬೋರ್ಡ್ ನಲ್ಲಿ ಇಯರ್ ವೈಸ್ ಸ್ಟೂಡೆಂಟ್ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಈ ರೀತಿಯಾಗಿ ಈ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಅಭ್ಯರ್ಥಿ ‘ಇಚ್ಚಿಸುವ ವರ್ಷ“ವನ್ನು ಆಯ್ದುಕೊಂಡು “ವ್ಯೂ” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಈ ರೀತಿಯಾಗಿ ಮಾಡಿದಾಗ ಅಭ್ಯರ್ಥಿಯ ಸಂಪೂರ್ಣ ವಿವರಗಳು “ಪಿಡಿಎಫ್ ರೂಪ“ದಲ್ಲಿ ಕೈಗೆ ಸಿಗುತ್ತದೆ.
ಆ ಪಿ ಡಿ ಎಫ್ ನಲ್ಲಿ ಅಭ್ಯರ್ಥಿಗಳು ತಮ್ಮ “ವಿವರಗಳನ್ನು ಪರಿಶೀಲಿಸಿಕೊಂಡು” ಅರ್ಜಿಯ ಸ್ಥಿತಿ ಪರಿಶೀಲನೆ ಯಾವ ಹಂತದಲ್ಲಿದೆ ಎಂದು ತಿಳಿಯಬಹುದು.
ಪ್ರಸ್ತುತ ಈಗಿರುವ ಸಮಸ್ಯೆ ಏನು?
What is the main problem in SSP?
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶವು ಜನಸ್ನೇಹಿ ವೆಬ್ಸೈಟ್ ಆಗಿದ್ದರು, ಬಹಳಷ್ಟು ಬಾರಿ “ತಾಂತ್ರಿಕ ಅಡಚಣೆಗಳು” ಉಂಟಾಗುತ್ತವೆ.
ಆದರೆ ಈ ಸಮಸ್ಯೆಯನ್ನು ಹೊರತುಪಡಿಸಿ ಈ ಬಾರಿ ಹಲವು ಅಭ್ಯರ್ಥಿಗಳು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಅದೆಂದರೆ, ಅರ್ಜಿಯ ಸ್ಥಿತಿಗತಿ ಯಾವುದೇ ರೀತಿಯಲ್ಲೂ ಬದಲಾಗುತ್ತಿಲ್ಲ ಎನ್ನುವುದು.
ಅಭ್ಯರ್ಥಿಗಳ ದೂರು ಏನೆಂದರೆ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರು ಕೂಡ ಇನ್ನು ಮೊದಲ ಹಾಗೂ ಎರಡನೇ ಹಂತದ “ವೆರಿಫಿಕೇಷನ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ” ಎನ್ನುವುದು,
ಇನ್ನೂ ಕೆಲವು ಅಭ್ಯರ್ಥಿಗಳು ನಾಲ್ಕನೇ ಹಂತದವರೆಗೂ ವೆರಿಫಿಕೇಷನ್ ಪ್ರಕ್ರಿಯೆ ಮುಗಿದಿದ್ದು “ಹಣ ಪುಶ್ ಟು ಡಿಬಿಟಿಗೆ ವರ್ಗಾವಣೆ ಆಗಿದೆ, ಆದರೆ ಇನ್ನೂ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಹಣ ಜಮವಾಗಿಲ್ಲ“. ಎನ್ನುವುದು ಅಭ್ಯರ್ಥಿಗಳ ಅಳಲಾಗಿದೆ
ಹಾಗಾದರೆ ಈ ಸಮಸ್ಯೆಗೆ ಇರುವ ಪರಿಹಾರ ಏನು?
What is the solution for this problem?
ಈ ತರಹದ ಸಮಸ್ಯೆಗಳಿಗೆ ಅಭ್ಯರ್ಥಿಗಳಿಗಿರುವ ಒಂದೇ ಒಂದು ಪರಿಹಾರ ಎಂದರೆ, ಹತ್ತಿರದ “ಸಮಾಜ ಕಲ್ಯಾಣ ಇಲಾಖೆ ಅಥವಾ ಪರಿಶಿಷ್ಟ ಪಂಗಡದ ಇಲಾಖೆ ಅಥವಾ ಒಬಿಸಿ ಅಭ್ಯರ್ಥಿಗಳಿಗೆ ಸಂಬಂಧಿಸಿದ ಇಲಾಖೆ ಭೇಟಿ” ನೀಡಿ ವಿದ್ಯಾರ್ಥಿಗಳಿಗೆ ಆಗಿರುವಂತಹ ಗೊಂದಲದ ಬಗ್ಗೆ ವಿವರಿಸಿ ತಪ್ಪನ್ನು ಸರಿಪಡಿಸುವಂತೆ ಮನವಿ ಸಲ್ಲಿಸುವುದು.
ಈ ರೀತಿಯಾಗಿ ಮನವಿ ಸಲ್ಲಿಸಿದರೆ ಇಲಾಖೆಗಳು ವೆರಿಫಿಕೇಷನ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಹಣ ಜಮಾವಣೆಯನ್ನ ಶೀಘ್ರವಾಗಿ ಮಾಡುತ್ತಾರೆ.
ಅಲ್ಲದೆ, ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ದುಬಾರಿ ಜೀವನಶೈಲಿಗೂ ವಿದ್ಯಾರ್ಥಿಗಳು ತಂದೆ ತಾಯಿಯ ಮೇಲೆ ಅವರ ಅವಲಂಬಿತರಾಗುವುದು ಕಷ್ಟ ಸಾಧ್ಯ. ಆರ್ಥಿಕ ದುಸ್ಥಿತಿಯಿಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಹಿಂದೆ ಸರಿಯುತ್ತಿದ್ದಾರೆ.
ಈ ರೀತಿಯಾದ “ಶೈಕ್ಷಣಿಕ ವಿಫಲತೆಯನ್ನು ತಡೆಯಲು” ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸಹ ಕೈಜೋಡಿಸಿ ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ.
ಹಾಗಾಗಿ ಹಲವು ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದಿಂದ ತಮ್ಮ ಶಾಲಾ ಕಾಲೇಜು ವೆಚ್ಚವನ್ನು ನಿಭಾಯಿಸುತ್ತಾ, ತಂದೆ ತಾಯಿಯರ ಮೇಲೆ ಹೆಚ್ಚು ಅವಲಂಬಿತರಾಗದೆ ಶಿಕ್ಷಣ ಪೂರೈಸಲು ಸರ್ಕಾರ ನೀಡುತ್ತಿರುವ ಮಹತ್ವದ ಹಣಕಾಸಿನ ನೆರವಾಗಿದೆ.
Therefore SSP scholarship is focusing on Higher studies by providing reasonable amount to complete education. By providing financial assistance in a transparent and efficient manner,
SSP reduces dropout rates and motivates students to pursue higher education. Overall, SSP acts as a strong support system that empowers students to achieve their academic goals and build a better future.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply