PAHANI or RTC :: ಉಚಿತವಾಗಿ ನಿಮ್ಮ ಪಾಣೆಯನ್ನು ಡೌನ್ಲೋಡ್ ಮಾಡಿಕೊಳ್ಳಿ!! ನಿಮ್ಮ ಹೊಲದ ಸುತ್ತಳತೆ ಎಷ್ಟಿದೆ??
ಮನೆಯಲ್ಲಿಯೇ ಕುಳಿತು ಪಹಣಿ (RTC) ಡೌನ್‌ಲೋಡ್ ಮಾಡಿಕೊಳ್ಳಿ: ಸಂಪೂರ್ಣ ವಿವರಣೆ :
Downloaded RTC and Phanni easily from your smartphone :
ಅನುಸರಿಸಬೇಕಾದ ಮುಖ್ಯ ಹಂತಗಳು:
* ಮೊದಲಿಗೆ, ಕರ್ನಾಟಕ ಸರ್ಕಾರದ ಅಧಿಕೃತ ‘ಭೂಮಿ‘ ಜಾಲತಾಣಕ್ಕೆ (Bhoomi Website) ಭೇಟಿ ನೀಡಬೇಕು. ಇದು ಆನ್‌ಲೈನ್‌ನಲ್ಲಿ ಭೂ ದಾಖಲೆಗಳನ್ನು ಪಡೆಯಲು ಇರುವ ಏಕೈಕ ತಾಣವಾಗಿದೆ. https://landrecords.karnataka.gov.in/Service2/

Bhoomi Online Page

Select Current Year

Select Your District
* ಇಲ್ಲಿ ನಿಮಗೆ ಬೇಕಾದ ಪಹಣಿಯು ‘ಪ್ರಸಕ್ತ ವರ್ಷ’ಕ್ಕೆ (Current Year) ಸಂಬಂಧಿಸಿದಾಗಿರಬೇಕೋ ಅಥವಾ ‘ಹಳೆಯ ವರ್ಷ’ದಕ್ಕೆ (Old Year) ಸಂಬಂಧಿಸಿದಾಗಿರಬೇಕೋ ಎಂಬುದನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ನಿಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ.
ನಂತರ ನಿಮ್ಮ ಸ್ವಂತ ಜಿಲ್ಲೆ (District), ತಾಲ್ಲೂಕು (Taluk), ಹೋಬಳಿ (Hobli) ಹಾಗೂ ಗ್ರಾಮವನ್ನು (Village) ನೀಡಲಾದ ಪಟ್ಟಿಯಿಂದ ಕ್ರಮವಾಗಿ ಆರಿಸಿ. ಈ ಹಂತದಲ್ಲಿ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಿ.
* ನಿಮ್ಮ ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ (Survey Number) ಅನ್ನು ನಿಖರವಾಗಿ ನಮೂದಿಸಿ. ನಂತರ ಪಕ್ಕದಲ್ಲಿರುವ ‘Go’ ಬಟನ್ ಅಥವಾ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ, ಹಿಸ್ಸಾ ನಂಬರ್ (Hissa Number) ಮತ್ತು ಇತರ ಸಂಬಂಧಿತ ವಿವರಗಳು ನಿಮಗೆ ಕಾಣಿಸುತ್ತವೆ.
ಮಾಲೀಕರ ಹೆಸರು ಮತ್ತು ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ‘Fetch Details’ ಮೇಲೆ ಕ್ಲಿಕ್ ಮಾಡಿ. ಒಂದು ವೇಳೆ ಏನಾದರೂ ತಪ್ಪುಗಳಿದ್ದಲ್ಲಿ, ಕೂಡಲೇ ಸರಿಪಡಿಸಿಕೊಳ್ಳಿ.
* ಎಲ್ಲ ವಿವರಗಳು ಸರಿಯಾಗಿದ್ದಲ್ಲಿ, ‘View RTC’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪಹಣಿಯು ಸ್ಕ್ರೀನ್ ಮೇಲೆ ಮೂಡುತ್ತದೆ. ಅದನ್ನು ನೀವು ಪಿಡಿಎಫ್ (PDF) ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.

Akrama Sakrama
ರೈತರು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ, ತಮ್ಮ ಜಮೀನಿನ ಹಕ್ಕು, ವಿಸ್ತೀರ್ತಿ ಮತ್ತು ಬೆಳೆಗಳ ಬಗ್ಗೆ ಮಾಹಿತಿಯನ್ನು ನೇರವಾಗಿ ನೋಡಬಹುದು. ಇದರಿಂದ ದಾಖಲೆಗಳಲ್ಲಿ ತಪ್ಪುಗಳು ಆಗದಂತೆ ನೋಡಿಕೊಳ್ಳಬಹುದು.
* ಕೃಷಿ ಸಾಲ ಅಥವಾ ಸರ್ಕಾರದ ಸಹಾಯಧನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪಹಣಿ ಮುಖ್ಯ ದಾಖಲೆ. ಆನ್‌ಲೈನ್‌ನಲ್ಲಿ ತಕ್ಷಣವೇ ಸಿಗುವುದರಿಂದ ರೈತರು ತಡಮಾಡದೆ ಸೌಲಭ್ಯಗಳನ್ನು ಪಡೆಯಬಹುದು.
ಇಂಟರ್ನೆಟ್ ಇದ್ದರೆ, ರೈತರು ದಿನದ 24 ಗಂಟೆಯೂ ಎಲ್ಲಿಂದಲಾದರೂ ಈ ದಾಖಲೆಯನ್ನು ಪಡೆಯಬಹುದು. ಇದು ರೈತರಿಗೆ ಕಷ್ಟದ ಸಂದರ್ಭಗಳಲ್ಲಿ ತುಂಬಾ ಅನುಕೂಲವಾಗುತ್ತದೆ.
* ಜಮೀನಿನ ಮಾಲೀಕತ್ವ ಅಥವಾ ಬೆಳೆಗಳ ಬಗ್ಗೆ ಏನಾದರೂ ಸಮಸ್ಯೆಗಳಿದ್ದರೆ, ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನೋಡುವ ಮೂಲಕ ಸರಿಪಡಿಸಿಕೊಳ್ಳಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ.
As RTC is very important when farmers apply for farm loans or government support programs, having it available online right away lets them get these benefits faster. Farmers can get the document whenever and wherever they are if they have internet access.
This is very helpful, especially when they need it urgently. The system also helps farmers fix problems about land ownership or crop checks because they can quickly check the records online.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply