Guarantee Scheme in Budget :: ಐದು ಗ್ಯಾರಂಟಿಗಳಲ್ಲಿ ಯಾವುದಕ್ಕೆ ಹಣ ನೀಡಿಲ್ಲ!! ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಯುವನಿಧಿ!!
A Balanced Vision for Public Welfare and Empowerment Karnataka Budget 2026!!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ 2026 ರ ಮುಖ್ಯವಾದ ವಿಷಯ ,ಬಜೆಟ್ ಗಾತ್ರ ಮತ್ತು ಆರ್ಥಿಕ ಸ್ಥಿತಿಗತಿ::
• ಒಟ್ಟು ಬಜೆಟ್ ಗಾತ್ರ– ₹4,40,847 ಕೋಟಿ (ಕಳೆದ ವರ್ಷಕ್ಕಿಂತ 9% ಜಾಸ್ತಿ)
* 2026-27ರ ಕೊನೆಗೆ ಒಟ್ಟು ಸಾಲ ₹8,24,000 ಕೋಟಿ ಆಗುವ ಅಂದಾಜು. ಇದು ರಾಜ್ಯದ ಜಿಡಿಪಿಯ (GSDP) ಸುಮಾರು 24% ಆಗಿರುತ್ತದೆ.
• ರಾಜ್ಯದ ಆರ್ಥಿಕ ಬೆಳವಣಿಗೆ ದರ 8.1% ಎಂದು ಅಂದಾಜು ಮಾಡಲಾಗಿದೆ (ಕಳೆದ ವರ್ಷ 9.4% ಇತ್ತು). ಇದು ರಾಷ್ಟ್ರೀಯ ಸರಾಸರಿಗಿಂತ (7.4%) ಜಾಸ್ತಿ ಇದೆ.
* ವಲಯಗಳ ಬೆಳವಣಿಗೆ – ಕೃಷಿ ವಲಯ – 9.1%, ಕೈಗಾರಿಕಾ ವಲಯ – 6.7%, ಸೇವಾ ವಲಯ – 8.1%
ಪಂಚ ಗ್ಯಾರಂಟಿ ಯೋಜನೆಗಳು
ಐದು ಗ್ಯಾರಂಟಿಗಳಲ್ಲಿ ಯಾವುದಕ್ಕೆ ಹಣ ನೀಡಿಲ್ಲ?
For which Guarantee No money allocation ?
ಈ ಬಾರಿ ಸರ್ಕಾರ ಘೋಷಿಸಿರುವ 5 ಗ್ಯಾರಂಟಿಯಲ್ಲಿ ಇವನಿಗೆ ಗ್ಯಾರಂಟಿಗೆ ಹೊಸದಾಗಿ ಹಣವನ್ನು ನೀಡಿಲ್ಲ. ಇನ್ನುಳಿದ 4 ಗ್ಯಾರಂಟಿಗಳಿಗೂ ಈ ಬಾರಿ ಸರ್ಕಾರದ ಬಜೆಟ್ಟಿನಲ್ಲಿ ಹಣವನ್ನು ಮಂಜೂರು ಮಾಡಲಾಗಿದೆ,
ಯಾವ ಯಾವ ಗ್ಯಾರೆಂಟಿಗಳಿಗೆ ಎಷ್ಟು ಹಣ ಎಂಬುದನ್ನು, ಈ ಕೆಳಗಿನ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
ಸರ್ಕಾರವು ಗ್ಯಾರಂಟಿ ಯೋಜನೆಗಳಿಗಾಗಿ ಒಟ್ಟು ₹50,686 ಕೋಟಿ ಹಣವನ್ನು ಇಟ್ಟಿದೆ.
* ಗೃಹಲಕ್ಷ್ಮಿ – ₹28,608 ಕೋಟಿ
• ಗೃಹಜ್ಯೋತಿ– ₹10,278 ಕೋಟಿ
* ಶಕ್ತಿ ಯೋಜನೆ – ₹5,300 ಕೋಟ
• ಅನ್ನಭಾಗ್ಯ – ₹6,200 ಕೋಟಿ (ಅಕ್ಕಿ ಜೊತೆ ‘ಇಂದಿರಾ ಕಿಟ್’ ಹಂಚಿಕೆ)
* ಯುವನಿಧಿ – ಈ ಬಜೆಟ್ನಲ್ಲಿ ಯುವನಿಧಿಗೆ ಹೊಸದಾಗಿ ಯಾವುದೇ ಹಣವನ್ನು ನೀಡಿಲ್ಲ.
ಮುಖ್ಯ ಇಲಾಖೆಗಳ ಹಂಚಿಕೆ:-
Main Department allocation :-
* ಶಿಕ್ಷಣ- ₹47,224 ಕೋಟಿ (ಅತಿ ಹೆಚ್ಚು ಹಂಚಿಕೆ)
• ಮಹಿಳಾ ಮತ್ತು ಮಕ್ಕಳ ಕಲ್ಯಾಣ- ₹34,929 ಕೋಟಿ.
* ಇಂಧನ ಇಲಾಖೆ- ₹29,471 ಕೋಟಿ.
• ಗ್ರಾಮೀಣಾಭಿವೃದ್ಧಿ– ₹26,559 ಕೋಟಿ.
* ನೀರಾವರಿ– ₹22,436 ಕೋಟಿ
ಶಿಕ್ಷಣ ಮತ್ತು ಸಮಾಜ ಕಲ್ಯಾಣ:-
Education and social wefare:-
• ಸೋಷಿಯಲ್ ಮೀಡಿಯಾ ನಿಷೇಧ – 16 ವರ್ಷದ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಲ್ಲಿಸುವ ಪ್ರಸ್ತಾಪ
* ರೋಹಿತ್ ವೇಮುಲ ಕಾಯ್ದೆ- ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಹೊಸ ಕಾಯ್ದೆ ಜಾರಿ
• ವಿದ್ಯಾರ್ಥಿ ಚುನಾವಣೆ – ಕಾಲೇಜುಗಳಲ್ಲಿ ನಿಲ್ಲಿಸಿದ್ದ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮತ್ತೆ ಪ್ರಾರಂಭಿಸುವುದು
* ಶಿಕ್ಷಕರ ನೇಮಕಾತಿ- 15,000 ಶಿಕ್ಷಕರ ಹುದ್ದೆಗಳ ಭರ್ತಿ
ಮೂಲಸೌಕರ್ಯ ಮತ್ತು ಪ್ರಾದೇಶಿಕ ಅಭಿವೃದ್ಧಿ:-
Basix facilities and area development :-
• ಬೆಂಗಳೂರು ಸುರಂಗ ರಸ್ತೆ (Tunnel Road) – ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ₹30,000 ಕೋಟಿ ಖರ್ಚಿನ ಯೋಜನೆ
* ಕಲ್ಯಾಣ ಕರ್ನಾಟಕ – ಆರ್ಟಿಕಲ್ 371(ಜೆ) ಅಡಿಯಲ್ಲಿ ಅಭಿವೃದ್ಧಿ ಮಂಡಳಿಗೆ ₹5,000 ಕೋಟಿ ಹಣ
• ತುಂಗಭದ್ರ ಜಲಾಶಯದ ಎಲ್ಲಾ 33 ಗೇಟ್ ಬದಲಾವಣೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ ಪರಿಹಾರದ ಘೋಷಣೆ
* ಹೊಸ ಮಧ್ಯ ನೀತಿ (Liquor Policy)- ಏಪ್ರಿಲ್ 2026 ರಿಂದ ಜಾರಿಗೆ ಬರಲಿದೆ. ಬೆಲೆ ನಿರ್ಧಾರದ ಹಕ್ಕನ್ನು ಉತ್ಪಾದಕರಿಗೇ ನೀಡಲಾಗಿದೆ ಮತ್ತು ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ಹಾಕಲಾಗುತ್ತದೆ.
ಆರೋಗ್ಯ ಮತ್ತು ಪರಿಸರ:-
Haelth and environment:-
* ಇನ್ಸುಲಿನ್ ಪೆನ್ – ಟೈಪ್-1 ಡಯಾಬಿಟಿಸ್ ಇರುವ 18 ವರ್ಷದ ಕೆಳಗಿನ ಮಕ್ಕಳಿಗೆ ಉಚಿತವಾಗಿ ಕೊಡಲಾಗುವುದು.
• ಸರ್ಕಾರಿ ಐವಿಎಫ್ (IVF) – ಬೆಂಗಳೂರಿನ ವಾಣಿ ವಿಲಾಸ್ ಮತ್ತು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ
* ಹೆಸರು ಬದಲಾವಣೆ – ವಿಕ್ಟೋರಿಯಾ ಆಸ್ಪತ್ರೆಯನ್ನು ‘ಶಾಂತವೇರಿ ಗೋಪಾಲಗೌಡ ಆಸ್ಪತ್ರೆ‘ ಎಂದು ಮರುನಾಮಕರಣ ಮಾಡಲಾಗಿದೆ.
ಜನಸ್ನೇಹಿ ಬಜೆಟ್ – ಜನರ ಬದುಕಿಗೆ ಭದ್ರತೆಯ ಬೆಂಬಲ:-
People-Friendly Budget – A Support System for Secure Living:-
ಈ ಬಜೆಟ್ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಬಡ ಕುಟುಂಬಗಳ ಉಳಿತಾಯ ಹೆಚ್ಚಿಸಿ, ಜೀವನದ ಹೊರೆಯನ್ನು ತಗ್ಗಿಸಿದೆ. ಶಿಕ್ಷಣದಲ್ಲಿ ತಂತ್ರಜ್ಞಾನ, ಉದ್ಯೋಗಕ್ಕೆ ಒತ್ತು ನೀಡಿರುವುದು ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭರವಸೆ ನೀಡಿದೆ.
ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ತಲುಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದೆ.ಇದು ಜನರ ಅವಶ್ಯಕತೆಗಳನ್ನು ಪೂರೈಸಿ, ಜೀವನಮಟ್ಟ ಸುಧಾರಿಸಲು ಪೂರಕವಾಗಿದೆ.

C M Siddaramyya
ಈ ಬಜೆಟ್ ಆರ್ಥಿಕವಾಗಿ ಸಾಲದ ಹೊರೆಯನ್ನು ಜಾಸ್ತಿ ಮಾಡಿದರೂ, ಜನಗಳ ಒಳ್ಳೆಯದಕ್ಕೆ ಮತ್ತು ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲು ಪ್ರಯತ್ನಿಸಿದೆ.
This budget improves women’s financial independence, increases poor familie’s savings, and reduces living costs. Prioritizing technology and employment in education,
It promises rural students a better future. It ensures social justice by freely providing expensive medical treatments. Overall, it fulfills basic needs and improves living standards.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply