BPL ration card:: ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!! ಮುಂದಿನ ವಾರ ಇ-ಶ್ರಮ್ ಬಿಪಿಎಲ್ ಕಾಡ್೯ ಸಿಗುತ್ತೆ!!
ಕಳೆದ ತಿಂಗಳು ರಾಜ್ಯ ಸರ್ಕಾರ ರದ್ದು ಮಾಡಿದ್ದ ಬಿಪಿಎಲ್ ಕಾರ್ಡ್ ಬಗ್ಗೆ ಬಹಳಷ್ಟು ಜನರಿಗೆ ಗೊಂದಲಗಳಿದ್ದು ಇದುವರೆಗೂ ಬಿಪಿಎಲ್ ಕಾರ್ಡ್ ಸಮಸ್ಯೆ, ಸಂಪೂರ್ಣವಾಗಿ ಬಗೆಹರಿದಿಲ್ಲ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಿದ್ದರೂ ಕೂಡ ಈಗಾಗಲೇ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್ ದಾರರ ಕುಟುಂಬಗಳು ಇದುವರೆಗೂ ಕಾಡ್೯ ಸಿಗದೆ ಚಿಂತೆಗೊಳಗಾಗಿದ್ದಾರೆ.
95% ರೇಷನ್ ಕಾಡ್೯ ಮರುತಿದ್ದುಪಡಿ ಮುಗಿದಿದೆ!
ಹೌದು, ರಾಜ್ಯ ಸರ್ಕಾರ ರಾಜ್ಯಗೊಂಡಿದ್ದ ಬಿಪಿಎಲ್ ಕಾರ್ಡ್ಗಳನ್ನು ತ್ವರಿತಗತಿಯಲ್ಲಿ ಮರು ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ನಡೆಸಿತ್ತು. ಇದರಂತೆ ಇದೀಗ 95% ರದ್ದುಗೊಂಡಿದ್ದ ಬಿಪಿಎಲ್ ಕಾರ್ಡ್ಗಳನ್ನು ಮರು ಆಕ್ಟಿವೇಟ್ ಮಾಡಲಾಗಿದೆ. ಮರುಸಕ್ರಿಯ ಗೊಂಡ ಕಾಡ್೯ದಾರರು ಈಗಾಗಲೇ ಬಿಪಿಎಲ್ ಕಾಡ್೯ಗಳಿಗೆ ಸಿಗುವ ಅಕ್ಕಿ, ಆರೋಗ್ಯ ಸೌಲಭ್ಯ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.
ಒಂದು ವಾರದಲ್ಲಿ ಇನ್ನುಳಿದ 5% ಕಾಡ್೯ಗಳ ತಿದ್ದುಪಡಿ!
ಆದರೆ ಇನ್ನುಳಿದ 5% ಜನರಿಗೆ ಇದುವರೆಗೂ ರದ್ದಾದ ಬಿಪಿಎಲ್ ಕಾರ್ಡನ್ನು ಮರ ಸಕ್ರಿಯಗೊಳಿಸಿ ಕೊಟ್ಟಿಲ್ಲ. ಇದರಿಂದಾಗಿ ಅಂಥವರು ಚಿಂತೆಗೊಳಗಾಗಿದ್ದು, ತಮ್ಮ ಕಾಡ್೯ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲಿದ್ದಾರೆ. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಕಾರಣಾಂತರಗಳಿಂದ ನಿಮ್ಮ ರೇಷನ್ ಕಾಡ್೯ ಮರುತಿದ್ದುಪಡಿ ತಡವಾಗಿರಬಹುದು ಆದರೆ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ವೇಗವಾಗಿ ಮಾಡುತ್ತಿದ್ದು, ಈ ವಾರದಲ್ಲಿ ನಿಮ್ಮ ಕಾಡ್೯ ಆ್ಯಕ್ಟಿವೇಟ್ ಆಗುತ್ತದೆ. ನೀವು ಕೂಡ ರೇಷನ್ ಹಾಗೂ ಇತರೆ ಸೌಲಭ್ಯ ಪಡೆಯಬಹುದು.
ಇ-ಶ್ರಮ್ ಕಾಡ್೯ನಿಂದ ಬಿಪಿಎಲ್ ಕಾಡ್೯ ಅಜಿ೯ ಹಾಕಿದವರಿಗೆ ಮುಂದಿನ ವಾರದಿಂದ ಕಾಡ್೯ ವಿತರಣೆ!
ಇನ್ನು ಇ-ಶ್ರಮ ಕಾಡ್೯ ಹೊಂದಿದ ಫಲಾನುಭವಿಗಳು ಬಿಪಿಎಲ್ ಕಾಡ್೯ ಗಾಗಿ ಅಜಿ೯ ಸಲ್ಲಿಸಿದಾಗ ಕೇವಲ 15 ದಿನದಲ್ಲಿ ಕಾಡ್೯ ಕೊಡುವುದಾಗಿ ಸಕಾ೯ರ ಹೇಳಿತ್ತು. ಆದರೆ ಇದೀಗ ಬಿಪಿಎಲ್ ಕಾಡ್೯ ಮರು ತಿದ್ದುಪಡಿ ಕಾಯ೯ ಮುಖ್ಯವಾಗಿರುವುದರಿಂದ ಇ-ಶ್ರಮ್ ಕಾಡ್೯ ಹೊಂದಿದವರಿಗೆ ಹೊಸ ಬಿಪಿಎಲ್ ಕಾಡ್೯ ಕೊಡುವ ಪ್ರಕ್ರಿಯೆ 1 ವಾರದ ನಂತರ ಪ್ರಾರಂಭವಾಗಬಹುದು ಎನ್ನಲಾಗಿದೆ. ಈಗಿರುವ ಎಲ್ಲಾ ಮರುತಿದ್ದುಪಡಿ ಪ್ರಕ್ರಿಯೆ ಮುಗಿದ ನಂತರವೇ ಹೊಸ ಕಾಡ್೯ ಕೊಡುತ್ತಾರೆ.
1 ವಷ೯ದ ಹಿಂದೆಯಿಂದ ಇ-ಶ್ರಮ್ ಕಾಡ್೯ ಹೊಂದಿರುವವರಿಗೆ ಮಾತ್ರ ಬಿಪಿಎಲ್ ಕಾಡ್೯ ಪಡೆಯಲು ಅಹ೯ರಾಗಿರುತ್ತಾರೆ. 1 ವಷ೯ದೊಳಗಿನ ಇ-ಶ್ರಮ್ ಕಾಡ್೯ ಹೊಂದಿದವರಾಗಿದ್ದರೆ ಬಿಪಿಎಲ್ ಕಾಡ್೯ ಪಡೆಯಲು ಸಾಧ್ಯವಿಲ್ಲ.
ಇ-ಶ್ರಮ್ ಕಾಡ್೯ ಹೊಂದಿಲ್ಲದೇ ಜನರಲ್ ಬಿಪಿಎಲ್ ಕಾಡ್೯ ಗೆ ಅಜಿ೯ ಸಲ್ಲಿಸಲು ಇನ್ನು ಅಜಿ೯ ಆಹ್ವಾನಿಸಿಲ್ಲ. ಸಧ್ಯಕ್ಕೆ ಅಜಿ೯ ಆಹ್ವಾನಿಸುವುದಿಲ್ಲ. ಮುಂದಿನ ದಿನಗಳಲ್ಲಿ ಅಜಿ೯ ಆಹ್ವಾನಿಸಿದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು.
ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?
*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್ ಕಾಡ್೯ ಮಾಹಿತಿ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚