Arecanut farming: ಹಿಂಗಾರು ಹಂಗಾಮಿನಲ್ಲಿ ಅಡಿಕೆ ಮರಗಳಿಗೆ ಪೋಷಕಾಂಶಗಳ,ಉತ್ತಮ ನಿವ೯ಹಣೆ ಹೇಗೆ?
ದೇಶದಲ್ಲಿ ಕರ್ನಾಟಕ ರಾಜ್ಯವು ಅಡಿಕೆ ಬೆಳೆಗೆ ಹೆಸರಾಗಿದ್ದು, ದೇಶದಲ್ಲಿ ಉತ್ಪಾದನೆ ಆಗುವ ಬಹುತೇಕ ಹೆಚ್ಚಿನ ಪಾಲನ್ನು ಕರ್ನಾಟಕ ರಾಜ್ಯವು ಒದಗಿಸುತ್ತಿದೆ ಅಲ್ಲದೆ ವಿದೇಶಗಳಿಗೂ ಸಹ ರಫ್ತು ಮಾಡುತ್ತಿದೆ.
ರೋಗಗಳಿಗೆ ಬಲಿಯಾಗುತ್ತಿವೆ ಅಡಿಕೆ ತೋಟಗಳು!
ಅಡಿಕೆ ಬೆಳೆಯು ಚಿನ್ನದ ಬೆಳೆಯಾಗಿದ್ದು, ಅಡಿಕೆ ಬೆಳೆಗಾರರನ್ನು ಎಂದಿಗೂ ಕೈ ಬಿಡಲ್ಲ. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು ಇದರೊಂದಿಗೆ ಅಡಿಕೆ ಬೆಳೆ ವಿಸ್ತರಣೆಯೂ ಕೂಡ ಹೆಚ್ಚಾಗುತ್ತಿದೆ.
ಅಡಿಕೆ ಬೆಳೆಯ ಇಂತಹ ಸಕಾರಾತ್ಮಕ ಅಂಶಗಳ ಮಧ್ಯೆ ಅಡಿಕೆಗೆ ಹಲವು ರೋಗ-ರುಜಿನಗಳು ಕಾಡುತ್ತಿದ್ದು, ಹೆಚ್ಚಿನ ಪ್ರಮಾಣದ ಅಡಿಕೆ ಮರಗಳು ಎಲೆ ಚುಕ್ಕಿ ರೋಗ, ಹಳದಿ ರೋಗ ಹೀಗೆ ಹತ್ತು ಹಲವು ರೋಗಗಳಿಗೆ ಬಲಿಯಾಗಿ ನಾಶವಾಗುತ್ತಿವೆ.
ರೋಗಗಳ ತಡೆಗೆ ನ್ಯೂಟ್ರಿಯಂಟ್ಸ್ ಅಗತ್ಯ!
ಇಂತಹ ಸಮಯದಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಮರಗಳನ್ನು ಬೆಳೆಯುವಾಗ ಮರಗಳಿಗೆ ಅವಶ್ಯಕವಿರುವ ಪೋಷಕಾಂಶಗಳನ್ನು ನೀಡಬೇಕು ಅದರಲ್ಲೂ ಸರಿಯಾದ ಪ್ರಮಾಣದಲ್ಲಿ ನೀಡಬೇಕಾಗಿರುವುದು ಅತ್ಯವಶ್ಯಕ.
ಅದಕ್ಕಾಗಿ ಅಡಿಕೆ ಬೆಳೆಗಾರರಿಗೆ ಪೋಷಕಾಂಶಗಳ ನಿರ್ವಹಣೆಯಲ್ಲಿ ಸಹಾಯವಾಗುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಂಡಿದ್ದೇವೆ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಿ.
ಹಿಂಗಾರು ಹಂಗಾಮಿನಲ್ಲಿ ಯಾವ ಪೋಷಕಾಂಶ ಅಗತ್ಯ?
ಇದೀಗ ಹಿಂಗಾರು ಹಂಗಾಮು ನಡೆಯುತ್ತಿದ್ದು ಈ ಹಂಗಾಮಿನಲ್ಲಿ ಅಡಿಕೆ ಮರಗಳ ಪೋಷಣೆಗೆ ಎಂತಹ ಪೋಷಕಾಂಶಗಳನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕೆಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.
ಹತ್ತು ವಷ೯ದ ಮೇಲ್ಪಟ್ಟ ಅಡಿಕೆ ಮರಗಳಿಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಕೊಡಬಹುದಾದ ನ್ಯೂಟ್ರಿಯಂಟ್ಸ್ ಬಗ್ಗೆ ಇಲ್ಲಿದೆ ಮಾಹಿತಿ.
ಮರಗಳಿಗೆ ಯಾವ ಪ್ರಮಾಣದಲ್ಲಿ ಯಾವ ಪೋಷಕಾಂಶ ಕೊಡಬೇಕು?
ಅಡಿಕೆ ಮರಗಳಿಗೆ ಮುಖ್ಯವಾಗಿ ಲಘು ಪೋಷಕಾಂಶಗಳು, ಪೊಟ್ಯಾಷಿಯಂ ಹಾಗೂ ಕೆಮಿಕಲ್ ಗೊಬ್ಬರವನ್ನು ಕೊಡಬೇಕು.
ಪ್ರಮಾಣವನ್ನು ಗಮನಿಸುವುದಾದರೆ…
1) 10:26:26 ಅಥವಾ 9:24:24 ಅಥವಾ 15:15:15 ಯಾವುದಾದರೊಂದು ಕೆಮಿಕಲ್ ಫಟಿ೯ಲೈಜರ್ ನ್ನು 150 ಗ್ರಾಂ ಪ್ರತಿ ಗಿಡಕ್ಕೆ.
2) MOP :: ಪೊಟ್ಯಾಷ್ ಪ್ರತಿ ಗಿಡಕ್ಕೆ 100 ಗ್ರಾಂ.
3) AMN :: ಮೈಕ್ರೋ ನ್ಯೂಟ್ರಿಯಂಟ್ಸ್ ಮಿಕ್ಚರ್ ಕೊಂಬಿ ಪ್ಯಾಕ್ ನ್ನು ಪ್ರತಿ ಗಿಡಕ್ಕೆ 100 ಗ್ರಾಂ ನಂತೆ.
ಈ ಎಲ್ಲಾ ಮೂರು ಗೊಬ್ಬರಗಳನ್ನು ಮಿಶ್ರಣ ಮಾಡಿ ಅಡಿಕೆ ಮರಗಳಿಗೆ 2 ಅಡಿ ದೂರದಲ್ಲಿ ಹಾಕಬೇಕು.
*ಇದರೊಂದಿಗೆ ನೀವು ಕುರಿಗೊಬ್ಬರ, ಬೇವಿನ ಹಿಂಡಿ, ತಿಪ್ಪೆ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಕೊಡಬೇಕಾಗುತ್ತದೆ.
ಹೀಗೆ ನೀವು ಜೈವಿಕ ಗೊಬ್ಬರ ಹಾಗೂ ಸಮತೋಲಿತ ಕೆಮಿಕಲ್ ಗೊಬ್ಬರದೊಂದಿಗೆ ಉತ್ತಮ ಪೋಷಕಾಂಶಗಳನ್ನು ಅಡಿಕೆ ಮರಗಳಿಗೆ ಒದಗಿಸಿದಲ್ಲಿ
ಈ ಹಿಂಗಾರು ಹಂಗಾಮಿನಲ್ಲಿ ಅಡಿಕೆ ಮರಗಳಿಗೆ ಉತ್ತಮ ಪೋಷಕಾಂಶಗಳು ಸಿಗುತ್ತವೆ ಮರಗಳು ಆರೋಗ್ಯಯುತವಾಗಿ ಬೆಳೆದು ಹೆಚ್ಚಿನ ಫಸಲನ್ನು ಕೊಡಲು ಇದು ಸಹಾಯಕವಾಗುತ್ತದೆ.
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– ವಿಕೆ
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ