"Agriculture is our CULTURE"

Arecanut Disease: ಅಡಿಕೆ ರೈತರನ್ನು ತಲೆ ಕೆಡಿಸುತ್ತಿರುವ ರೋಗ ? ಮರಗಳು ನಾಶವಾಗದಂತೆ ತಡೆಯುವುದು ಹೇಗೆ? 

ಅಕ್ಟೋಬರ್ ತಿಂಗಳಿಂದ ಚಳಿಗಾಲ ಪ್ರಾರಂಭವಾಗಿದ್ದು, ಈ ಚಳಿಗಾಲದ ಸಮಯದಲ್ಲಿ ಅಡಿಕೆ ಬೆಳೆಗಾರರಿಗೆ ಕಾಡುವ ದೊಡ್ಡ ಸಮಸ್ಯೆ ಎಂದರೆ ಅದು ಎಲೆಚುಕ್ಕಿ ರೋಗದ (Leaf spot disease) ಸಮಸ್ಯೆ.

ಎಲೆ ಚುಕ್ಕಿ ರೋಗವು ಚಳಿಗಾಲದ ಸಮಯದಲ್ಲಿ ಅಡಿಕೆ ಮರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಒಮ್ಮೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ ಕಡಿಮೆ ಸಮಯದಲ್ಲಿಯೇ ಸಂಪೂರ್ಣ ತೋಟವನ್ನು ಆವರಿಸಿ ಬೆಳೆಯನ್ನು ನಾಶಪಡಿಸುತ್ತದೆ.

ಆದ್ದರಿಂದ ಪ್ರಾರಂಭದ ಹಂತದಲ್ಲಿಯೇ ಎಲೆ ಚುಕ್ಕಿ ರೋಗವನ್ನು ತಡೆಯುವುದು ಅತ್ಯವಶ್ಯಕ. ಹಾಗಾಗಿ ಎಲೆ ಚುಕ್ಕಿ ರೋಗವನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ.

ನ್ಯೂಟ್ರಿಯಂಟ್ಸ್ ಕೊಡುವುದು ಕೂಡಾ ತುಂಬಾ ಮುಖ್ಯ!

ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ತಿಂಗಳವರೆಗೆ ಎಲೆ ಚುಕ್ಕಿ ರೋಗವು ರಭಸವಾಗಿ ಹರಡುತ್ತದೆ. ಹೀರೋಗಳನ್ನು ತಡೆಯಲು ಮುಖ್ಯವಾಗಿ ಅಡಿಕೆ ಮರಗಳಿಗೆ ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಗಳನ್ನು ಕೊಡುವುದು ಅತ್ಯವಶ್ಯಕ.

ಮುಖ್ಯವಾಗಿ ಆಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಿಂದಲೇ ಸತತವಾಗಿ ಸ್ವಲ್ಪ ಸ್ವಲ್ಪ ಪ್ರಮಾಣದ ಪೊಟ್ಯಾಶಿಯಂನ್ನು ಅಡಿಕೆ ಮರಗಳಿಗೆ ನೀಡಬೇಕು.

ಈ ಪೊಟ್ಯಾಶಿಯಂ ಅಡಿಕೆ ಮರಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಮೆಗ್ನೀಷಿಯಂ ಅನ್ನು ಕೂಡ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀಡಬೇಕು.

ಈ ಮೆಗ್ನೀಷಿಯಂ ಅಡಿಕೆ ಮರದಲ್ಲಿನ ಪತ್ರಹರಿತನ್ನು ಚೆನ್ನಾಗಿರಿಸಿ ಮರದ ಎಲೆಗಳು ಹಸಿರಾಗಿರುವಂತೆ ನೋಡಿಕೊಳ್ಳುತ್ತದೆ ಹಳದಿ ಬಣ್ಣ ಬಾರದಿರಲು ಸಹಾಯಮಾಡುತ್ತದೆ.

ಎರಡೂ ನ್ಯೂಟ್ರಿಯಂಟ್ಸ್ ಒಟ್ಟಿಗೆ ಕೊಡಬಾರದು! 

ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಏನೆಂದರೆ ಪೊಟ್ಯಾಶಿಯಂ ಹಾಗೂ ಮೆಗ್ನೀಷಿಯಂ ಕೆಮಿಕಲ್ ಗಳು ಪರಸ್ಪರ ವಿರುದ್ಧ ಗುಣಗಳನ್ನು ಹೊಂದಿರುವುದರಿಂದ ಎರಡು ಕೆಮಿಕಲ್ ಗಳನ್ನು ಒಂದೇ ಸಮಯದಲ್ಲಿಯೇ ನೀಡಬಾರದು.

ಪೊಟ್ಯಾಶಿಯಂ ಅನ್ನು ಹಾಕಿದ 30 ದಿನಗಳ ನಂತರ ಮೆಗ್ನೀಷಿಯಂ ಅನ್ನು ಹಾಕಬೇಕು. ಆನಂತರ ಮೆಗ್ನೀಷಿಯಂ ಅನ್ನು ಸತತವಾಗಿ ಹಾಕಬಹುದು

ಆದರೆ ಪೊಟ್ಯಾಶಿಯಂ ಹಾಗೂ ಮೆಗ್ನೀಷಿಯಂ ಬಳಕೆಯ ನಡುವೆ ಕನಿಷ್ಠ 30 ದಿನಗಳ ಅಂತರವಿರಬೇಕು.

ಇನ್ನು ಎಲೆ ಚುಕ್ಕೆ ರೋಗ(Leaf spot disease)ವನ್ನು ತಡೆಯಲು ಬಳಸುವ ಕೆಮಿಕಲ್ ಗಳು ಯಾವುವು ಎಂದು ನೋಡುವುದಾದರೆ

ಮರಗಳಲ್ಲಿನ ರೋಗದ ಪ್ರಮಾಣ ಆಧರಿಸಿ ವಿಜ್ಞಾನಿಗಳು ತಿಳಿಸುವ ರೀತಿಯಲ್ಲಿಯೇ ಔಷಧಿ ನೀಡಬೇಕು. ಯಾರೋ ಪಕ್ಕದ ತೋಟದವರು ಹಾಕಿದರೆಂದು ನೀವು ಅದನ್ನೇ ಬಳಸಬಾರದು.

ಎಲೆ ಚುಕ್ಕಿ ರೋಗ(Leaf spot disease)ಕ್ಕೆ ನೀಡಬಹುದಾದ ಕೆಮಿಕಲ್ಸ್!

ಪ್ರತಿ ವರ್ಷ ಎಲೆ ಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದ್ದರೆ ಅಂತಹ ರೈತರು ಕಠಿಣ ಔಷಧಿಗಳನ್ನು ಬಳಸಬಹುದು ಆದರೆ ಈ ವರ್ಷ ಹೊಸದಾಗಿ ರೋಗ ಕಾಣಿಸಿಕೊಂಡಿದ್ದಲ್ಲಿ ನೀವು ಮೊದಲಿಗೆ ಸುಲಭ ಔಷಧಿ ಅಂದರೆ ಮೈಲ್ಡ್ ಕೆಮಿಕಲ್ ಬಳಸಬೇಕು.

ಉದಾಹರಣೆಗೆ ಡೆಸೇನಿಯಂ ಎಮ್-45, ಟಾಟಾ ಮಾಸ್ಟರ್ ಮ್ಯಾಂಕೋಜೆಬ್, ರಿಡೋಮಿಲ್ ಗೋಲ್ಡ್ ನಂತಹ ಮೈಲ್ಡ್ ಸ್ಪ್ರೇ ಗಳನ್ನು ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ ವಿವರಗಳನ್ನು ಈ ಲೇಖನದೊಂದಿಗೆ ಇರುವ ಚಿತ್ರದಲ್ಲಿ ನೀಡಲಾಗಿದೆ.

ರೋಗವು ಎರಡನೇ ಸ್ಟೇಜ್ ನಲ್ಲಿದ್ದರೆ ಆಗ ನೀವು ತೋಟಕ್ಕೆ ಸಂಯೋಜಕ ಕೆಮಿಕಲ್ ಗಳನ್ನು ಬಳಸಬೇಕು. ಉದಾಹರಣೆಗೆ ಕೆಲವೊಂದು ಸಂಯೋಜಕ ಕೆಮಿಕಲ್ ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಆದರೆ ನೀವು ಇವುಗಳನ್ನು ಬಳಸುವ ಮುನ್ನ ತಜ್ಞರೊಂದಿಗೆ ವಿಚಾರಿಸಿ ಸಲಹೆ ಪಡೆದು ನಂತರ ಬಳಕೆ ಮಾಡುವುದು ಒಳ್ಳೆಯದು.

ಸೂಚನೆಗಳು:-

*ಔಷದಿ ಸಿಂಪಡನೆಯ ಮೊದಲು ತಜ್ಞರ ಜೊತೆ ಮಾತನಾಡಿ, ರೋಗದ ಲಕ್ಷಣ ಹಾಗೂ ರೋಗದ SEVERITY ಮೇಲೆ ಔಷದಿ Decide ಮಾಡಿ

*ಈ ಚಾರ್ಟ್ ನೋಡಿ ನಿಮಗೆ ಇಷ್ಟದ ಔಷಧಿ ಸಿಂಪಡಣೆ ಮಾಡದಿರಿ.

*ಔಷದಿಯ ಡೋಸ್ ಬಗ್ಗೆ ನಿರ್ಲಕ್ಷ ತೋರದಿರಿ. ಹೆಚ್ಚಿನ ಡೋಸ್ ಒಳ್ಳೆಯದಲ್ಲ.

1.Tilt (200ml) +Potasium nitrate (500gram)

2.Tata master(500G) + Contaf Plus (200ML) + Mag Sulphate (500 g)

3.Avatar (500g) + + Potasium nitrate (500g)

4.Score (60 ml) + Kavach (250 grams)

5.curzate (400 gram)+ Contaf (200 ml)

6.Spotlight (200 ml) + Mag Sulphate (500gram)

7.Amistar top (200ml)+ Mag Sulphate (500gram)

8.Nativo (100gram) + Pot Nitrate (500gram)

ಈ ಕೆಮಿಕಲ್ಗಳೊಂದಿಗೆ ಮರಗಳಿಗೆ ನ್ಯೂಟ್ರಿಯಂಟ್ಸ್ ಗಳನ್ನು ನೀಡುವುದಕ್ಕಾಗಿ ಪೊಟ್ಯಾಶಿಯಂ ಅಥವಾ ಮೆಗ್ನೀಷಿಯಂ ಗಳನ್ನು ಬಳಸುವುದು ಉತ್ತಮ.

ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿಕೆ

ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ


"Agriculture is our CULTURE"