"Agriculture is our CULTURE"

ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟಗಳಲ್ಲಿ ನೀರು ನಿಲ್ಲುತ್ತಿದೆಯೇ?   ಬಸಿಗಾಲುವೆಗಳನ್ನು ನಿರ್ಮಿಸಿ ಹೇಗೆ?

ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ   ಅಡಿಕೆ ಮರದ ತೋಟಗಳಲ್ಲಿ  ನೀರು ನಿಲ್ಲುತ್ತದೆ.  ಹೀಗೆ ಅಗತ್ಯಕ್ಕಿಂತ ಹೆಚ್ಚಾದ ನೀರು  ಸಂಗ್ರಹವಾಗುವುದರಿಂದ ಅಡಿಕೆ ಮರಗಳು  ಹಳದಿ ಬಣ್ಣಕ್ಕೆ ತಿರುಗುತ್ತವೆ,

ಇದರಿಂದ ಅಡಿಕೆ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ ಹಾಗೂ  ಬೇರುಗಳಿಗೆ ಉಸಿರಾಟದ ತೊಂದರೆ ಆಗುತ್ತದೆ.

ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಎಲ್ಲಿ?

ಸಾಮಾನ್ಯವಾಗಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುವುದು  ಜೇಡಿ ಮಣ್ಣು ಹಾಗೂ ಕಪ್ಪು ಮಣ್ಣಿನಲ್ಲಿ.

ಏಕೆಂದರೆ ಈ ಮಣ್ಣುಗಳಲ್ಲಿ ನೀರು ಬಸಿದು ಹೋಗುವ  ಸಂಭವ ತುಂಬಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ.

ಆದ್ದರಿಂದ ಇಂತಹ ಮಣ್ಣಿನ ಪ್ರದೇಶಗಳಲ್ಲಿ  ತೋಟ ಮಾಡುವ ಮುಂಚೆಯೇ  ನೀರು ಬಸಿದು ಹೋಗಲು  ಸಹಾಯಕವಾಗುವಂತೆ ಬಸಿಗಾಲುವೆಗಳನ್ನು  ಮಾಡಿಕೊಳ್ಳಬೇಕು.

ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ರೂಢಿಯಂತೆ ಬಸಿಗಾಲುವೆಗಳನ್ನು ಎಲ್ಲಾ ರೈತರು ಮಾಡಿರುತ್ತಾರೆ.

  ಹಾಗೆಯೇ ಬಯಲು ಸೀಮೆಯ ಕೆಲ ಪ್ರದೇಶಗಳಲ್ಲಿ  ಅದರಲ್ಲೂ ಕುಷ್ಕಿ ಜಮೀನು ಹೊಂದಿರುವ ಪ್ರದೇಶಗಳಲ್ಲಿ ಬಸಿಗಾಲುವೆಗಳನ್ನು  ಮಾಡುವ ಅವಶ್ಯಕತೆ ಇರುವುದಿಲ್ಲ.

ಸೂಚನೆ  ::    ಎಲ್ಲಿ ರೈತರು ಗದ್ದೆಗಳನ್ನು ತೆಗೆದು ತೋಟಗಳನ್ನಾಗಿ ಮಾರ್ಪಡಿಸಿರುತ್ತಾರೋ  ಅಲ್ಲಿ ಈ ಬಸಿಗಾಲುವೆಗಳನ್ನು ಮಾಡುವ  ಅವಶ್ಯಕತೆ ಇರುತ್ತದೆ ಆಗ ನೀರು ಸರಾಗವಾಗಿ ಹರಿದುಕೊಂಡು ಮುಂದೆ ಹೋಗಲು ಅವಕಾಶ ಸಿಗುತ್ತದೆ.

ರೈತರ ತಪ್ಪು ಕಲ್ಪನೆ:-

ಸಾಮಾನ್ಯವಾಗಿ ರೈತರು ತೋಟದ ಸುತ್ತಲೂ ಕಾಲುವೆಗಳನ್ನು ಮಾಡಿದರೆ  ಅದು ಬಸಿಗಾಲುವೆಗಳು ಎಂದು ತಿಳಿದುಕೊಳ್ಳುತ್ತಾರೆ ಆದರೆ ಅವು ಬಸಿಗಾಲುವೆಗಳು ಅಲ್ಲ. 

ಅದು ನೀರು ಕಾಲುವೆ.  ಅಂದರೆ ಬೇರೆಯವರ ಹೊಲದಿಂದ ನಮ್ಮ ಹೊಲಕ್ಕೆ ನೀರು ಬರಬಾರದೆಂದು ಮಾಡುವ ಕಾಲುವೆಯಾಗಿರುತ್ತದೆ.

ಹಾಗಾದರೆ ಬಸಿಗಾಲುವೆ ಎಂದರೇನು?
ಬಸಿಗಾಲವೆ ಎಂದರೆ ನಮ್ಮ ಹೊಲದಲ್ಲಿರುವ ನೀರು ಹೊರಗೆ ಹೋಗುವುದು.  ಅದಕ್ಕೆ  ಬಸಿಗಾಲುವೆ ಎನ್ನುತ್ತಾರೆ.

  ಬಸಿಗಾಲುವೆಗಳನ್ನು ಎರಡು ರೀತಿಯಲ್ಲಿ ಮಾಡಬಹುದು:
1. ಮುಚ್ಚಿದ ಬಸಿಗಾಲುವೆ (Seepage)
2. ತೆರೆದ ಬಸಿಗಾಲವೆಗಳು(open drainage)

ಈ ಬಸಿಗಾಲುವೆಗಳನ್ನು ಎಲ್ಲಿ ತೆಗೆಯಬೇಕು?

ಈ ಬಸಿಗಾಲುವೆಗಳನ್ನು ಎಲ್ಲಿ ನೀರು ಹೋಗಲು ಆಸ್ಪದವಿರುತ್ತದೆಯೋ ಅಲ್ಲಿ ತೆಗೆಯಬೇಕು ಅಥವಾ ಎಲ್ಲಿ ಗದ್ದೆಯ ಮಣ್ಣು ಇರುತ್ತದೆಯೋ ಅಥವಾ ಸುತ್ತಲೂ ಗದ್ದೆ ಇರುವ  ಜಾಗಗಳಲ್ಲಿ ಮಾಡಬೇಕು.

ಈ ರೀತಿ ಅವಕಾಶ ಇಲ್ಲದಿದ್ದಲ್ಲಿ ಆಗ ಪ್ರತಿ ಎರಡು ಸಾಲಿಗೆ ಒಂದು ಸಾಲು  ತೆರೆದ ಕಾಲುವೆ ತರಹ ತೆಗ್ಗನ್ನು ತೆಗೆಸಬೇಕು ಇದು ಕನಿಷ್ಠ ಎರಡು ಅಡಿ ಆಳದಷ್ಟು ಇರಬೇಕು.

ಈ ಬಸಿಗಾಲುವೆಗಳನ್ನು ಮಳೆಗಾಲ ಪ್ರಾರಂಭವಾಗುವ ಮುಂಚೆಯೇ ತೆಗೆಸಬೇಕು.   ಹಾಗೂ ಇವುಗಳನ್ನು ಪ್ರತಿ ವರ್ಷ ಸರಿಯಾಗಿ ನಿರ್ವಹಣೆ ಮಾಡಬೇಕು

ಅಂದರೆ ಪ್ರತಿ ವರ್ಷ ಮಳೆಗಾಲ ಪ್ರಾರಂಭವಾಗುವ ಮುಂಚೆಯೇ ಅವುಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ಅನುಕೂಲ ಮಾಡಿಕೊಡಬೇಕು.

ಇದರಿಂದಾಗುವ ಉಪಯೋಗಗಳೇನು?

ಈ ಬಸಿಗಾಲುವೆಗಳನ್ನು ತೆಗೆಸುವುದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಬೀಳುವ ನೀರು

ಈ ಬಸಿ ಕಾಲುವೆಗಳ ಮೂಲಕ ಹರಿದು ತೋಟದಿಂದ ಹೊರಗೆ ಹೋಗುತ್ತದೆ.
*ಇದರಿಂದ ತೋಟದ ಮರಗಳು ಹಳದಿಯಾಗುವುದಿಲ್ಲ.
* ಮರಗಳಿಗೆ ಉಸಿರಾಡಲು ಅವಕಾಶ ಮಾಡಿಕೊಡುತ್ತದೆ.
* ಹೆಚ್ಚಿನ ಶೀತದಿಂದಾಗಿ ಮರಗಳಿಗೆ ಬರಬಹುದಾದ ರೋಗಭಾದೆಗಳನ್ನು ತಡೆಯಬಹುದು.
* ಮಣ್ಣಿನಲ್ಲಿ ಯಾವುದಾದರೂ ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಮಳೆ ನೀರು ಬಸಿದು ಹೋಗುವುದರೊಂದಿಗೆ

ಆ ಹೆಚ್ಚಿನ ಲವಣಾಂಶಗಳು  ಸಹಿತ ಹೊರಗೆ ಹೋಗುತ್ತವೆ ಇದರಿಂದ ಮಣ್ಣಿನಲ್ಲಿರುವ ರಾಸಾಯನಿಕ ಹಾಗೂ ಭೌತಿಕ  ಗುಣಗಳನ್ನು ಹೆಚ್ಚಿಸಲು

ಈ ಬಸಿಗಾಲುವೆಗಳು ನಮಗೆ ಸಹಾಯ ಮಾಡುತ್ತವೆ.

ಆದರಿಂದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಅಡಿಕೆ ತೋಟಗಳನ್ನು ಮಾಡಿರುವ ರೈತರು

ಈ ಬಸಿಗಾಲುವೆಗಳನ್ನು ನಿರ್ಮಿಸಿ ತೋಟವನ್ನು ನಿರ್ವಹಣೆ ಮಾಡುವುದರೊಂದಿಗೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ.

ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"