Jeevamrutha with Buffalo Dung :: ಎಮ್ಮೆಯ ಸಕಣಿಯನ್ನು ಬಳಸಿ ಜೀವಾಮೃತ!! ತಯಾರಿಸುವ ವಿಧಾನ ಮತ್ತು ಉಪಯೋಗಳು!!
ಜೀವಾಮೃತ – ಎಮ್ಮೆ ಸಗಣಿಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿ!!
Bio-Fertilizers – Utilizing Buffalo Dung for Soil Health!!
ಎಮ್ಮೆ ಸೆಗಣಿ ಮತ್ತು ಮೂತ್ರ ಉಪಯೋಗಿಸಿ ಜೀವಾಮೃತ ಮಾಡುವ ವಿಧಾನದ ಬಗ್ಗೆ!!
ಬೇಕಾಗುವ ವಸ್ತುಗಳು (200 ಲೀಟರ್ ಜೀವಾಮೃತಕ್ಕೆ):-
Required Ingredients (for 200 Liters):-
* ಎಮ್ಮೆ ಅಥವಾ ಹಸುವಿನ ಸೆಗಣಿ – 10 ಕೆಜಿ (2-3 ದಿನಗಳ ಹಸಿ ಸೆಗಣಿ ಉತ್ತಮ).
• ಎಮ್ಮೆ ಅಥವಾ ಹಸುವಿನ ಮೂತ್ರ – 10 ಲೀಟರ್.
* ಬೆಲ್ಲ – 1 ಕೆಜಿ (organic ಆದರೆ ಒಳ್ಳೆಯದು).
• ದ್ವಿದಳ ಧಾನ್ಯದ ಹಿಟ್ಟು – 1 ಕೆಜಿ (ಕಡ್ಲೆ ಹಿಟ್ಟು, ಅಲಸಂದಿ ಹಿಟ್ಟು ಅಥವಾ ಯಾವುದೇ ಹಿಟ್ಟು).
* ಹೊಲದ ಮಣ್ಣು – ಎರಡು ಹಿಡಿಯಷ್ಟು (ರಾಸಾಯನಿಕ ಇಲ್ಲದ ಮಣ್ಣು ಅಥವಾ ಆಲದ ಮರದ ಕೆಳಗಿನ ಮಣ್ಣು).
• ನೀರು – ಸುಮಾರು 200 ಲೀಟರ್.
ಮಾಡುವ ವಿಧಾನ:-
Preparation Method:-
• ಮೊದಲು 10 ಕೆಜಿ ಸೆಗಣಿಯನ್ನು ಸ್ವಲ್ಪ ನೀರಿನಲ್ಲಿ ಹಾಕಿ ಗಂಟಿಲ್ಲದಂತೆ ದ್ರಾವಣ ಮಾಡಿಕೊಳ್ಳಿ.
* ಇದಕ್ಕೆ 10 ಲೀಟರ್ ಮೂತ್ರ, 1 ಕೆಜಿ ಬೆಲ್ಲ ಮತ್ತು 1 ಕೆಜಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
• ನಂತರ ಈ ಮಿಶ್ರಣಕ್ಕೆ ಎರಡು ಹಿಡಿ ಮಣ್ಣು ಸೇರಿಸಿ. ಈ ಮಣ್ಣು ಜೀವಾಣುಗಳ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ.
* ಈ ಎಲ್ಲ ಮಿಶ್ರಣವನ್ನು 200 ಲೀಟರ್ ನೀರಿರುವ ಡ್ರಮ್‌ಗೆ ಹಾಕಿ, ಒಂದು ಕೋಲಿನಿಂದ ಗಡಿಯಾರದ ಮುಳ್ಳು ತಿರುಗುವ ದಿಕ್ಕಿನಲ್ಲಿ (Clockwise) ಚೆನ್ನಾಗಿ ತಿರುಗಿಸಿ.
• ತಯಾರಾದ ಈ ಮಿಶ್ರಣವನ್ನು ನೆರಳಿರುವ ತಂಪಾದ ಜಾಗದಲ್ಲಿ ಇಡಬೇಕು ಮತ್ತು ಗೋಣಿ ಚೀಲ ಅಥವಾ ಬಟ್ಟೆಯಿಂದ ಮುಚ್ಚಿಡಿ.
ಉಪಯೋಗಿಸುವ ರೀತಿ ಮತ್ತು ಸಮಯ:-
Usage and Duration:-
* ಜೀವಾಮೃತವು 7 ರಿಂದ 10 ದಿನಗಳಲ್ಲಿ ಉಪಯೋಗಿಸಲು ಸಿದ್ಧವಾಗುತ್ತದೆ.
• ದಿನಕ್ಕೆ ಒಂದು ಅಥವಾ ಎರಡು ಬಾರಿ ಮಿಶ್ರಣವನ್ನು ಕೋಲಿನಿಂದ ತಿರುಗಿಸುತ್ತಾ ಇರಬೇಕು.
* ಇದನ್ನು ಡ್ರಿಪ್ ಮೂಲಕ ಅಥವಾ ಕಾಲುವೆ ನೀರಾವರಿ ಮೂಲಕ ಹೊಲಕ್ಕೆ ಬಿಡಬಹುದು.
• ಖಾಲಿ ಹೊಲಕ್ಕೆ ಸಿಂಪಡಿಸುವುದಾದರೆ ಸೋಸಿಕೊಂಡು ಪಂಪ್ ಮೂಲಕ ಸಿಂಪಡಿಸಬಹುದು.
ಮುಖ್ಯ ಉಪಯೋಗಗಳು:-
Key Benefits:-
* ಹಸು ಇಲ್ಲದ ರೈತರು ಎಮ್ಮೆ ಸೆಗಣಿ ಮತ್ತು ಮೂತ್ರದಿಂದಲೂ ಜೀವಾಮೃತ ಮಾಡಬಹುದು; ಇದು ಕೂಡ ಉತ್ತಮ ಫಲಿತಾಂಶ ಕೊಡುತ್ತದೆ.
• ಇದು ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಿಸಿ ಮಣ್ಣನ್ನು ಮೃದು ಮಾಡುತ್ತದೆ.
* ರಾಸಾಯನಿಕ ಗೊಬ್ಬರ ಬಳಸುವವರು ಜೀವಾಮೃತ ಬಳಸುವುದರಿಂದ ರಾಸಾಯನಿಕ ಗೊಬ್ಬರಗಳು ಮಣ್ಣಿನಲ್ಲಿ ಚೆನ್ನಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.
• ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಮತ್ತು ಉತ್ತಮ ಇಳುವರಿ ನೀಡುತ್ತದೆ.
ಸಾವಯವ ಜೀವಾಮೃತದ ಶಕ್ತಿ:-
Power of Organic Bio-Fertilizers:-
ಜೀವಾಮೃತವು ರೈತರಿಗೆ ಆರ್ಥಿಕವಾಗಿ ಮತ್ತು ಕೃಷಿಯಲ್ಲಿ ತುಂಬಾ ಸಹಾಯ ಮಾಡುತ್ತದೆ. ಮುಖ್ಯವಾಗಿ ಇದು ಸಂಪೂರ್ಣವಾಗಿ ಉಚಿತವಾಗಿ ಅಥವಾ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಸಾವಯವ ಗೊಬ್ಬರ.
ಇದರಿಂದ ರೈತರು ದುಬಾರಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಬಹುದು. ಇದು ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಜೀವಿಗಳು ಮತ್ತು ಎರೆಹುಳುಗಳ ಸಂಖ್ಯೆಯನ್ನು ಹೆಚ್ಚಿಸಿ ಮಣ್ಣಿನ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.
ರಾಸಾಯನಿಕ ಗೊಬ್ಬರದಿಂದ ಗಟ್ಟಿಯಾದ ಮಣ್ಣು ಜೀವಾಮೃತದ ಬಳಕೆಯಿಂದ ಮೃದುವಾಗಿ, ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳುತ್ತದೆ.
ಇದರಿಂದ ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ, ನೈಸರ್ಗಿಕವಾಗಿ ಉತ್ತಮ ಇಳುವರಿ ಸಿಗುತ್ತದೆ. ಮುಖ್ಯವಾಗಿ, ಮನೆಯಲ್ಲಿರುವ ಎಮ್ಮೆ ಅಥವಾ ಹಸುವಿನ ತ್ಯಾಜ್ಯವನ್ನೇ ಉಪಯೋಗಿಸುವುದರಿಂದ ರೈತರ ಹಣ ಉಳಿತಾಯವಾಗಿ, ಕೃಷಿಯು ಲಾಭದಾಯಕವಾಗಲು ಇದು ಸಹಾಯ ಮಾಡುತ್ತದೆ.
Jeevamrutha is very helpful to farmers, both financially and in how they farm. It’s mainly an organic fertilizer that’s either free or very cheap to make. By using it, farmers don’t have to rely on costly chemical fertilizers and pesticides.
It makes soil better by growing the number of helpful microorganisms and earthworms in it. Soil that’s been hardened by chemical fertilizers becomes soft again with Jeevamrutha, it holds more water.
This strengthens crops against diseases and also leads to better harvests naturally.Most importantly, because it uses waste from buffaloes or cows that farmers already have, it saves them money and helps make farming a successful business.
Thank you
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– VK
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.