Summer Coconut Management :: ವೈಜ್ಞಾನಿಕವಾಗಿ ತೆಂಗಿನ ತೋಟವನ್ನು ಬೇಸಿಗೆಯಲ್ಲಿ ಹೇಗೆ ನಿವಾರಣೆ ಮಾಡುವುದು?
ಬೇಸಿಗೆಯಲ್ಲಿ ತೆಂಗು ಬೆಳೆ ನಿರ್ವಹಣೆ ಯಾವ ರೀತಿ ಮಾಡಬೇಕು ಗೊತ್ತಾ?
Coconut Crop Management during Summer !!
ಮಧುಗಿರಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಬೇಸಿಗೆ ಕಾಲದಲ್ಲಿ ತೆಂಗಿನ ತೋಟವನ್ನು ನಿರ್ವಹಣೆ ಮಾಡುವುದು ಹೇಗೆ ಮತ್ತು ತೆಂಗಿನ ಮರಗಳಿಗೆ ಬರುವ ರೋಗಗಳನ್ನು ನಿಯಂತ್ರಿಸುವ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ.
ನೀರಿನ ನಿರ್ವಹಣೆ :-
Water Management:-
• ತೆಂಗಿನ ಮರಕ್ಕೆ ದಿನಕ್ಕೆ ಸರಾಸರಿ 45 ಲೀಟರ್ ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ ಆವಿಯಾಗುವಿಕೆ ಹೆಚ್ಚಿರುವುದರಿಂದ, ಹೆಚ್ಚುವರಿಯಾಗಿ 10 ರಿಂದ 15 ಲೀಟರ್ ನೀರನ್ನು ಒದಗಿಸುವುದು ಅತ್ಯಗತ್ಯ.
* ತೆಂಗಿನ ಮರಗಳಿಗೆ ಹನಿ ನೀರಾವರಿ ಪದ್ಧತಿಯು ಅತ್ಯಂತ ಉತ್ತಮವಾಗಿದ್ದು, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ತೋಟಗಾರಿಕಾ ಇಲಾಖೆಯಿಂದ ಶೇಕಡಾ 90% ಸಹಾಯಧನ ಲಭ್ಯವಿದೆ.
• ಮರದ ಸುತ್ತಲೂ ಪಾತಿ ಮಾಡಿ ಒಣಗಿದ ತೆಂಗಿನ ಗರಿಗಳು ಅಥವಾ ತೆಂಗಿನ ಸಿಪ್ಪೆಗಳನ್ನು ಹೊದಿಕೆಯಾಗಿ (Mulching) ಬಳಸುವುದರಿಂದ ಮಣ್ಣಿನಲ್ಲಿ ತೇವಾಂಶವನ್ನು ಉಳಿಸಿಕೊಳ್ಳಬಹುದು.
ಗೊಬ್ಬರ ಮತ್ತು ಪೋಷಕಾಂಶಗಳು
Fertilizers & Nutrients :-
* ಪ್ರತಿ ಮರಕ್ಕೆ ವಾರ್ಷಿಕವಾಗಿ 50 ಕೆಜಿ ಹಟ್ಟಿ ಗೊಬ್ಬರವನ್ನು ನೀಡಬೇಕು. ಇದು ಮರದ ಬೆಳವಣಿಗೆಗೆ ಪೂರಕವಾಗಿದೆ.
• ಸತು (Zinc) ಮತ್ತು ಬೋರಾನ್ (Boron) ಅನ್ನು ತಲಾ 50 ಗ್ರಾಂ ಪ್ರತಿ ಮರಕ್ಕೆ ನೀಡಬೇಕು. ಈ ಪೋಷಕಾಂಶಗಳು ಕಾಯಿ ಉದುರುವುದನ್ನು ತಡೆಯುತ್ತದೆ ಮತ್ತು ‘ಚೀಪೆ’ ಕಾಯಿ (ಒಳಗೆ ತಿರುಳಿಲ್ಲದ ಕಾಯಿ) ಸಮಸ್ಯೆಯನ್ನು ಪರಿಹರಿಸುತ್ತದೆ.
* ಗೊಬ್ಬರವನ್ನು ವರ್ಷದಲ್ಲಿ ಎರಡು ಬಾರಿ ನೀಡಬೇಕು. ಮೊದಲನೆಯದಾಗಿ ಮೇ-ಜೂನ್ ತಿಂಗಳಲ್ಲಿ, ಅಂದರೆ ಮಳೆಗಾಲದ ಆರಂಭದಲ್ಲಿ ನೀಡಬೇಕು. ತದನಂತರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನೀಡಬೇಕು.
• ಪ್ರತಿ ಗಿಡಕ್ಕೆ 4 ರಿಂದ 5 ಕೆಜಿ ಬೇವಿನ ಹಿಂಡಿಯನ್ನು ಹಾಕುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ.
ಬಿಳಿ ನೊಣ ನಿರ್ವಹಣೆ
Rugose Whitefly Control:-
ಇತ್ತೀಚೆಗೆ ತೆಂಗಿನ ಮರಗಳನ್ನು ಬಾಧಿಸುತ್ತಿರುವ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಸೂಕ್ತ:
• ಬಿಳಿ ನೊಣಗಳು ಎಲೆಗಳ ಕೆಳಭಾಗದಲ್ಲಿ ರಸವನ್ನು ಹೀರುತ್ತವೆ. ಇದರಿಂದ ಎಲೆಗಳು ಕಪ್ಪಾಗಿ ದ್ಯುತಿಸಂಶ್ಲೇಷಣೆ (Photosynthesis) ಕ್ರಿಯೆಯು ಕುಂಠಿತವಾಗುತ್ತದೆ.
ನಿಯಂತ್ರಣ ಕ್ರಮಗಳು:
ways of controlling:-
• ತೋಟದಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛವಾಗಿಡಿ.
* ಬೇವಿನ ಎಣ್ಣೆಯನ್ನು (1 ಲೀಟರ್ ನೀರಿಗೆ ಸ್ವಲ್ಪ ಸೋಪು ಬೆರೆಸಿ) ಸಿಂಪಡಿಸಿ.
• ಹಳದಿ ಅಂಟು ಬಲೆ (Yellow Sticky Traps): ಒಂದು ಹೆಕ್ಟೇರ್‌ಗೆ ಸುಮಾರು 25 ಬಲೆಗಳನ್ನು ಅಳವಡಿಸಿ.
* ಜೈವಿಕ ನಿಯಂತ್ರಣ ಕ್ರಮವಾಗಿ ಕ್ರೈಸೋಫರ್ಲ ಅಥವಾ ಎನ್ಕಾರ್ಶಿಯ ಪರಾವಲಂಬಿ ಕೀಟಗಳನ್ನು ಬಿಡಬಹುದು.
ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದ ರೈತರಿಗೆ ಈ ಕೆಳಗಿನ ರೀತಿಯಲ್ಲಿ ಪ್ರಯೋಜನವಾಗುತ್ತದೆ:-
Following above mentioned methods will benefit farmers in the following ways:-
ಬೇಸಿಗೆಯಲ್ಲಿ ತೆಂಗಿನ ಮರಗಳ ನೀರಿನ ಅಭಾವ ಮತ್ತು ಪೋಷಕಾಂಶಗಳ ಕೊರತೆ ನೀಗಿಸಲು, ಹನಿ ನೀರಾವರಿ ಮಾಡಿ. ಬೋರಾನ್, ಜಿಂಕ್ ಬಳಸುವುದರಿಂದ ಕಾಯಿ ಉದುರುವಿಕೆ ಕಡಿಮೆಯಾಗಿ ಇಳುವರಿ ಹೆಚ್ಚುತ್ತದೆ.
ಬಿಳಿ ನೊಣದ ಬಾಧೆ ತಡೆಗಟ್ಟಲು ಜೈವಿಕ ಕ್ರಮ ಮತ್ತು ಹಳದಿ ಅಂಟು ಬಲೆ ಬಳಸಿ, ರಾಸಾಯನಿಕಗಳ ಖರ್ಚು ಕಡಿಮೆ ಮಾಡಿ. ಈ ವೈಜ್ಞಾನಿಕ ಬೇಸಾಯದಿಂದ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಇಳುವರಿ ಪಡೆಯಬಹುದು ಮತ್ತು ಆರ್ಥಿಕವಾಗಿ ಸದೃಢರಾಗಬಹುದು.
To fix the issues of low water and lack of nutrients in coconut trees during summer, use drip irrigation. Adding Boron and Zinc helps prevent young coconuts from falling off early and increases the amount of coconuts produced.
To stop whiteflies from infesting the trees, use natural pest control methods and yellow sticky traps. This will also help lower the money spent on chemical pesticides. By using these scientific farming methods, farmers can produce high-quality coconuts at a lower cost and improve their financial stability.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V. K
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
