"Agriculture is our CULTURE"

Increase Yield :: ರೈತರು ಅಡಿಕೆ ಇಳುವರಿ ಹೆಚ್ಚಿಸುವುದು ಹೇಗೆ!!!ರೈತರು ಅಡಿಕೆ ಇಳುವರಿ ಕಡಿಮೆ ಆಗಿದೆ ಎಂದು ತಳಮಳಿಸುವ ಅಗತ್ಯವಿಲ್ಲ!!

ಅಡಿಕೆ ಬೆಳೆಯ ಹೊಂಬಾಳೆಯನ್ನು ಹೆಚ್ಚಿಸುವ ಮೂಲಕ ಇಳುವರಿ ಹೆಚ್ಚಿಸಬಹುದು:: ರೈತರು ಅಡಿಕೆ ಇಳುವರಿ ಕಡಿಮೆ ಆಗಿದೆ ಎಂದು ತಳಮಳಿಸುವ ಅಗತ್ಯವಿಲ್ಲ!! ಸುಲಭವಾಗಿ ಇಳುವರಿ ಹೆಚ್ಚಿಸುವ ಮಾರ್ಗ !!! 

Arecanut, popularly known as Supari, is the seed of the areca palm (Areca catechu). It is one of the most important commercial plantation crops in India, especially in coastal and humid regions.

 ಅಡಿಕೆ ಬೆಳೆ ಅತಿ ಹೆಚ್ಚಾಗಿ ಎದುರಿಸುತ್ತಿರುವ ಸಮಸ್ಯೆ ಎಂದರೆ ಅಡಿಕೆ ಬೆಳೆಯ ಇಳುವರಿ ಕುಂಠಿತ ಆಗುವುದು. ಅಡಿಕೆ ಬೆಳೆಯು ಸಾಮಾನ್ಯವಾಗಿ ಅಧಿಕ ಲಾಭವನ್ನು ನೀಡುವ ವಾಣಿಜ್ಯ ಬೆಳೆವಾಗಿದೆ,

ಆದರೆ ರೈತರು ಇದರಿಂದ ಸಾಕಷ್ಟು ಲಾಭವನ್ನು ಪಡೆಯಲು ಎದುರಾಗುವ ಸಮಸ್ಯೆ ಎಂದರೆ ಕಡಿಮೆಯಾಗುವುದು. ಇಳುವರಿ ಕಡಿಮೆಯಾಗುವುದಕ್ಕೆ ಹತ್ತು ಹಲವು ಕಾರಣಗಳಿದ್ದರೂ ಸಾಮಾನ್ಯವಾಗಿ ಅಡಿಕೆ ಬೆಳೆಗಾರರು ಎದುರಿಸುವ ಸವಾಲುಗಳು ಸಾಕಷ್ಟಿವೆ. 

ಸಾಮಾನ್ಯವಾಗಿ ಅಡಿಕೆ ಬೆಳೆಗಾರರು ಎದುರಿಸುವ ಸವಾಲುಗಳು? 
Which challenges faced by arecanut farmers? 

ಅಸಮರ್ಪಕ ಮಳೆ – ಹೆಚ್ಚು ಅಥವಾ ಕಡಿಮೆ ಮಳೆ ಬೀಳುವುದು.

ನೀರು ನಿಲ್ಲುವಿಕೆ / ನೀರಾವರಿ ಕೊರತೆ.

ಮಣ್ಣಿನ ಫಲವತ್ತತೆ ಕಡಿಮೆಯಾಗುವುದು.

 ಸರಿಯಾದ ಗೊಬ್ಬರ ಬಳಕೆಯ ಕೊರತೆ.

ಕೀಟಗಳ ದಾಳಿ (ಸ್ಪಿಂಡಲ್ ಬಗ್ಗ್, ರೂಟ್ ಗ್ರಬ್ ಇತ್ಯಾದಿ). 

ರೋಗಗಳು (ಯೆಲ್ಲೋ ಲೀಫ್ ಡಿಸೀಸ್, ಕೊಳೆ ರೋಗಗಳು). 

ಹಳೆಯ ಗಿಡಗಳು – ವಯಸ್ಸಾದ ಗಿಡಗಳಲ್ಲಿ ಇಳುವರಿ ಕಡಿಮೆ.

ತಪ್ಪಾದ ಕೃಷಿ ಕ್ರಮಗಳು – ಮಣ್ಣಿನ ಸಂರಕ್ಷಣೆ ಇಲ್ಲದಿರುವುದು.

 ಈ ಎಲ್ಲಾ ಸಮಸ್ಯೆಗಳು ರೈತರು ಅನುಭವಿಸುತ್ತಿದ್ದಾರೆ ಆದರೆ ಈ ಸಮಸ್ಯೆಗಳ ಜೊತೆಗೆ ಅಡಿಕೆ ಬೆಳೆ ಇಳುವರಿಯು ಸಹ ಕುಂಠಿತ ವಾಗುತ್ತಿದ್ದು, ಈ ಕುಂಠಿತಕ್ಕೆ ಹಲವು ಕಾರಣಗಳಿವೆ. 

 ಹಾಗಾಗಿ ರೈತರ ಮುಖ್ಯವಾಗಿ ಅಡಿಕೆ ಇಳುವರಿಯ ಕುಂಟಿತದ ಕಾರಣಗಳ ಬಗ್ಗೆ ಗಮನಹರಿಸುವುದು ಅವಶ್ಯವಾಗಿದೆ. 

ಅಡಿಕೆ ಬೆಳೆಯ ಇಳುವರಿಗೆ ಕುಂಠಿತವಾಗುವ ಪ್ರಮುಖ ಕಾರಣಗಳು:-
main reasons for reduction in arecanut yield :-

ಪ್ರಮುಖವಾಗಿ ರೈತರ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಎಂದರೆ, ಪೋಷಕಾಂಶಗಳ ನಿರ್ವಹಣೆ. 

ರೈತರಿಗೆ ಯಾವ ಪೋಷಕಾಂಶಗಳನ್ನು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ಕಡಿಮೆ ಇರುವುದರಿಂದ ಅಗತ್ಯ ಪೋಷಕಾಂಶಗಳನ್ನು ನೀಡುವುದರಲ್ಲಿ ವಿಫಲರಾಗುತ್ತಾರೆ.

ರೈತರು ಅಗತ್ಯ ಪೋಷಕಾಂಶಗಳನ್ನು ನೀಡುವುದರಲ್ಲಿ ವಿಫಲರಾದಾಗ, ಅಡಿಕೆ ಬೆಳೆಯ ಇಳುವರಿಯು ಕಡಿಮೆಯಾಗುತ್ತದೆ. 

ಆದ್ದರಿಂದ ರೈತರು ಇಳುವರಿ ಹೆಚ್ಚಿಸಲು ಅತ್ಯಗತ್ಯವಾಗಿ ಪೋಷಕಾಂಶ ನಿರ್ವಹಣೆಯ ಬಗ್ಗೆ ಗಮನಹರಿಸುವುದು ಅತ್ಯವಶ್ಯಕವಾಗಿದೆ. 

ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ:-
Essential nutrients required for arecanut plant:

ನೈಟ್ರೋಜನ್ (N) – ಈ ಪೋಷಕಾಂಶವು ಗಿಡದ ಬೆಳವಣಿಗೆ ಹಾಗೂ ಹಸಿರು ಎಲೆಗಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ. 

ಫಾಸ್ಫರಸ್ (P) – ಬೇರಿನ ಅಭಿವೃದ್ಧಿ ಮತ್ತು ಹೂ–ಕಾಯಿ ಬೆಳವಣಿಗೆಗೆ ಅಗತ್ಯವಾಗಿದೆ. 

 ಪೋಟಾಷಿಯಂ (K) – ಕಾಯಿ ತುಂಬು, ಗುಣಮಟ್ಟ ಮತ್ತು ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. 

 ಇಷ್ಟು ಮಾತ್ರವಲ್ಲದೆ, ಅಡಿಕೆ ಬೆಳೆ ಯಶಸ್ವಿಯಾಗಿ ಇಳುವರಿ ಹೆಚ್ಚಿಸಲು ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ. 

ಅಂತಹ ಸೂಕ್ಷ್ಮ ಪೋಷಕಾಂಶಗಳೆಂದರೆ:-
Micronutrients are :- 

ಸೂಕ್ಷ್ಮ ಪೋಷಕಾಂಶಗಳು

ಜಿಂಕ್ (Zn)

ಐರನ್ (Fe)

ಮ್ಯಾಂಗನೀಸ್ (Mn)

ಕಾಪರ್ (Cu)

ಬೋರಾನ್ (B)

ಈ ಎಲ್ಲಾ ಪೋಷಕಾಂಶಗಳನ್ನು ಸಮತೋಲನವಾಗಿ ಒದಗಿಸಿದರೆ ಅಡಿಕೆ ಗಿಡ ಆರೋಗ್ಯವಾಗಿದ್ದು ಉತ್ತಮ ಇಳುವರಿ ನೀಡುತ್ತದೆ.

ಇನ್ನೂ ಎಲ್ಲಾ ಪೋಷಕಾಂಶಗಳು ಸಮರ್ಪಕವಾಗಿ ಹೀರಿಕೊಳ್ಳಬೇಕಾದರೆ, ರೈತರು “ಹಾಲು ಬೇರು ಅಥವಾ ಆಹಾರ ಬೇರು”ಗಳನ್ನು ಹೆಚ್ಚಿಸಬೇಕು, ಈ ಹಾಲು ಬೇರುಗಳು ಅಥವಾ ಆಹಾರ ಬೇರುಗಳು ಪೋಷಕಾಂಶಗಳನ್ನು ಎಲ್ಲಾ ಕಡೆಯಿಂದಲೂ ಹೀರಿಕೊಂಡು ಇಳುವರಿ ಹೆಚ್ಚಾಗುವಂತೆ ನೋಡಿಕೊಳ್ಳುತ್ತವೆ.

Arecanut Processing Stage

Arecanut Processing Stage

ಇಷ್ಟು ಮಾತ್ರವಲ್ಲದೆ ರೈತರು ತಮ್ಮ ಹೊಂಬಾಳೆಯ ಗಂಡು ಹೂಗಳಿಗಿಂತ ಹೆಣ್ಣು ಹೂಗಳನ್ನು ಹೆಚ್ಚಿಸುವ ವೈಜ್ಞಾನಿಕ ವಿಶ್ಲೇಷಣೆಯ ತಿಳಿಯುವುದು ಮುಖ್ಯ.

 ಅಡಿಕೆ ಗಿಡದ ಸಂತಾನೋತ್ಪತ್ತಿಯು “ಕ್ರಾಸ್ ಪಾಲಿನೇಷನ್” ರೀತಿಯದ್ದಾಗಿದೆ, ಈ ರೀತಿಯ ಪಾಲಿನೇಶನ್ನಲ್ಲಿ ಗಂಡು ಹೂಗಳಿಗಿಂತ ಹೆಚ್ಚಾಗಿ “ಹೆಣ್ಣು ಹೂಗಳನ್ನು ಉತ್ಪಾದಿಸುವುದು ಮತ್ತು ಪೋಷಿಸುವುದು” ಅಗತ್ಯವಾಗಿರುತ್ತದೆ.

 ಹೆಣ್ಣು ಹೂಗಳನ್ನು ಪೋಷಿಸುವುದರ ಜೊತೆಗೆ ಅರಳುಗಳು ನೆಲಕ್ಕೆ ಉದುರದಂತೆ ಸಂರಕ್ಷಿಸುವುದು ಅಷ್ಟೇ ಮುಖ್ಯವಾದ ಕೆಲಸವಾಗಿರುತ್ತದೆ.

ಹೊಂಬಾಳೆಯ ಹೆಣ್ಣು ಹೂಗಳನ್ನು ಹೆಚ್ಚಿಸುವುದು ಹೇಗೆ? 
Hiw to protect female Flowers in yellow flower? 

 ಸಾಮಾನ್ಯವಾಗಿ ರೈತರು ಪರಾಗಸ್ಪರ್ಶಕ್ ಎಂದು ಬಂದ ಜೇನು ಹುಳಗಳು ಮತ್ತು ಇತರೆ ಚಿಟ್ಟೆಗಳನ್ನು ಕೀಟಗಳೆಂದು ತಪ್ಪಾಗಿ ಭಾವಿಸಿ ಮಾರುಕಟ್ಟೆಯಲ್ಲಿ ಸಿಗುವ ಕೀಟನಾಶಕಗಳು ತಂದು ಸ್ಪ್ರೇ ಮಾಡಿ ಅವುಗಳನ್ನು ಸಾಯಿಸುತ್ತಾರೆ ಈ ರೀತಿಯಾಗಿ ಮಾಡಿದಾಗ ಪರಾಗಸ್ಪರ್ಶವಿಲ್ಲದೆ ಹೂಗಳು ಹಣ್ಣುಗಳಾಗಿ ಪರಿವರ್ತನೆಯಾಗುವ ಪ್ರಕ್ರಿಯೆ ನಡೆಯದೆ ಇಳುವರಿ ಕಡಿಮೆಯಾಗುತ್ತದೆ. 

ಹಾಗಾದರೆ ರೈತರು ಯಾವ ರೀತಿಯ ಕೀಟನಾಶಕಗಳನ್ನು ಉಪಯೋಗಿಸಬೇಕು? 
Then, what type of fertilizer farmers should use? 

ಮಾರುಕಟ್ಟೆಯಲ್ಲಿ ಕೀಟನಾಶಕಗಳು ಎಂದಾಕ್ಷಣ ಸಾಮಾನ್ಯವಾಗಿ ಕೆಂಪು ತ್ರಿಭುಜದ ಚಿತ್ರವಿರುವ ಕೀಟನಾಶಕಗಳನ್ನು ಕೊಡುತ್ತಾರೆ.

ವೈಜ್ಞಾನಿಕವಾಗಿ ಈ ಕೆಂಪು ಅಥವಾ ನೀಲಿ ತ್ರಿಭುಜವಿರುವ ಕೀಟನಾಶಕಗಳು ತುಂಬಾ ಹಾನಿಕಾರಕವಾಗಿದ್ದು, ಅಡಿಕೆ ಬೆಳೆಗೆ ಇಳುವರಿ ಹೆಚ್ಚಿಸಲು ಅಷ್ಟು ಸೂಕ್ತವಲ್ಲ. ಆದ್ದರಿಂದ ರೈತರು ಈ ಕೀಟನಾಶಕವನ್ನು ಉಪಯೋಗಿಸದೆ ಇರುವುದು ಉತ್ತಮ. 

ಹೆಣ್ಣು ಹೂಗಳು ಹೆಚ್ಚಾಗಲು ಹಸಿರು ತ್ರಿಭುಜವಿರುವ ಕೀಟನಾಶಕಗಳನ್ನು ಬಳಸುವುದು ಉತ್ತಮ. 

ಜೇನುನೊಣಗಳನ್ನು ಆಕರ್ಷಿಸುವುದು ಹೇಗೆ? 
How to attract bees? 

ಹಸಿರು ಟ್ರಯಾಂಗಲ್ ಕೀಟನಾಶಕಕ್ಕೆ ಅರ್ಧ ಲೀಟರ್ ನೀರಿನಲ್ಲಿ 100 ಗ್ರಾಂ ಏಲಕ್ಕಿಯನ್ನು ಕುದಿಸಬೇಕು. 

ಈ ರಸವನ್ನು ಶೋಧಿಸಿ ಈ ರಸವನ್ನು ಮತ್ತು ಬೆಲ್ಲವನ್ನು ಸೇರಿಸಿ ಕೀಟನಾಶಕಕ್ಕೆ ಬೆರೆಸಿ ಸ್ಪ್ರೇ ಮಾಡಬೇಕು. 

ಈ ರೀತಿಯಾಗಿ ಮಾಡುವುದರಿಂದ ಹೆಚ್ಚು ಹೆಚ್ಚು ಜೇನು ಗುಣಗಳು ಆಕರ್ಷಿತವಾಗುವುದಲ್ಲದೆ, ಪರಾಗ ಸ್ಪರ್ಶ ಇಳುವರಿ ಹೆಚ್ಚಾಗುತ್ತದೆ. 

ಹೊಂಬಾಳೆಯಲ್ಲಿ ಹೆಣ್ಣು ಹೂವಿನ ಸಂಖ್ಯೆ ಹೆಚ್ಚಿಸುವುದು ಹೇಗೆ? 
How to increase female flowers in yellow flowers? 

ಹೊಂಬಾಳೆಯಲ್ಲಿ ಹೆಣ್ಣು ಹೂಗಳ ಸಂಖ್ಯೆ ಹೆಚ್ಚಾಗಲು “ಯುರಾಸಿಲ್” ಎನ್ನುವ ಟಾನಿಕ್ ಬಳಸಬಹುದು. 

 “ಯುರಾಸಿಲ್” ಟಾನಿಕ್ ಬಳಸುವುದರಿಂದ ಪರಾಗಸ್ಪರ್ಶಕ್ಕೆ ನೆರವಾಗುವ ಹೊಂಬಾಳೆಯಲ್ಲಿ ಹೆಣ್ಣು ಹೂಗಳ ಸಂತತಿ ಹೆಚ್ಚಾಗುತ್ತದೆ. ಇದರಿಂದ ಇದರಿಂದ ನೆರವಾಗುತ್ತದೆ. 

Arecanut Yield Tree

Arecanut Yield Tree

ಹಾಗಾಗಿ ಅಡಿಕೆ ಬೆಳೆಗಾರರು ಯುರಾಸಿಲ್ ಟಾಣಿಕ್ ಬಳಸುವುದರ ಜೊತೆ ಜೊತೆಗೆ ಅಗತ್ಯ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆಯು ಅತಿ ಮುಖ್ಯವಾದ ಕರ್ತವ್ಯವಾಗಿರುತ್ತದೆ. ಇಳುವರಿ ಕಡಿಮೆಯಾಗಲು ಹಲವಾರು ಕಾರಣಗಳಿರಬಹುದು ಆದರೆ ರೈತರು ಎದೆಗುಂದದೆ ಆ ಕಾರಣಕ್ಕೆ ತಕ್ಕ ಸೂಕ್ತ ಪರಿಹಾರವನ್ನು ಹುಡುಕಿ ಇಡುವರಿಯನ್ನು ಹೆಚ್ಚು ಮಾಡಿಕೊಂಡು ಅಧಿಕ ಲಾಭ ಮಾಡಿಕೊಳ್ಳುವ ಗಮನ ಹರಿಸಬೇಕು. 

Arecanut cultivation is an important and profitable plantation crop that supports the livelihood of millions of farmers, especially in India.

Successful arecanut farming depends on suitable climate, well-drained soil, and proper management practices. Balanced use of organic manures and chemical fertilizers ensures healthy plant growth, higher nut yield, and long-term soil fertility.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"