Weed Control Without Chemical :: ಕಳೆನಾಶಕ ಇಲ್ಲದೆ ಕರಕೆ ಮತ್ತು ಜೇಕ ಉಗಿಸುವುದು ಹೇಗೆ? ಕಳೆನಾಶಕದಿಂದಲೂ ಉಪಯೋಗವಿಲ್ಲ!!
ಕರಕೆ ಹಾಗೂ ಜೇಕ (crow and jackel weed) ತೋಟಗಳಲ್ಲಿ ಹೆಚ್ಚಾಗಿ ಕಳೆಗಳ ಕಾಟ ಇದ್ದೇ ಇರುತ್ತದೆ ಆದರೆ ಈ ಕಳೆಗಾಗಿ ಔಷಧಿಗಳು ಸಿಗುತ್ತವೆ ಅವುಗಳನ್ನು ಹಾಕಿದರೆ
ಕಳೆ ನಾಶವಾಗುತ್ತವೆ ಆದರೆ ಕೆಲವೊಂದು ಕಳೆಗಳು ಹೇಗಿರುತ್ತವೆ ಎಂದರೆ ನೀವು ಎಷ್ಟೇ ಕಳೆನಾಶಕಗಳನ್ನು ಬಳಸಿದರೂ ಕೂಡ ಅದು ಸ್ವಲ್ಪ ಸಮಯದವರೆಗೆ ಮಾತ್ರ ಕೆಲಸ ಮಾಡುತ್ತದೆ
ಅಂದರೆ ಕಳೆನಾಶಕ ಸಿಂಪಡಿಸಿದ ನಂತರದಲ್ಲಿ ಕಳೆಗಳು ನಾಶವಾಗುತ್ತವೆ ಆದರೆ ಕೆಲವೇ ಸಮಯದಲ್ಲಿ ಆ ಕಳೆ ಮತ್ತೆ ಬೆಳೆಯ ತೊಡಗುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ಜೇಕ ಮತ್ತು ಕರಕೆ(crow and jackel weed), ಹೌದು ನೀರಾವರಿ ಹೊಂದಿರುವ ಜಮೀನುಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತಿದೆ.
ನೋಡಲು ತುಂಬಾ ಅಂದವಾಗಿ ಕಾಣಿಸಿದರೂ ಕೂಡ ಇದು ಜಮೀನಿಗೆ ತುಂಬಾ ಮಾರಕವಾದ ಕಳೆಯಾಗಿದೆ.
ಈ ಜೇಕ ಹಾಗೂ ಕರಕೆಯನ್ನು ನೀವು ಕಿತ್ತೆಸೆಯದಿದ್ದರೆ ಅದು ಬೆಳೆದ ಜಾಗದಲ್ಲಿ ನಿಮಗೆ ಯಾವುದೇ ರೀತಿಯ ಉತ್ಪನ್ನ ಸಿಗುವುದಿಲ್ಲ
ಏಕೆಂದರೆ ಅದು ಮಣ್ಣಿನ ಸಂಪೂರ್ಣ ಪೋಷಕಾಂಶಗಳನ್ನು ಹೀರಿ ಬೇರುಗಳನ್ನು ಆಳವಾಗಿ ಬಿಟ್ಟುಬಿಡುತ್ತದೆ ಇದರಿಂದಾಗಿ ಅಲ್ಲಿ ಬೇರೆ ಯಾವುದೇ ಬೆಳೆಗಳು ಚೆನ್ನಾಗಿ ಬರುವುದಿಲ್ಲ.
ಹಾಗಾಗಿ ನಿಮ್ಮ ಜಮೀನಿನಲ್ಲಿ ಕರಕೆ ಹಾಗೂ ಜೇಕ ಬೆಳೆದಿದ್ದರೆ ಮೊದಲು ಅದನ್ನು ಸಂಪೂರ್ಣವಾಗಿ ನಾಶಗೊಳಿಸಿ.ಇಲ್ಲವಾದಲ್ಲಿ ಇವು ಯಾವುದೇ ಬೆಳೆಯ ಇಳುವರಿ ಬರಲು ಬಿಡುವುದಿಲ್ಲ.
ಈ ಕಳೆಗಳ ನಾಶಕ್ಕೆ ರೂಟರ್ ಬೇಡ!
ನೀವು ಕರಕೆಯನ್ನು ನಾಶಗೊಳಿಸಲು ರೂಟರ್ ನ್ನು ಬಳಸಿದಲ್ಲಿ ನೀವು ಮತ್ತಷ್ಟು ಸಮಸ್ಯೆಯನ್ನು ಹೆಚ್ಚು ಮಾಡುತ್ತಿರಿ ಆದ್ದರಿಂದ ಯಾವುದೇ ಕಾರಣಕ್ಕೂ ನಿಮ್ಮ ಜಮೀನಿನಲ್ಲಿ ಬೆಳೆದಿರುವ ಕರಕೆಯನ್ನು ರೂಟರ್ ಹೊಡೆಸಿ ತೆಗೆಸಬೇಡಿ.
ಏಕೆಂದರೆ ನೀವು ರೂಟರ್ ಹೊಡೆಸಿದರೆ ಮೇಲಿನ ಕರಕೆ ಭಾಗ ಮಾತ್ರ ಕತ್ತರಿಸುತ್ತದೆ. ಬದಲಾಗಿ ಕೆಳಗಡೆ ಬೇರಿನ ಭಾಗ ಹಾಗೆ ಉಳಿಯುತ್ತದೆ.
ನೀವು ಒಂದು ಗಾದೆ ಮಾತು ಕೇಳಿರಬಹುದು ಮರಳಿ ಹುಟ್ಟಿಬರಲು ಕರಕೆ ಜನ್ಮವಲ್ಲ ನಮ್ಮದು ಅಂತಾ ಹಿರಿಯರು ಹೇಳುತ್ತಾರೆ.
ಹೌದು ಈ ಕರಕೆಯನ್ನು ನೀವು ಎಷ್ಟೇ ನಾಶ ಮಾಡಿದರೂ ಅದರ ಸ್ವಲ್ಪ ಬೇರು ಮಣ್ಣಿನಲ್ಲಿದ್ದರೂ ಸಾಕು ಅದೂ ಮತ್ತೆ ಹರಡಲು ಪ್ರಾರಂಭಿಸುತ್ತದೆ.
ಆದ್ದರಿಂದ ನೀವು ರೂಟರ್ ಹೊಡಿಸಿ ಬರೀ ಮೇಲಿನ ಭಾಗ ಕತ್ತರಿಸಿದರೆ ಯಾವುದೇ ಪ್ರಯೋಜನವಿಲ್ಲ.
crow and jackel ಕಳೆ ನಾಶಪಡಿಸುವುದು ಹೇಗೆ!
ಅದರ ಬದಲಾಗಿ ನೀವು ಕರಕೆಯನ್ನು ನಾಶಪಡಿಸಲು ನೇಗಿಲು ಹೊಡೆಸಬಹುದು. ಇದರಿಂದ ಬೇರು ಸಮೇತ ಕರಕೆ ಕೀಳಲು ಸಹಾಯಕವಾಗುತ್ತದೆ.
ಇಲ್ಲವಾದಲ್ಲಿ ಇದಕ್ಕಿಂತ ಉತ್ತಮ ಉಪಾಯ ನೀವು ಗುದ್ದಲಿಯಿಂದ ಎಲ್ಲೆಲ್ಲಿ ಕರಕೆ ಬೆಳೆದಿರುತ್ತದೆಯೋ ಅಲ್ಲೆಲ್ಲಾ ಚೆನ್ನಾಗಿ ಆಳವಾಗಿ ಅಗೆದು ಬೇರು ಸಮೇತ ಕರಕೆಯನ್ನು ಕಿತ್ತೆಸೆಯಬೇಕು.
ಹೀಗೆ ಮಾಡಿದಲ್ಲಿ ಕರಕೆ ಮತ್ತೆ ಬೆಳೆಯುವುದಿಲ್ಲ.
ಅಲ್ಲದೇ ಜೇಕವು ಕೂಡ ಹೀಗೆ ಉದ್ದುದ್ದ ಹರಡಿಕೊಂಡು ಜಾಲರೂಪಿಸಿರುತ್ತದೆ. ಆದ್ದರಿಂದ ಅದನ್ನು ಕೂಡ ಬುಡಸಮೇತ ಕಿತ್ತೆಸೆಯಬೇಕು.
ಹಾಗಾಗಿ ನೀವು ಅದನ್ನು ಅಗೆದು ತೆಗೆಯುವುದು ಅಥವಾ ನೇಗಿಲು ಹೊಡೆಸುವುದು ಉತ್ತಮ.
ಕಳೆನಾಶಕ ಲಭ್ಯವಿಲ್ಲವೇ!
ಇನ್ನೂ ನಿಮಗೆಲ್ಲಾ ಒಂದು ಅನುಮಾನ ಬಂದಿರಬಹುದು. ಕರಕೆ ಮತ್ತು ಜೇಕ (crow and jackel weed)ನಾಶಪಡಿಸಲು ಕಳೆನಾಶಕ ಹಾಕಬಹುದಲ್ಲವೇ ಅಂತ.
ಆದರೆ ಈ ಕರಕೆ ನಾಶಕ್ಕೆ ಯಾವುದೇ ಉತ್ತಮ ಕಳೆನಾಶಕವಿಲ್ಲ. ಎರಡು ಕಳೆನಾಶಕಗಳಿದ್ದು, ಸೆಂಪ್ರಾ ಮತ್ತು ಎಲಾನ್ ಎಂಬ ಔಷಧಿಗಳಿದ್ದು,
ಇವು ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಏಕೆಂದರೆ ನೀವು ಸಿಂಪಡಿಸಿದಾಗ ಕರಕೆ ಮತ್ತು ಜೇಕ ನಾಶವಾದರೂ ಕೂಡ ಮತ್ತೆ ಬಹುಬೇಗ ಬೆಳೆಯಲು ಪ್ರಾರಂಭಿಸುತ್ತದೆ.
ನಿಮ್ಮ ಜಮೀನಿನಲ್ಲಿ ಕಬ್ಬಿನ ಇಳುವರಿ ಹೇಗಿದೆ ಚೆಕ್ ಮಾಡಿಕೊಳ್ಳಿ!
ನಿಮ್ಮ ಜಮೀನಿನಲ್ಲಿ ಕಬ್ಬು (Sugarcane) ಬೆಳೆ ಚೆನ್ನಾಗಿ ಬಂದಿದೆಯೇ ಇಲ್ಲವೇ ಎಂಬುದು ನಿಮಗೆ ಗೊತ್ತಾಗಬೇಕಿದ್ದಲ್ಲಿ
ನೆಲವನ್ನು ಅಗೆಯಿರಿ ಆಗ ಬೇರುಗಳು ಉದ್ದುದ್ದ ಬಿಡಿಬಿಡಿಯಾಗಿ ಆಳದವರೆಗೆ ಹರಡಿದ್ದಲ್ಲಿ ಕಬ್ಬು ಚೆನ್ನಾಗಿ ಬೆಳೆದಿದ್ದು, ಇಳುವರಿ ಚೆನ್ನಾಗಿ ಬರುತ್ತದೆ ಎಂದು ಅಥ೯.
ಬದಲಾಗಿ ಬೇರು ಗುಂಪುಗುಂಪಾಗಿ ಹಿಂಡಾಗಿದ್ದರೆ ಕಬ್ಬು ಚೆನ್ನಾಗಿ ಬೆಳೆದಿಲ್ಲವೆಂದು ಅಥ೯.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ