3 Lak Ration Card Changed :: 3,35,000 ಬಿಪಿಎಲ್ ಕಾಡ್೯ ಎಪಿಎಲ್ ಆಗಿ ಮಾಪಾ೯ಡು!! ನೌಕರರುಗಳ 1,02,509 ಬಿಪಿಎಲ್ ಕಾರ್ಡ ರದ್ದು!!ನಿಮ್ಮದು ಆಗಿರಬಹುದು ಚೆಕ್ ಮಾಡಿಕೊಳ್ಳಿ!
ಕಳೆದ ಮೂರು ತಿಂಗಳುಗಳಿಂದ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಅಥವಾ ಬಿಪಿಎಲ್ ಕಾರ್ಡ್ ಇಂದ ಎಪಿಎಲ್ ಕಾರ್ಡ್ ಆಗಿ ವರ್ಗಾವಣೆ ಮಾಡುವ ಪ್ರಕ್ರಿಯೆ ಸಾಕಷ್ಟು ಸುದ್ದಿ ಮಾಡಿದೆ. ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆಯನ್ನು ನಿಲ್ಲಿಸಿದರು ಕೂಡ ಬಿಪಿಎಲ್ ಕಾರ್ಡ್ ಇಂದ ಎಪಿಎಲ್ ಕಾರ್ಡ್ ಆಗಿ ವರ್ಗಾವಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಸದ್ಯಕ್ಕೆ ರಾಜ್ಯ ಸರ್ಕಾರವು ಪ್ರಸ್ತುತವಾಗಿ ಬಿಪಿಎಲ್ ಕಾರ್ಡ್ ಇಂದ ಎಪಿಎಲ್ ಕಾರ್ಡ್ ಆಗಿ ಬದಲಾವಣೆಯಾಗಿರುವ ಕಾಡು೯ದಾರರ ಮಾಹಿತಿಯನ್ನು ಬಿಡುಗಡೆ ಮಾಡಿದೆ.
3,35,000 ಬಿಪಿಎಲ್ ಕಾಡ್೯(BPL card) ಬದಲಾವಣೆ ಆಗಿವೆ ಎಂದ ಸಕಾ೯ರ!
ಹೌದು, ರಾಜ್ಯದಲ್ಲಿ ಒಟ್ಟು 3,35,000 ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಲಾಗಿದೆ. ಈ ಪ್ರಕ್ರಿಯೆ ಬಹಳಷ್ಟು ವರ್ಷಗಳ ಹಿಂದೆಯೇ ನಡೆಯಬೇಕಾಗಿತ್ತು ಆದರೆ ಈ ಪ್ರಕ್ರಿಯೆಯನ್ನು ಯಾರು ಕೂಡ ಮಾಡಲು ಮುಂದಾಗಿರಲಿಲ್ಲ ಇದೀಗ ಕಾಂಗ್ರೆಸ್ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಡುಗಳು ಎಪಿಎಲ್ ಕಾರ್ಡ್ಗಳಾಗಿ ವರ್ಗಾವಣೆ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕಾಡ್೯ ಮಾಪಾ೯ಡಿಗೆ ಕಾರಣ ತಿಳಿಸಿದ ಸಕಾ೯ರ!
ಈ ರೀತಿ ಬಿಪಿಎಲ್ ಕಾರ್ಡ್ ಇಂದ ಐಪಿಎಲ್ ಕಾರ್ಡ್ಗಳಾಗಿ ವರ್ಗಾವಣೆಯಾಗಿರುವ ಕುಟುಂಬಗಳಿಗೆ ಯಾವ ಕಾರಣಕ್ಕಾಗಿ ಎಪಿಎಲ್ ಕಾರ್ಡ್ ಎಂದು ಬದಲಾಯಿಸಲಾಗಿದೆ ಎಂಬ ಮಾಹಿತಿಯನ್ನು ತಹಸಿಲ್ದಾರ್ ಕಚೇರಿಗಳಲ್ಲಿ ಲಭ್ಯವಿದ್ದು, ನಿಮ್ಮ ಕಾರ್ಡ್ ಎಪಿಎಲ್ ಆಗಿ ಬದಲಾವಣೆಯಾಗಿದ್ದರೆ ನೀವು ಕೂಡ ತಹಸಿಲ್ದಾರ ಆಫೀಸಿಗೆ ಹೋಗಿ ಮಾಹಿತಿಯನ್ನು ಪಡೆಯಬಹುದು.
ನಿಮ್ಮ ಕಾಡ್೯ ಮಾಪಾ೯ಡಿಗೆ ಏನು ಕಾರಣ ಗೊತ್ತೆ?
ಬಿಪಿಎಲ್ ಇಂದ ಎಪಿಎಲ್ ಕಾರ್ಡ್ ಆಗಿ ಬದಲಾಗಿರುವುದನ್ನು ಚೆಕ್ ಮಾಡುವುದು ಹೇಗೆ?
ನೀವು ಪ್ರತಿ ತಿಂಗಳು ರೇಷನ್ ಪಡೆಯುವಾಗ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಅನ್ನು ಕೊಡುತ್ತೀರಿ ಈಗಲೂ ಕೂಡ ನೀವು ಬಯೋಮೆಟ್ರಿಕ್ ಕೊಡುವಾಗ ನಿಮ್ಮ ಕಾಡು೯ ಬದಲಾಗಿದ್ದರೆ ಅಲ್ಲಿ ತೋರಿಸುತ್ತದೆ ಹಾಗಾಗಿ ನೀವು ರೇಷನ್ ಅಂಗಡಿಗಳಲ್ಲಿ ಈ ಕುರಿತು ಚೆಕ್ ಮಾಡಿಸಬಹುದು. ಯಾವ ಕಾರಣಕ್ಕಾಗಿ ಬದಲಾಗಿದೆ ಎಂಬುದು ತಿಳಿಯಬೇಕಾದರೆ ನಿಮ್ಮ ತಾಲೂಕಿನ ತಹಸಿಲ್ದಾರ್ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಅಕ್ರಮ ಬಿಪಿಎಲ್ ಕಾಡ್೯(BPL card) ಹೊಂದಿದ ತೆರಿಗೆ ಪಾವತಿದಾರರ & ನೌಕಕರರ ಮೇಲೆ ಕಠಿಣ ಕ್ರಮ!
ಇಷ್ಟೇ ಅಲ್ಲದೆ ತೆರಿಗೆ ಪಾವತಿಸುತ್ತಿರುವ ಹಾಗೂ ಸರ್ಕಾರಿ ನೌಕರರುಗಳ 1,02,509 ಬಿಪಿಎಲ್ ಕಾರ್ಡಗಳನ್ನು ಈ ಹಿಂದೆಯೇ ರದ್ದು ಮಾಡಲಾಗಿತ್ತು. ಮೊದಲೇ ಸಕಾ೯ರದಿಂದ ಅಕ್ರಮ ರೇಷನ್ ಕಾಡ್೯ಗಳಿದ್ದಲ್ಲಿ ಹಿಂದಿರುಗಿಸಬೇಕು ಎಂಬ ಸೂಚನೆ ನೀಡಿದ್ದರೂ ಕೂಡ ಇವರುಗಳು ಹಿಂದಿರುಗಿಸದ ಕಾರಣ ಇದೀಗ ಅವರ ಮೇಲೆ ರಾಜ್ಯ ಸಕಾ೯ರ ಕ್ರಮ ಕೈಗೊಂಡಿದ್ದು, ಸಕಾ೯ರಿ ನೌಕರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಹಾಗೂ ದಂಡ ವಿಧಿಸಲಾಗಿದೆ
ರೇಷನ್ ಕಾರ್ಡ್(Ration card) ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?
*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್ ಕಾಡ್೯ ಮಾಹಿತಿ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚