"Agriculture is our CULTURE"

27th Gruhalakshmi :: ಗೃಹಲಕ್ಷ್ಮಿ 27ನೇ ಕಂತಿನಿಂದ ಜೀವಿತಾವಧಿ ಪ್ರಮಾಣ ಪತ್ರದ!!! 21 ಜಿಲ್ಲೆಗಳಿಗೆ ಗೃಹಲಕ್ಷ್ಮಿ ಹಣ ಜಮಾ!!

ಮನೆಮನ ಬೆಳಗಿದ ಲಕ್ಷ್ಮಿ, ನಾಡಿನೆಲ್ಲೆಡೆ ಸಂಚರಿಸುವ ಶಕ್ತಿ !!

From Dependence to Dignity: Karnataka’s Women-Centric Scheme Gruha lakshmi and shakti !!

ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಕರ್ನಾಟಕದ ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿವೆ. ಈ ಯೋಜನೆಗಳು ಮಹಿಳೆಯರಿಗೆ ಬಹಳ ಸಹಕಾರಿಯಾಗಿವೆ.

ಗೃಹಲಕ್ಷ್ಮಿ 26ನೇ ಕಂತಿನ ಅಪ್ಡೇಟೆಡ್ :-
26th Installment Update:-

* ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವು ಈಗಾಗಲೇ ಅಂದಾಜು 45% ರಿಂದ 50% ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

• ಫೆಬ್ರವರಿ 17 ರಿಂದ ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಯಾರೆಲ್ಲಾ ಫಲಾನುಭವಿಗಳಿಗೆ ಇನ್ನೂ ಹಣ ತಲುಪಿಲ್ಲವೋ, ಅವರಿಗೆಲ್ಲ ಮುಂದಿನ 7 ರಿಂದ 8 ದಿನಗಳಲ್ಲಿ ಹಣವನ್ನು ತಲುಪಿಸಲಾಗುವುದು.

ಆದ್ದರಿಂದ ಫಲಾನುಭವಿಗಳು ತಾಳ್ಮೆಯಿಂದ ಕಾಯುವಂತೆ ಸೂಚಿಸಲಾಗಿದೆ.

ಸದ್ಯಕ್ಕೆ, ರಾಜ್ಯದ 21 ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ.

ಜಿಲ್ಲೆಗಳ ಪಟ್ಟಿ :-

List of Districts :-

1. ಬಾಗಲಕೋಟೆ

2. ಕೊಪ್ಪಳ

3. ಚಿಕ್ಕಬಳ್ಳಾಪುರ

4. ಬೆಂಗಳೂರು ನಗರ

5. ಬೆಂಗಳೂರು ಗ್ರಾಮಾಂತರ

6. ಬೆಂಗಳೂರು ದಕ್ಷಿಣ (ನಗರ ಭಾಗ)

7. ಮೈಸೂರು

8. ಕೋಲಾರ

9. ದಾವಣಗೆರೆ

10. ರಾಮನಗರ

11. ಉತ್ತರ ಕನ್ನಡ

12. ಕಲ್ಬುರ್ಗಿ (ಕಲಬುರಗಿ)

13. ತುಮಕೂರು

14. ಶಿವಮೊಗ್ಗ

15. ಹಾಸನ

16. ಗದಗ

17. ತುಮಕೂರು 

18. ಕೊಡಗು 

19. ರಾಯಚೂರು 

20. ಉಡುಪಿ 

21. ಯಾದಗಿರಿ 

• ಈ ಹಿಂದೆ ಗೃಹಲಕ್ಷ್ಮಿ ಯೋಜನೆಯ ಕಂತುಗಳನ್ನು ಪಾವತಿ ಮಾಡಲು ತೆಗೆದುಕೊಂಡ ಸಮಯಕ್ಕೆ ಹೋಲಿಸಿದರೆ, ಈ ಬಾರಿ ಹಣ ಪಾವತಿ ಪ್ರಕ್ರಿಯೆಯು ಬಹಳ ವೇಗವಾಗಿ ನಡೆಯುತ್ತಿದೆ.

ತಂತ್ರಜ್ಞಾನದ ಸಹಾಯದಿಂದ ಹಣವನ್ನು ತ್ವರಿತವಾಗಿ ವರ್ಗಾಯಿಸಲಾಗುತ್ತಿದೆ.

ನಮಗೆ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಗದಗ ಮತ್ತು ತುಮಕೂರು ಸೇರಿದಂತೆ ಇನ್ನಿತರ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ.

ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್‌ಶಾಟ್‌ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Credited Status in Shivamogga

ಶಿವಮೊಗ್ಗ 

Money Credited Status in Raichur 

ರಾಯಚೂರು 

Money Credited Status in Udupi

ಉಡುಪಿ 

Money Credited Status in Yadgir

ಯಾದಗಿರಿ 

2. ಜೀವಿತಾವಧಿ ಪ್ರಮಾಣ ಪತ್ರದ ಬಗ್ಗೆ ಮಾಹಿತಿ:-
Update on the life certificate :-

• ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಮಹಿಳೆಯರು ಜೀವಿತಾವಧಿ ಪ್ರಮಾಣ ಪತ್ರವನ್ನು (Life Certificate) ಸಲ್ಲಿಸುವುದು ಕಡ್ಡಾಯವಾಗಿದೆ ಎಂಬ ಬಗ್ಗೆ ಕೆಲವು ವದಂತಿಗಳು ಹರಡುತ್ತಿವೆ. ಇದರಿಂದ ಗೊಂದಲ ಉಂಟಾಗುವ ಸಾಧ್ಯತೆ ಇದೆ.

* ಆದರೆ, ಈ ಬಗ್ಗೆ ಸರ್ಕಾರವು ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ವದಂತಿಗಳಿಗೆ ಕಿವಿಗೊಡದಂತೆ ತಿಳಿಸಲಾಗಿದೆ.

ಒಂದು ವೇಳೆ ಸರ್ಕಾರವು ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡರೆ, ಅಧಿಕೃತವಾಗಿ ಪ್ರಕಟಣೆ ಮಾಡುತ್ತದೆ .

• ಸದ್ಯಕ್ಕೆ, ಜೀವಿತಾವಧಿ ಪ್ರಮಾಣ ಪತ್ರದ ನಿಯಮವು ಪಿಂಚಣಿ ಪಡೆಯುತ್ತಿರುವ ನಿವೃತ್ತ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈ ಬಗ್ಗೆ ಯಾವುದೇ ಗಾಬರಿಯಾಗುವ ಅಗತ್ಯವಿಲ್ಲ. ಸರ್ಕಾರದಿಂದ ಅಧಿಕೃತ ಸೂಚನೆ ಬರುವವರೆಗೆ ಕಾಯುವುದು ಸೂಕ್ತ.

3. ಶಕ್ತಿ ಸ್ಮಾರ್ಟ್ ಕಾರ್ಡ್ ಬಗ್ಗೆ ಮಾಹಿತಿ:-

Shakti smart card:-

* ಶಕ್ತಿ ಯೋಜನೆಯ ಅಡಿಯಲ್ಲಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸ್ಮಾರ್ಟ್ ಕಾರ್ಡ್ ಕಡ್ಡಾಯ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಸರ್ಕಾರವು ಈ ಕಾರ್ಡ್ ವಿತರಣೆಯ ದಿನಾಂಕ ಮತ್ತು ವಿತರಣಾ ವಿಧಾನದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.

• ಅಲ್ಲಿಯವರೆಗೆ, ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ತಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಬಹುದು. ಸ್ಮಾರ್ಟ್ ಕಾರ್ಡ್ ವಿತರಣೆಯ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬರುವವರೆಗೆ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸುವುದಕ್ಕೆ ಅವಕಾಶವಿರುತ್ತದೆ.

ಮಹಿಳಾ ಸಬಲೀಕರಣದಲ್ಲಿ ಯೋಜನೆಗಳ ಪಾತ್ರ:-

Role of Government guarantee schemes in women empowerment :-

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ದೊರೆಯುವ ₹2,000 ಮೊತ್ತವು ಮಹಿಳೆಯರಿಗೆ ಮನೆಯ ಸಣ್ಣಪುಟ್ಟ ಖರ್ಚುಗಳನ್ನು ನಿರ್ವಹಿಸಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳನ್ನು ಎದುರಿಸಲು ಆರ್ಥಿಕವಾಗಿ ನೆರವಾಗುತ್ತದೆ.

ಇದು ಮಹಿಳೆಯರು ಇತರರ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸಿ, ಆರ್ಥಿಕ ಭರವಸೆಯನ್ನು ನೀಡುತ್ತದೆ.

 ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣದ ಸೌಲಭ್ಯವು ಮಹಿಳೆಯರಿಗೆ ಉದ್ಯೋಗಕ್ಕಾಗಿ ಆಗಲಿ ಅಥವಾ ಇತರೆ ಅಗತ್ಯಗಳಿಗಾಗಿ ದೂರದ ಪ್ರದೇಶಗಳಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟಿದೆ.

ಇದರಿಂದಾಗಿ ಅವರ ಉದ್ಯೋಗಾವಕಾಶಗಳು ಹೆಚ್ಚಾಗುವುದರ ಜೊತೆಗೆ ಸಾಮಾಜಿಕವಾಗಿ ಬೆರೆಯಲು ಮತ್ತು ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ.

ಈ ಯೋಜನೆಗಳು ಕೇವಲ ಆರ್ಥಿಕ ಸಹಾಯವನ್ನು ನೀಡುವುದರ ಜೊತೆಗೆ, ಮಹಿಳೆಯರಿಗೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಒದಗಿಸುತ್ತವೆ.

ಅಲ್ಲದೆ ಸ್ವಾವಲಂಬಿ ಜೀವನವನ್ನು ನಡೆಸಲು ಪ್ರೇರಣೆ ನೀಡುವ ಮೂಲಕ ಗೌರವಯುತವಾಗಿ ಬದುಕಲು ಸಹಾಯ ಮಾಡುತ್ತವೆ.

The ₹2,000 monthly help from the Gruhalakshmi scheme lets women take care of small home costs, help their kids’ schooling, or deal with health problems.

By giving money support, it makes them rely less on others and feel more financially stable.

The Shakti scheme’s free bus rides let women travel far for work or important needs. This has created more job chances and helped them connect more with others in their community.

More than just money, these plans give women a special place in their families and communities. They encourage women to live on their own and help them live with honor and respect.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"