"Agriculture is our CULTURE"

Gruhalakshmi 27th :: ಶೇಕಡ 80ರಷ್ಟು ಖಾತೆಗಳಿಗೆ ಗೃಹಲಕ್ಷ್ಮಿ 26ನೇ ಕಂತಿನ ಹಣ ಜಮಾ!!! 27ನೇ ಕಂತು ಯಾವಾಗ ಹಣ ಜಮಾ?

ಸ್ವಾವಲಂಬನೆಯ ಹಾದಿಯಲ್ಲಿ ನಾರಿಯರ ಶಕ್ತಿ – 26 ಮತ್ತು 27ನೇ ಕಂತಿನ ಅಪ್ಡೇಟೆಡ್ ಮತ್ತು ಇತರ ಯೋಜನೆಗಳ ಬಗ್ಗೆ ಮಾಹಿತಿ

Transforming Lives of women with gruha lakshmi and shakti – recent updates on them and other schems!!

ಇಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಮತ್ತು ಇತರ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಸ್ತುತ ಪರಿಸ್ಥಿತಿ ಮತ್ತು ಮುಂಬರುವ ದಿನಗಳಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ.

ಗೃಹಲಕ್ಷ್ಮಿ ಯೋಜನೆ, ಬಿಡುಗಡೆಯಾದ ಕಂತುಗಳ ವಿವರ (26 ಮತ್ತು 27ನೇ ಕಂತು):-

Update on Gruhalakshmi 26th and 27th installment :-

• ಈಗಾಗಲೇ ಸರಿಸುಮಾರು 75% ರಿಂದ 80% ರಷ್ಟು ಫಲಾನುಭವಿಗಳ ಖಾತೆಗಳಿಗೆ ಅಕ್ಟೋಬರ್ ತಿಂಗಳಿನ (26ನೇ ಕಂತು) ಹಣವನ್ನು ನೇರವಾಗಿ ಜಮೆ ಮಾಡಲಾಗಿದೆ.

* ಮಂಡ್ಯ, ಕೊಡಗು, ಧಾರವಾಡ, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಹಣವು ಬಿಡುಗಡೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಹಣ ಜಮೆ ಪ್ರಕ್ರಿಯೆಯು ವಿಳಂಬವಾಗಿತ್ತು, ಆದರೆ ಈಗ ಹಣವನ್ನು ಜಮೆ ಮಾಡಲು ಪ್ರಾರಂಭಿಸಲಾಗಿದೆ.

• 27ನೇ ಕಂತಿನ ನಿರೀಕ್ಷೆ, 27ನೇ ಕಂತಿನ ಹಣವನ್ನು ಮಾರ್ಚ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ನಂತರ ನೇರ ನಗದು ವರ್ಗಾವಣೆ (DBT – Direct Benefit Transfer) ಮೂಲಕ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ.

ಬಾಕಿ ಇರುವ ಕಂತುಗಳು – ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳ ಕಂತುಗಳು ಮತ್ತು 2025ರ ಸಾಲಿನ ಫೆಬ್ರವರಿ-ಮಾರ್ಚ್ ತಿಂಗಳ ಎರಡು ಬಾಕಿ ಕಂತುಗಳು ಸೇರಿದಂತೆ ಒಟ್ಟು 5 ತಿಂಗಳ ಹಣವನ್ನು ಇನ್ನೂ ಫಲಾನುಭವಿಗಳಿಗೆ ನೀಡಬೇಕಿದೆ.

ಮುಂಬರುವ ಬಜೆಟ್ ನಂತರದ ಬದಲಾವಣೆಗಳು (excepted):-

chances of chnages in the schemes from upcoming budget:-

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಕಾರಣದಿಂದ ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಕೆಲವು ಪ್ರಮುಖ ಬದಲಾವಣೆ ಮಾಡುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ:-

ಅರ್ಹತಾ ಮಾನದಂಡ – ಆರ್ಥಿಕ ಇಲಾಖೆಯು ನೀಡಿರುವ ಸೂಚನೆಗಳ ಪ್ರಕಾರ, ಕೇವಲ ಬಿಪಿಎಲ್ (BPL – Below Poverty Line) ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಮಾತ್ರ ಈ ಯೋಜನೆಯನ್ನು ಸೀಮಿತಗೊಳಿಸುವ ಸಾಧ್ಯತೆ ಇದೆ.

ಇದರಿಂದ ಎಪಿಎಲ್ (APL- Above Poverty Line) ಕಾರ್ಡ್ ಹೊಂದಿರುವವರನ್ನು ಈ ಯೋಜನೆಯಿಂದ ಹೊರಗಿಡಲಾಗುವುದು.

ಅನರ್ಹರು – ಆದಾಯ ತೆರಿಗೆ (Income Tax) ಪಾವತಿಸುವ ವ್ಯಕ್ತಿಗಳು, ಜಿಎಸ್‌ಟಿ (GST – Goods and Services Tax) ಪಾವತಿದಾರರು ಅಥವಾ ಸರ್ಕಾರಿ ಉದ್ಯೋಗಿಗಳು ಈ ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗುತ್ತಾರೆ.

* ಶಕ್ತಿ ಯೋಜನೆ (ಉಚಿತ ಬಸ್ ಪ್ರಯಾಣ)- ಶಕ್ತಿ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಅನ್ನು ಪರಿಚಯಿಸುವ ಮೂಲಕ, ಕೇವಲ ಹಿರಿಯ ನಾಗರಿಕರಿಗೆ ಮತ್ತು ಶಾಲಾ ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯವನ್ನು ಸೀಮಿತಗೊಳಿಸುವ ಸಾಧ್ಯತೆಗಳಿವೆ.

ಇತರ ಗ್ಯಾರಂಟಿ ಯೋಜನೆಗಳು ಮತ್ತು ಪಿಂಚಣಿ ಯೋಜನೆಗಳು:-

Update on other gaurantee schemes:-

ಪಿಂಚಣಿ ವಿಳಂಬ – ಫೆಬ್ರವರಿ ತಿಂಗಳಿನ ಹಿರಿಯ ನಾಗರಿಕರ ಮತ್ತು ಅಂಗವಿಕಲರ ಪಿಂಚಣಿ ಹಣವನ್ನು ಡಿಬಿಟಿ (DBT) ತಾಂತ್ರಿಕ ಕಾರಣಗಳಿಂದ ವಿಳಂಬ ಮಾಡಲಾಗಿದೆ. ಆದಷ್ಟು ಬೇಗ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಮರುಪ್ರಾರಂಭಿಸಲಾಗುವುದು.

* ಯುವನಿಧಿ – ಡಿಸೆಂಬರ್ ಮತ್ತು ಜನವರಿ ತಿಂಗಳಿನ ಹಣಕ್ಕಾಗಿ ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ಸ್ವಯಂ ಘೋಷಣೆ (Self-declaration) ಸಲ್ಲಿಸಬೇಕು.

ಅನ್ನಭಾಗ್ಯ ಯೋಜನೆ – ಜನವರಿ ತಿಂಗಳ ಹಣವು ಫಲಾನುಭವಿಗಳ ಖಾತೆಗಳಿಗೆ ಜಮೆಯಾಗದ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಸರ್ಕಾರದ ಮುಂದಿನ ಅಪ್‌ಡೇಟ್‌ಗಾಗಿ ಕಾಯಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳು- ಮಹಿಳಾ ಸಬಲೀಕರಣದ ಹೊಸ ಸಾರಥಿ:-

Welfare Guarantees -The New Engine for Gender Equality and Social Mobility:-

ಗೃಹಲಕ್ಷ್ಮಿ ಯೋಜನೆಯಿಂದ ಬರುವ ₹2,000 ಹಣವು ಹಳ್ಳಿಯ ಮತ್ತು ಬಡ ಹೆಂಗಸರಿಗೆ ಸಣ್ಣಪುಟ್ಟ ವೈಯಕ್ತಿಕ ಕೆಲಸಗಳಿಗೆ ಬೇರೆಯವರ ಸಹಾಯ ಬೇಡವೆನ್ನುವುದನ್ನು ತಪ್ಪಿಸುತ್ತದೆ. ಇದರಿಂದ ಅವರಿಗೆ ಧೈರ್ಯ ಮತ್ತು ಆರ್ಥಿಕ ಭದ್ರತೆ ಸಿಗುತ್ತದೆ.

ಗಂಡು-ಹೆಣ್ಣು ಸಮಾನತೆ ಮತ್ತು ತೀರ್ಮಾನ ತೆಗೆದುಕೊಳ್ಳುವಿಕೆ ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ ಹಾಕುವುದರಿಂದ,

ಮನೆಯ ಆರ್ಥಿಕ ವಿಚಾರಗಳಲ್ಲಿ ಹೆಂಗಸರ ಮಾತಿಗೆ ಬೆಲೆ ಸಿಗುತ್ತದೆ. ಇದು ಸಮಾಜದಲ್ಲಿ ಮತ್ತು ಮನೆಯಲ್ಲಿ ಹೆಂಗಸರ ಗೌರವ ಹೆಚ್ಚಿಸಲು ಸಹಾಯ ಮಾಡುತ್ತದೆ. ಓಡಾಟ ಮತ್ತು ಶಕ್ತಿ ತುಂಬುವುದು:

ಶಕ್ತಿ‘ ಯೋಜನೆಯಿಂದ ಉಚಿತ ಬಸ್ ಪ್ರಯಾಣ ಇರುವುದರಿಂದ ಹೆಂಗಸರು ಕೆಲಸಕ್ಕೆ, ಓದಿಗೆ ಅಥವಾ ಆರೋಗ್ಯದ ಸಲುವಾಗಿ ಎಲ್ಲಿಗಾದರೂ ಹೋಗಲು ಸಹಾಯವಾಗುತ್ತದೆ. 

ಇದು ಅವರ ಸಾಮಾಜಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಪೌಷ್ಟಿಕಾಂಶ ಮತ್ತು ಆರೋಗ್ಯ ಅನ್ನಭಾಗ್ಯ ಯೋಜನೆಯಿಂದ ಸಿಗುವ ಹಣವು ಬಡ ಹೆಂಗಸರಿಗೆ ತಮ್ಮ ಮತ್ತು ತಮ್ಮ ಮಕ್ಕಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಆರ್ಥಿಕ ಶಕ್ತಿ ನೀಡುತ್ತದೆ.

ಸಾಮಾಜಿಕ ರಕ್ಷಣೆ ಪಿಂಚಣಿ ಮತ್ತು ಗ್ಯಾರಂಟಿ ಹಣವು ಗಂಡ ತೀರಿಕೊಂಡ ಹೆಂಗಸರಿಗೆ, ವಯಸ್ಸಾದವರಿಗೆ ಮತ್ತು ಆರ್ಥಿಕವಾಗಿ ದುರ್ಬಲರಾದ ಹೆಂಗಸರಿಗೆ ಕಷ್ಟಕಾಲದಲ್ಲಿ ಸಹಾಯವಾಗುತ್ತದೆ. ಇದು ಬಡತನ ರೇಖೆಗಿಂತ ಮೇಲೆ ಬರಲು ಸಹಾಯ ಮಾಡುತ್ತದೆ.

The Gruhalakshmi Scheme gives ₹2,000 each month to help women in rural areas and those living in poverty feel more financially secure and confident.

It stops them from needing to rely on others for small personal costs.

By sending money straight to the female head of the family, the government helps create equality between men and women.

It also helps women have a bigger say in how money is spent at home, which makes them feel more respected in their families and communities.

Also, the Shakti Scheme lets women ride buses for free, making it much easier for them to travel. This helps them get to jobs, schools, or healthcare. This also helps them get more involved in their communities.

The Annabhagya Scheme’s financial help also makes it easier for them to take care of their own and their children’s health and nutritional needs. Together, these guarantees, along with social security pensions,

Create an important safety net for women who are widows, elderly, or struggling financially. This gives them important help during hard times and helps them rise above the poverty line.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"