Gram Panchayth Bara Parihara List :: ಡಿ.ಸಿ ಕಚೇರಿ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಬರ ಪರಿಹಾರ ಪಟ್ಟಿ ಅಂಟಿಸಲಾಗಿದೆ!! ಹೇಗೆ ಚೆಕ್ ಮಾಡಿಕೊಳ್ಳುವುದು?
ನಾಗರಿಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಕಂದಾಯ ಇಲಾಖೆಯು ಬರ ಪರಿಹಾರದ ರೈತರ ಪಟ್ಟಿಯನ್ನು ಗ್ರಾಮ ಪಂಚಾಯತಿಗಳು, ರೈತ ಸಂಪರ್ಕ ಕೇಂದ್ರಗಳು, ತಹಶೀಲ್ದಾರ್ ಕಚೇರಿಗಳು, ಡಿಸಿ ಕಚೇರಿಗಳು ಮತ್ತು ಜಾಲತಾಣಗಳಲ್ಲಿ (ವೆಬ್‌ಸೈಟ್‌ಗಳಲ್ಲಿ) ಪ್ರಕಟಿಸಲಾಗಿದೆ. ಇಲ್ಲಿ ಭೇಟಿ ನೀಡಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.
ಹೇಗೆ ಚೆಕ್ ಮಾಡಿಕೊಳ್ಳುವುದು?
ನಿಮ್ಮ ಹತ್ತಿರದ
1) ಗ್ರಾಮ ಪಂಚಾಯತಿಗಳು
2) ರೈತ ಸಂಪರ್ಕ ಕೇಂದ್ರಗಳು
3) ತಹಶೀಲ್ದಾರ್ ಕಚೇರಿಗಳು
4) ಡಿಸಿ ಕಚೇರಿಗಳು
ಈ ಮೇಲಿನ ಕಚೇರಿಗಳಿಗೆ ಭೇಟಿ ನೀಡಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ, ಈ ಮೇಲಿನ ಕಚೇರಿಗಳಲ್ಲಿ ಬರ ಪರಿಹಾರ ಪಟ್ಟಿಯನ್ನು ಅಂಟಿಸಲಾಗಿದ್ದು ಈ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೋ ಅವರಿಗೆ ಬರ ಪರಿಹಾರ ಹಣ ನೇರವಾಗಿ ಖಾತೆಗೆ ಜಮವಾಗಿರುತ್ತದೆ.
2nd installment Status :: ಎರಡನೇ ಹಂತದ ಬರ ಪರಿಹಾರ ನಿಮಗೆ ಜಮವಾಗಿದೆಯಾ? ಕೂಡಲೇ ಚೆಕ್ ಮಾಡಿಕೊಳ್ಳಿ!!!
ಎರಡನೇ ಹಂತದ ಬರ ಪರಿಹಾರ ( Drought ) ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://parihara.karnataka.gov.in/service92/
2) ವರ್ಷ :- “2023-24″ ಎಂದು ಆಯ್ಕೆ ಮಾಡಿ
Season/ಋತು :- ” Kharif / ಮುಂಗಾರು” ಎಂದು ಆಯ್ಕೆ ಮಾಡಿ
Calamity Type/ವಿಪತ್ತಿನ ವಿಧ :- Drought / ಬರ ಎಂದು ಆಯ್ಕೆ ಮಾಡಿ
3) Get data ಮೇಲೆ ಕ್ಲಿಕ್ ಮಾಡಿ.
4) Aadhaar Number/ಆಧಾರ್ ಸಂಖ್ಯೆ
Farmer ID/ ಫುಲ್ ಐ ಡಿ
Mobile Number/ ಫೋನ್ ನಂಬರ್
Survey Number/ಸರ್ವೆ ನಂಬರ್
ಇನ್ನಾಕರಲ್ಲಿ ಒಂದನ್ನು ಆಯ್ಕೆ ಮಾಡಿ ನಿಮ್ಮ ಖಾತೆಗೆ ಹಣ ಜಮವಾಗಿದ್ಯಲ್ಲ ತಿಳಿದುಕೊಳ್ಳಿ.
ರಾಜ್ಯದಲ್ಲಿ ಕಳೆದ ಬಾರಿ ಮುಂಗಾರು ಹಾಗೂ ಹಿಂಗಾರು ಸಮಯದಲ್ಲಿ ಮಾನ್ಸೂನ್ ಮಳೆ ಕೈಕೊಟ್ಟಿದ್ದರಿಂದಾಗಿ ತೀವ್ರ ಬರಗಾಲ ಉಂಟಾಗಿದ್ದು 200 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲ ಘೋಷಿಸಲಾಗಿತ್ತು.
ಅಲ್ಲದೆ ತಾಲೂಕುಗಳ ರೈತರಿಗೆ ರಾಜ್ಯ ಸರ್ಕಾರದ ವತಿಯಿಂದ ಮೊದಲ ಕಂತಿನ ಬರ ಪರಿಹಾರವಾಗಿ(Drought Relief Fund) ಸಾವಿರ ರೂಪಾಯಿಗಳನ್ನು ಕೂಡ ರೈತರ ಖಾತೆಗೆ ಜಮೆ ಮಾಡಲಾಗಿತ್ತು ಹಾಗೂ ಹೆಚ್ಚಿನ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿತ್ತು.
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಜಮವಾಗುವುದಿಲ್ಲ. ಕೂಡಲೇ ನಿಮ್ಮ ಹತ್ತಿರದ ಬ್ಯಾಂಕನ್ನು ಭೇಟಿ ನೀಡಿ ಆಧಾರ್ ಲಿಂಕ್ ಆಗಿದೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆಧಾರ್ ಲಿಂಕ್ ಆಗಿದೆ ಇಲ್ವೋ ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://tathya.uidai.gov.in/access/login?role=resident
2) ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ
3) ಕೊಟ್ಟಿರುವಂಥ ಕ್ಯಾಪ್ಚರ್ ಎಂಟ್ರಿ ಮಾಡಿ, ನಿಮ್ಮ ಆಧಾರ್ ಕಾರ್ಡ್ ಬ್ಯಾಂಕಿಗೆ ಲಿಂಕ್ ಆಗಿದೆ ಇಲ್ವಾ ಎಂಬುದನ್ನು ಚೆಕ್ ಮಾಡಿಕೊಳ್ಳಿ.
Drought Relief Link :: ಕಂದಾಯ ಇಲಾಖೆಯಿಂದ ಬರ ಪರಿಹಾರ ಜಮಾ !! ಆದರ್ ಅಥವಾ ಮೊಬೈಲ್ ನಂಬರ್ ನಮೂದಿಸಿ ಚೆಕ್ ಮಾಡಿಕೊಳ್ಳಿ!!
ಬರ ಪರಿಹಾರ ( Drought ) ಚೆಕ್ ಮಾಡಿಕೊಳ್ಳುವುದು ಹೇಗೆ?
1) ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://parihara.karnataka.gov.in/service92/
2) ವರ್ಷ :- “2023-24″ ಎಂದು ಆಯ್ಕೆ ಮಾಡಿ
Season/ಋತು :- ” Kharif / ಮುಂಗಾರು” ಎಂದು ಆಯ್ಕೆ ಮಾಡಿ
Calamity Type/ವಿಪತ್ತಿನ ವಿಧ :- Drought / ಬರ ಎಂದು ಆಯ್ಕೆ ಮಾಡಿ
3) Get data ಮೇಲೆ ಕ್ಲಿಕ್ ಮಾಡಿ.
18174 ಕೋಟಿ ಬರಪರಿಹಾರ(Drought Relief Fund)ಕ್ಕೆ ಮನವಿ!
ಹೌದು, ರಾಜ್ಯ ಸರ್ಕಾರವು ಕಳೆದ ಸಪ್ಟೆಂಬರ್ ತಿಂಗಳಲ್ಲಿ ಎನ್ ಡಿ ಆರ್ ಎಫ್ ನಿಂದ 18,174 ಕೋಟಿ ರೂಪಾಯಿಗಳ ಬರ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.
ನಂತರದಲ್ಲಿ ಕೇಂದ್ರದಿಂದ ತಂಡವು ಬಂದು ರಾಜ್ಯದಲ್ಲಿ ಸಮೀಕ್ಷೆ ನಡೆಸಿ ವರದಿ ತಯಾರಿಸಿಕೊಂಡು ಹೋಗಿತ್ತು.ಆದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಮೊತ್ತ ಬಂದಿರಲಿಲ್ಲ.
ಈ ಬಗ್ಗೆ ರಾಜ್ಯ ಸರ್ಕಾರವು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು ಕೂಡ ಬರಪರಿಹಾರ ಸಿಗದಿದ್ದರಿಂದ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಅಜಿ೯ ಹಾಕಿತ್ತು.
ಕೇಂದ್ರದಿಂದ 3454 ಕೋಟಿ ಬರಪರಿಹಾರ (Drought Relief Fund) !
ಏಪ್ರಿಲ್ 22ರಂದು ಅರ್ಜಿಯನ್ನು ವಿಚಾರಿಸಿದ ಸುಪ್ರೀಂ ಕೋರ್ಟ್ ಒಂದು ವಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಅದರಂತೆ ಏಪ್ರಿಲ್ 27 ರಂದು ಕೇಂದ್ರ ಸರ್ಕಾರವು ರಾಜ್ಯಕ್ಕೆ 3454 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ.
ಇದರೊಂದಿಗೆ ತಮಿಳುನಾಡಿಗೆ ನೆರ ಪರಿಹಾರವಾಗಿ 275 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಇದು ರಾಜ್ಯದ ರೈತರಿಗೆ ಬರ ಪರಿಹಾರ ತಲುಪಿಸಲು ಸುಪ್ರೀಂಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರಕ್ಕೆ ಸಿಕ್ಕ ಜಯವಾಗಿದೆ.
ಸುಪ್ರೀಂ ಮಧ್ಯಸ್ಥಿಕೆಯಿಂದ ರಾಜ್ಯಕ್ಕೆ ಜಯ!
ರಾಜ್ಯ ಸರ್ಕಾರವು ಹಲವು ಬಾರಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು ಕೂಡ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ ಅಲ್ಲದೆ
ರಾಜ್ಯ ಸರ್ಕಾರವು ದಿಲ್ಲಿಯಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನೆಯನ್ನು ಕೂಡ ಮಾಡಿತ್ತು.
ಆದರೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ ಬರಗಾಲದ ವರದಿ ಸಲ್ಲಿಸುವುದು ವಿಳಂಬವಾಗಿರುವುದೇ ಇದಕ್ಕೆಲ್ಲ ಕಾರಣವಾಗಿದ್ದು,
ಇಲ್ಲವಾದಲ್ಲಿ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಹುಬೇಗ ಸಿಗುತ್ತಿತ್ತು ಎಂದಿದ್ದಾರೆ.
ಕೇಂದ್ರ ಸಕಾ೯ರಕ್ಕೆ ದನ್ಯವಾದ ತಿಳಿಸಿದ ಬೊಮ್ಮಾಯಿ!
ಇನ್ನು ಕೇಂದ್ರದಿಂದ ಬರ ಪರಿಹಾರ ಬಿಡುಗಡೆಯಾಗಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು,
ರಾಜ್ಯಕ್ಕೆ3454 ಕೋಟಿ ರೂಪಾಯಿಗಳ ಬರ ಪರಿಹಾರ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜದ ರೈತರಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ನಿಂತಿದ್ದು,
ಇದು ಪ್ರಧಾನಿಗಳಿಗೆ ರೈತರ ಮೇಲೆ ಇರುವ ಕಳಕಳಿಯನ್ನು ತೋರಿಸುತ್ತದೆ. ರಾಜ್ಯ ಸರ್ಕಾರವು ಕೇಂದ್ರದ ವಿರುದ್ಧ ಅಪಪ್ರಚಾರ ಮಾಡುವುದನ್ನು ಬಿಟ್ಟು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು.
ವರದಿಯನ್ನು ಬೇಗ ಕಳಿಸಿದ್ದರೆ ರಾಜ್ಯದ ರೈತರಿಗೆ ಆದಷ್ಟು ಬೇಗ ಪರಿಹಾರ ಸಿಗುತ್ತಿತ್ತು ಆದರೂ ಕೂಡ ಈ ಸಂಕಷ್ಟದ ಕಾಲದಲ್ಲಿ ನರೇಂದ್ರ ಮೋದಿ ಅವರು ರೈತರ ಕೈ ಹಿಡಿದಿರುವುದು
ರಾಜ್ಯದ ರೈತರಿಗೆ ಬಲಬಂದಂತಾಗಿದೆ ಎಂದು ಹೇಳಿದ್ದುಕೇಂದ್ರ ಸರ್ಕಾರಕ್ಕೆ ರಾಜ್ಯದ ರೈತರ ಪರವಾಗಿ ಧನ್ಯವಾದಗಳು ತಿಳಿಸಿದ್ದಾರೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ