Central ID :: ಸೆಂಟ್ರಲ್ ರೈತ ಐಡಿ ಹೊಂದಿರುವ ಫಲಾನುಭವಿಗಳ ಪಟ್ಟಿ ಬಿಡುಗಡೆ!!!ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಇಲ್ಲವೇ?
ಸೆಂಟ್ರಲ್ ರೈತ ಐಡಿ ಹೊಂದಿರುವ ಫಲಾನುಭವಿಗಳ ಪಟ್ಟಿ ಬಿಡುಗಡೆ :: ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಇಲ್ಲವೇ?ಎಂದು ತಿಳಿದುಕೊಳ್ಳುವುದು ತುಂಬಾ ಸರಳ!!!
ಅಲ್ಲದೆ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿದ್ದರೆ “ರೈತ ಐಡಿ” ಮಾಡಿಸಿಕೊಳ್ಳುವುದು ಕೂಡ ತುಂಬಾ ಸುಲಭ!!!!
Farmer ID is a unique identification number provided to farmers registered under the Pradhan Mantri Kisan Samman Nidhi scheme.
It is linked with the farmer’s Aadhaar, bank account, and land records.
This ID helps the government identify genuine and eligible farmers accurately. It ensures timely and direct transfer of financial assistance to farmers’ bank accounts.
The system helps prevent duplicate and fake farmer registrations.now government release the beniciaries list of farme id.
Farmer ID ಎನ್ನುವುದು ರೈತರಿಗೆ ನೀಡಲಾಗುವ “ವಿಶಿಷ್ಟ ಗುರುತು ಸಂಖ್ಯೆ” ಆಗಿದೆ. ಈ ಐಡಿ ಮೂಲಕ ಭಾರತ ಸರ್ಕಾರವು ಅರ್ಹ ರೈತರನ್ನು ಸರಿಯಾಗಿ ಗುರುತಿಸಿ,
ಆರ್ಥಿಕ ಸಹಾಯವು ನೇರವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡುತ್ತದೆ. ಇದರಿಂದ ನಕಲಿ ಅಥವಾ ಅನರ್ಹ ರೈತರ ನೋಂದಣಿಯನ್ನು ತಡೆಯಲು ಸಹಾಯವಾಗುತ್ತದೆ.
ಇತ್ತೀಚೆಗೆ PM-KISAN ಯೋಜನೆಯಲ್ಲಿ ಹೊಸ ಅಪ್ಡೇಟ್ ಜಾರಿಗೆ ಬಂದಿದ್ದು, “ಒಂದು ರಾಷ್ಟ್ರ – ಒಂದು ರೈತ ಐಡಿ” ಯೋಜನೆಯ ಅಡಿಯಲ್ಲಿ ರೈತ ಐಡಿ (Farmer ID) ಅನ್ನು PM-KISAN ಯೋಜನೆಗೆ ಕಡ್ಡಾಯವಾಗಿ ಪರಿಚಯಿಸಲಾಗುತ್ತಿದೆ.
“ರೈತ ಐಡಿ” ಎಂದರೇನು?
What is farmer id?
* ರೈತರಿಗೆ ನೀಡಲಾಗುವ ಒಂದು “ವೈಯಕ್ತಿಕ ಮತ್ತು ವಿಶಿಷ್ಟ ಗುರುತು ಸಂಖ್ಯೆ”ಯೇ ರೈತ ಐಡಿ. ಈ ಐಡಿ ಮೂಲಕ ಸರ್ಕಾರವು:
• “ಅರ್ಹ ರೈತ“ರನ್ನು ಸುಲಭವಾಗಿ ಗುರುತಿಸಬಹುದು.
* “ಆರ್ಥಿಕ ನೆರವು‘ ಸರಿಯಾದ ಸಮಯದಲ್ಲಿತಲುಪುವಂತೆ ಮಾಡಬಹುದು.
• “ಅನರ್ಹ ವ್ಯಕ್ತಿ“ಗಳು ಯೋಜನೆಯ ಲಾಭ ಪಡೆಯುವುದನ್ನು ತಡೆಯಬಹುದು.
* ಒಂದು ಕುಟುಂಬದಿಂದ “ಒಬ್ಬ ಸದಸ್ಯ“ರಿಗೆ “ಮಾತ್ರ ಲಾಭ” ಸಿಗುವಂತೆ ಮಾಡಬಹುದು.
• “ನಕಲಿ ಖಾತೆ” ಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.
ಹೀಗಾಗಿ ಪ್ರತಿಯೊಬ್ಬ ರೈತರು “ರೈತ ಐಡಿ” ಹೊಂದಿರುವುದು ಕಡ್ಡಾಯವಾಗಿದೆ.
ರೈತ ಐಡಿ ಎಂದರೇನು?
What is Farmer ID?
ರೈತ ಐಡಿ ಎನ್ನುವುದು ರೈತರಿಗೆ ನೀಡಲಾಗುವ ಒಂದು “ವಿಶಿಷ್ಟ ಗುರುತು ಸಂಖ್ಯೆ” ಆಗಿದ್ದು, ಇದು “ರೈತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಭೂ ದಾಖಲೆ”ಗಳಿಗೆ ಲಿಂಕ್ ಆಗಿರುತ್ತದೆ.
ಇದರಿಂದ ಸರ್ಕಾರಕ್ಕೆ ಅನರ್ಹ ಫಲಾನುಭವಿಗಳನ್ನು ಗುರುತಿಸುವುದು ಸುಲಭವಾಗುತ್ತದೆ.
ರೈತ ಐಡಿ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?
How to check Farmer ID list?

Click On Login
Step 1:
ಮೊದಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಹೋಗಿ:
https://fruits.karnataka.gov.in/
Click above link to get Farmer ID

Click On District Wise FarmerID
Step 2: ಜಾಲತಾಣದ ಮುಖಪುಟದಲ್ಲಿ ಲಾಗಿನ್ ಎನ್ನುವ ಆಯ್ಕೆಯನ್ನು ಆಯ್ದುಕೊಳ್ಳಬೇಕು.

Farmers Without PMK ID
Step 3: ನಂತರ ರೈತರು ಇಲ್ಲಿ ನೇರವಾಗಿ ಲಾಗಿನ್ ಆಗಲು ಸಾಧ್ಯವಿಲ್ಲ ಬದಲಾಗಿ ಗ್ರಾಮವನ್ ಕರ್ನಾಟಕ ವನ್ ಅಥವಾ ಕೃಷಿ ಇಲಾಖೆಗಳಿಗೆ ಹೋಗಿ ಲಾಗಿನ್ ಮಾಡಿಸಬೇಕು.

Enter Your District, Taluk, Hobli
Step 4: ಮುಂದಿನ ಹಂತದಲ್ಲಿ ಲಾಗಿನ್ ಆದ ನಂತರ ಡಿಸ್ಟಿಕ್ ವೈಸ್ ಸೆಂಟ್ರಲ್ ಐಡಿ ಪಟ್ಟಿ ಎನ್ನುವ ಆಯ್ಕೆಯನ್ನು ಆಯ್ದುಕೊಳ್ಳಬೇಕು.

Farmers PMK ID
Step 5: ಈ ಪಟ್ಟಿಯಲ್ಲಿ ಫ್ರೂಟ್ ಐ ಡಿ ಹೊಂದಿರುವ ರೈತರ ಹೆಸರು ಸೆಂಟ್ರಲ್ ಐಡಿಯನ್ನು ಹೊಂದಿರುವ ರೈತರ ಹೆಸರು ಹಾಗೂ ಎರಡು ಐಡಿಗಳನ್ನು ಹೊಂದದೆ ಇರುವ ರೈತರ ಹೆಸರುಗಳನ್ನು ಪಟ್ಟಿ ಮಾಡಿರಲಾಗುತ್ತದೆ.

Search For District
Step 6: ಈ ಪಟ್ಟಿಯ ಜೊತೆಗೆ ವಿಲೇಜ್ ವೈಸ್ ರೈತರ ಪಟ್ಟಿಯನ್ನು ಬೇಕಾದರೂ ನೋಡಬಹುದು.
* ಮೊದಲಿಗೆ ವಿಲೇಜ್ ವಾಯ್ಸ್ ಇಂದು ಸೆಲೆಕ್ಟ್ ಮಾಡಿದಾಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ, ಇಲ್ಲಿ ರೈತರ ಊರು ಹೋಬಳಿ,ತಾಲೂಕು,ಜಿಲ್ಲೆಯನ್ನು ಕೇಳುತ್ತದೆ.
• ಈ ಮಾಹಿತಿಯನ್ನು ಸರಿಯಾಗಿ ನಮೂದಿಸಿ ವಿಲೇಜ್ ವೈಸ್ ರೈತರ ಪಟ್ಟಿಯನ್ನು ಪಡೆದುಕೊಳ್ಳಬಹುದು ಇಲ್ಲಿಯೂ ಐಡಿಯಾಗಿರುವ ರೈತರು ಹಾಗೂ ಐಡಿ ಬರದೇ ಇರುವ ರೈತರ ಹೆಸರುಗಳನ್ನು ನಮೂದಿಸಲಾಗಿರುತ್ತದೆ.
* ಇಲ್ಲಿ ರೈತರು ತುಂಬಾ ಸುಲಭವಾಗಿ ಆ ಪಟ್ಟಿಯಲ್ಲಿ ತಮ್ಮ ಹೆಸರಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬಹುದು.
ಇದೀಗ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ “FRUIT (Farmer Registration & Unified Beneficiary Information System) ಐಡಿ” ಮಾದರಿಯಂತೆ, ಈ “ರೈತ ಐಡಿ ವ್ಯವಸ್ಥೆಯೂ ನಕಲಿ ಫಲಾನುಭವಿ”ಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ.
FRUIT ಐಡಿ ಬಗ್ಗೆ ಈಗಿರುವ ಪ್ರಸ್ತುತ ಇರುವ ಅಪ್ಡೇಟ್ ಮಾಹಿತಿ ಯಾವುದು?
Which update is there regarding FRUIT ID?
ಹೀಗಿರುವ ಪ್ರಸ್ತುತ ಮಾಹಿತಿ ಎಂದರೆ ಹೊಂದಿರುವ ರೈತರು “ಕಡ್ಡಾಯವಾಗಿ e-KYcಯನ್ನು ಮಾಡಿಸಲೇಬೇಕು”.
e-KYcಯನ್ನು ಎಲ್ಲಿ ಮಾಡಿಸಬೇಕು?
where to do e-KYC?
* ಹತ್ತಿರದ “ಗ್ರಾಮ ವನ್ ಕರ್ನಾಟಕ ವನ್ ಕೃಷಿ ಇಲಾಖೆ,ರೇಷ್ಮೆ ಇಲಾಖೆ, ಕಂದಾಯ ಮತ್ತು ತೋಟಗಾರಿಕಾ ಇಲಾಖೆ”ಗಳಲ್ಲಿ ತಮ್ಮ
“ಆಧಾರ್ ನಂಬರ್ ಮತ್ತು ಆಧಾರ್ ನೊಂದಿಗೆ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್, ಪಹಣಿ ಹಾಗೂ ಭೂ ದಾಖಲೆ”ಗಳನ್ನು ನೀಡಿ ಈ e-KYcಯನ್ನು ಮಾಡಿಸಬೇಕು.
e-KYcಯನ್ನು ಮಾಡಿಸಲು ಕೊನೆಯ ದಿನಾಂಕ ಯಾವುದು?
* e-KYcಯನ್ನು ಮಾಡಿಸಲು ಕೊನೆಯ ದಿನಾಂಕ ಎಂದರೆ “ಫೆಬ್ರವರಿ 26 2026”.
e-KYCಯನ್ನು ಮಾಡಿಸುವುದರಿಂದ ಆಗುವ ಪ್ರಯೋಜನ ಏನು?
What is the benifit from doing FRUITS e-KYC?
* e-KYCಯನ್ನು ಮಾಡಿಸುವುದರಿಂದ ರೈತರು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಾದ “ಬರಪರಿಹಾರ,ಬೆಳೆ ವಿಮೆ ಹಾಗೂ PM-KISAN” ಯೋಜನೆಯಡಿ ಸೌಲಭ್ಯಗಳನ್ನು ಪಡೆಯಬಹುದು.
•ಈ e-KYC ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರಿಗೆ “ಸೆಂಟ್ರಲ್ ಫಾರ್ಮರ್ ಐ ಡಿ” ಒಂದನ್ನು ಸೃಜಿಸಲಾಗುತ್ತದೆ.
* ಈ ರೀತಿಯಾಗಿ “ಸೃಷ್ಟಿಸಲಾದ ಕೇಂದ್ರ ನೊಂದಾಯಿತ ರೈತ ಸಂಖ್ಯೆಯನ್ನು ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳ್ಳುವ ಎಲ್ಲ ಯೋಜನೆಗಳಿಗೂ ಅನ್ವಯ ಮಾಡಲಾಗುತ್ತದೆ”.
ಕರ್ನಾಟಕದಲ್ಲಿ FRUIT ಐಡಿ ಮೂಲಕ ಈಗಾಗಲೇ ಸುಮಾರು “11 ಲಕ್ಷಕ್ಕೂ ಹೆಚ್ಚು ನಕಲಿ ಖಾತೆ”ಗಳನ್ನು ಗುರುತಿಸಿ ಯೋಜನೆಯಿಂದ ಕೈಬಿಡಲಾಗಿದೆ.
ಇದೇ “ಯಶಸ್ವಿ ಮಾದರಿ”ಯನ್ನು ಈಗ ದೇಶದಾದ್ಯಂತ ವಿಸ್ತರಿಸಲಾಗುತ್ತಿದೆ. ಹೀಗಾಗಿ ಎಲ್ಲಾ ರೈತರು ರೈತ ಐಡಿ ಹೊಂದಿರುವುದು ಕಡ್ಡಾಯ.
FRUIT ಐಡಿ ಹೊಂದಿರುವ ರೈತರು ಹೊಸದಾಗಿ ಮಾಡಿಸುವ ಅಗತ್ಯವಿಲ್ಲ, ಆದರೆ ಅದು ಅಪ್ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.
ಒಂದು ವೇಳೆ FRUIT ಐಡಿ ಇಲ್ಲದ ರೈತರು ಕೇಂದ್ರ ಸರ್ಕಾರದಿಂದ ಬರುವ PM-KISAN ಹಣ ವಿಳಂಬವಾಗಬಾರದು ಎಂದು ಬಯಸಿದರೆ, ತಡಮಾಡದೆ ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ತಮ್ಮ ರೈತ ಐಡಿಯನ್ನು ತಕ್ಷಣ ಪಡೆಯಬಹುದು.
ಕೇಂದ್ರ Farmer IDಯ ಉಪಯೋಗಗಳು:-
Benifit from Central farmer id:-
* ಅರ್ಹ ರೈತರನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತದೆ.
• ಆರ್ಥಿಕ ಸಹಾಯವನ್ನು “ನೇರವಾಗಿ ಮತ್ತು ಸಮಯಕ್ಕೆ ಸರಿಯಾಗಿ ಜಮಾ” ಮಾಡುತ್ತದೆ.
* “ಡುಪ್ಲಿಕೇಟ್ ಮತ್ತು ನಕಲಿ ಫಲಾನುಭವಿ”ಗಳನ್ನು ತಡೆಯುತ್ತದೆ.
•ಡಿಜಿಟಲ್ ವ್ಯವಸ್ಥೆಯಿಂದ “ಕಂತುಗಳ ಮಾಹಿತಿ ಪರಿಶೀಲನೆ ಸುಲಭ”.
* ಯೋಜನೆಯಲ್ಲಿ “ಪಾರದರ್ಶಕತೆ ಮತ್ತು ನಂಬಿಕೆ”ಯನ್ನು ಹೆಚ್ಚಿಸುತ್ತದೆ.
ಒಟ್ಟಾರೆ, “Farmer ID ರೈತರ ಸಬಲೀಕರಣ”ದ ದಿಕ್ಕಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
The “Central farmer ID” is a “landmark initiative” aimed at identifieng “fake account holders” to get central sector scheme benifit across India. It ensures transperency and “accurate information regarding farmers and thier land detais”.
This initiative helps farmers can get accurate information regarding schemes and the financial assistance through the schemes.
The introduction of the Farmer ID has further strengthened the PM-KISAN system. Farmer ID acts as a “unique identity” for every registered farmer.
It is linked with Aadhaar, land records, and bank accounts. Also Farmer ID supports the concept of “One Nation, One Farmer ID.”
Overall Farmer ID improves “efficiency in implementing agricultural welfare schemes”.
PM-KISAN and Farmer ID together play a crucial role in farmer empowerment and sustainable rural development.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply