"Agriculture is our CULTURE"

Rain flood::15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ!! ಬೆಳೆ ಹಾನಿ ಪರಿಹಾರ ಚೆಕ್ ಮಾಡುವುದು ಹೇಗೆ?

ಮಾನ್ಸೂನ್ ವಾಯುಗುಣ ಹೊಂದಿರುವ ಭಾರತದ ಕೃಷಿಯು ಮಾನ್ಸೂನ್ ಜೊತೆಗಿನ ಜೂಜಾಟವಾಗಿದ್ದು ಯಾವಾಗ ಮಳೆ ಅತಿರೇಖವಾಗುತ್ತದೆಯೋ ಯಾವಾಗ ಕೈ ಕೊಡುತ್ತದೆಯೋ ಹೇಳಲಾಗುವುದಿಲ್ಲ.

ಕಳೆದ ವರ್ಷ ಶತಮಾನಗಳ ಬರಗಾಲವನ್ನು ನೋಡಿದ್ದ ನಮ್ಮ ರಾಜ್ಯದ ರೈತರಿಗೆ ಈ ಬಾರಿ ನೆರೆಹಾವಳಿ(Rain flood) ಬಂದು ಬೆಳೆಯನ್ನು ಹಾನಿ ಮಾಡಿದೆ.

ಹೌದು ಈ ಬಾರಿ ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು ಕಳೆದ ಬಾರಿ ಅನುಭವಿಸಿದ್ದ ಬರಗಾಲದ ಬರೆಯನ್ನು ಈ ಬಾರಿ ಮಳೆರಾಯ ತೊಡೆದು ಹಾಕಿ ಚೆನ್ನಾಗಿ ಮಳೆ ಸುರಿಸಿದ್ದಾನೆ.

ಆದರೆ ಅಕ್ಟೋಬರ್ ತಿಂಗಳಲ್ಲಿ ಮಳೆರಾಯನ ಕೃಪೆಯು ಅತಿರೇಕವಾಗಿದ್ದು, ವಾಡಿಕೆಗಿಂತ ಹೆಚ್ಚಾಗಿ ಮಳೆಯಾದ ಕಾರಣ ರಾಜ್ಯದ ಹಲವೆಡೆ ನೆರೆಹಾವಳಿ ಸಂಭವಿಸಿದೆ.

ವಾಡಿಕೆಗಿಂತ ಹೆಚ್ಚಿನ ಮಳೆ(Rain flood) ! 

ವಾಡಿಕೆಯಂತೆ ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ಸರಾಸರಿ 10.4 ಸೆಂಟಿಮೀಟರ್ ಮಳೆ ಆಗುತ್ತದೆ .

ಆದರೆ ಈ ವರ್ಷ ಹೆಚ್ಚಿನ ಮಳೆಯಾಗಿದ್ದು ಸರಾಸರಿ 16.6 ಸೆಂಟಿಮೀಟರ್ ಮಳೆಯಾಗಿರುವ ಕಾರಣ ಹೊಲಗಳಲ್ಲಿ ನೀರು ನಿಂತು ಬಿತ್ತನೆ ಮಾಡಿದ ಬೆಳೆಗಳೆಲ್ಲ ನೆರೆ ಬಂದು ಹಾನಿಗೊಳಗಾಗಿವೆ.

ಸಮೀಕ್ಷೆ ಕಾಯ೯ ಆರಂಭ! 

ರಾಜ್ಯದಲ್ಲಿ ಅಂದಾಜು ಒಟ್ಟು 56,993 ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹಾನಿಗೊಳಗಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ರೈತರ

ಈ ಸಂಕಷ್ಟವು ಸರ್ಕಾರದ ಗಮನಕ್ಕೆ ಬಂದಿದ್ದು, ರಾಜ್ಯ ಸಕಾ೯ರವು ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಕಡೆಯಿಂದ ಜಂಟಿ ಸಮೀಕ್ಷೆ ನಡೆಸುತ್ತಿದೆ.

3-4 ದಿನಗಳಲ್ಲಿ ಈ ಜಂಟಿ ಸಮೀಕ್ಷೆ ಕಾಯ೯ ಪೂಣ೯ಗೊಳ್ಳಲಿದ್ದು, ವರದಿ ರಾಜ್ಯ ಸಕಾ೯ರದ ಕೈಗೆ ತಲುಪುತ್ತದೆ.

15 ದಿನಗಳಲ್ಲಿ ಬೆಳೆ ಹಾನಿ ಪರಿಹಾರ! 

ಆದಾದ ನಂತರ ರಾಜ್ಯ ಸರ್ಕಾರದ ವತಿಯಿಂದ 15 ದಿನಗಳಲ್ಲಿ ಶೀಘ್ರವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವುದಾಗಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪ್ರತಿ ವಷ೯ ಹೀಗೆ ಪ್ರಕೃತಿ ವಿಕೋಪಗಳಿಂದ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದು, ಸಕಾ೯ರವು ರೈತರ ಕಷ್ಟಕ್ಕೆ ಸ್ಪಂದಿಸಿ ರೈತರಿಗೆ ನೆರವಾಗಬೇಕಿದೆ.

ಬರ ಪರಿಹಾರ ( Drought ) ಚೆಕ್ ಮಾಡಿಕೊಳ್ಳುವುದು ಹೇಗೆ?

1)  ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ

https://parihara.karnataka.gov.in/service92/

2) ವರ್ಷ :-  “2023-24″ ಎಂದು ಆಯ್ಕೆ ಮಾಡಿ

Season/ಋತು :- ” Kharif / ಮುಂಗಾರು” ಎಂದು ಆಯ್ಕೆ ಮಾಡಿ

Calamity Type/ವಿಪತ್ತಿನ ವಿಧ :- Drought / ಬರ ಎಂದು ಆಯ್ಕೆ ಮಾಡಿ

3) Get data ಮೇಲೆ ಕ್ಲಿಕ್ ಮಾಡಿ.

Pic 1: Sample data of drought relief fund(ಬರ ಪರಿಹಾರ )

4) Aadhaar Number/ಆಧಾರ್ ಸಂಖ್ಯೆ

Farmer ID/ ಫುಲ್ ಐ ಡಿ

Mobile Number/ ಫೋನ್ ನಂಬರ್

Survey Number/ಸರ್ವೆ ನಂಬರ್

ಇನ್ನಾಕರಲ್ಲಿ ಒಂದನ್ನು ಆಯ್ಕೆ ಮಾಡಿ ನಿಮ್ಮ ಖಾತೆಗೆ ಹಣ ಜಮವಾಗಿದ್ಯಲ್ಲ ತಿಳಿದುಕೊಳ್ಳಿ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"