Root Development :: ಗಿಡವು ಪೌಷ್ಟಿಕಾಂಶ ಹೀರಿಕೊಳ್ಳುವಂತೆ ಮಾಡುವುದು ಹೇಗೆ? ಹ್ಯೂಮಿಕ್ ಆಸಿಡ್!!!
ಪೊಟ್ಯಾಶಿಯಂ ಹ್ಯೂಮೇಟ್ (ಹ್ಯೂಮಿಕ್ ಆಮ್ಲ) ಅನ್ನು ಉಪಯೋಗಿಸುವ ಮತ್ತು ಅನುಕೂಲಗಳ ಕುರಿತು ::
Advantage of using Potassium humate humic acid and the ಮೆಥಡೋಲಜಿ of using it::
ಪೊಟ್ಯಾಶಿಯಂ ಹ್ಯೂಮೇಟ್ ಎಂದರೇನು?
What is Potassium humate humic ?
ಇದು ಲಿಗ್ನೈಟ್ ಅದಿರಿನಿಂದ (ore) ಸಂಸ್ಕರಿಸಲ್ಪಟ್ಟ ಒಂದು ನೈಸರ್ಗಿಕ ಸಾವಯವ ವಸ್ತುವಾಗಿದೆ, ಮತ್ತು ಇದು ಕಪ್ಪು ಬಣ್ಣದಲ್ಲಿ ಲಭ್ಯ.
ಇದು ಮಾರುಕಟ್ಟೆಯಲ್ಲಿ ಬೇರೆ ಬೇರೆ ಶೇಕಡಾವಾರು ಪ್ರಮಾಣಗಳಲ್ಲಿ (varied percentage), ಲಭ್ಯವಿದ್ದರೂ ಸಹ, 98% ಶುದ್ಧತೆಯಿರುವ ಹ್ಯೂಮೇಟ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತದೆ.
ಕೃಷಿಯಲ್ಲಿನ ಅನುಕೂಲಗಳು:
ಹವಾಮಾನದ ಏರುಪೇರು ಅಥವಾ ರೋಗಗಳ ಬಾಧೆಯಿಂದ ಸಸ್ಯಗಳನ್ನು ಆಂಟಿ ಸ್ಟ್ರೆಸ್ (Anti-stress) ಇಂದ ರಕ್ಷಿಸುತ್ತದೆ
ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಸಸ್ಯಗಳು ಸರಾಗವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಇದು ಜೈವಿಕ ಉತ್ತೇಜಕವಾಗಿ ಕಾರ್ಯನಿರ್ವಹಿಸಿ, ಫಸಲನ್ನು 5% ರಿಂದ 20% ವರೆಗೆ ಹೆಚ್ಚಿಸುತ್ತದೆ.
ಸಸ್ಯದ ಬಿಳಿ ಬೇರುಗಳ ಸಂಖ್ಯೆಯನ್ನು ವೃದ್ಧಿಸಿ, ಗಿಡದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ.
ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ದಪ್ಪವಾಗಿಸಿ, ಅವುಗಳ ಶೆಲ್ಫ್ ಲೈಫ್ (ಉಪಯುಕ್ತ ಅವಧಿ) ಹೆಚ್ಚಿಸುತ್ತದೆ.
ಬಳಸುವ ವಿಧಾನ:
How to use:
ಸಿಂಪಡಣೆ (Spray): 200 ಲೀಟರ್ ನೀರಿಗೆ ಅರ್ಧ ಕೆಜಿ (500g) ಪೊಟ್ಯಾಶಿಯಂ ಹ್ಯೂಮೇಟ್ ಅನ್ನು ಸೇರಿಸಿ ಸಿಂಪಡಿಸಬಹುದು.
ಒಂದು ಎಕರೆಗೆ 1 ಕೆಜಿ ಹ್ಯೂಮೇಟ್ ಅನ್ನು ಡ್ರಿಪ್ ನೀರಾವರಿ ಮೂಲಕ ನೀಡಬಹುದು.
ಪ್ರತಿ 20 ದಿನಗಳಿಗೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪಯೋಗಿಸಬಹುದು.
ಇದನ್ನು ಯಾವುದೇ ಶಿಲೀಂಧ್ರನಾಶಕ ಅಥವಾ ಕೀಟನಾಶಕಗಳೊಂದಿಗೆ ಬೆರೆಸಿ ಬಳಸಬಹುದು.
ವಿಶೇಷ ಕಾಂಬಿನೇಷನ್ (ಹೆಚ್ಚಿನ ಇಳುವರಿಗಾಗಿ)
ಹಣ್ಣು ಬಿಡುವ ಸಮಯದಲ್ಲಿ 1 ಕೆಜಿ ಪೊಟ್ಯಾಶಿಯಂ ಹ್ಯೂಮೇಟ್, 1 ಕೆಜಿ ಕಪ್ಪು ಬೆಲ್ಲ ಮತ್ತು 10 ಗ್ರಾಂ ಜಿಬ್ಬರ್ಲಿಕ್ ಆಸಿಡ್ (GA3) ಮಿಶ್ರಣ ಮಾಡಿ ಡ್ರಿಪ್ ಮೂಲಕ ನೀಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಅಸಲಿ ಮತ್ತು ನಕಲಿ ಹೇಗೆ ಕಂಡುಹಿಡಿಯುವುದು?
ಮಾರುಕಟ್ಟೆಯಲ್ಲಿ ಇಟ್ಟಿಗೆ ಪುಡಿ ಅಥವಾ ಕಾರ್ಖಾನೆ ತ್ಯಾಜ್ಯವನ್ನು ಬೆರೆಸಿದ ನಕಲಿ ಹ್ಯೂಮೇಟ್ ಸಿಗುವ ಸಾಧ್ಯತೆ ಇರುತ್ತದೆ.
ಪರೀಕ್ಷೆಸುವ ರೀತಿ ಒಂದು ಲೋಟ ನೀರಿಗೆ ಒಂದು ಹನಿ ಅಥವಾ ಸ್ವಲ್ಪ ಪುಡಿಯನ್ನು ಹಾಕಿದಾಗ, ಅದು ನಿಧಾನವಾಗಿ ನೀರಿನಲ್ಲಿ ಕರಗಿ ತಳಕ್ಕೆ ಇಳಿಯಬೇಕು. ಒಂದು ವೇಳೆ ಕರಗದೆ ತಳಕ್ಕೆ ಕುಳಿತರೆ ಅದು ನಕಲಿ ಎಂದು ತಿಳಿದುಕೊಳ್ಳಬಹುದು.
ರೈತರಿಗೆ ಅನುಕೂಲವಾಗುವ ದರದಲ್ಲಿ, ಅಂದಾಜು ಪ್ರತಿ ಕೆ.ಜಿಗೆ 250 ರೂಪಾಯಿಗಳಂತೆ ದೊರೆಯುತ್ತದೆ. ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ರೈತರಿಗೆ ಇದು ಸುಲಭವಾಗಿ ಸಿಗುತ್ತದೆ.
ರಾಸಾಯನಿಕ ಗೊಬ್ಬರಗಳಿಂದ ಮಣ್ಣಿನ ಗುಣಮಟ್ಟ ಕುಂದುತ್ತದೆ. ಪೊಟ್ಯಾಶಿಯಂ ಹುಮೇಟ್ ನೈಸರ್ಗಿಕವಾಗಿದ್ದು, ಮಣ್ಣಿನ ಗುಣಗಳನ್ನು ಹೆಚ್ಚಿಸುತ್ತದೆ, ಪೋಷಕಾಂಶಗಳ ನಷ್ಟ ತಡೆಯುತ್ತದೆ. ಇದು ವಿಷಕಾರಿ ವಸ್ತು ಕಡಿಮೆ ಮಾಡಿ ಮಣ್ಣಿನ ಜೀವಾಣುಗಳನ್ನು ರಕ್ಷಿಸುತ್ತದೆ, ಸಸ್ಯಗಳ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕೀಟನಾಶಕ ಬಳಕೆ ಕಡಿಮೆ ಮಾಡುತ್ತದೆ.
As potassium humid humate acid is a naturally occurring substances has many advantages in detoxifying the soil,Improving the soil structure, imparting the organic minerals available for the plants growth and enhancing the yield by providing sustainable farming.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply