New Application for PM kisan :: ಪಿ.ಎಂ ಕಿಸಾನ್ ಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ!! ಯಾರ್ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಿ 2000 ಪಡೆಯಿರಿ!!!
ಇತ್ತೀಚೆಗೆ ಹೊಲ ಖರೀದಿಸಿರುವವರು ಅಥವಾ ಕುಟುಂಬದಲ್ಲಿ ಜಮೀನು ವಿಂಗಡಣೆಯಾಗಿ ಹೊಸ ಪಹಣಿ ಮಾಡಿಸಿಕೊಂಡಿರುವವರು ಈಗ ಹೊಸದಾಗಿ ಅಜಿ೯ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ನೀವು ಮನೆಯಲ್ಲಿಯೇ ಅಜಿ೯ ಸಲ್ಲಿಸಬಹುದಾಗಿದ್ದು, ಹೇಗೆ ಅಜಿ೯ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ.
ಅಜಿ೯ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
*ರೈತನ ಆಧಾರ ಕಾಡ್೯
*ಮೊಬೈಲ್ ನಂಬರ್
*ಬ್ಯಾಂಕ್ ಪಾಸ್ ಬುಕ್
*ಜಮೀನಿನ ಪಹಣಿ
*ಎಫ್ಐಡಿ ನಂಬರ್
*ಕುಟುಂಬದವರ ಆಧಾರ ಕಾಡ್೯
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
Step 1: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅಜಿ೯ ಸಲ್ಲಿಸಲು ಈ ಕೆಳಗಿನ ಲಿಂಕ್(link) ಮೇಲೆ click ಮಾಡಿ
Step 2: ನಂತರ ಓಪನ್ ಆಗುವ ಪೇಜ್ ನಲ್ಲಿ ಫಾರ್ಮರ್ ಕಾರ್ನರ್ (Farmers column) ನಲ್ಲಿ ನ್ಯೂ ಫಾರ್ಮರ್ ರಿಜಿಸ್ಟ್ರೇಷನ್(New farmer registration) ಎಂಬ ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ
Step 3: ಈಗ ರೂರಲ್ ಫಾರ್ಮರ್ ರಿಜಿಸ್ಟ್ರೇಷನ್(Rural farmer registration) ಅಥವಾ ಅರ್ಬನ್ ಫಾರ್ಮರ್ ರಿಜಿಸ್ಟ್ರೇಷನ್ (Urban farmer registration) ಎಂಬ ಆಯ್ಕೆ ಇದ್ದು, ನೀವು ಗ್ರಾಮೀಣ ಅಥವಾ ನಗರ ಪ್ರದೇಶದವರೆಂದು ಸರಿಯಾಗಿ ಆಯ್ಕೆ ಮಾಡಿ
Step 4: ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ನಂಬರನ್ನು ಹಾಕಿ ಹಾಗೂ ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ.
Step 5: ಕೆಳಗೆ ಕೊಟ್ಟಿರುವ ಕ್ಯಾಪ್ಚ ಕೋಡನ್ನು ಹಾಕಿ ಗೆಟ್ ಓಟಿಪಿ(get otp) ಮೇಲೆ ಕ್ಲಿಕ್ ಮಾಡಿ.
Step 6: ಆಗ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬಂದಿರುತ್ತದೆ ಅದನ್ನು ಎಂಟರ್ ಮಾಡಿ ಹಾಗೂ ಅಲ್ಲಿರುವ ಕ್ಯಾಪ್ಚಾ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ
Step 7: ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬಂದಿರುತ್ತದೆ. ಅದನ್ನು ಎಂಟರ್ ಮಾಡಿ ವೆರಿಫೈ ಆಧಾರ್ ಮೇಲೆ ಕ್ಲಿಕ್ ಮಾಡಿ.
Step 8: ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ಊರು ಸೆಲೆಕ್ಟ್ ಮಾಡಿ.
Step 9: ನಿಮ್ಮ ಆಧಾರ್ ನಲ್ಲಿರುವಂತೆ ಕೆಲವೊಂದು ಮಾಹಿತಿಯು ತುಂಬಲಾಗಿರುತ್ತದೆ. ಯಾವ ಮಾಹಿತಿ ತುಂಬಿಲ್ಲವೋ ಅದನ್ನು ನೀವು ಹಾಕಿ
Step 10: ನಂತರ ಕೆಳಗೆ ಬಂದರೆ ಕೆಟಗರಿ ಫಾರ್ಮರ್ ಟೈಪ್( ಸಣ್ಣ ಅಥವಾ ಇತರ ವರ್ಗ) ಎಂದು ಇದ್ದು ನಿಮ್ಮ ಜಮೀನಿನ ಅಳತೆ ಅನುಸಾರ ಸೆಲೆಕ್ಟ್ ಮಾಡಿ 5 ಎಕರೆಗಿಂತ ಕಡಿಮೆಯಿದ್ದರೆ ಸಣ್ಣ, 5 ಎಕರೆಗಿಂತ ಹೆಚ್ಚಿದ್ದರೆ ಇತರ ಎಂದು ಹಾಕಿ
Step 11: ನಂತರ ನಿಮಗೆ ಕೃಷಿ ಇಲಾಖೆಯಿಂದ ನೀಡಲಾದ ಎಫ್ ಐ ಡಿ ನಂಬರನ್ನು ಹಾಕಿ ಮತ್ತು ರೇಷನ್ ಕಾರ್ಡ್ ನಂಬರ್ ಹಾಕಿ.
Step 12: ನಂತರ ನೀವು ಪಿ ಎಂ ಕಿಸಾನ್ ಮಾನ್ ಧನ್ ಯೋಜನೆಗೆ ಒಪ್ಪಿಗೆ ಇದ್ದಲ್ಲಿ ಎಸ್ ಎಂದು ಹಾಕಿ ಈ ಯೋಜನೆ ಏನೆಂದರೆ ರೈತರಿಗೆ 60 ವರ್ಷಗಳಾದ ಮೇಲೆ 3000 ರೂ. ಮಾಸಿಕ ಪಿಂಚಣಿ ಕೊಡುವ ಯೋಜನೆಯಾಗಿದೆ.
Step 13: ನಂತರ ನೀವು ನಿಮ್ಮ ಜಮೀನಿಗೆ ಒಬ್ಬರೇ ಮಾಲೀಕರಾಗಿದ್ದಲ್ಲಿ ಸಿಂಗಲ್ ಆರ್ ಜಾಯಿಂಟ್(single or joint) ಎಂಬ ಆಪ್ಷನ್ ನಲ್ಲಿ ವಿವರ ಸಲ್ಲಿಸಿ. ಹೆಚ್ಚಿನ ಮಾಲೀಕರಿದ್ದರೆ ಎಲ್ಲರ ವಿವರ ಹಾಕಬೇಕು.
Step 14: ನಂತರ ಆಡ್ ಲ್ಯಾಂಡ್ ಡಿಟೈಲ್ಸ್ (Add land details) ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರ ಹಾಕಿ.
Step 15: ನಿಮ್ಮ ಜಮೀನು ನಿಮ್ಮ ಹೆಸರಿಗೆ 2019 ರ ಒಳಗೆ ಆಗಿದೆಯಾ ಅಥವಾ ಇಲ್ಲವಾ ಎಂಬುದನ್ನು 2 ಆಯ್ಕೆಗಳಲ್ಲಿ ಕೇಳಿರುತ್ತಾರೆ. ಅದನ್ನು ನೋಡಿಕೊಂಡು ಒಂದನ್ನು ಆಯ್ಕೆ ಮಾಡಿ
Step 16: ಜಮೀನು ಯಾವ ವಿಧಾನದಲ್ಲಿ ನಿಮ್ಮ ಹೆಸರಿಗೆ ಆಗಿದೆ ಎಂದು ತಿಳಿಸಬೇಕು. ಅಂದರೆ ಉದಾಹರಣೆಗೆ ಗಂಡನ ಮರಣದ ನಂತರ, ಕುಟುಂಬ ಡಿವೈಡ್ ಆಗಿರುವುದಕ್ಕೆ, ಜಮೀನು ಖರೀದಿ ಹೀಗೆ ಆಯ್ಕೆಗಳಿದ್ದು, ಒಂದನ್ನು ಆಯ್ಕೆ ಮಾಡಿ
Step 17: ಎಲ್ಲವನ್ನು ಭರ್ತಿ ಮಾಡಿದ ಬಳಿಕ ಆ್ಯಡ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ
Step 18: ನಂತರ ಜಮೀನಿನ ಉತಾರ/ಪಹಣಿ ಅಪ್ಲೋಡ್ ಮಾಡಿ ಸೇವ್(save) ಆಪ್ಷನ್ ಮೇಲೆ ಕ್ಲಿಕ್ ಮಾಡಿ.
Step 19: ಈಗ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆಗಿದ್ದು ನಿಮಗೆ ಒಂದು ಐಡಿ ಜನರೇಟ್ ಆಗುತ್ತದೆ. ಅದನ್ನು ಸೇವ್ ಮಾಡಿಟ್ಟುಕೊಳ್ಳಿ.
ಈ ಐಡಿಯಿಂದ ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವಾಷಿ೯ಕವಾಗಿ 6000/- ಗಳನ್ನು 3 ಕಂತುಗಳಲ್ಲಿ ತಲಾ 2000/- ದಂತೆ ಯಾವುದೇ ಮಧ್ಯವತಿ೯ಗಳ ಹಾವಳಿಯಿಲ್ಲದಂತೆ ನೇರವಾಗಿ ರೈತರ ಖಾತೆಗೆ ಕೇಂದ್ರ ಸಕಾ೯ರ ಜಮೆ ಮಾಡುತ್ತಿದೆ.
ಇದರಿಂದ ದೇಶದ 43.5 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಆಥಿ೯ಕ ಸಹಾಯ ನೀಡುತ್ತಿರುವ ಸಕಾ೯ರ ಇದೀಗ ಮತ್ತೇ ಈ ಯೋಜನೆಯಡಿ ಹೊಸ ಅಜಿ೯ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ