"Agriculture is our CULTURE"

Free IAS couching :: ಸರ್ಕಾರ ವತಿಯಿಂದ ಫ್ರೀ ಐಎಎಸ್ ತರಬೇತಿ!! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?

ಐಎಎಸ್ ಕನಸು ನನಸಾಗಿಸಿಕೊಳ್ಳಿ – ಬೆಂಗಳೂರಿನ ಹಜ್ ಭವನದಲ್ಲಿ ಉಚಿತ ಯುಪಿಎಸ್‌ಸಿ ತರಬೇತಿ!!

Target UPSC 2026 – Free Residential Coaching for Minority Aspirants!!

ಈ ಅಧಿಕೃತ ಪ್ರಕಟಣೆಯು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹೊರಡಿಸಲ್ಪಟ್ಟಿದೆ, ಇದು 2025-26ನೇ ಸಾಲಿನಲ್ಲಿ UPSC ಪೂರ್ವಭಾವಿ ಪರೀಕ್ಷೆಗೆ (Prelims) ಹಾಜರಾಗಲು ಬಯಸುವ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಪ್ರಮುಖ ದಿನಾಂಕಗಳ ವಿವರ:-

Important dates:-

• ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ – 04.03.2026

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 09.03.2026

ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು?

Candidates required eligibility? 

ನಿವಾಸಿ: ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

* ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು. ನಿರ್ದಿಷ್ಟವಾಗಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ಅಭ್ಯರ್ಥಿಗಳು ಅರ್ಹರು.

• ಶೈಕ್ಷಣಿಕ/ಪರೀಕ್ಷಾ ಅರ್ಹತೆ,ಈ ಹಿಂದೆ ನಡೆಸಲಾದ UPSC ಅಥವಾ KAS ಪೂರ್ವಭಾವಿ ಪರೀಕ್ಷೆಯಲ್ಲಿ (Prelims) ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

* ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದಂದು ಅಂದರೆ 09.03.2026ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ತರಬೇತಿಯ ವಿಶೇಷತೆಗಳು:-
About classes:-

• ಈ ತರಬೇತಿಯು 4 ತಿಂಗಳ ಕಾಲ ನಡೆಯಲಿದ್ದು, ಸಂಪೂರ್ಣ ವಸತಿಯುತವಾಗಿರುತ್ತದೆ (Residential). ಅಂದರೆ, ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯವಿರುತ್ತದೆ.

* ಬೆಂಗಳೂರಿನ ಹೆಸರಾಂತ ಮತ್ತು ಪ್ರತಿಷ್ಠಿತ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡಲಾಗುತ್ತದೆ. ಪರಿಣಿತ ಬೋಧಕರಿಂದ ಉತ್ತಮ ಗುಣಮಟ್ಟದ ತರಬೇತಿಯನ್ನು ಪಡೆಯಬಹುದು.

 ಅರ್ಜಿ ಸಲ್ಲಿಸುವ ವಿಧಾನ:-

 How to apply:-

• ಆಸಕ್ತ ಅಭ್ಯರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://dom.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

* ವೆಬ್‌ಸೈಟ್‌ನಲ್ಲಿ ನೀಡಲಾದ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ, ನಿಗದಿತ ಸಮಯದೊಳಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.

ಸಂಪರ್ಕ ಮಾಹಿತಿ:-

Contact information :-

ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಆಯಾ ಜಿಲ್ಲಾ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 8277799990 ಗೆ ಕರೆ ಮಾಡಬಹುದು.

UPSC ಅಭ್ಯರ್ಥಿಗಳಿಗೆ ಒಂದು ಸೂಚನೆ- ಈ ಯೋಜನೆಯು ಪೂರ್ವಭಾವಿ ಪರೀಕ್ಷೆಯಲ್ಲಿ ಈಗಾಗಲೇ ಯಶಸ್ಸು ಸಾಧಿಸಿದ ಅಥವಾ ಪರೀಕ್ಷೆಯ ಬಗ್ಗೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತಷ್ಟು ಸಹಾಯವಾಗುವಂತೆ ರೂಪಿಸಲಾಗಿದೆ.

2026ರ ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಸಲು ಇದು ಒಂದು ಸುವರ್ಣಾವಕಾಶವಾಗಿದೆ.

UPSC (ಪೂರ್ವಭಾವಿ ಪರೀಕ್ಷೆ ಬೆಂಬಲ ಯೋಜನೆ) 2025-26ರ ಅಡಿಯಲ್ಲಿ, ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು ಅರ್ಹ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ವಸತಿ ಸಹಿತ 04 ತಿಂಗಳ ಉಚಿತ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ನೀಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ಈ ತರಬೇತಿಯು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅತ್ಯಂತ ಸಹಕಾರಿಯಾಗಲಿದೆ.

ವಿದ್ಯಾರ್ಥಿಗಳ ಭವಿಷ್ಯಕ್ಕೆ ಯೋಜನೆ:-

A scheme for students empowerment :-

ಕರ್ನಾಟಕ ಸರ್ಕಾರದ UPSC ಪೂರ್ವಭಾವಿ ಪರೀಕ್ಷಾ ಬೆಂಬಲ ಯೋಜನೆಯು ಅಲ್ಪಸಂಖ್ಯಾತ ಸಮುದಾಯದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಯುಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಲು ಗುಣಮಟ್ಟದ ತರಬೇತಿ ಮುಖ್ಯ.

ಈ ಯೋಜನೆಯಡಿ ಬೆಂಗಳೂರಿನ ಹಜ್ ಭವನದಲ್ಲಿ ೪ ತಿಂಗಳ ಉಚಿತ ವಸತಿಯುತ ತರಬೇತಿಯು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೊರೆ ಕಡಿಮೆ ಮಾಡುತ್ತದೆ. ಯುಪಿಎಸ್‌ಸಿ/ಕೆಎಎಸ್ ಪೂರ್ವಭಾವಿ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು,

ಪರಿಣಿತ ಮಾರ್ಗದರ್ಶನದ ಮೂಲಕ ನಾಗರಿಕ ಸೇವೆಯ ಉನ್ನತ ಹುದ್ದೆ ತಲುಪಲು ಈ ಕಾರ್ಯಕ್ರಮವು ಬುನಾದಿಯಾಗಿದೆ. ತರಬೇತಿಯೊಂದಿಗೆ, ಆಕಾಂಕ್ಷಿಗಳೊಂದಿಗೆ ಅಧ್ಯಯನ ಮಾಡುವ ಪರಿಸರವು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

The Karnataka Government’s UPSC Prelims Support Programme offers minority candidates quality training for UPSC exams. This free 4-month residential coaching at Bengaluru’s Haj Bhavan eases the financial burden on disadvantaged students.

Reserved for candidates who cleared UPSC/KAS Prelims, the program provides expert guidance to attain civil service positions. Studying with fellow aspirants fosters intellectual growth and drives success.

ಧನ್ಯವಾದಗಳು
Thank you.

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp Group ಜೈನ್ ಆಗಿ/join whatsapp

3) ” ಟ್ವಿಟರ್ / Twitter – ಸೇರು/join Twitter

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V. K

ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"