E-shram card: ಈ ಕಾಡ್೯ ಹೊಂದಿದವರಿಗೆ ಬಿ.ಪಿ.ಎಲ್ ಕಾಡ್೯- ಸುಪ್ರೀಂ ತೀಪು೯!! ಅಜಿ೯ ಸಲ್ಲಿಸೋದು ಹೇಗೆ?
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಳೆದ ಕೆಲವು ದಿನಗಳಿಂದ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು,
ರೇಷನ್ ಕಾಡ್೯ ಹೊಂದದೆ ಇರುವ ಸಾರ್ವಜನಿಕರು ಎಪಿಎಲ್ ಹಾಗೂ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
ಹೊಸ ರೇಷನ್ ಕಾಡ್೯ ಪಡೆಯಲು ಅಜಿ೯ ಆಹ್ವಾನ!
ಎಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಐದೇ ನಿಮಿಷದಲ್ಲಿ ರೇಷನ್ ಕಾರ್ಡ್ ದೊರೆಯಲಿದೆ ಆದರೆ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆಆಹಾರ ಇಲಾಖೆಯು ಪರಿಶೀಲನೆ ನಡೆಸಿ ನಂತರದಲ್ಲಿ ಬಿಪಿಎಲ್ ಕಾರ್ಡ್ ನೀಡಲಿದೆ.
ಏಕೆಂದರೆ ಸರ್ಕಾರದ ಹಲವಾರು ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳೇ ಪಾಲುದಾರರಾಗಿರುವುದರಿಂದ
ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ಗಳ ಸಂಖ್ಯೆ ಹೆಚ್ಚಾಗಿದ್ದು, ಸಾಕಷ್ಟು ಆದಾಯ ಹೊಂದಿದ್ದರೂ ಕೂಡ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾಡುಗಳನ್ನು ಪಡೆಯುತ್ತಿದ್ದಾರೆ.
ಹಾಗಾಗಿ ರೇಷನ್ ಕಾರ್ಡ್ಗಳನ್ನು ವಿತರಿಸುವಾಗ ಆಹಾರ ಇಲಾಖೆಯು ಹೆಚ್ಚಿನ ಕಟ್ಟುನಿಟ್ಟಿನ ಪರಿಶೀಲನೆಯನ್ನು ನಡೆಸುತ್ತಿದೆ.
ಆದ್ದರಿಂದ ಬಿಪಿಎಲ್ ಕಾರ್ಡ್ ವಿತರಿಸುವಾಗ ಪರಿಶೀಲನೆ ನಡೆಸಿ ವಿತರಣೆ ಮಾಡುವುದು ಸ್ವಲ್ಪ ಸಮಯಾವಕಾಶವನ್ನು ತೆಗೆದುಕೊಳ್ಳುತ್ತದೆ.
Pic: Eshram status
ಇ-ಶ್ರಮ್ ಕಾಡ್೯ ಹೊಂದಿದವರಿಗೆ ಬಿಪಿಎಲ್ ಕಾಡ್೯ ನೀಡಿ- ಸುಪ್ರೀಂ!
ಇನ್ನು ಇತ್ತೀಚಿಗೆ ಸುಪ್ರೀಂ ಕೋರ್ಟ್ ಒಂದು ಆದೇಶ ಹೊರಡಿಸಿದ್ದು ಇದರಲ್ಲಿ ಇ-ಶ್ರಮ್ ಕಾಡ್೯ ಹೊಂದಿರುವ ಎಲ್ಲಾ ನಾಗರಿಕರಿಗೆ ಬಿಪಿಎಲ್ ಕಾರ್ಡ್ ನೀಡುವಂತೆ ಆದೇಶಿಸಿದೆ
ಇದರ ಅನ್ವಯ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ಇ-ಶ್ರಮ್ ಹೊಂದಿರುವವರಿಂದ ಬಿಪಿಎಲ್ ಕಾರ್ಡ್ ಗಾಗಿ ಅರ್ಜಿಯನ್ನು ಆನ್ಲೈನ್ ಮೂಲಕ ತೆಗೆದುಕೊಳ್ಳಲಾಗುತ್ತಿದೆ
ಆದರೆ ವೆಬ್ಸೈಟ್ನಲ್ಲಿ ಇ-ಶ್ರಮ್ ಕಾಡ್೯ದಾರರ ಅಜಿ೯ಗಳು ಸ್ವೀಕೃತವಾಗುತ್ತಿಲ್ಲ. ಬದಲಾಗಿ Your eShram UAN is not present in the eligible eShram Registrant List ಎಂದು ತೋರಿಸುತ್ತಿದೆ.
ಹಾಗಾಗಿ ಅರ್ಜಿದಾರರು ಆತಂಕದಲ್ಲಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶವಾಗಿರುವುದರಿಂದ ತಾವು ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ.
ಆನ್ಲೈನ್ ನಲ್ಲಿ ಅಜಿ೯ ತಗೋತಿಲ್ಲ ಅಂದ್ರೆ ಹೀಗೆ ಮಾಡಿ!
ಇದಕ್ಕೆ ಪರಿಹಾರವೆಂದರೇ ಇ-ಶ್ರಮ್ ಕಾಡ್೯ ಹೊಂದಿರುವವರು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸುವ ಬದಲು ನಿಮ್ಮ ಹತ್ತಿರದ
ಆಹಾರ ಇಲಾಖೆಗೆ ಭೇಟಿ ನೀಡಿ ನಿಮ್ಮ ಇ-ಶ್ರಮ್ ಕಾಡ್೯ ಹಾಗೂ ಬಿಪಿಎಲ್ ಕಾರ್ಡ್ ಪಡೆಯಲು ಅಗತ್ಯವಿರುವ ಇತರ ದಾಖಲೆಗಳನ್ನು ಡೈರೆಕ್ಟ್ ಕಛೇರಿಯಲ್ಲಿಯೇ ಸಲ್ಲಿಸಬೇಕು.
ಹೀಗೆ ನೀವು ಅಜಿ೯ಯನ್ನು ಸಲ್ಲಿಸಬಹುದಾಗಿದೆ. ನೀವು ಅಜಿ೯ ಸಲ್ಲಿಸಿದ ನಂತರ ಇಲಾಖೆಯವರು ಪರೀಶೀಲನೆ ನಡೆಸಿ ದಾಖಲೆಗಳು ಸರಿಯಿದ್ದಲ್ಲಿ ಆದಷ್ಟು ಬೇಗ ನಿಮಗೆ ಬಿಪಿಎಲ್ ರೇಷನ್ ಕಾಡ್೯ ನ್ನು ನೀಡುತ್ತಾರೆ.
ಹೆಚ್ಚಿನ ಮಾಹಿತಿಗಾಗಿ!
ನಿಮಗೆ ಈ ಬಗ್ಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಟೋಲ್ ಫ್ರೀ ನಂಬರ್: 1800-425-9339 ಅಥವಾ ಸಹಾಯವಾಣಿ 1967 ಕ್ಕೆ ಬೆಳಿಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಆಹಾರ ಇಲಾಖೆಯನ್ನು ಸಂಪಕಿ೯ಸಬಹುದು ಎಂದು ಇಲಾಖೆ ತಿಳಿಸಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚