Apply for Central ID :: ನಿಮ್ಮ ಮೊಬೈಲಿನಲ್ಲಿ ರೈತ ಡಿಜಿಟಲ್ ಐಡಿಯನ್ನು ಪಡೆಯಿರಿ!!! ಅರ್ಜಿ ಸಲ್ಲಿಸುವ ಸುಲಭ ವಿಧಾನ!!
ರೈತ ಮಿತ್ರ ಡಿಜಿಟಲ್ ಐಡಿ – ಕೃಷಿ ಸೌಲಭ್ಯಗಳು ಇನ್ನು ನಿಮ್ಮ ಬೆರಳ ತುದಿಯಲ್ಲಿ!!
Farmer’s Friend Digital ID -Agri-benefits now at your fingertips!!
ರೈತರು ತಮ್ಮ ಸ್ಮಾರ್ಟ್ಫೋನ್ ಬಳಸಿ ಸೆಂಟ್ರಲ್ ಫಾರ್ಮರ್ ಐಡಿ (Central Farmer ID) ಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದನ್ನು ವಿವರವಾಗಿ, ಹಂತ ಹಂತವಾಗಿ ಇಲ್ಲಿ ವಿವರಿಸಲಾಗಿದೆ. ಈ ಪ್ರಕ್ರಿಯೆಯು ರೈತರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ನೋಂದಣಿಯ ಪ್ರಮುಖ ಹಂತಗಳು:-
Steps for Registration:-
ಸಿಟಿಜನ್ ರಿಜಿಸ್ಟ್ರೇಷನ್ / Citizen Registration
* ಮೊದಲನೆಯದಾಗಿ, FRUITS (ಫ್ರೂಟ್ಸ್) ಆನ್ಲೈನ್ ಪೋರ್ಟಲ್ಗೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ರೌಸರ್ನಲ್ಲಿ ಭೇಟಿ ನೀಡಿ.
• ಅಲ್ಲಿ ‘ಸಿಟಿಜನ್ ರಿಜಿಸ್ಟ್ರೇಷನ್‘ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದು ನಿಮ್ಮ ಗುರುತನ್ನು ದೃಢಪಡಿಸಲು ಸಹಾಯ ಮಾಡುತ್ತದೆ.

Enter On Citizen Registration
ಸಿಟಿಜನ್ ರಿಜಿಸ್ಟ್ರೇಷನ್ / Citizen Registration
* ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP (One Time Password) ಬರುತ್ತದೆ. ಆ OTP ಯನ್ನು ನಮೂದಿಸಿ ದೃಢೀಕರಿಸಿ.
• ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಪ್ರೊಸೀಡ್ ಮಾಡಿ. ನಂತರ ಭದ್ರತೆಗಾಗಿ ಒಂದು ಹೊಸ ಪಾಸ್ವರ್ಡ್ ಅನ್ನು ರಚಿಸಿ.
ಲಾಗಿನ್ ಮತ್ತು ಈ-ಕೆವೈಸಿ:-
Login and e-KYC:-
• ನೀವು ನೋಂದಾಯಿಸಿದ ಮೊಬೈಲ್ ಸಂಖ್ಯೆ ಮತ್ತು ರಚಿಸಿದ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ. ಇದು ನಿಮ್ಮ ಖಾತೆಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
* ಡ್ಯಾಶ್ಬೋರ್ಡ್ನಲ್ಲಿ ‘e-KYC‘ ಆಯ್ಕೆಯನ್ನು ಹುಡುಕಿ ಮತ್ತು ಅದನ್ನು ಆರಿಸಿ. ಮತ್ತೊಮ್ಮೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಮೂಲಕ ನಿಮ್ಮ ಈ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
• ಈ ಹಂತವು ಅತ್ಯಂತ ಮಹತ್ವದ್ದಾಗಿದ್ದು, ನಿಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

Enter Aadhar Number
e-KYC

Enter Mobile Number & OTP
ಸಿಟಿಜನ್ ಲಾಗಿನ್
ರೈತರ ಸಹಮತಿ ಪತ್ರ:-
Farmer Consent:-
• ‘Modification‘ ಟ್ಯಾಬ್ ಅಡಿಯಲ್ಲಿ ‘Farmer Consent‘ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ಆಯ್ಕೆಯು ನಿಮ್ಮ ಒಪ್ಪಿಗೆಯನ್ನು ಪಡೆಯಲು ಇದೆ.
* ಅಲ್ಲಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿಕೊಂಡು, ಒಪ್ಪಿಗೆ ಸೂಚಿಸಲು ಚೆಕ್ ಬಾಕ್ಸ್ ಮೇಲೆ ಟಿಕ್ ಮಾಡಿ. ಇದು ನೀವು ನಿಯಮಗಳನ್ನು ಒಪ್ಪಿಕೊಂಡಿದ್ದೀರಿ ಎಂದು ಖಚಿತಪಡಿಸುತ್ತದೆ.
• ನಂತರ ‘E-Sign‘ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ OTP ಬಳಸಿ ಡಿಜಿಟಲ್ ಸಹಿ ಮಾಡಿ.

Click On E-Sign
e-ಸೈನ್ / e-sign
* ಇದು ಯಶಸ್ವಿಯಾದ ನಂತರ “e-Signed Farmer Consent Saved Successfully” ಎಂಬ ಸಂದೇಶ ಬರುತ್ತದೆ. ಅಂದರೆ ನಿಮ್ಮ ಸಹಮತಿ ಪತ್ರವು ಯಶಸ್ವಿಯಾಗಿ ಉಳಿದಿದೆ.
• ನಂತರ ಒಂದು ಮುಖಪುಟ ತೆರೆಯುತ್ತೆ ಅಲ್ಲಿ ಆಧಾರ್ ನಂಬರ್ ಹಾಕಿ ಗೆಟ್ ಒಟಿಪಿ ಕೇಳಿ ಮತ್ತೆ ಒಂದು ಸಹಮತಿ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಸುಭ್ಮಿಟ್ (submit) ಮೇಲೆ ಕ್ಲಿಕ್ ಮಾಡಿ.

Click On Submit Button
Final submit page
ಗಮನಿಸಬೇಕಾದ ಅಂಶಗಳು:-
Important aspect:-
* ಸೆಂಟ್ರಲ್ ಐಡಿ ಸಕ್ಸಸ್ಫುಲ್ ಆಗಲು ಈ-ಕೆವೈಸಿ ಮತ್ತು ರೈತರ ಒಪ್ಪಿಗೆ (Farmer Consent) ಈ ಎರಡು ಪ್ರಕ್ರಿಯೆಗಳು ಕಡ್ಡಾಯವಾಗಿ ಪೂರ್ಣಗೊಳ್ಳಬೇಕು.
• ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೆ ಮಾತ್ರ ‘Mobile Number Update‘ ಆಯ್ಕೆಯನ್ನು ಬಳಸಿ ನವೀಕರಿಸಿ, ಇಲ್ಲದಿದ್ದರೆ ಅದು ಅಗತ್ಯವಿಲ್ಲ.
ಸರ್ಕಾರಿ ಯೋಜನೆಗಳ ನೇರ ಸೌಲಭ್ಯ (Direct Benefit Transfer – DBT) ಹೇಗೆ ರೈತರಿಗೆ ಅನುಕೂಲವಾಗುತ್ತದೆಂದರೆ:-
How DBT helping farmers:-
ರೈತರಿಗೆ ಈ ವಿಶೇಷ ಗುರುತಿನ ಚೀಟಿ ಇದ್ದರೆ, ಸರ್ಕಾರದಿಂದ ದೊರೆಯುವ ಸಹಾಯಧನಗಳು (ಸಬ್ಸಿಡಿಗಳು), ಬೆಳೆ ವಿಮೆ ಹಣ, ಮತ್ತು ಕಿಸಾನ್ ಸಮ್ಮಾನ್ ನಿಧಿಯಂತಹ ಆರ್ಥಿಕ ನೆರವು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ,
ರೈತರಿಗೆ ಪೂರ್ಣ ಪ್ರಮಾಣದ ಹಣ ಸಿಗುತ್ತದೆ.ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆಯುವಾಗ ರೈತರು ಪ್ರತಿ ಬಾರಿ ದಾಖಲೆಗಳನ್ನು ನೀಡುವ ತೊಂದರೆ ಇರುವುದಿಲ್ಲ. ಬ್ಯಾಂಕ್ ಅಧಿಕಾರಿಗಳು ಈ ಗುರುತಿನ ಚೀಟಿಯ ಮೂಲಕ ರೈತರ ಜಮೀನಿನ ವಿಸ್ತೀರ್ಣ ಮತ್ತು ಅವರು ಬೆಳೆಯುವ ಬೆಳೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ
ಹೀಗೆ ಬೇರೆ ಬೇರೆ ಇಲಾಖೆಗಳ ಸೌಲಭ್ಯಗಳನ್ನು ಒಂದೇ ವೇದಿಕೆಯಡಿ ಪಡೆಯಲು ಇದು ಸಹಾಯ ಮಾಡುತ್ತದೆ, ಪ್ರತಿಯೊಂದು ಇಲಾಖೆಗೂ ಬೇರೆ ಬೇರೆಯಾಗಿ ನೋಂದಣಿ ಮಾಡುವ ಅಗತ್ಯವಿರುವುದಿಲ್ಲ.
ಒಂದು ಬಾರಿ ನೋಂದಣಿ ಮಾಡಿಕೊಂಡರೆ ಸಾಕು, ಎಲ್ಲ ಇಲಾಖೆಗಳ ಸೌಲಭ್ಯಗಳನ್ನು ಪಡೆಯಬಹುದು. ಒಂದು ವೇಳೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ, ಈ ಗುರುತಿನ ಚೀಟಿಯಲ್ಲಿ ರೈತರ ಎಲ್ಲಾ ವಿವರಗಳು ಇರುವುದರಿಂದ ಸರ್ಕಾರಕ್ಕೆ ಪರಿಹಾರದ ಹಣವನ್ನು ತಕ್ಷಣದಲ್ಲಿ ವಿತರಿಸಲು ಸಾಧ್ಯವಾಗುತ್ತದೆ.
ರೈತರು ತಮ್ಮ ಮೊಬೈಲ್ ಫೋನ್ ಮೂಲಕವೇ ಈ-ಕೆವೈಸಿ (e-KYC) ಮತ್ತು ಸಹಮತಿ ಪತ್ರ (Consent) ಸಲ್ಲಿಸಬಹುದು. ಇದರಿಂದ ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಕಷ್ಟ ತಪ್ಪುತ್ತದೆ, ಮತ್ತು ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ.
Having a Central Farmer ID or being registered on the FRUITS portal gives farmers a key online identity. This helps them easily get government benefits. By connecting this ID to their bank accounts, farmers get money directly through Direct Benefit Transfer (DBT).
This includes subsidies, crop insurance payments, and PM-Kisan funds. This cuts out middlemen, making sure farmers get the full amount of money without any loss.
Also, the ID makes it easier to get loans from banks. Because the portal is linked to land records, bank staff can quickly check who owns the land and what crops are grown. This means farmers don’t have to keep providing paper documents when they ask for a loan.
It’s a simple system where registering once gives access to many programs in agriculture, horticulture, sericulture, and animal husbandry.
If there are natural disasters, the online data helps the government quickly and correctly figure out the damage and give out aid. Plus, farmers can use their phones to complete e-KYC and submit permission forms.
This saves them from having to visit government offices often. This makes the administrative process clear and also makes it easier to do business in farming.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply