Parihara :: ರೈತರು ಅನುಸರಿಸಬೇಕಾದ ನಿಯಮಗಳೇನು? 10% ರೈತರಿಗೆ ಮಾತ್ರ ಪರಿಹಾರ ಏಕೆ?
ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನೀವು ಇನ್ಶೂರೆನ್ಸ್ ಮಾಡಿಸಿದಲ್ಲಿ ಇನ್ಸೂರೆನ್ಸ್ ಕ್ಲೇ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ.
ಕನಾ೯ಟಕದ ಬೆಳೆ ವಿಮೆ ಕಂಪನಿ ಯಾವುದು?
ಕರ್ನಾಟಕದಲ್ಲಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಇನ್ಸೂರೆನ್ಸ್ ಮಾಡುವ ಜವಾಬ್ದಾರಿಯನ್ನು ಇಫ್ಕೋ-ಟೋಕಿಯೋ ಇನ್ಸುರೆನ್ಸ್ ಕಂಪನಿ ಪಡೆದಿದೆ. ಅದಕ್ಕಾಗಿ ಇನ್ಸುರೆನ್ಸ್ ಕ್ಲೇಮ್ ಮಾಡಲು ಇಫ್ಕೋ-ಟೋಕಿಯೋ ಕಂಪನಿಯ ವೆಬ್ಸೈಟ್ ಮೂಲಕ ಅಜಿ೯ ಹಾಕಬೇಕು.
ಬೆಳೆ ವಿಮೆ ಕ್ಲೇಮ್ ಮಾಡಲು ಅಜಿ೯ ಹಾಕುವುದು ಹೇಗೆ?
Step 1: ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್ (link) ಮೇಲೆ ಕ್ಲಿಕ್(click) ಮಾಡಿ
https://webapps.iffcotokio.co.in/cropclaims/
Step 2: ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಅಪ್ಲಿಕೇಶನ್ ಐಡಿ(Application ID) ಅಥವಾ ನಿಮ್ಮ ಖಾತೆಯ ಸಂಖ್ಯೆ(Account number) ಯನ್ನು ಹಾಕಿ ಸರ್ಚ್ ರೆಕಾರ್ಡ್(Search record) ಮೇಲೆ ಕ್ಲಿಕ್ ಮಾಡಿ
Step 3: ನಂತರದಲ್ಲಿ ನಿಮ ಸಚ್೯ ಬೈ ಯೂವರ್ ಅಕೌಂಟ್ ಐಡಿ(Search by your account ID) ಎಂಬಲ್ಲಿ ಕ್ಲಿಕ್ ಮಾಡಿ ಕೆಳಗಿನ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತೊಮ್ಮೆ ಸರ್ಚ್ ರೆಕಾರ್ಡ್(Search record) ಮೇಲೆ ಕ್ಲಿಕ್ ಮಾಡಿ
Step 4: ಆಗ ನಿಮ್ಮ ಇನ್ಸುರೆನ್ಸ್ ಅಜಿ೯ಯ ವಿವರಗಳು ಕಾಣಿಸುತ್ತವೆ. ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ಫಾಮ೯ರ್ ಮೊಬೈಲ್ ನಂಬರ್(Farmer Mobile number) , ಟೈಪ್ ಆಪ್ ಲಾಸ್ (type of loss), ಲಾಸ್ ಆಗಲು ಕಾರಣ(reason for loss) (ಉದಾಹರಣೆಗೆ ನೆರೆ ಹಾವಳಿ, ಬರಗಾಲ ಇತ್ಯಾದಿ),
ಲಾಸ್ ಆದ ದಿನಾಂಕ(loss date) , ಅಜಿ೯ ಹಾಕುವ ದಿನಾಂಕ(intimate date) , ಎಷ್ಟು ಹೆಕ್ಟೇರ್(hactare) ಜಮೀನು ಇದೆ. ಎಷ್ಟು ಪಸೆ೯ಂಟ್ ಲಾಸ್(% of loss) ಆಗಿದೆ ಇತ್ಯಾದಿ ಎಲ್ಲಾ ಮಾಹಿತಿ ಕೇಳಿದ್ದು, ಸರಿಯಾಗಿ ಮಾಹಿತಿಯನ್ನು ಹಾಕಿ ನಂತರ ಸಬ್ಮಿಟ್ ಕ್ಲೇಮ್(Submit claim) ಮೇಲೆ ಕ್ಲಿಕ್ ಮಾಡಿ
Step 5: ಆಗ ನಿಮಗೆ ಕ್ಲೇಮ್ ಅಜಿ೯ಯ ಒಂದು ಐಡಿ ನಂಬರ್ ಬರುತ್ತದೆ ಹಾಗೂ ಅಜಿ೯ ಸಲ್ಲಿಕೆಯಾಗಿದೆ ಎಂದು ತೋರಿಸುತ್ತದೆ. ಈ ಐಡಿ ನಂಬರ್ ದಿಂದ ನೀವು ನಿಮ್ಮ ಕ್ಲೇಮ್ ಅಜಿ೯ಯ ಸ್ಟೇಟಸ್ ಚೆಕ್ ಮಾಡಬಹುದು.
ವಿಮೆ ಕ್ಲೇಮ್ ಮಾಡಲು ರೈತರು ಅನುಸರಿಸಬೇಕಾದ ನಿಯಮಗಳು:-
ಈ ರೀತಿ ನೀವು ಫಸಲ್ ಭಿಮಾ ಯೋಜನೆಯಡಿಯಲ್ಲಿ ಮಾಡಿಸಿರುವ ವಿಮೆಯನ್ನು ನಿಮ್ಮ ಬೆಳೆ ಹಾನಿಯಾದಾಗ ಕ್ಲೇಮ್ ಮಾಡಲು ಅಜಿ೯ ಸಲ್ಲಿಸಿ ಬೆಳೆ ಹಾನಿ ವಿಮಾ ಪರಿಹಾರ ಮೊತ್ತವನ್ನು ಪಡೆಯಬಹುದು.
ಬೆಳೆ ಹಾನಿಯಾದ 72 ಗಂಟೆಯೊಳಗೆ ಅಜಿ೯ ಸಲ್ಲಿಸಬೇಕು.ತಡವಾದಲ್ಲಿ ಕಂಪನಿ ಕ್ಲೇಮ್ ಅಜಿ೯ಯನ್ನು ಪರಿಗಣಿಸುವುದಿಲ್ಲ. ವಿಮೆ ಪಾವತಿಸದ ರೈತರು ಕ್ಲೇಮ್ ಅಜಿ೯ ಹಾಕಲು ಸಾಧ್ಯವಿಲ್ಲ.
ಕೂಡಲೇ ವಿಮಾ ಕಂಪನಿಯವರು ಸಮೀಕ್ಷೆ ನಡೆಸಿ ಪರಿಹಾರ ಬರುವಂತೆ ಮಾಡುತ್ತಾರೆ. ಸಮೀಕ್ಷೆ ಆಧಾರದಲ್ಲಿ ಎಷ್ಟು ಬೆಳೆ ಹಾನಿಯಾಗಿದೆಯೋ ಅದಕ್ಕೆ ಪರಿಹಾರ ಮೊತ್ತ ವಿಮಾ ಕಂಪನಿ ಮೂಲಕ ರೈತರಿಗೆ ಜಮೆಯಾಗುತ್ತದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಹಲವು ಯೋಜನೆಗಳ ಮೂಲಕ ಈ ರೀತಿಯ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು ಕೂಡ ರೈತರು ಅದರ ಪ್ರಯೋಜನಗಳನ್ನು ಪಡೆಯುತ್ತಿಲ್ಲ ರಾಜ್ಯದಲ್ಲಿ ಕೇವಲ 10% ರೈತರು ಮಾತ್ರ ಬೆಳೆ ವಿಮೆಗಳನ್ನು ಮಾಡಿಸಿ ಕಂತುಗಳನ್ನು ಪಾವತಿಸುತ್ತಿದ್ದಾರೆ.
ಇನ್ನುಳಿದ 90% ರೈತರು ಬೆಳೆ ವಿಮೆ ಮಾಡಿಸುತ್ತಿಲ್ಲ. ಇದರಿಂದಾಗಿ ಬೆಳೆ ಹಾನಿಯಾದಾಗ ರೈತರಿಗೆ ಯಾವುದೇ ಪರಿಹಾರ ಮೊತ್ತ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತಿದ್ದಾರೆ.
ಆದ್ದರಿಂದ ಇನ್ನು ಮೇಲಾದರೂ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ದಿನಗಳನ್ನು ಮಾಡಿಸಿದಲ್ಲಿ ಬೆಳೆ ಹಾನಿಯಾದಾಗ ಸರ್ಕಾರವು ಪರಿಹಾರ ಮೊತ್ತ ನೀಡುತ್ತದೆ ಇದರಿಂದ ಬೆಳೆ ಹಾನಿಯ ಆರ್ಥಿಕ ಹೊಡೆತದಿಂದ ರೈತರು ಪಾರಾಗಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್ಸೈಟ್ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ