"Agriculture is our CULTURE"

Horticulture Department Schemes:: ತೋಟಗಾರಿಕೆ ಇಲಾಖೆಯ ಹಲವು ಯೋಜನೆಗಳ ಸಂಪೂರ್ಣ ಮಾಹಿತಿ? ಸಬ್ಸಿಡಿ ಪಡೆಯುವುದು ಹೇಗೆ?

ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಲೇಖನವನ್ನು ಸಂಪೂರ್ಣವಾಗಿ ಓದಿ.

1. ಪಿಎಂ ಕೃಷಿ ಸಿಂಚಾಯ್ ಯೋಜನೆ(PMKSY) :

ಈ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ತೋಟಗಾರಿಕಾ ಬೆಳೆಗಳಲ್ಲಿ ನಿರ್ದಿಷ್ಟ ಅಂತರಕ್ಕನುಗುಣವಾಗಿ ಹನಿ ನೀರಾವರಿ ಮಾಡಲು ಎಲ್ಲಾ ವಗ೯ದ ತೋಟಗಾರಿಕಾ ಬೆಳೆಗಾರರಿಗೆ ಮೊದಲ 2 ಹೆಕ್ಟೇರ್ ಗೆ 90% ಸಬ್ಸಿಡಿಯನ್ನು ಒದಗಿಸಲಾಗುತ್ತಿದೆ.

ಕೇವಲ 10% ಹಣವನ್ನು ಹಾಕಿ ನೀವು ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಬಹುದು. 2 ರಿಂದ 5 ಹೆಕ್ಟೇರ್ ಜಮೀನು ಹೊಂದಿದ್ದರೆ ಅಂತಹವರಿಗೆ 45% ಸಹಾಯಧನ ನೀಡಲಾಗುತ್ತದೆ. ಉಳಿದ 55% ಹಣವನ್ನು ರೈತರು ಭರಿಸಬೇಕಾಗುತ್ತದೆ.

*ಆದರೆ ಮುಖ್ಯವಾಗಿ ಹೂವು ಹಾಗೂ ತರಕಾರಿ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಜಮೀನು ಹೊಂದಿರವವರಿಗೆ ಮಾತ್ರ ಸಹಾಯಧನ ಸಿಗುತ್ತದೆ

2. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(RKVY):

ಈ ಯೋಜನೆ ಅಡಿಯಲ್ಲಿ ಆರು ಸೌಲಭ್ಯಗಳಿದ್ದು, ವಿವರಗಳು ಹೀಗಿವೆ.

a) ನೀರು ಸಂಗ್ರಹಣಾ ಘಟಕ:

*2500 ಘಮೀ. -ಶೇ. 50 ರಂತೆ ಗರಿಷ್ಠ ರೂ. 1.50 ಲಕ್ಷಗಳು

*4500 ಘ ಮೀ – ಶೇ. 50 ರಂತೆ ಗರಿಷ್ಠ ರೂ. 2.81 ಲಕ್ಷಗಳು

*6500 ಘ ಮೀ- ಶೇ. 50 ರಂತೆ ಗರಿಷ್ಠ ರೂ. 4.00 ಲಕ್ಷಗಳು

*9000 ಘ ಮೀ- ಶೇ. 50 ರಂತೆ ಗರಿಷ್ಠ ರೂ. 5.00 ಲಕ್ಷಗಳ ಸಹಾಯಧನದ ನೀಡಲಾಗುತ್ತದೆ.

b) ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ: ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ಗೆ ಮೀರದಂತೆ ಶೇಕಡ 25 ರಂತೆ ರೂ.10.000 ಗಳ ಸಹಾಯಧನವನ್ನು ನೀಡಲಾಗುತ್ತದೆ.

c) ನೀರಿನಲ್ಲಿ ಕರಗುವ ರಸಗೊಬ್ಬರ ಖರೀದಿಗೆ ಸಹಾಯಧನ: ಪ್ರತಿ ಫಲಾನುಭವಿಗೆ ಗರಿಷ್ಠ 1 ಹೆಕ್ಟೇರ್ ಗೆ ಮೀರದಂತೆ ಶೇ. 25 ರಂತೆ ಪ್ರತಿ ಎಕರೆಗೆ ರೂ. 12,500/- ಗಳ ಸಹಾಯಧನವನ್ನು ನಿಗಧಿಪಡಿಸಿದೆ.

d) ಬೆಳೆ/ಹಣ್ಣು/ಹೂವು ಹೊದಿಕೆಗಳಿಗೆ ಸಹಾಯಧನ: ಪ್ರತಿ ಫಲಾನುಭವಿಗೆ ಗರಿಷ್ಠ | ಹೆಕ್ಟೇರ್‌ಗೆ ಮೀರದಂತೆ ಶೇಕಡ 25 ರಂತೆ ಪ್ರತಿ ಎಕರೆಗೆ ರೂ. 5,000/- ಗಳ ಸಹಾಯಧನ ನಿಗದಿಪಡಿಸಿದೆ.

e) Farm Gate: 8x5x3 ಮೀಟರ್ ಅಳತೆಯ ಫಾರಂಗೇಟ್ ನಿರ್ಮಾಣ ಮಾಡಲು ರೂ 1.00 ಲಕ್ಷಗಳ ಸಹಾಯಧನ ನೀಡಲಾಗುವುದು.

f) ಸೋಲಾರ್ ಪಂಪ್ ಸೆಟ್

*3HP ಘಟಕದ ವೆಚ್ಚ ರೂ.2.00 ಲಕ್ಷಗಳಿಗೆ ಶೇ.50 ರಂತೆ ರೂ. 1.00 ಲಕ್ಷಗಳಿಗೆ ಸಹಾಯಧನ

*5HP & ABOVE ಘಟಕದ ವೆಚ್ಚ ರೂ.3.00 ಲಕ್ಷಗಳಿಗೆ ಶೇ.50 ರಂತೆ ರೂ.1.50 ಲಕ್ಷಗಳಿಗೆ ಮಿತಿಗೊಳಿಸಿ ಸಹಾಯಧನ ನೀಡಲಾಗುವುದು.

3. ರಾಷ್ಟ್ರೀಯ ತೋಟಗಾರಿಕಾ ಮಿಷನ್ (NHM) :

a) ಹೊಸ ಪ್ರದೇಶ ವಿಸ್ತರಣೆ: ಘಟಕ ವೆಚ್ಚದ ಶೇ. 40 ರಂತೆ ಗರಿಷ್ಟ 2.00 ಹೆಕ್ಟೇರ್ ವರೆಗೆ ಬೆಳೆಗಳ ಅನುಗುಣವಾಗಿ ಸಹಾಯಧನ ನೀಡಲಾಗುವುದು.

b) ನೀರು ಸಂಗ್ರಹಣಾ ಘಟಕ (ವೈಯಕ್ತಿಕ): 1200 ಘ.ಮೀ. ಸಾಮಾರ್ಥದ ವೈಯಕ್ತಿಕ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಶೇಕಡ 50 ರಂತೆ ರೂ. 75,000 ಗಳ ಸಹಾಯಧನ ನೀಡಲಾಗುವುದು.

c) ಪ್ಲಾಸ್ಟಿಕ್ ಹೊದಿಕೆ: ಪ್ರತಿ ಹೆಕ್ಟೇರ್‌ಗೆ ಶೇ. 50 ರಂತೆ ರೂ. 16,000/- ಗಳಂತೆ ಪ್ರತಿ ಫಲಾನುಭವಿಗೆ ಗರಿಷ್ಠ 2 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುವುದು.

d) ಹಸಿರು ಮನೆ ನಿರ್ಮಾಣ: ಪ್ರತಿ ಫಲಾನುಭವಿಗೆ ಶೇ 50 ರಂತೆ ಗರಿಷ್ಟ 4000 ಚದರ ಮೀಟರ್ ಹಸಿರುಮನೆ ಘಟಕಕ್ಕೆ ರೂ 15.82 ಲಕ್ಷ ಹಾಗೂ ಬೆಳೆ ನಾಟಿಗೆ ರೂ 1.40 ಲಕ್ಷಗಳ ಸಹಾಯಧನ ನೀಡಲಾಗುವುದು.

e) Cold Room Stagging: ಶೇ.35ರಂತೆ ರೂ 5.25 ಲಕ್ಷಗಳವರೆಗೆ ಸಹಾಯಧನ ನೀಡಲಾಗುವುದು

f) ತೋಟಗಾರಿಕೆಯಲ್ಲಿ ಯಾಂತ್ರೀಕರಣ: ಮಿನಿ ಟ್ರಾಕ್ಟರ್ ಖರೀದಿಗೆ ಸಾಮಾನ್ಯ ವರ್ಗಕ್ಕೆ ಶೇ.25ರಂತೆ ಗರಿಷ್ಠ (ರೂ 75,000/-), ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.35ರಂತೆ ಗರಿಷ್ಠ (ರೂ 1,00,000/-ಗಳವರೆಗೆ) ಸಹಾಯಧನ ನೀಡಲಾಗುವುದು.

g) ಪ್ಯಾಕ್ ಹೌಸ್: 9. 2. X 6 2. x 3 ಮೀ. ವಿನ್ಯಾಸದ ಪ್ಯಾಕ್‌ ಹೌಸ್ ಘಟಕಕ್ಕೆ ಶೇಕಡ 50ರಂತೆ ರೂ. 2.00 ಲಕ್ಷ ಸಹಾಯಧನ ನೀಡಲಾಗುವುದು.

h) ಸಮಗ್ರ ಪೋಷಕಾಂಶ, ರೋಗ/ಕೀಟಗಳ ನಿರ್ವಹಣೆ : ಶೇ.30 ರಂತೆ ಪ್ರತಿ ಹೆಕ್ಟೇರ್‌ಗೆ ರೂ. 1,200/- ಗಳಿಗೆ ಮಿತಿಗೊಳಿಸಿ ಗರಿಷ್ಠ 4 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುವುದು.

4. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ:

i. 2000 ರೂ. ಗಳ ಬೆಲೆಯ ಹೈಬ್ರಿಡ್ ತರಕಾರಿಗಳ ಕಿಟ್ ವಿತರಣೆ

ii. ವಿದ್ಯಾರ್ಥಿಗಳಿಗೆ ತೋಟಗಾರಿಕೆ ತರಬೇತಿ ಹಾಗೂ 25000 ರೂ. ಗಳ ಪ್ರೋತ್ಸಾಹದನ ನೀಡಲಾಗುತ್ತದೆ.

5. ಜೇನು ಸಾಕಾಣಿಕೆ ತರಬೇತಿ ಮತ್ತು ಸಹಾಯಧನ:

ಸಾಮಾನ್ಯ ವಗ೯ದವರಿಗೆ ಘಟಕ ವೆಚ್ಚದ 75% ರಷ್ಟು ಅಂದರೆ 3375 ರೂ. ಹಾಗೂ ಎಸ್ ಸಿ ಎಸ್ ಟಿ ವಗ೯ಗಳ ಘಟಕ ವೆಚ್ಚದ 90% ರಷ್ಟು 4050 ರೂ ಗಳ ಸಹಾಯಧನ ಹಾಗೂ ಖಾಸಗಿ ಮಧುವನಗಳ ಸ್ಥಾಪನೆಗೆ ಶೇಕಡಾ 75 ರಷ್ಟು ಗರಿಷ್ಟ 38000 ರೂ. ಗಳ ಸಹಾಯಧನ ಕೊಡಲಾಗುತ್ತದೆ.

ಈ ಎಲ್ಲಾ ಯೋಜನೆಗಗಳು ತೋಟಗಾರಿಕಾ ಬೆಳೆಗಾರರಿಗೆ ಲಭ್ಯವಿದ್ದು, ಯಾರೆಲ್ಲಾ ಈ ಯೋಜನೆಗಶಿಗೆ ಅಜಿ೯ ಸಲ್ಲಿಸಲು ಬಯಸುತ್ತಿರೋ ಅಂತಹವರು ನಿಮ್ಮ ಹತ್ತಿರದ ತೋಟಗಾರಿಕಾ ಇಲಾಖೆಯ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ಅಜಿ೯ ಸಲ್ಲಿಸಿ ಸಹಾಯಧನ ಪಡೆಯಿರಿ

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"