"Agriculture is our CULTURE"

1 Lakh per Month :: ಮನೆಯ ಮೇಲ್ಚಾವಣಿ ಮೇಲೆ ಡ್ರಾಗನ್ ಫ್ರೂಟ್ ತಿಂಗಳಿಗೆ ಒಂದು ಲಕ್ಷ ಆದಾಯ!!! ಕೊಪ್ಪಳದ ಗವಿಸಿದ್ದೇಶ್ವರ ಮಠದ ಅತಿಥಿ ಕೇರಳದ ರಮಾಬಾಯಿ!!!

ಬದುಕಿದ್ದಾಗ ಮನುಷ್ಯ ದುಡಿಯದೇ ಇದ್ದರೆ ಸತ್ತವರಿಗಲ್ಲ, ಬದುಕಿದ್ದಾಗ ಹೊತ್ತುಕೊಂಡು ಹೋಗುವವರೆಗೂ ಭಾರವಾಗುತ್ತಾನೆ. ನಾವು ದುಡಿದು ತಿನ್ನಬೇಕು ಎಂಬುದನ್ನು ಕಲಿಯಬೇಕು.

ಕಾಯಕವೇ ನಮ್ಮ ನಾಯಕ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದಲ್ಲಿ ಅಜ್ಜನವರು ಒಬ್ಬ ಡ್ರ್ಯಾಗನ್ ಫ್ರೂಟ್ ಬೆಳೆದ ಸಾಧಕ ಮಹಿಳೆಯನ್ನು ಕುರಿತು ಭಕ್ತಾದಿಗಳಿಗೆ ಹುರಿದುಂಬಿಸಿದರು.

ಮನೆಯ ಟೆರಸ್ ಮೇಲೆ ಡ್ರ್ಯಾಗನ್ ಫ್ರೂಟ್!!!

ಕೇರಳದ ಕೊಲ್ಲಂ ಜಿಲ್ಲೆಯ ರಮಾಬಾಯಿ ಅವರು ಶಾಲೆಯ ಮುಖ್ಯಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು.

ಅವರು ನಿವೃತ್ತಿ ಹೊಂದಿದ ನಂತರ 30×50 ಅಡಿಯ ಅವರ ಮನೆಯ ಮೇಲ್ಚಾವಣಿ ಮೇಲೆ ನೂರು ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ಬೆಳೆದು,

Women Farmer

Women Farmer

ಒಂದು ಡ್ರ್ಯಾಗನ್ ಫ್ರೂಟ್ ಗಿಡಕ್ಕೆ ತಿಂಗಳಿಗೆ 1000 ರೂ ಆದಾಯ ಬರುವಂತೆ ನೋಡಿಕೊಂಡರು. ಅಂದರೆ 100 ಗಿಡಗಳಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯವಾಗುತ್ತದೆ.

ಐವತ್ತು ನೂರು ಎಕರೆ ಇರುವ ಹಲವು ರೈತರು ನಮ್ಮ ಮಠಕ್ಕೆ ಬರುತ್ತಾರೆ. ಬಂದು ಅಜ್ಜರೆ, ನಾವು ಎಷ್ಟು ಬೆಳೆದರೂ ನಮಗೆ ಬೆಳೆ ಕೈಗೆ ಸಿಗುತ್ತಿಲ್ಲ ಎನ್ನುತ್ತಾರೆ.

ಇವರಿಗೆ ಯಾವ ಬೆಳೆ ಏನಕ್ಕೆ ಕೈಗೆ ಸಿಗುವುದಿಲ್ಲ ಎಂದರೆ ಇವರು ಕೈ ಮುಟ್ಟಿ ಕೆಲಸ ಮಾಡುವುದಿಲ್ಲ, ಕೆಲಸಗಾರರ ಹತ್ತಿರ ಕೆಲಸವನ್ನು ಮಾಡಿಸುತ್ತಾರೆ ಇವರು ಊರು ಮುಂದಿರುವ ಕಟ್ಟೆ ಮೇಲೆ ಕೂತಿರುತ್ತಾರೆ.

Abinava Gavi Siddeshwara Swamiji Koppala

Abinava Gavi Siddeshwara Swamiji Koppala

ಹೀಗೆ ಮಾಡಿದರೆ ಇಂದಿನ ರೈತರಿಗೆ ಲಾಭವಾಗುವುದಿಲ್ಲ ಎಂದು ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನವರು ಮಠದ ಜಾತ್ರಾ ಮಹೋತ್ಸವದಲ್ಲಿ ಉದಾಹರಣೆಯ ಮೂಲಕ ಭಕ್ತಾದಿಗಳಿಗೆ ಎಚ್ಚರಗೊಳಿಸಿದರು.

ರೈತರಿಗೆ ಏಕೆ ನಷ್ಟವಾಗುತ್ತಿದೆ?

ಬೆಂಗಳೂರಿನಲ್ಲಿ ದುಡಿಯುತ್ತಿರುವ ಒಬ್ಬ ಇಂಜಿನಿಯರ್ ದಿನಕ್ಕೆ 10 ರಿಂದ 12 ತಾಸು ಶ್ರಮದಿಂದ ಕೆಲಸ ಮಾಡುತ್ತಾನೆ.

ಇದರಿಂದ ಲಕ್ಷಗಟ್ಟಲೆ ಸಂಬಳ ಬರುತ್ತದೆ. ಇದೇ ರೀತಿ ನಮ್ಮ ರೈತರು ಪ್ರತಿದಿನ ಹೊಲದಲ್ಲಿ 8 ರಿಂದ 10 ತಾಸು ತಾವು ಶ್ರಮದಿಂದ ದುಡಿದರೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ.

ನಾಲ್ಕು ದಿನ ಪೂರ್ಣವಾಗಿ ಕೆಲಸ ಮಾಡಿ ಒಂದು ವಾರ ಆರಾಮಾಗಿದ್ದರೆ ನಾವು ಲಾಭವನ್ನು ನಿರೀಕ್ಷಿಸುವುದು ತಪ್ಪು.

ಒಬ್ಬ ಇಂಜಿನಿಯರ್ ಹೇಗೆ ದಿನಕ್ಕೆ 10 ಗಂಟೆಯಂತೆ ವಾರಕ್ಕೆ ಐದು ರಿಂದ ಆರು ದಿನ ಪರಿಶ್ರಮದಿಂದ ದುಡಿಯುತ್ತಾನೋ,

ಅದೇ ರೀತಿ ನಮ್ಮ ರೈತರು ಕೂಡ ಪ್ರತಿದಿನ ಹೊಲದಲ್ಲಿ ಎಂಟ ರಿಂದ ಹತ್ತು ತಾಸು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ.

ರೈತರು ದಿನಕ್ಕೆ 8 ಗಂಟೆ ಹೊಲದಲ್ಲಿ ಕೆಲಸ ಮಾಡಿದರೆ!!!

ನೀವು ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ನಿಮ್ಮ ಜಿಲ್ಲೆಯಲ್ಲಿರುವ ಪ್ರಗತಿಪರ ರೈತರ ವಿಳಾಸವನ್ನು ಪಡೆದುಕೊಂಡು ಅವರ ತೋಟಕ್ಕೆ ಭೇಟಿ ನೀಡಿ.

ಆಗ ನಿಮಗೆ ನಾವು ಏನು ಮಾಡುತ್ತಿದ್ದೇವೆ, ಅವರು ಪ್ರಗತಿಪರಾಗಲು ಏನು ಮಾಡುತ್ತಿದ್ದಾರೆ ಎಂಬ ವ್ಯತ್ಯಾಸ ಗೊತ್ತಾಗುತ್ತದೆ. 

ಪರಿಶ್ರಮ ಪಟ್ಟು ದುಡಿಯುವ ಒಬ್ಬ ರೈತನ ಉದಾಹರಣೆ!!!

ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿರುವ ರುದ್ರೇಶ್ ಅವರು ಸಾವಯವ ಕೃಷಿಯನ್ನು ಮಾಡುವ ಮೂಲಕ ಸ್ವಾವಲಂಬಿಯಾಗಿ ಜೀವನವನ್ನು ನಡೆಸುತ್ತಿದ್ದಾರೆ.

ಅವರು ಎಲ್ಲಾ ಔಷಧಿಗಳನ್ನು ಮತ್ತು ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಉದಾಹರಣೆಗೆ ಬ್ರಹ್ಮಾಸ್ತ್ರ, ಜೀವಾಮೃತ, ಪಂಚಗವ್ಯ, ಯುನಿಕ್ ಆಸಿಡ್ ಮತ್ತು ಇನ್ನಿತರೆ.

ಇದರಿಂದ ಅವರಿಗೆ ತೋಟಕ್ಕೆ ಔಷಧೀಯ ಖರ್ಚು ಕಮ್ಮಿಯಾಗುತ್ತದೆ ಮತ್ತು ಬೆಳೆದ ಬೆಳೆ ಅವರಿಗೆ ಲಾಭದಾಯಕವಾಗುತ್ತದೆ.

ಕೃಷಿಯಲ್ಲಿ ಪರಿಶ್ರಮಪಟ್ಟು ದುಡಿದರೆ ಆದಾಯ ಇದ್ದೇ ಇದೆ.

ನಾವು ಬರಿ ತೋಟಕ್ಕೆ ಹೊರಗಿನಿಂದ ಔಷಧಿ ಮತ್ತು ಗೊಬ್ಬರವನ್ನು ಕೊಂಡುಕೊಂಡು ಅದನ್ನು ಹಾಕಲು ಮಾತ್ರ ಆವಾಗ ಇವಾಗ ಹೊಲಕ್ಕೆ ಹೋಗುತ್ತಿದ್ದರೆ.

ದಿನಕ್ಕೆ ಎರಡರಿಂದ ಮೂರು ತಾಸು ತೋಟಕ್ಕೆ ನೀರು ಬಿಡಕ್ಕೆ ಹೋಗುತ್ತಿದ್ದರೆ ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ.

ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  VK

ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ


"Agriculture is our CULTURE"