"Agriculture is our CULTURE"

Gruhalaxmi 14 & 15th installment:: ದೀಪಾವಳಿ ಹಬ್ಬಕ್ಕೆ ಗೃಹ ಲಕ್ಷ್ಮೀಯರಿಗೆ ಬಂಪರ್ ಬೋನಸ್! ಸಕಾ೯ರದಿಂದ 4000 ರೂಪಾಯಿ ಜಮೆ! 

ರಾಜ್ಯದಲ್ಲಿ ದೀಪಾವಳಿ ಹಬ್ಬದ ಸಡಗರ ತುಂಬಾ ಜೋರಾಗಿದ್ದು, ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಲು ಜನರಿಗೆ ಅನುಕೂಲವಾಗುವಂತೆ

ಸರ್ಕಾರದ ವತಿಯಿಂದ 14 ಮತ್ತು 15ನೇ ಕಂತಿನ ಗೃಹ ಲಕ್ಷ್ಮೀ ಹಣ (Gruhalaxmi 14 & 15th installment)ಮನೆಯ ಒಡತಿಯರಿಗೆ ಜಮೆಯಾಗಲಿದೆ ಎಂದು ಸುದ್ದಿ ಹರಿದಾಡುತ್ತಿದ್ದು,

ಗೃಹಲಕ್ಷ್ಮಿಯರು ಹಬ್ಬವನ್ನು ಇನ್ನಷ್ಟು ಚೆನ್ನಾಗಿ ಆಚರಿಸಲು ಗೃಹಲಕ್ಷ್ಮಿ ಹಣ ಬಂದರೆ ಚೆನ್ನಾಗಿರುತ್ತದೆ ಎಂದು ಕಾಯುತ್ತಿದ್ದಾರೆ. 

 ಹಾಗಾದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ದೀಪಾವಳಿ ಹಬ್ಬದ ಬೋನಸ್ ಆಗಿ 14 ಮತ್ತು 15ನೇ ಕಂತಿನ ಹಣ ರೂ.4,000 ಈಗ ಜಮೆ ಆಗಲಿದೆಯೇ ಎಂಬುದಕ್ಕೆ ಈ ಲೇಖನದಲ್ಲಿ ನಿಮಗೆ ಉತ್ತರ ಸಿಗುತ್ತದೆ. 

 ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿಯರ ಖಾತೆಗೆ 12 ಮತ್ತು 13ನೇ ಕಂತಿನ ಎರಡು ತಿಂಗಳ ಅಂದರೆ 4000ಗಳನ್ನು

ಈಗಾಗಲೇ ಜಮೆ ಮಾಡಿದೆ ಇದಕ್ಕಾಗಿಸರ್ಕಾರವು ಒಟ್ಟು ಐದು ಸಾವಿರ ಕೋಟಿಗಳನ್ನು ವೆಚ್ಚ ಮಾಡಿದೆ.

ಈಗ 14 ಮತ್ತು 15 ನೇ ಕಂತಿನ ಹಣವನ್ನು ಗೃಹಲಕ್ಷ್ಮಿಯ ಖಾತೆಗೆ ಜಮೆ ಮಾಡಬೇಕಾದಲ್ಲಿ ಸರ್ಕಾರಕ್ಕೆ ಮತ್ತೆ 5,000 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಒಂದೇ ತಿಂಗಳಲ್ಲಿ ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಇದೊಂದೇ ಯೋಜನೆಗೆ ಹಾಕುವುದು ಕಷ್ಟ ಸಾಧ್ಯವಾಗಿದ್ದು,

ಕೊನೆಯ ಪಕ್ಷ 14 ನೇ ಕಂತಿನ ಹಣವನ್ನಾದರೂ ಹಾಕಲು ಕೂಡ 2500 ಕೋಟಿ ರೂಪಾಯಿ ಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಇದು ಕೂಡ ಹೊರೆಯಾಗುತ್ತದೆ. 

ಗೃಹ ಲಕ್ಷ್ಮೀ ಹಣ(Gruhalaxmi installment) ಸಿಗುತ್ತಾ?

 ಆದ್ದರಿಂದ ಗೃಹಲಕ್ಷ್ಮೀ ಯೋಜನೆಯಡಿ ರೂ.2000ಗಳನ್ನು ಪಡೆಯುತ್ತಿರುವ ಮನೆ ಒಡತಿಯರಿಗೆ ದೀಪಾವಳಿಯ ಬೋನಸ್ ಆಗಿ 14 ಮತ್ತು 15ನೇ ಕಂತಿನ ಹಣ ಬರುವುದು ಸಂದೇಹವಾಗಿದ್ದು,

ಇದಕ್ಕೆ ಪುಷ್ಠಿ ನೀಡುವಂತೆ ಸರ್ಕಾರದ ಕಡೆಯಿಂದ ದೀಪಾವಳಿ ಬೋನಸ್ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಮುಖ್ಯಮಂತ್ರಿಗಳಾಗಲಿ,

ಸಚಿವರಾಗಲಿ ಯಾರೊಬ್ಬರೂ ಕೂಡ ಮಾಹಿತಿ ನೀಡಿಲ್ಲ. ಆದ್ದರಿಂದ 14 ಮತ 15ನೇ ಕಂತಿನ ಹಣದ ಬಗ್ಗೆ ಹೆಚ್ಚಿನ ಭರವಸೆ ಇಟ್ಟುಕೊಳ್ಳದೆ,

ದೀಪಾವಳಿ ಹಬ್ಬವನ್ನು ಆಚರಿಸುವುದು ಉತ್ತಮ. ಆದರೆ ನವೆಂಬರ್ 10ರೊಳಗಾಗಿ 14ನೇ ಕಂತಿನ ಹಣ ಜಮೆಯಾಗಬಹುದು ಎಂದು ಮೂಲಗಳು ತಿಳಿಸಿವೆ. 

ಈ ದಾಖಲೆ ಕೊಡದಿದ್ದರೆ ನಿಮ್ಮ ಮಾಸಾಶನ ಕ್ಯಾನ್ಸಲ್! 

 ಇನ್ನೊಂದು ಮುಖ್ಯ ವಿಷಯವೆಂದರೆ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನರ ಮಾಶಾಸನ ಹೀಗೆ ಸರ್ಕಾರದ ಕಡೆಯಿಂದ ವಿವಿಧ ಯೋಜನೆಗಳಲ್ಲಿ ಮಾಶಾಸನ ಪಡೆಯುತ್ತಿರುವವರು

ಸರ್ಕಾರಕ್ಕೆ ಒಂದು ಮುಖ್ಯ ದಾಖಲೆಯನ್ನು ನೀಡಬೇಕಾಗಿದ್ದು, ಇದನ್ನು ನೀಡದಿದ್ದಲ್ಲಿ ನಿಮಗೆ ಬರುತ್ತಿರುವ ಮಾಶಾಸನ ಮುಂದಿನ ತಿಂಗಳಿಂದ ನಿಂತು ಹೋಗಲಿದೆ.

ಏಕೆಂದರೆ ಎಷ್ಟೊಂದು ಜನರು ತೀರಿ ಹೋದ ನಂತರವೂ ಕೂಡ ಅವರ ಮಾಶಾಸನವನ್ನು ಅವರ ಮನೆಯವರು ಇನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದು,

ಇದನ್ನು ತಪ್ಪಿಸುವುದಕ್ಕಾಗಿ ಸರ್ಕಾರವು ಮಾಶಾಸನ ತೆಗೆದುಕೊಳ್ಳುತ್ತಿರುವವರು ಎಲ್ಲರೂ ಕೂಡ ಜೀವಿತ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಕೊಡುವಂತೆ ತಿಳಿಸಿದ್ದಾರೆ. 

 ಜೀವಿತ ಪ್ರಮಾಣ ಪತ್ರ (life certificate) ಪಡೆಯುವುದು ಹೇಗೆ? 

 ನಿಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಆನ್ಲೈನ್ ಮೂಲಕ ಜೀವಿತ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು ಅಲ್ಲಿ

ನಿಮ್ಮ ಬಯೋಮೆಟ್ರಿಕ್ ಹಾಗೂ ಭಾವಚಿತ್ರವನ್ನು ತೆಗೆದುಕೊಂಡು ಅರ್ಜಿ ಸಲ್ಲಿಕೆ ಮಾಡಿ ನಿಮಗೆ ಡಿಜಿಟಲ್ ಮೂಲಕ ಜೀವಿತ ಪ್ರಮಾಣ ಪತ್ರವನ್ನು ಕೊಡುತ್ತಾರೆ. 

 ಜೀವಿತ ಪ್ರಮಾಣ ಪತ್ರ(life certificate)ವನ್ನು ಎಲ್ಲಿ ಸಲ್ಲಿಸಬೇಕು? 

 ನೀವು ಪಡೆದುಕೊಂಡ ಜೀವಿತ ಪ್ರಮಾಣ ಪತ್ರವನ್ನು ನೀವು ಮಾಶಾಸನ ಪಡೆದುಕೊಳ್ಳುತ್ತಿರುವ ಸಂಸ್ಥೆ ಅಂದರೆ

ಆ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿನಲ್ಲಿ ಪಡೆಯುತ್ತಿದ್ದರೆ ಅಲ್ಲಿಯೇ ನೀವು ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅವರುಗಳು ಅದನ್ನು ಸರ್ಕಾರಕ್ಕೆ ತಲುಪಿಸುತ್ತಾರೆ. 

ಎಷ್ಟು ತಿಂಗಳಿಗೊಮ್ಮೆ ಈ life certificate ಸಲ್ಲಿಸಬೇಕು? 

 ಮಾಶಾಸನ ಪಡೆಯುತ್ತಿರುವವರು ಈ ಜೀವಿತ ಪ್ರಮಾಣ ಪತ್ರವನ್ನು ಯಾವುದೇ ಕಾರಣಕ್ಕೂ ನೆಗ್ಲೆಕ್ಟ್ ಮಾಡದೆ ಆದಷ್ಟು ಬೇಗ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಸಲ್ಲಿಸಿ.

ಇದರಿಂದ ನಿಮಗೆ ಬರುತ್ತಿರುವ ಮಾಶಾಸನ ತಪ್ಪುವುದಿಲ್ಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ.

ಈಜೀವಿತ ಪ್ರಮಾಣದ ಪತ್ರವನ್ನು ನೀವು ಪ್ರತಿ ವರ್ಷವೂ ಕೂಡ ಸಲ್ಲಿಸಲೇಬೇಕು. 

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"