Fridge From Gruhalakshmi :: ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್, ರಾಯಚೂರಿನ ಮಹಿಳೆಯ ಸಂತೃಪ್ತಿಯ ಕ್ಷಣ!!!”
Gruhalakshmi scheme is one of the most important scheme of government of karnataka which is aiming to empower women and her financial Statusby giving 2000 rupee per month.
ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಮಹಿಳೆಯರು ತಮ್ಮ ಅಗತ್ಯತೆಗೆ ತಕ್ಕಂತೆ ಗೃಹಲಕ್ಷ್ಮಿ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ.
ಆದರೆ ಈತನ್ಮದ್ಯೆ ರಾಯಚೂರಿನಲ್ಲಿ ಗೃಹಿಣಿಯೊಬ್ಬರು ಫ್ರಿಡ್ಜ್ ಖರೀದಿಸಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಳ್ಕರ್ ಅವರಿಂದ ಶಹಾಬಾಸ್ಸ್ ಗಿರಿಯನ್ನು ಪಡೆದಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ “ಹನುಮಮ್ಮ ನಡುಲಮನಿ” ಅವರು, ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ.
ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸದಿಂದ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಯದ ಪ್ರತಿಯೊಬ್ಬ ಮಹಿಳೆಯೂ ಆರ್ಥಿಕವಾಗಿ ಸ್ವತಂತ್ರರಾಗಬೇಕು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸರ್ಕಾರದ ಆಶಯ ಇಂದು ಹಳ್ಳಿ ಹಳ್ಳಿಗಳಲ್ಲಿ ಸಾಕಾರಗೊಳ್ಳುತ್ತಿದೆ ಎನ್ನುವುದಕ್ಕೆ ಹನುಮಕ್ಕ ಒಂದು ಜೀವಂತ ಉದಾಹರಣೆ ಎನ್ನಬಹುದು.
ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಪಾಲಿಗೆ ಕೇವಲ ಹಣಕಾಸಿನ ನೆರವಲ್ಲ ಬದಲಾಗಿ, ಪ್ರತಿಯೊಬ್ಬ ಹಳ್ಳಿಗಾಡಿನ ಹೆಣ್ಣು ಮಗಳಿಗೂ ಕನಸು ಕಾಣುವಂತೆ ಮಾಡುವ ಯೋಜನೆ
ಎನ್ನಬಹುದು. ಏಕೆಂದರೆ ಸರ್ಕಾರ ನೀಡುತ್ತಿರುವ 2,000 ರೂ. ಹಣದಿಂದ ಶುರುವಾಗುವ ಸಣ್ಣ ಉಳಿತಾಯ, ಮಹಿಳೆಯರ ಬದುಕಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತಿದೆ ಎಂದರೆ ತಪ್ಪಾಗಲಾರದು.
ಗೃಹಲಕ್ಷ್ಮಿ ಯೋಜನೆ ಎಂದರೇನು?
What is gruhalakshmi scheme?
ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ಸರ್ಕಾರ ನೀಡಿರುವ “ಐದು ಪ್ರಮುಖ ಗ್ಯಾರಂಟಿ ಯೋಜನೆ”ಗಳ ಪೈಕಿ ಮಹತ್ವದ ಯೋಜನೆಯಾಗಿದೆ.
ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ “ಪ್ರತಿ ತಿಂಗಳು 2000 ರೂ”ಗಳಂತೆ ಹಣವನ್ನು ನೀಡಲಾಗುತ್ತದೆ.
ಈ ಹಣವು ಅರ್ಜಿದಾರರ “ಬ್ಯಾಂಕ್ ಖಾತೆ”ಗೆ DBT ಮೂಲಕ ನೇರವಾಗಿ ಜಮಾ ಆಗುತ್ತದೆ.
ಇಲ್ಲಿಯವರೆಗೂ ಮಹಿಳೆಯರ ಖಾತೆಗೆ ಎಷ್ಟು ಕಂತುಗಳು ಜಮಾ ಆಗಿವೆ?
2023ರಲ್ಲಿ ಶುರುವಾದ ಈ ಯೋಜನೆಯ ಇಲ್ಲಿಯವರೆಗೂ ಸರ್ಕಾರದ ಮೇಲೆ ಮಹಿಳೆಯರ ವಿಶ್ವಾಸವನ್ನು ಗಟ್ಟಿಗೊಳಿಸುತ್ತಾ ಸಾಗಿದೆ.
ಏಕೆಂದರೆ ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್ ಎರಡು ತಿಂಗಳ ಕಂತನ್ನು ಹೊರೆತುಪಡಿಸಿ, ಮಹಿಳೆಯರಿಗೆ ಎಲ್ಲಾ 24 ಕಂತುಗಳು ಜಮಾ ಗೊಂಡಿದೆ.
ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ಹಣ ಜಮಾವಣೆಯು ತಡವಾದರೂ, ಮಹಿಳೆಯರ ಖಾತೆಗೆ ಹಣ ಬೀಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ತಡೆ ಹಿಡಿದಿರುವ ಎರಡು ಕಂತುಗಳ ಬಗ್ಗೆ ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚೆ ಮಾಡಲಾಯಿತು.
ಇದರ ಪರಿಣಾಮವಾಗಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆದಷ್ಟು ಬೇಗ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದು, ನಂತರ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಹಾಗಾಗಿ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ.
ಇಲ್ಲಿಯವರೆಗೂ ಸರ್ಕಾರ ಎಷ್ಟು ಕಂತುಗಳನ್ನು ಪಾವತಿಸಿದೆ? ?
How much installment given to gruhalakshmi beneficiaries??
ಸರ್ಕಾರ ಇಲ್ಲಿಯವರೆಗೂ 24 ಕಂತುಗಳನ್ನು ಕೊಟ್ಟಿದ್ದು, “25ನೇ ಕಂತಿಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದ್ದು,
ಜನವರಿ 11 ಅಥವಾ 12 ರಿಂದ ಮಹಿಳೆಯರ ಖಾತೆಗೆ ಹಣ ಬಿಡುಗಡೆಯಾಗಬಹುದು .
ಹೀಗಾಗಿ ಗೃಹಲಕ್ಷ್ಮಿ ಯೋಜನೆಯ ಕೇವಲ ಆರ್ಥಿಕ ಸಹಾಯವಾಗಿರದೆ “ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿಕರಣ” ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ರಾಜ್ಯದ ಮಹಿಳೆಯರು “ಆರ್ಥಿಕವಾಗಿ ಶಕ್ತಿಶಾಲಿಗಳಾಗಿ, ಸ್ವಾವಲಂಬಿ” ಜೀವನವನ್ನು ರೂಪಿಸಬೇಕೆಂಬ ಸರ್ಕಾರದ ಉದ್ದೇಶ ಇಂದು ಗ್ರಾಮೀಣ ಪ್ರದೇಶಗಳಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಯಾರ ಮೇಲೂ ಅವಲಂಬಿಸದೆ,
ಸ್ವತಂತ್ರ ಮತ್ತು ಗೌರವದೊಂದಿಗೆ ಬದುಕು ನಡೆಸಬೇಕೆಂಬ ಸರ್ಕಾರದ ಕನಸು ಈಗ ಪ್ರತಿ ಹಳ್ಳಿಗಳಲ್ಲಿಯೂ ಸಾಕಾರಗೊಳ್ಳುತ್ತಿದೆ.
Therefore The Gruhalakshmi scheme is creating meaningful change in women’s lives.
Even a “small monthly financial support can lead to big improvements” when used wisely.
This incident highlights the importance of savings and financial planning.
“Purchasing a refrigerator improves household convenience and health”.
Direct financial assistance empowers women to make independent decisions.
Thank you.
ಧನ್ಯವಾದಗಳು
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply