"Agriculture is our CULTURE"


Gruhalaxmi scheme:: ಗೃಹ ಲಕ್ಷ್ಮೀ 16 ಕಂತಿನ ಹಣಕ್ಕೆ ಸಕಾ೯ರದಿಂದ 2 ಹೊಸ ರೂಲ್ಸ್! ಗೃಹ ಲಕ್ಷ್ಮೀ ಹಣವನ್ನು ಮಹಿಳೆಯರು ಏನು ಮಾಡುತ್ತಿದ್ದಾರೆ ನೋಡಿ!

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಮನೆಯ ಒಡತಿಯರಿಗೆ 15ನೇ ಕಂತಿನ ಡಿಸೆಂಬರ್ 12ನೇ ತಾರೀಖಿನಿಂದ ಹಣ ಜಮೆಯಾಗುತ್ತಿದೆ. ಇನ್ನು 16 ನೇ ಕಂತಿನ ಹಣ ಯಾವಾಗ ಜಮೆಯಾಗುತ್ತೆ ಎಂದು ಕೇಳಲಾಗುತ್ತಿದ್ದು,

ಡಿಸೆಂಬರ್ ಕೊನೆಯ ವಾರದಲ್ಲಿ ನಿಮಗೆ ಗೃಹಲಕ್ಷ್ಮೀ ಹಣ ಜಮೆಯಾಗಲಿದೆ. ಆದರೆ 16 ಕಂತಿನ ಹಣ ಜಮೆಯಗಬೇಕೆಂದರೆ ಸಕಾ೯ರ 2 ಹೊಸ ರೂಲ್ಸ್ ಜಾರಿಗೆ ತಂದಿದ್ದು, ಅದನ್ನು ಪಾಲಿಸಿದಲ್ಲಿ ಮಾತ್ರ ನಿಮಗೆ 16 ಕಂತಿನ ಹಣ ಬರುತ್ತದೆ.

ಹಾಗಾದರೆ ಏನದು ಷರತ್ತುಗಳು? 

ಗೃಹ ಲಕ್ಷ್ಮೀಯ ಪ್ರತಿ ಕಂತಿನ ಹಣ ಜಮೆಯಾದಾಗ ಎಲ್ಲರಿಗೂ ಒಂದೇ ಬಾರಿ ಜಮೆಯಾಗಲ್ಲ. ಕೆಲ ಜಿಲ್ಲೆಗಳ ಕೆಲವರಿಗೆ ಮೊದಲು ಆಮೇಲೆ ಇನ್ನು ಕೆಲವರಿಗೆ ಜಮೆಯಾಗುತ್ತದೆ. ಎಸ್ಬಿಐ ಹಾಗೂ ಕೆನರಾ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರಿಗೆ ಮೊದಲು ಹಣ ಜಮೆಯಾಗುತ್ತಿದೆ. ಬೇರೆ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವವರಿಗೆ 2-3 ದಿನಗಳ ನಂತರದಲ್ಲಿ ಜಮೆಯಾಗುತ್ತಿದೆ.

ತಡವಾದರೂ ಪರವಾಗಿಲ್ಲ ನಿಮ್ಮ ಬ್ಯಾಂಕ್ ಖಾತೆ ಬದಲಿಸಬೇಡಿ! 

ಇದರಿಂದಾಗಿ ಗೃಹಲಕ್ಷ್ಮಿ ಫಲಾನುಭವಿಗಳು ತಮ್ಮ ಖಾತೆಗಳನ್ನು ಎಸ್ ಬಿ ಐ ಕೆನರಾ ಬ್ಯಾಂಕ್ ಗಳಲ್ಲಿ ಹೊಸದಾಗಿ ತೆರೆದು ಅವುಗಳಿಗೆ ಹಣ ಜಮೆ ಮಾಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈ ರೀತಿ ಬ್ಯಾಂಕ್ ಖಾತೆ ಬದಲಿಸಿದಲ್ಲಿ ಅದಕ್ಕೆ ಆಧಾರ್ ಜೋಡಣೆ ಮಾಡಿಸಿ ಇ-ಕೆ ವೈಸಿ ಮಾಡಿಸಬೇಕು ಹೀಗೆ ಮಾಡಿಸದಿದ್ದಲ್ಲಿ ಗೃಹಲಕ್ಷ್ಮಿಯ ಹಣ ಬರುವುದಿಲ್ಲ.

ನೀವು ಹೀಗೆ ಖಾತೆಯನ್ನು ಬದಲಾವಣೆ ಮಾಡುವಾಗ ಪ್ರಕ್ರಿಯೆ ತಡವಾದಲ್ಲಿ ಎರಡು ಮೂರು ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗುವುದೇ ಇಲ್ಲ ಆದರಿಂದ ನಿಮಗೆ ಎರಡು ಮೂರು ದಿನ ಹಣ ಜಮೆಯಾಗುವುದು ತಡವಾದರೂ ಪರವಾಗಿಲ್ಲ ಯಾರೂ ಕೂಡ ಬೇರೆ ಬ್ಯಾಂಕುಗಳಲ್ಲಿ ಖಾತೆ ತೆಗೆದು ಅದಕ್ಕೆ ಗೃಹಲಕ್ಷ್ಮಿ ಹಣ ಜಮೆ ಮಾಡಲು ಮನವಿ ಸಲ್ಲಿಸಬೇಡಿ.

ರೇಷನ್ ಕಾಡ್೯ಗೆ ಕುಟುಂಬದ ಎಲ್ಲರ ಆಧಾರ ಲಿಂಕ್ ಕಡ್ಡಾಯ! 

ಮತ್ತೊಂದು ಷರತ್ತು ಏನೆಂದರೆ ನಿಮಗೆ ಗೃಹಲಕ್ಷ್ಷೀ ಹಣ ಬರಬೇಕೆಂದರೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗಳು ನಿಮ್ಮ ರೇಷನ್ ಕಾರ್ಡಿಗೆ ಲಿಂಕ್ ಆಗಿರಬೇಕು ಇ- ಕೆವೈಸಿ ಮಾಡಿಸಿರಬೇಕು ಎಂದು ಸಕಾ೯ರ ಪದೇ ಪದೇ ಹೇಳುತ್ತಿದೆ. ಆದ್ದರಿಂದ ಕಡ್ಡಾಯವಾಗಿ ಕುಟುಂಬದ ಎಲ್ಲರ ಆಧಾರ್ ಕಾರ್ಡ್ ಗಳನ್ನು ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿ

ಗೃಹಲಕ್ಷ್ಮೀ ಹಣವು ಹೇಗೆ ಬಳಕೆಯಾಗುತ್ತಿದೆ ನೋಡಿ!

ಗೃಹಲಕ್ಷ್ಮೀ ಹಣವನ್ನು ಮನೆಯ ಒಡತಿಯರು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಹಲವು ನಿದಶ೯ನಗಳು ಸಿಗುತ್ತಿದ್ದು, ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಒಂದು ಕುಟುಂಬದ ಅತ್ತೆ ಸೊಸೆ ಸೇರಿ ಗೃಹ ಲಕ್ಷ್ಮೀ ಹಣದಲ್ಲಿ ಬೋರವೆಲ್ ತೆಗೆಸಿದ್ದಾರೆ.

ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಬಡ ಕುಟುಂಬಗಳಿಗೆ ಗಗನಕ್ಕೆ ಏರುತ್ತಿರುವ ಚಿನ್ನದ ಬೆಲೆಯಲ್ಲಿ ಚಿನ್ನ ಖರೀದಿ ಕನಸಿನ ಮಾತು ಆದರೆ ಗೃಹ ಲಕ್ಷ್ಮೀ ಹಣದಿಂದ ಕೊಪ್ಪಳದ ಗಂಗಾವತಿಯಲ್ಲಿ ಮಹಿಳೆಯೊಬ್ಬರು ಮಾಂಗಲ್ಯ ಖರೀದಿಸಿದ್ದಾರೆ. ಮತ್ತೊಬ್ಬ ಮಹಿಳೆ ಕಿವಿಯೋಲೆ ಖರೀದಿ ಮಾಡಿದ್ದಾರೆ. ಒಬ್ಬರು ಖಾರ ಕುಟ್ಟುವ ಮಷೀನ್ ಹಾಕಿಸಿದ್ದಾರೆ. ಕೆಲವರು ತಮ್ಮ ಮಕ್ಕಳ ಶಾಲಾ ಫೀಸ್ ಕಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಸಾಲದ ಕಂತು ಕಟ್ಟಿದ್ದಾರೆ.

ಹೀಗೆ ಗೃಹ ಲಕ್ಷ್ಮೀ ಕುಟುಂಬದ ನಿವ೯ಹಣೆಗೆ ಬಳಕೆಯಾಗುತ್ತಿರುವುದನ್ನು ಕೇಳಿದ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಕಾ೯ರದ ಇತರೆ ಮಂತ್ರಿಗಳು ಕಾಂಗ್ರೆಸ್ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

15 ನೇ ಕಂತಿನ ಹಣ ಬಂದಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ‌ರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.

Step 1: ಡಿಬಿಟಿ ಕರ್ನಾಟಕ (DBT Karnataka) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://play.google.com/store/apps/details?id=com.dbtkarnataka

Step 2: ನಿಮ್ಮ ಆಧಾರ ಕಾರ್ಡ್ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Pic 1: Enter the aadhar number

Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್‌ ಮಾಡಿ ವೆರಿಫೈ (Verify) ಬಟನ್ ಮೇಲೆ ಕ್ಲಿಕ್ ಮಾಡಿ

Pic 2: Verify by OTP

Step 4: ನಂತರ 4 ಸಂಖ್ಯೆಗಳ ಎಮ್-ಪಿನ್(M-PIN) ಕ್ರಿಯೇಟ್ ಮಾಡಿಕೊಳ್ಳಿ ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Pic 3: Personal information details

Step 5:ನಂತರ ಓಪನ್ ಆಗುವ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎಂಬ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ

Pic 4: Click on payment status option

Step 6: ನಂತರ ನೀವು ಯಾವ ಯಾವ ಸ್ಟೀಮ್ ಗಳಲ್ಲಿ ಸರ್ಕಾರದಿಂದ ಅನುದಾನ ಪಡುತ್ತಿರುವಿರಿ ಆ ಎಲ್ಲಾ ಸ್ಕಿಮ್ ಗಳ ಮಾಹಿತಿ ತೋರಿಸುತ್ತದೆ. ಅಲ್ಲಿ ಗೃಹ ಲಕ್ಷ್ಮೀ ಯೋಜನೆ (Gruhalaxmi scheme) ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

Pic 5: Select gruhalakshmi option

ಆಗ ನಿಮಗೆ ನೀವು ಎಷ್ಟು ಕಂತುಗಳ ಹಣ ಪಡೆದಿದ್ದೀರಿ ಯಾವಾಗ ಜಮೆಯಾಗಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ.

Pic 6: Amount credicted status

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"