Gruhalakshmi and SIR :: ಗೃಹಲಕ್ಷ್ಮಿ ಯೋಜನೆ 25/26ನೇ ಕಂತಿನ ಬಗ್ಗೆ ಹಾಗೂ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿಯ ಕುರಿತು!!
ಗೃಹಲಕ್ಷ್ಮಿ ಯೋಜನೆ 25/26ನೇ ಕಂತಿನ ಬಗ್ಗೆ ಹಾಗೂ ವಿಶೇಷ ಸಮಗ್ರ ಪರಿಷ್ಕರಣೆ ಪಟ್ಟಿಯ ಕುರಿತು:
Recent update on the Gruha Lakshmi 25/26th installment and SIR by Election Commission:
• ಅಂದಾಜು 65% ರಿಂದ 70% ಫಲಾನುಭವಿಗಳಿಗೆ 25ನೇ ಕಂತಿನ ಹಣ ಜಮೆ ಮಾಡಲಾಗಿದೆ. ಉಳಿದ 30-35% ಜನರಿಗೆ ಮುಂದಿನ ಹಂತ ಅಂದರೆ 3ನೇ ಹಂತದ ವೇಳೆಗೆ ಡಿಬಿಟಿ ಮೂಲಕ ಜಮೆಯಾಗುವುದು, ಆದ್ದರಿಂದ ತಡವಾಗಿ ಖಾತೆಗೆ ಸೇರುತ್ತದೆ.
26ನೇ ಕಂತು: 26ನೇ ಕಂತಿನ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಸುಮಾರು 8 ರಿಂದ 10 ದಿನಗಳಲ್ಲಿ ಈ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ.
• ವಿಧಾನಸಭೆಯಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣದ ಬಗ್ಗೆ ಆರ್. ಅಶೋಕ್ ಅವರು ಪ್ರಶ್ನಿಸಿದರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆದಷ್ಟು ಬೇಗ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
S.I.R (ವಿಶೇಷ ಸಮಗ್ರ ಪರಿಷ್ಕರಣೆ) – ಮತದಾರರ ಪಟ್ಟಿ ಮಾಹಿತಿ:
S.I.R (Special Intensive Revision) – voters list:
ಕಳೆದ ಬಾರಿ 2002ರಲ್ಲಿ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸಲಾಗಿತ್ತು, ಮತ್ತೆ ಈಗ 24 ವರ್ಷಗಳ ನಂತರ ಮತದಾರರ ಪಟ್ಟಿಯನ್ನು ಸರಿಪಡಿಸುವ ಕೆಲಸ (Special Intensive Revision) ನಡೆಯುತ್ತಿದೆ. ಬಿ.ಎಲ್.ಒ (BLO) ಅಧಿಕಾರಿಗಳು ಮನೆ ಮನೆಗೆ ಬಂದು ಪರಿಶೀಲನೆ ಮಾಡುತ್ತಾರೆ.
• 2002ರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮತ್ತು ನೀವು ನಿಮ್ಮ ಊರಿನಲ್ಲಿಯೇ ಇದ್ದರೆ, ನಿಮ್ಮ ಆಧಾರ್ ಮತ್ತು ಭಾವಚಿತ್ರದೊಂದಿಗೆ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು ಮತ್ತು BLO ಅಧಿಕಾರಿಗಳೊಂದಿಗೆ ಮ್ಯಾಪಿಂಗ್ ಮಾಡಿಸಬಹುದು.
ನೀವು ಯಾವುದಾದರೂ ಕಾರಣದಿಂದ ಬೇರೆಡೆಗೆ ಹೋಗಿದ್ದರೆ, ನಿಮ್ಮ ತಂದೆ-ತಾಯಿಯ ಹೆಸರು, ನಿಮ್ಮ ಮತದಾನದ ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಸೀರಿಯಲ್ ನಂಬರ್ ಬೇಕಾಗುತ್ತದೆ.
• ಅಸೆಂಬ್ಲಿ ಸಂಖ್ಯೆ, ಪಾರ್ಟ್ ಸಂಖ್ಯೆ ಮತ್ತು ಸೀರಿಯಲ್ ಸಂಖ್ಯೆ (ತಂದೆ-ತಾಯಿಯ ವಿವರಗಳು) ಇವುಗಳನ್ನು ಬಿ.ಎಲ್.ಒ ಅಧಿಕಾರಿಗೆ ನೀಡಿದರೆ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸುತ್ತಾರೆ.
ನೀವು ದಾಖಲೆಗಳನ್ನು ಸರಿಯಾಗಿ ನೀಡದಿದ್ದರೆ ನಿಮ್ಮ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುತ್ತದೆ.
• ಮದುವೆಯಾದ ಹೆಣ್ಣುಮಕ್ಕಳಿಗೆ ಸೂಚನೆ: ಮದುವೆಯಾಗಿ ಹೆಣ್ಣು ಮಕ್ಕಳು ಅಪ್ಪ-ಅಮ್ಮನ ಮನೆಯಿಂದ ಗಂಡನ ಮನೆಗೆ ಬಂದಿದ್ದರೆ, ಅವರು ತಮ್ಮ ಹೆಸರನ್ನು ಹೊಸ ವಿಳಾಸಕ್ಕೆ ಬದಲಾಯಿಸಿಕೊಳ್ಳುವುದು ಮುಖ್ಯ.
ಅದಕ್ಕಾಗಿ ತಂದೆ-ತಾಯಿಯ ಮತದಾನದ ಕ್ಷೇತ್ರದ ಮಾಹಿತಿ (ಅಸೆಂಬ್ಲಿ ನಂಬರ್, ಪಾರ್ಟ್ ನಂಬರ್, ಸೀರಿಯಲ್ ನಂಬರ್) ಕೊಡಬೇಕು.
ಈ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡದೆ ಇದ್ದರೆ, ಮತದಾರರ ಪಟ್ಟಿಯಲ್ಲಿರುವ ಹೆಸರನ್ನು ತೆಗೆದುಹಾಕುವ ಅವಕಾಶವಿದೆ.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದ ಮುಖ್ಯ ಯೋಜನೆ. ಇದು ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ನೀಡುವ ಮೂಲಕ ಮಹಿಳಾ ಸಬಲೀಕರಣ ಮಾಡುತ್ತದೆ.
ನೇರ ನಗದು ವರ್ಗಾವಣೆ (DBT) ಮೂಲಕ ಹಣ ತಲುಪುತ್ತದೆ. ಇದು ಬಡತನ ನಿರ್ಮೂಲನೆ ಜೊತೆಗೆ ಮಹಿಳೆಯರಲ್ಲಿ ಆರ್ಥಿಕ ನಿರ್ಧಾರ ಸಾಮರ್ಥ್ಯ ಹೆಚ್ಚಿಸುತ್ತದೆ.
SIR (Special Intensive Revision) ಚುನಾವಣಾ ಆಯೋಗವು ನಡೆಸುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ. ಚುನಾವಣೆ ನಡೆಸಲು ದೋಷರಹಿತ ಮತದಾರರ ಪಟ್ಟಿ ಮುಖ್ಯ.
ಇದರಲ್ಲಿ ಮನೆ-ಮನೆಗೆ ಭೇಟಿ ನೀಡಿ ಹೊಸ ಮತದಾರರನ್ನು ಸೇರಿಸುವುದು, ಮರಣ ಹೊಂದಿದವರ ಹೆಸರು ತೆಗೆಯುವುದು ಮತ್ತು ಆಧಾರ್ ಜೋಡಣೆಯ ಮೂಲಕ ನಕಲಿ ಮತದಾರರನ್ನು ಗುರುತಿಸುತ್ತಾರೆ. ಗೃಹಲಕ್ಷ್ಮಿ ಯೋಜನೆಯು ಸಾಮಾಜಿಕ-ಆರ್ಥಿಕ ನ್ಯಾಯ ಎತ್ತಿಹಿಡಿದರೆ, SIR ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುತ್ತದೆ.
The Gruha Lakshmi program by the Karnataka Government helps women by giving ₹2,000 every month to the female head of the family.
This money is sent directly to their bank accounts using Direct Benefit Transfer (DBT). The goal is to reduce poverty and empower women socially and financially, giving a voice to the vulnerable of the society.
To have fair elections, the voter list must be perfect and without mistakes. During this process, officers visit every house to add new voters and remove the names of people who have died or moved away.
They also link Aadhaar cards to find and remove fake voters. This ensures that every vote is real and the election is honest.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply