Gruhalakshmi Update :: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಪ್ರಮುಖ ಅಂಶಗಳು!! ಮುಂದಿನ ಕಂತುಗಳು ಯಾವಾಗ ಜಮಾ ಆಗುತ್ತೆ?
ಕರ್ನಾಟಕ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಇತ್ತೀಚಿನ ದಿನಾಂಕಗಳಿಗೆ ಸಂಬಂಧಿಸಿದಂತೆ ಪ್ರಮುಖ ಅಂಶಗಳ ಕುರಿತು
Regarding the recent update on the scheme, run by Karnataka State government, Gruhalakshmi and Anna Bhagya Yojana.
* ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ನಿನ್ನೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದೆ.
ಯಾವ್ಯಾವ ಜಿಲ್ಲೆಗಳಲ್ಲಿ ಹಣ ಖಾತೆ ಸೇರಿದ?
* ಕೊಪ್ಪಳ, ಹಾವೇರಿ, ಬೆಳಗಾವಿ, ಗದಗ ಮತ್ತು ಚಿಕ್ಕಬಳ್ಳಾಪು, ಮೈಸೂರು, ವಿಜಪುರ ಜಿಲ್ಲೆಗಳ ಫಲಾನುಭವಿಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಗೃಹಲಕ್ಷ್ಮಿಯ ಅಧಿಕೃತ ಆಧುನಿಕರ ಮಾಹಿತಿ:-
Authentic and guanine information :-
ನಮ್ಮ ಗ್ರೂಪ್ ಸದಸ್ಯರ ಸಾರ್ವಜನಿಕ ಪ್ರತಿಕ್ರಿಯೆಗಳ ಆಧಾರದ ಮೇಲೆ ನಾವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ನಿಖರ ಹಾಗೂ ಅಧಿಕೃತ ನೀಡುತ್ತೇವೆ. ಕ್ರೆಡಿಟ್ ಆಗಿರುವ ಮೆಸೇಜ್‌ಗಳ ಫೋಟೋಗಳನ್ನು ನೀವು ನೋಡಬಹುದು.
ವಿಜಯಪುರ

Credited Message in Vijayapura
ಮೈಸೂರು

DBT Status in App
* ಪ್ರಸ್ತುತವಾಗಿ, ಅಂದಾಜು 30% ರಿಂದ 35% ರಷ್ಟು ಫಲಾನುಭವಿಗಳಿಗೆ ಮಾತ್ರ ಹಣ ಜಮ್ಮಾ ಆಗಿದೆ, ಸತತವಾಗಿ ಬ್ಯಾಂಕ್ ರಜಾ ಇದ ಕಾರಣದಿ ಜಮೆ ಮಾಡುವ ಪ್ರಕ್ರಿಯೆಯಲ್ಲಿ ತಡ ಆಗಿದೆ ರಜೆಗಳು ಮುಗಿದ ನಂತರ ಈ ಪ್ರಕ್ರಿಯೆಯು ಈನ್ನಷ್ಟು ಚುರುಕುಗೊಳ್ಳುತದೆ.
* ಯಾವುದೇ ಒಂದು ನಿರ್ದಿಷ್ಟ ಜಿಲ್ಲೆಯ ಫಲಾನುಭವಿಗಳಿಗೆ ಏಕಕಾಲದಲ್ಲಿ ಹಣವನ್ನು ವರ್ಗಾಯಿಸಲಾಗುತ್ತಿಲ್ಲ. ಬದಲಿಗೆ, ಹಂತ ಹಂತವಾಗಿ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ.
ಒಂದು ವೇಳೆ ನಿಮ್ಮ ಜಿಲ್ಲೆಗೆ ಹಣ ಬಿಡುಗಡೆಯಾಗಿದ್ದರೂ, ನಿಮಗೆ ಹಣ ತಲುಪಲು ವಿಳಂಬವಾದಲ್ಲಿ, ಆತಂಕಪಡುವ ಅಗತ್ಯ ಇಲ್ಲ ಹಣ ಹಂತ ಹಂತವಾಗಿ ಫಲನುಭವಿಗಳಿಗೆ ಸೇರುತ್ತೆಸದೆ
ಅನ್ನಭಾಗ್ಯ ಯೋಜನೆ
* ಜನವರಿ 2025ರ ಅನ್ನಭಾಗ್ಯ ಯೋಜನೆಯ ಹಣವನ್ನು ಸರ್ಕಾರವು ಇನ್ನೂ ಬಿಡುಗಡೆ ಮಾಡಿಲ್ಲ. ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿದೆ.
* ವಿಧಾನಸಭೆಯಲ್ಲಿ ಶಾಸಕರಾದ ಮಹೇಶ್ ತೆಂಗಿನಕಾಯಿ ಅವರು ಈ ವಿಷಯದ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ – OMSS) ಅಡಿಯಲ್ಲಿ ರಾಜ್ಯಕ್ಕೆ ಅಕ್ಕಿಯನ್ನು ಪೂರೈಸಲು ತಿಂಗಳುಗಟ್ಟಲೆ ನಿರಾಕರಿಸಿತು.
ಇದರಿಂದಾಗಿ ರಾಜ್ಯ ಸರ್ಕಾರವು ನೇರ ನಗದು ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ – DBT) ಮುಖಾಂತರ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ಜಮಾ ಮಾಡಲು ನಿರ್ಧರಿಸಿತ್ತು.
ಆದರೆ, ಅನಿರೀಕ್ಷಿತವಾಗಿ ಜನವರಿ ೧೭, ೨೦೨೫ ರಂದು ಕೇಂದ್ರ ಸರ್ಕಾರವು ರಾಜ್ಯಕ್ಕೆ ಅಕ್ಕಿ ನೀಡಲು ಸಮ್ಮತಿಸಿತು. ಈ ಹೊಸ ನಿರ್ಧಾರವನ್ನು ಕಾರ್ಯಗತಗೊಳಿಸುವಾಗ ಸ್ವಲ್ಪ ಮಟ್ಟಿನ ತಾಂತ್ರಿಕ ಸಮಸ್ಯೆಗಳು ಉಂಟಾದ ಕಾರಣದಿಂದಾಗಿ,
ನೇರ ನಗದು ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ – DBT) ಮೂಲಕ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಚಿವರಾದ ಕೆ. ಎಚ್. ಮುನಿಯಪ್ಪ ಅವರ ಉತ್ತರಿಸಿದರು.
* ಸರ್ಕಾರದ ಅಧಿಕೃತ ವಿವರಣೆಯ ಪ್ರಕಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಅಕ್ಕಿ ವಿತರಣೆಗೆ ಸಂಬಂಧಿಸಿದ ಒಪ್ಪಂದದ ಪರಿವರ್ತನಾ ಅವಧಿಯಲ್ಲಿ ಉಂಟಾದ ವ್ಯತ್ಯಾಸಗಳ ಕಾರಣದಿಂದಾಗಿ,
ಹಲವಾರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಒಂದು ತಿಂಗಳ ಅವಧಿಗೆ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂಬ ವಿಷಯವು ಬೆಳಕಿಗೆ ಬಂದಿದೆ.
ಕರ್ನಾಟಕ ಸರ್ಕಾರವು ರಾಜ್ಯದ ನಾಗರಿಕರ ಸಾಮಾಜಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಎಂಬ ಎರಡು ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದೆ.
‘ಹಸಿವು ಮುಕ್ತ ರಾಜ್ಯ’ವನ್ನಾಗಿಸುವ ಮುಖ್ಯ ಗುರಿಯೊಂದಿಗೆ ಅನ್ನಭಾಗ್ಯ ಯೋಜನೆಯು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಆಹಾರದ ಹಕ್ಕನ್ನು ಭದ್ರಪಡಿಸುತ್ತದೆ, ಅಂದರೆ ಪ್ರತಿಯೊಬ್ಬರಿಗೂ ಆಹಾರ ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಇದರ ಜೊತೆಗೆ, ಗೃಹಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಯಾದ ಹೆಣ್ಣುಮಕ್ಕಳ ಕೈಗೆ ನೇರವಾಗಿ ಹಣವನ್ನು ತಲುಪಿಸುವ ಮೂಲಕ, ಆರ್ಥಿಕ ವಿಷಯಗಳಲ್ಲಿ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ.
ಈ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸಹಾಯ ಮಾಡುತ್ತದೆ.
Karnataka State governments, social security framework targeting to most vulnerable groups with food, security and gender based financial inclusion through DBT model,
Ensuring transparency and accountability with these schemes in increasing the cash in the hands of rural and urban poor.
ಧನ್ಯವಾದಗಳು.
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply