26th Installment :: ಕೊನೆಗೂ 26ನೇ ಕಂತಿನ ಗೃಹಲಕ್ಷ್ಮಿ ಬಿಡುಗಡೆ ಹಂತಕ್ಕೆ ಬಂದಿದೆ!!!
ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿಗೆ ಸಂಬಂಧಿಸಿದಂತೆ ನೀಡಿರುವ ಮುಖ್ಯವಾದ ವಿಷಯವಾರುಗಳು ::
Minister Lakshmi Hebbalkar’s upadte on the 26th installment of Gruhalakshmi Scheme ::
ಮುಖ್ಯವಾದ ಅಂಶಗಳು ಹೀಗಿವೆ:
* ಸಚಿವರು ನೀಡಿರುವ ಮಾಹಿತಿಯ ಪ್ರಕಾರ, 25 ಮತ್ತು 26ನೇ ಕಂತುಗಳ ಸಂಪೂರ್ಣ ಪ್ರಕ್ರಿಯೆಯನ್ನು ಇಲಾಖೆಯ ವತಿಯಿಂದ ಮುಗಿಸಲಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಬೇಕಾಗಿರುವ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಣವನ್ನು ಬಿಡುಗಡೆ ಮಾಡಲು ಯಾವುದೇ ತೊಂದರೆ ಇಲ್ಲ.
* 25ನೇ ಕಂತಿನ ಹಣವನ್ನು ಬಿಡುಗಡೆ ಮಾಡಿ ಸುಮಾರು 8 ರಿಂದ 10 ದಿನಗಳು ಕಳೆದಿವೆ. ಈಗಾಗಲೇ ಸುಮಾರು 55% ರಿಂದ 60% ಫಲಾನುಭವಿಗಳ ಖಾತೆಗಳಿಗೆ ಹಣ ತಲುಪಿದೆ.
ಹಣವನ್ನು ಪಡೆದ ಫಲಾನುಭವಿಗಳು ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು.
ಮೊಬೈಲ್ನಲ್ಲಿ ಹಣ ಪಾವತಿ ಸ್ಥಿತಿ ತಿಳಿಯುವುದು ಹೇಗೆ?
How to check the status ?
‘DBT Karnataka‘ ಆ್ಯಪ್ನಲ್ಲಿ ಫಲಾನುಭವಿಗಳು ಕಚೇರಿಗೆ ಹೋಗದೆ ಹಣದ ಮಾಹಿತಿ ಪಡೆಯಬಹುದು.
1. ಗೂಗಲ್ ಪ್ಲೇ ಸ್ಟೋರ್ನಿಂದ ‘DBT Karnataka‘ ಆ್ಯಪ್ ಡೌನ್ಲೋಡ್ ಮಾಡಿ. https://dbt.karnataka.gov.in/
2. 12 ಅಂಕಿ ಆಧಾರ್ ಸಂಖ್ಯೆ ನಮೂದಿಸಿ, OTP ಮೂಲಕ ದೃಢೀಕರಿಸಿ ಲಾಗಿನ್ ಮಾಡಿ.
3. 4 ಅಂಕಿಗಳ mPIN ರಚಿಸಿ.
4. ಮುಖಪುಟದ ‘Payment Status’ ಮೇಲೆ ಕ್ಲಿಕ್ ಮಾಡಿ, ಯೋಜನೆಗಳ ಪಟ್ಟಿಯಲ್ಲಿ ‘Gruhalakshmi’ ಆಯ್ಕೆಮಾಡಿ ಹಣ ಜಮೆಯಾದ ದಿನಾಂಕ, ಮೊತ್ತದ ವಿವರ ಪಡೆಯಿರಿ.
* ಬಾಕಿ ಉಳಿದಿರುವ ಫಲಾನುಭವಿಗಳ ಗಮನಕ್ಕೆ, ಸುಮಾರು 40% ರಿಂದ 45% ಫಲಾನುಭವಿಗಳಿಗೆ ಹಣ ಬರಲು ಇನ್ನೂ ಬಾಕಿ ಇದೆ. ಡಿಬಿಟಿ (DBT – ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ – ನೇರ ನಗದು ವರ್ಗಾವಣೆ) ಮೂಲಕ ಜಿಲ್ಲೆಗಳ ಪ್ರಕಾರ ಹಣವನ್ನು ಜಮಾ ಮಾಡಲಾಗುತ್ತಿದೆ.
ಆದ್ದರಿಂದ, ಹಣ ಬಾರದ ಫಲಾನುಭವಿಗಳು ದಯವಿಟ್ಟು ಮುಂದಿನ 3-4 ದಿನಗಳವರೆಗೆ ಕಾಯುವಂತೆ ಕೇಳಿಕೊಳ್ಳಲಾಗಿದೆ.
* ಬಾಕಿ ಇರುವ ಕಂತುಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಲು ಸರ್ಕಾರವು ಬದ್ಧವಾಗಿದೆ. ಯಾವುದೇ ಕಾರಣದಿಂದ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು.
ಸದ್ಯದಲ್ಲಿಯೇ 26ನೇ ಕಂತಿನ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಆದ್ದರಿಂದ, ಫಲಾನುಭವಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವೆ ತಿಳಿಸಿದರು.
ಹೆಣ್ಣುಮಕ್ಕಳಿಗೆ ಹಣಕಾಸಿನ ಸ್ವಾಯತ್ತತೆಯನ್ನು ದಯಪಾಲಿಸುವುದರ ಮೂಲಕ ಅವರ ಮಾನಸಿಕ ಸ್ಥೈರ್ಯ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಚಾತುರ್ಯವನ್ನು ಹೆಚ್ಚಿಸುತ್ತದೆ.
ಅಪ್ರಕಟಿತ ದುಡಿಮೆಗೆ ಮನ್ನಣೆ ಮನೆಯಲ್ಲಿ ಹೆಂಗಸರು ಮಾಡುವ ‘ಸಂಬಳವಿಲ್ಲದ ಕೆಲಸ’ಕ್ಕೆ ದೊರೆಯುವ ಬಹುಮುಖ್ಯ ಮರ್ಯಾದೆ ಇದು. ಸಣ್ಣಪುಟ್ಟ ಕರ್ಚುಗಳಿಗೆ ಬೇರೆಯವರ ಮುಂದೆ ಅಂಗಲಾಚುವ ಅಸಹಾಯಕತೆಯನ್ನು ತೊಲಗಿಸಿ ಸ್ವಾವಲಂಬನೆಯನ್ನು ಕರುಣಿಸುತ್ತದೆ.
ಆಸ್ತಿಗಳನ್ನು ಸಮನಾಗಿ ಹಂಚುವ ಮುಖಾಂತರ ಸಮಾಜದ ಕಡೆಯ ಸ್ತ್ರೀಯನ್ನೂ ಮುಖ್ಯ ವಾಹಿನಿಗೆ ಕರೆತರುತ್ತದೆ. ಆರ್ಥಿಕ ತಾರತಮ್ಯವನ್ನು ಕಡಿಮೆಗೊಳಿಸುವುದರ ಮೂಲಕ ಸಮಾಜದಲ್ಲಿ ‘ಹಂಚಿಕೆಯ ನ್ಯಾಯ’ವನ್ನು ವಾಸ್ತವವಾಗಿ ಅನುಷ್ಠಾನಕ್ಕೆ ತರುತ್ತದೆ.
True to its name, the Gruhalakshmi scheme ensures financial autonomy for the woman of the house by providing tangible recognition for her invisible labour.
It fosters self-reliance by mitigating the systemic helplessness of marginalized women. By enhancing their agency and decision-making capacity within the household, the scheme serves as a practical tool for socio-economic empowerment, fueling a cycle of power and progress.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply