"Agriculture is our CULTURE"

Gruhalakshmi :: ಗೃಹಲಕ್ಷ್ಮಿ 26ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್!! ಹಾಗೂ 26ನೇ ಕಂತಿನ ಹಣದ ಜಮಾ ಯಾವಾಗ??

New rules in Ghruha lakshmi scheme and update on 26th installment ::

26ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ಮೊದಲು, ಸರ್ಕಾರವು ಒಂದು ಹೊಸ ನಿಯಮವನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿದೆ. 

• ಜೀವಿತಾವಧಿ ಪ್ರಮಾಣಪತ್ರ (Life Certificate)

ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳು, ತಾವು ಜೀವಂತವಾಗಿದ್ದೇವೆ ಎಂಬುದನ್ನು ಖಚಿತಪಡಿಸಲು ‘ಜೀವಿತಾವಧಿ ಪ್ರಮಾಣಪತ್ರ‘ ವನ್ನು ಸಲ್ಲಿಸುವ ಅಗತ್ಯವು ಬರಬಹುದು. ಅಂದರೆ, ಒಂದು ಅಧಿಕೃತ ದಾಖಲೆಯ ಮೂಲಕ ಅವರು ಜೀವಂತವಾಗಿದ್ದಾರೆ ಎಂದು ಸಾಬೀತುಪಡಿಸಬೇಕಾಗುತ್ತದೆ.

* ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮರಣ ಹೊಂದಿದ ನಂತರವೂ ಸರಿಸುಮಾರು 68,000 ಖಾತೆಗಳಿಗೆ ಹಣವು ಜಮೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. 

ಈ ಸಮಸ್ಯೆಯನ್ನು ತಡೆಯುವ ಸಲುವಾಗಿ, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗಳು (ಸಿಎಂ) ಮತ್ತು ಉಪಮುಖ್ಯಮಂತ್ರಿಗಳಿಗೆ (ಡಿಸಿಎಂ) ಪತ್ರವನ್ನು ಬರೆದು ಈ ವಿಷಯವನ್ನು ತಿಳಿಸಿದ್ದಾರೆ.

* ಈ ವಿಷಯದ ಬಗ್ಗೆ ಸರ್ಕಾರವು ಇನ್ನೂ ಯಾವುದೇ ಅಧಿಕೃತ ಆದೇಶವನ್ನು ಹೊರಡಿಸಿಲ್ಲ. ಸದ್ಯಕ್ಕೆ ಇದು ಕೇವಲ ಸರ್ಕಾರದ ಚಿಂತನೆಯ ಹಂತದಲ್ಲಿದೆ. 

ಆದ್ದರಿಂದ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರವು ಅಧಿಕೃತವಾಗಿ ಏನಾದರೂ ನಿರ್ಧಾರ ತೆಗೆದುಕೊಂಡರೆ, ಅದನ್ನು ತಿಳಿಸಲಾಗುವುದು.

* ಈ ನಿಯಮದ ಮುಖ್ಯ ಉದ್ದೇಶವು ಕೇವಲ ಅರ್ಹರಾದ ಮತ್ತು ಜೀವಂತವಾಗಿರುವ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಹಣವು ತಲುಪುವಂತೆ ನೋಡಿಕೊಳ್ಳುವುದು. ಇದರಿಂದಾಗಿ, ಅನರ್ಹ ವ್ಯಕ್ತಿಗಳಿಗೆ ಹಣ ಹೋಗುವುದು ತಪ್ಪುತ್ತದೆ ಮತ್ತು ಅರ್ಹರಿಗೆ ಸಹಾಯವಾಗುತ್ತದೆ.

26th ಕಂತಿನ ಅಪ್ಡೇಟ್ ::
Update on 26th installment ::

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈವರೆಗೆ 26 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಫಲಾನುಭವಿ ಮಹಿಳೆಯರ ಖಾತೆಗಳಿಗೆ ಒಟ್ಟು 52,000 ರೂ. ಮೊತ್ತವನ್ನು ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

* ವಾಸ್ತವವಾಗಿ ಈವರೆಗೆ ಕೇವಲ 25 ಕಂತುಗಳ ಹಣವನ್ನು ಮಾತ್ರ ಜಮಾ ಮಾಡಲಾಗಿದೆ.

ಸಚಿವರು ಹೇಳಿಕೆ ನೀಡಿದ ಸರಿಸುಮಾರು ಒಂದು ವಾರದ ಅವಧಿಯೊಳಗೆ ಹಣವನ್ನು ಬಿಡುಗಡೆ ಮಾಡಲಾಗುವುದು. ಅದರಂತೆ, 26ನೇ ಕಂತಿನ ಹಣವು ಮುಂಬರುವ ಒಂದು ವಾರದೊಳಗೆ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗುವ ನಿರೀಕ್ಷೆ ಇದೆ.

* ಪ್ರಸ್ತುತ ಅಂದಾಜು 70% ರಿಂದ 75% ರಷ್ಟು ಮಹಿಳೆಯರಿಗೆ ಮಾತ್ರ 25ನೇ ಕಂತಿನ ಹಣ ಸಂದಾಯವಾಗಿದೆ. ಇನ್ನೂ ಉಳಿದ ಫಲಾನುಭವಿಗಳಿಗೆ ಹಣವನ್ನು ಜಮಾ ಮಾಡುವುದು ಬಾಕಿ ಇದೆ.ಹಂತ ಹಂತವಾಗಿ ಜಮಾಗುತ್ತದೆ. 

ಈ ಕಾರ್ಯಕ್ರಮಗಳು ಕೇವಲ ಆರ್ಥಿಕ ಸಹಾಯವಷ್ಟೇ ಅಲ್ಲ, ಬಡ ಕುಟುಂಬಗಳಿಗೆ ಒಂದು ರೀತಿಯ ‘ಹಣಕಾಸಿನ ಭದ್ರತಾ ಕೋಟೆ’ ಇದ್ದಂತೆ. ಗೃಹಲಕ್ಷ್ಮಿ ಯೋಜನೆಯಿಂದ ಸಿಗುವ ₹2,000 ಹಣವು ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯನ್ನು ಎದುರಿಸಲು ನೆರವಾಗುತ್ತದೆ.

ಇದು ಹಳ್ಳಿಗಳ ಜನರ ‘ಖರೀದಿ ಸಾಮರ್ಥ್ಯ’ವನ್ನು ಹೆಚ್ಚಿಸುವುದಲ್ಲದೆ ಸಣ್ಣಪುಟ್ಟ ತಕ್ಷಣದ ಅಗತ್ಯಗಳಿಗಾಗಿ ಬಡ್ಡಿ ವಸೂಲಿ ಮಾಡುವವರ ಹಂಗನ್ನು ತಪ್ಪಿಸುತ್ತದೆ.

Gruhalakshmi shifts welfare, viewing social security as a right. Monthly payments aid those with unstable incomes in informal jobs and poor areas.

This fixed income provides ready cash for vulnerable individuals like women and the elderly, bridging the gap between earnings and living costs.

Lakshmi Hebbalkar Cabinet Minister

It acts as a buffer during health issues or seasonal unemployment, preventing deeper debt.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"