Gruhalakshmi :: ಗೃಹಲಕ್ಷ್ಮಿ 24ನೇ ಕಂತಿನ ಹಣ ಜಮಾ!!! ಜಿಲ್ಲಾ ವಾರು ಪಟ್ಟಿ ಬಿಡುಗಡೆ..!!!
Government of karnataka introduced gurantee scheme named “Gruhalakshmi” to empower women financially by giving 2000 Rupees per month through DBT(Direct beneficiary transfer).
ರಾಜ್ಯದಾದ್ಯಂತ ಮಹಿಳೆಯರಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆಯ 24ನೇ ಕಂತು ಗೃಹಿಣೀಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ.
ಹೌದು,ದಿನಾಂಕ 22 ಡಿಸೆಂಬರ್ 2025 ಸೋಮವಾರದಿಂದ ಗೃಹಲಕ್ಷ್ಮಿ ಹಣವು ಮಹಿಳೆಯರ ಖಾತೆಗಳಿಗೆ ಜಮಾ ಆಗುತ್ತಿದೆ.
ಈಗಾಗಲೇ ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಹಾಗೂ ಇತರೆ ಜಿಲ್ಲೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದ್ದು, ಇನ್ನೂ ಕೆಲವು ಜಿಲ್ಲೆಗಳ ಫಲಾನುಭಾವಿಗಳ ಖಾತೆಗೆ ಹಣ ಜಮಾ ಆಗಬೇಕಾಗಿದೆ.
ಯಾವೆಲ್ಲ ಜಿಲ್ಲೆಗಳ ಫಲಾನುಭವಿಗಳು ಗೃಹಲಕ್ಷ್ಮಿ ಹಣವನ್ನು ಪಡೆದಿದ್ದಾರೆ:-
which district beneficiaries recived the gruhalakshmi 24th installments:-
* ಮಂಡ್ಯ
* ಯಾದಗಿರಿ
* ಬೆಂಗಳೂರು ಗ್ರಾಮಾಂತರ
* ಬೆಂಗಳೂರು ದಕ್ಷಿಣ
* ಚಿತ್ರದುರ್ಗ
* ಚಿಕ್ಕಬಳ್ಳಾಪುರ
* ತುಮಕೂರು
* ರಾಮನಗರ
* ಶಿವಮೊಗ್ಗ
* ಉಡುಪಿ
* ವಿಜಯಪುರ
* ಬೀದರ್
* ಮೈಸೂರು
* ರಾಯಚೂರು
* ಉತ್ತರ ಕನ್ನಡ
24ನೇ ಕಂತು ಜಮಾ ಆಗಿದೆ ಆದರೆ ಇನ್ನೂ ಕೆಲವು ಜಿಲ್ಲೆಗಳಾದ ಹಾಸನ, ಬೆಳಗಾವಿ, ಬಾಗಲಕೋಟೆ, ದಕ್ಷಿಣ ಕನ್ನಡ ಗದಗ ಹಾವೇರಿ ಕೊಪ್ಪಳ ಹಾಗೂ ಇತರೆ ಜಿಲ್ಲೆಗಳಿಗೆ,

Gruhalakshmi 24th installment
ಗೃಹಲಕ್ಷ್ಮಿ 24ನೇ ಕಂತಿನ ಹಣವು ಜಮಾ ಆಗುವ ಹಂತದಲ್ಲಿದೆ, ಬಹುಶಃ ಈ ಹಣವು ಮುಂದಿನ ಎರಡು ದಿನಗಳ ಒಳಗಾಗಿ ಜಮಾ ಆಗಬಹುದು.
ಹೀಗಾಗಿ ಹಣ ಬಾರದಿರುವ ಮಹಿಳೆಯರು ಅನಗತ್ಯ ಒತ್ತಡಕ್ಕೆ ಒಳಗಾಗುವುದು ಬೇಡ. 24ನೇ ಕಂತಿನ ಹಣವು ಜಮಾ ಆಗುವ ಪ್ರಕ್ರಿಯೆ ಶುರುವಾಗಿದೆ ಎಂದರೆ ಕರ್ನಾಟಕದ ಪ್ರತಿ ಜಿಲ್ಲೆಯ ಫಲಾನುಭವಿಗಳು ಇದರ ಫಲಶೃತಿಯನ್ನು ಪಡೆಯಲೇಬೇಕು.
ಗೃಹ ಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ:-
Information regarding Gruhalakshmi guarantee scheme:-
ಗೃಹಲಕ್ಷ್ಮಿ ಯೋಜನೆಯ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಹು ಮುಖ್ಯ ಹಾಗೂ ಅತಿ ದೊಡ್ಡ ಗ್ಯಾರೆಂಟಿ ಯೋಜನೆಯಾಗಿದೆ.
ಈ ಯೋಜನೆಯನ್ನು ಶ್ರೀ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 23 ಮೇ .2023ರಂದು ಘೋಷಣೆ ಮಾಡಿದರು, ನಂತರ ಸೇವಾ ಸಿಂಧು ಪೋರ್ಟಲ್ ಮುಖಾಂತರ ಜುಲೈ 19 2023 ರಿಂದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಯಿತು.
ಈ ರೀತಿ ಪ್ರಕ್ರಿಯೆ ಮುಗಿದ ನಂತರ ಮಹಿಳೆಯರಿಗೆ ತಮ್ಮ ಮೊದಲ ಗೃಹಲಕ್ಷ್ಮಿ ಹಣದ ಕಂತು ಆಗಸ್ಟ್ 30 2023 ರಂದು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಜಮಾ ಆಯಿತು.
ಗೃಹಲಕ್ಷ್ಮಿ ಹಣ ಪಡೆಯಲು ಯಾರು ಅರ್ಹರು:-
who were the beneficiaries of gruhalakshmi amount?
ಗೃಹಲಕ್ಷ್ಮಿ ಹಣವನ್ನು ಪಡೆಯಲು ಸರ್ಕಾರವು ಒಂದಿಷ್ಟು ನಿಯಮಗಳನ್ನು ರೂಪಿಸಿದೆ ಅವುಗಳೆಂದರೆ:-
* ಮಹಿಳೆಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
* ಮಹಿಳೆಯು ರೇಷನ್ ಕಾರ್ಡ್ ಹೊಂದಿರಬೇಕು ಹಾಗೂ ಕುಟುಂಬದ ಯಜಮಾನಿಯಾಗಿರಬೇಕು.
ಮಹಿಳೆಯ ಆಧಾರ್ ಕಾರ್ಡಿಗೆ ತನ್ನ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರಬೇಕು.
* ಮಹಿಳೆಯಾಗಲಿ ಅಥವಾ ಆಕೆಯ ಕುಟುಂಬದವರಾಗಲಿ ಯಾವುದೇ ತೆರಿಗೆಗಳನ್ನು ಪಾವತಿಸುತ್ತಿರಬಾರದು.
ಈ ಎಲ್ಲಾ ನಿಯಮಗಳನ್ನು ನಿರ್ವಹಿಸಿದ್ದೇ ಆದಲ್ಲಿ ಆ ಮಹಿಳೆಯು ಹತ್ತಿರದ ಗ್ರಾಮ ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
Documents need for apply gruhalakshmi scheme as beneficiary:-
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಸಂಖ್ಯೆ
ಹೀಗಾಗಿ ಈ ಮೇಲಿನ ಎಲ್ಲಾ ದಾಖಲೆಗಳನ್ನು ನಂಬರ್ ಒನ್ ಅಥವಾ ಗ್ರಾಮವನ್ನು ಕೇಂದ್ರದಲ್ಲಿ ನೀಡಿ ಅರ್ಜಿ ಸಲ್ಲಿಸಬಹುದು.

Gruhalakshmi beneficiaries with lakshmi hebbalkar
ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಗೃಹಲಕ್ಷ್ಮಿ ಹಣವು ಪ್ರತಿ ತಿಂಗಳು ತಮ್ಮ ತಮ್ಮ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾ ಆಗುತ್ತದೆ.
Gruhalakshmi guarantee scheme is a very popular scheme which is primarily aiming to give 2000 financial assistance to women and and her empowerment.

Gruhalakshmi issue in Winter session
recently in belagavi winter session opposition parties rise the voice against government that pending paying out of february and march installments and government assure to give the pending amount as soon as possible so women’s can expect 2 months pending payout.
Thank you.
ಧನ್ಯವಾದಗಳು
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply