Lakshmi Hebbalkar :: ಗೃಹಲಕ್ಷ್ಮಿ 15ನೇ ಕಂತು! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ!!
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಬಡವರ್ಗದ ಜನರಲ್ಲಿ ಒಂದು ಕೋಲಹಲವನ್ನೇ ಸೃಷ್ಟಿಸಿತ್ತು ಆದರೆ ಇದೀಗ ಎಲ್ಲಾ ತಣ್ಣಗಾಗಿ ಮತ್ತೆ ಜನರಲ್ಲಿ ಆತಂಕ ಮರೆಯಾಗಿದೆ.
ಇದಕ್ಕೆ ಕಾರಣ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ರದ್ದತಿಯನ್ನು ಹಿಂತೆಗೆದುಕೊಂಡಿದ್ದು, ಇದರಿಂದ ಜನರು ನಿರಾಳರಾಗಿದ್ದಾರೆ.
ಮುಖ್ಯವಾಗಿ ಈ ಬಿಪಿಎಲ್ ಕಾರ್ಡ್ ರದ್ದತಿ ಆರಂಭವಾದಾಗಿಂದ ಜನರಲ್ಲಿ ಗೃಹಲಕ್ಷ್ಮಿ ಹಣ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ಚಿಂತೆಯಾಗಿತ್ತು
ಆದರೆ ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಈಗಾಗಲೇ ಹೇಳಿಕೆ ನೀಡಿದ್ದು,
ಬಿಪಿಎಲ್ ಕಾರ್ಡ್ ಬದಲಾಗಿ ಎಪಿಎಲ್ ಕಾರ್ಡ್ ಇದ್ದವರಿಗು ಸಹಿತ ಗೃಹಲಕ್ಷ್ಮಿ ಹಣ ಬರುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಬಿಪಿಎಲ್ ಕಾರ್ಡ್ ಮುಖ್ಯ ದಾಖಲೆ ಅಲ್ಲ.
ತೆರಿಗೆ (Tax) ಕಟ್ಟುತ್ತಿರುವವರಿಗೆ ಬರಲ್ಲಾ ಗೃಹಲಕ್ಷ್ಮಿ ಹಣ!
ಈಗಾಗಲೇ ರಾಜ್ಯದಲ್ಲಿ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ಪಡೆದುಕೊಳ್ಳುತ್ತಿದ್ದು, ಆದ್ದರಿಂದ ಯಾವುದೇ ಫಲಾನುಭವಿಗಳು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವ ವಿಷಯವೆಂದರೆ ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಬೇಕಾದರೆ ಅವರು ಆದಾಯ ತೆರಿಗೆ ವೃತ್ತಿ ತೆರಿಗೆಗಳಂತಹ ಯಾವುದೇ ರೀತಿಯ ತೆರಿಗೆಗಳನ್ನು ಸರ್ಕಾರಕ್ಕೆ ಕಟ್ಟುತ್ತಿರಬಾರದು ಎಂಬ ಷರತ್ತು ಇದೆ.
ಹಾಗಾಗಿ ತೆರಿಗೆ ಕಟ್ಟುತ್ತಿರುವವರು ಮಾತ್ರ ಈ ಯೋಜನೆಯಿಂದ ಹೊರಗುಳಿಯಲಿದ್ದಾರೆ. ತೆರಿಗೆ ಕಟ್ಟದೆ ಇರುವವರು ಎಪಿಎಲ್ ಕಾರ್ಡ್ ಹೊಂದಿದ್ದರು ಕೂಡ ಅವರಿಗೆ ಈ ಯೋಜನೆ ಅಡಿಯಲ್ಲಿ ಹಣ ಬರುತ್ತದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
15 ನೇ ಕಂತಿನ ಗೃಹ ಲಕ್ಷ್ಮಿ (Gruhalaxmi scheme) ಹಣ ಯಾವಾಗ ಬರುತ್ತದೆ?
ಇನ್ನು 15ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಗೃಹಲಕ್ಷ್ಮಿಯರು ಪ್ರಶ್ನೆ ಕೇಳಿದ್ದು, ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅದಕ್ಕೂ ಸ್ಪಷ್ಟನೆ ನೀಡಿದ್ದಾರೆ.
ನವೆಂಬರ್ ತಿಂಗಳ 30ರೊಳಗಾಗಿ 15ನೇ ಕಂತಿನ ಹಣವನ್ನು ಗೃಹಲಕ್ಷ್ಮಿಯರ ಖಾತೆಗೆ ಜಮೆಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹಾಗಾಗಿ ಇನ್ನು 7 ದಿನಗಳೊಳಗಾಗಿ ರಾಜ್ಯದ ಎಲ್ಲಾ ಗೃಹಲಕ್ಷ್ಮಿಯರಿಗೆ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ನೇರವಾಗಿ ನಿಮ್ಮ ನಿಮ್ಮ ಖಾತೆಗಳಿಗೆ ಜಮೆಯಾಗಲಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ