Free Machine, laptop::ಉಚಿತ ಹೊಲಿಗೆಯಂತ್ರ, ಲ್ಯಾಪ್ಟಾಪ್, ಸ್ಕೂಟರ್, ತರಬೇತಿ ಹಾಗೂ ಸಾಮೂಹಿಕ ವಿವಾಹಕ್ಕೆ ಅಜಿ೯ ಆಹ್ವಾನ!
ಸರ್ಕಾರದ ಕಡೆಯಿಂದ ಕೆಲವೊಂದು ಉಚಿತ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ನೀವು ಕೂಡ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಲ್ಲಿ ಕೂಡಲೇ ಅರ್ಜಿ ಸಲ್ಲಿಸಿ ಯೋಜನೆಗಳ ಸೌಲಭ್ಯಗಳನ್ನು ಪಡೆಯಬಹುದು.
ಇಲ್ಲಿ ಮೂರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದು, ಆಯೋಜನೆಗಳ ವಿವರಗಳಲ್ಲಿ ಫೋನ್ ನಂಬರ್ ಗಳನ್ನು ಕೂಡ ಕೊಡಲಾಗಿದೆ ನಿಮಗೆ ಯಾವ ಯೋಜನೆಯ ಬಗ್ಗೆ ಮಾಹಿತಿ ಬೇಕು ಅವರಿಗೆ ಕಾಂಟ್ಯಾಕ್ಟ್ ಮಾಡಿ ಮಾಹಿತಿಯನ್ನು ಪಡೆಯಿರಿ.
1.ಸಾಮೂಹಿಕ ವಿವಾಹದ ಬಗ್ಗೆ ಮಾಹಿತಿ!
ಇದು ಸಕಾ೯ರದಿಂದ ಮಾಡುತ್ತಿರುವ ಕಾಯ೯ವಲ್ಲ. ಮೈಸೂರಿನ ಬಳಿಯಿರುವ ಸರಗೂರು ತಾಲೂಕಿನ ಪಡುವಲು ವಿರಕ್ತಿ ಮಠದಲ್ಲಿ 2025 ನೇ ಸಾಲಿನ ಮಾಚ್೯ 9 ರಂದು ಮೈಸೂರು ಹಾಗೂ ಚಾಮರಾಜನಗರ
ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿಯು ನಡೆಯುತ್ತಿದ್ದು, ಈ ಸಮಾರಂಭದಲ್ಲಿ ವೀರಶೈವ ವಧು-ವರರಿಗೆ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ನೀವು ವೀರಶೈವ ಲಿಂಗಾಯತ ಮತದವರಾಗಿದ್ದರೆ ಇದಕ್ಕೆ ಅಜಿ೯ ಸಲ್ಲಿಸಬಹುದು.
ಈ ಕಾಯ೯ಕ್ರಮದಲ್ಲಿ ಮಠದ ವತಿಯಿಂದ ವಧು-ವರರಿಗೆ ಸೀರೆ, ವಲ್ಲಿ, ಪಂಚೆ,ಅಂಗಿ, ಮಾಂಗಲ್ಯ, ಬೆಳ್ಳಿ ಕಾಲುಂಗುರಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಅಜಿ೯ ಸಲ್ಲಿಸಲು ಇಚ್ಛಿಸುವವರು ಮೈಸೂರಿನ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿರುವ ಗೋಷ್ಠಿಯ ಕಛೇರಿಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9964151105, 9481528665 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ.
2.ಸ್ವಂತ ಉದ್ಯೋಗ ಹೊಂದಲು ಉಚಿತ ತರಬೇತಿ ಕಾಯ೯ಕ್ರಮ!
ಇದು ಒಂದು ಸಕಾ೯ರದ ಯೋಜನೆಯಾಗಿದ್ದು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸ್ವಂತ ಉದ್ಯೋಗ ಹೊಂದಲು ವಿವಿಧ ಉಚಿತ ತರಬೇತಿಗಳನ್ನು ನಡೆಸಲಾಗುತ್ತಿದ್ದು,
ಇದು 10 ದಿನಗಳ ಉಚಿತ ತರಬೇತಿಯಾಗಿದೆ. ಇದು ನವೆಂಬರ್ 19 ರಿಂದ ಪ್ರಾರಂಭವಾಗುತ್ತದೆ. ಅಜಿ೯ ಸಲ್ಲಿಸುವವರು 18 ರಿಂದ 45 ವಷ೯ದವರಾಗಿರಬೇಕು.
ಈ ತರಬೇತಿಯಲ್ಲಿ ಭಾಗವಹಿಸಲು ಸಹಾಜಿರಾವ್ ರೋಡ್ ನಲ್ಲಿರುವ ಸಿಟಿಐ ಕಟ್ಟಡದಲ್ಲಿ ಸಿರಾಕ್ ಜಂಟೀ ನಿದೇ೯ಶಕರ ಕಛೇರಿಯಲ್ಲಿ ಅಜಿ೯ ಸಿಗುತ್ತದೆ.
ಅಲ್ಲೂ ಕೂಡ ಅಜಿ೯ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 6361611136 ಕ್ಕೆ ಸಂಪಕಿ೯ಸಿ ಮಾಹಿತಿ ಪಡೆಯಿರಿ.
3. ವಿವಿಧ ಸೌಲಭ್ಯಗಳಿಗಾಗಿ ಅಜಿ೯!
ಇದು ಮೈಸೂರು ನಗರ ಪಾಲಿಕೆಯಿಂದ ನೀಡಲಾಗುತ್ತಿದ್ದು, ಉಚಿತ ವಾಕಿಂಗ್ ಸ್ಟಿಕ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್,
ಸ್ಕೂಟರ್, ಹೊಲಿಗೆ ಯಂತ್ರ ಹಾಗೂ ಕಲಾವಿದರುಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದಕ್ಕೆ ಅಜಿ೯ ಸಲ್ಲಿಸುವವರು ಎಸ್ಸಿ/ ಎಸ್ ಟಿ ಸಮುದಾಯಕ್ಕೆ ಸೇರಿದವರಾಗಿರಬೇಕು.
ಅಜಿ೯ ಸಲ್ಲಿಸಲು ಮೈಸೂರು ಮಹಾನಗರ ಪಾಲಿಕೆಯ 9 ವಲಯ ಕಚೇರಿಗಳಲ್ಲಿ ನಿಮಗೆ ಅನುಕೂಲವಿರುವ ಯಾವುದಾದರೂ ಕಛೇರಿಗೆ ಭೇಟಿ ನೀಡಿ
ಅಲ್ಲಿ ಸಂಪೂರ್ಣ ಮಾಹಿತಿ ಪಡೆದು ನೀವು ಯಾವ ಸೌಲಭ್ಯಕ್ಕೆ ಅಜಿ೯ ಸಲ್ಲಿಸಬೇಕೆಂದಿದ್ದೀರೋ ಅದಕ್ಕೆ ಅಜಿ೯ ಸಲ್ಲಿಸಬಹುದು.
ಧನ್ಯವಾದಗಳು
*********ಅಂತ್ಯ************
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರು ಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು
ಕಬ್ಬರಿ ಮತ್ತು ತೆಂಗಿನಕಾಯಿ ಮಾರು ಕಟ್ಟೆ : ಇಂದಿನ ಕಬ್ಬರಿ ಮತ್ತು ತೆಂಗಿನಕಾಯಿ ಮಾರುಕಟ್ಟೆ – ( ಕ್ಲಿಕ್ ಮಾಡಿ / ಇಲ್ಲಿ ಕ್ಲಿಕ್ ಮಾಡಿ)
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ಪರಿಸರ ಪರಿಸರದೊಂದಿಗೆ ವಿಕೆ
ಆರ್ಥಿಕತೆ