"Agriculture is our CULTURE"

Pilgrimage Travel Package Scheme:: ತೀಥ೯ಯಾತ್ರೆಗೆ ಸಕಾ೯ರ ಕೊಡುತ್ತೆ 17500/- ಸಬ್ಸಿಡಿ! ಹೊಸ ವಷ೯ಕ್ಕೆ ತೀಥ೯ಯಾತ್ರೆ ಕನಸನ್ನು ನನಸು ಮಾಡಿಕೊಳ್ಳಿ!

ಧಾರ್ಮಿಕ ಕ್ಷೇತ್ರಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಮಾಡಬೇಕೆಂಬ ಆಸೆ ಹೊಂದಿರುವ ಯತ್ರಾಥಿ೯ಗಳಿಗೆ ರಾಜ ಸರ್ಕಾರ ಹೊಸ ವರ್ಷದ ಕೊಡುಗೆಯನ್ನು ನೀಡಿದ್ದು ಪ್ರವಾಸಿಗರಿಗಾಗಿ ಮೂರು ಹೊಸ ಪ್ಯಾಕೇಜ್ ಗಳನ್ನು ಘೋಷಿಸಿದೆ ಇದರ ಅನ್ವಯ ನೀವು ಹೆಸರಾಂತ ಪುಣ್ಯಕ್ಷೇತ್ರ ಗಳಿಗೆ ಭೇಟಿ ನೀಡಲು ದರ್ಶನ ಪಡೆಯಲು ಸರ್ಕಾರವು 17500 ರೂಪಾಯಿ ಗಳವರೆಗೆ ಸಬ್ಸಿಡಿಯನ್ನು ಒದಗಿಸುತ್ತದೆ.

ಸಕಾ೯ರದಿಂದ 3 ಹೊಸ ಪ್ಯಾಕೇಜ್ ಗಿಫ್ಟ್! 

ಹೌದು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳು ಹಾಗೂ ಉತ್ತರ ಭಾರತದ ಪುರಿ ಜಗನ್ನಾಥ ಹಾಗೂ ದ್ವಾರಕ ಕ್ಷೇತ್ರಗಳಿಗೆ ದರ್ಶನಾ ಪಡೆಯಲು ರಾಜ್ಯ ಸರ್ಕಾರವು ಧಾಮಿ೯ಕ ದತ್ತಿ ಇಲಾಖೆ ಮೂಲಕ 3 ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದು ಪುಣ್ಯ ಕ್ಷೇತ್ರಗಳ ದಶ೯ನ ಭಾಗ್ಯ ಒದಗಿಸಿದೆ.

15000/- ಸಬ್ಸಿಡಿ ಅಡಿಯಲ್ಲಿ 6 ದಿನಗಳ ತೀಥ೯ಯಾತ್ರೆ! 

ಈ ಪ್ಯಾಕೇಜ್ಗಳ ಅನ್ವಯ, ದಕ್ಷಿಣ ಭಾರತದ ಕನ್ಯಾಕುಮಾರಿ, ರಾಮೇಶ್ವರಂ, ಮಧುರೈ, ತಿರುವನಂತಪುರಂ ಕ್ಷೇತ್ರಗಳ ದಶ೯ನಕ್ಕಾಗಿ 6 ದಿನಗಳ ತೀಥ೯ಯಾತ್ರೆ ಪ್ಯಾಕೇಜ್ ಆಗಿದ್ದು, ಒಟ್ಟು 25000 ಖಚು೯ ಆಗಲಿದೆ.

ಅದರಲ್ಲಿ ರಾಜ್ಯ ಸಕಾ೯ರವು 10000/- ಗಳ ಸಬ್ಸಿಡಿ ಹಾಗೂ 5000 ಗಳ ವೈಧ್ಯಕೀಯ ಹಾಗೂ ಇತರೆ ಖಚ೯ನ್ನು ಸೇರಿ ಒಟ್ಟು 15000/- ಗಳ ಸಹಾಯಧನ ಕೊಡಲಿದೆ. ನೀವು ಕೇವಲ 10000/- ಗಳಲ್ಲಿ 6 ದಿನಗಳ ದಕ್ಷಿಣ ಭಾರತದ ತೀಥ೯ಯಾತ್ರೆ ಮಾಡಬಹುದಾಗಿದೆ.

ಎಲ್ಲಾ ಮೂಲಭೂತ ಸೌಕಯ೯ಗಳು ಲಭ್ಯ! 

ಈ ತೀಥ೯ಯಾತ್ರೆ ಪ್ರಯಾಣದಲ್ಲಿ ಉತ್ತಮ ಆಹಾರವನ್ನು ತಯಾರಿಸಿ ಯತ್ರಾಥಿ೯ಗಳಿಗೆ ನೀಡಲಾಗುತ್ತದೆ. ಈ ತೀರ್ಥಯಾತ್ರೆಯಲ್ಲಿ 3 ಟೈರ್ ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಹಾಗೂ ದಶ೯ನ ವ್ಯವಸ್ಥೆ ಸೇರಿರುತ್ತದೆ.

ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೈಲಿನಲ್ಲಿಯೇ ವೈದ್ಯಕೀಯ ಸೇವೆ ಕೂಡ ಲಭ್ಯವಿರುತ್ತದೆ. ದಕ್ಷಿಣ ಭಾರತದ ತೀಥ೯ಯಾತ್ರೆಗೆ ಹತ್ತುವ ಸ್ಥಳ ಹಾಗೂ ಇಳಿಯುವ ಸ್ಥಳವನ್ನು ಇಲ್ಲಿ ನೀಡಲಾಗಿರುತ್ತದೆ.

ರೈಲು ಬೆಳಗಾವಿ ಹುಬ್ಬಳ್ಳಿ ಹಾವೇರಿ ದಾವಣಗೆರೆ ಬೀರೂರು ತುಮಕೂರು ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ಮೂಲಕ ಸಾಗಲಿದೆ. ಈ ರೈಲು 2025ರ ಜನವರಿ 25ರಂದು ಹೊರಡಲಿದ್ದು ಜನವರಿ 30ಕ್ಕೆ ಹಿಂದಿರುಗಲಿದೆ.

ಉತ್ತರ ಭಾರತದ ತೀಥ೯ಯಾತ್ರೆಯ 2 ಪ್ಯಾಕೇಜ್ ! 

ಪುರಿ ಜಗನ್ನಾಥ ಯಾತ್ರೆಗೆ 32500/- ಗಳನ್ನು ನಿಗದಿಪಡಿಸಿದ್ದು, ಸಕಾ೯ರ 17500/- ಗಳನ್ನು ಸಬ್ಸಿಡಿ ರೂಪದಲ್ಲಿ ನೀಡಲಿದೆ. ಉಳಿದ 15000/- ಗಳನ್ನು ಮಾತ್ರ ಪ್ರಯಾಣಿಕರು ಪಾವತಿಸಬೇಕಾಗುತ್ತದೆ.

ಪುರಿ ಜಗನ್ನಾಥ ಯಾತ್ರಾ ರೈಲು, ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ ಹಾಗೂ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಬೆಳಗಾವಿ ಮೂಲಕ ಸಾಗಲಿದೆ.

ಯಾವಾಗ ಹೊರಡುತ್ತೆ ರೈಲು! 

ದ್ವಾರಕಾ ಯಾತ್ರಾ ರೈಲು ಜನೇವರಿ 6 ರಮದು ಹೊರಡಲಿದ್ದು, ಜನೇವರಿ 13 ಕ್ಕೆ ಹಿಂದಿರುಗಲಿದೆ. ಪುರಿ ಜಗನ್ನಾಥ ದಶ೯ನಕ್ಕೆ ಹೊರಡುವ ರೈಲು ಫೆಬ್ರವರಿ 3 ರಂದು ಹೊರಡಲಿದ್ದು, ಫೆಬ್ರವರಿ 10ಕ್ಕೆ ಹಿಂದಿರುಗಲಿದೆ.

ಅಚ೯ಕರಿಗೆ ಉಚಿತ ತೀಥ೯ಯಾತ್ರೆಗೆ ವ್ಯವಸ್ತೆ! 

ಅಷ್ಟೇ ಅಲ್ಲದೇ ಈ ವಷ೯ 1200 ಅಚ೯ಕರು ಹಾಗೂ ಅಚ೯ಕ ಕುಟುಂಬದ ಒಬ್ಬ ಸದಸ್ಯರಿಗೆ ಅಂದರೆ ಒಟ್ಟು 2400 ಜನರಿಗೆ ಉಚಿತ ಯಾತ್ರೆಗೆ ಕಳುಹಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ! 

ಯಾತ್ರಾರ್ಥಿಗಳು ಟಿಕೆಟ್ ಬುಕಿಂಗ್ ಹಾಗೂ ಮಾಹಿತಿಗಾಗಿ 9003140710, 8595931292, 9731641611,8595931293, 8595931291 ಗಳಿಗೆ ಸಂಪಕಿ೯ಸಿ ಮಾಹಿತಿ ಪಡೆಯಬಹುದು

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"