25 Lakh Loan :: ಕೇಂದ್ರ ಸಕಾ೯ರದಿಂದ 35% ಸಬ್ಸಿಡಿಯೊಂದಿಗೆ 25 ಲಕ್ಷ ಸಾಲ! ಪ್ರಾಜೆಕ್ಟ್ ರಿಪೋಟ್೯ ಟೆನ್ಷನ್ ಕೂಡ ಇಲ್ಲ! ಕೂಡಲೇ ಅಜಿ೯ ಸಲ್ಲಿಸಿ!
ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಂದ ಸಾರ್ವಜನಿಕರಿಗೆ ಉದ್ಯೋಗಗಳನ್ನು ಮಾಡಲು ಹಾಗೂ ತಮ್ಮದೇ ಆದ ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಲು ಹಲವಾರು ಬಗೆಯ ಯೋಜನೆಗಳನ್ನು ಜಾರಿಗೆ ತಂದು ಸಾಲ ಸೌಲಭ್ಯಗಳನ್ನು ಕೊಡುತ್ತಾರೆ.
ಕೇವಲ ಸಾಲ ಮಾತ್ರವಲ್ಲದೆ ಆ ಸಾಲದಲ್ಲಿ ಒಂದಷ್ಟು ಮತದ ಸಬ್ಸಿಡಿಯನ್ನು ಕೂಡ ನೀಡುತ್ತಾರೆ.
ಆದರೆ ಈ ಸಾಲದ ಯೋಜನೆಗಳು ಬಹಳಷ್ಟು ಜನರಿಗೆ ಸಹಾಯಕವಾಗುವುದಿಲ್ಲ ಏಕೆಂದರೆ ಅದಕ್ಕೆ ಕೇಳುವ ದಾಖಲೆಗಳನ್ನು ಹೊಂದಿಸುವುದು ಬಹಳಷ್ಟು ಜನರಿಗೆ ಕಷ್ಟವಾಗುತ್ತದೆ.
ಇಲ್ಲವೇ ದಾಖಲೆಗಳನ್ನು ತಯಾರಿಸಲು ತುಂಬಾ ಹಣ ವೆಚ್ಚವಾಗುತ್ತದೆ ಇದರಿಂದಾಗಿ ಸಾರ್ವಜನಿಕರು ಈ ಯೋಜನೆಗಳ ಸೌಲಭ್ಯವನ್ನು ಪಡೆಯಲು ಮುಂದಾಗುವುದಿಲ್ಲ.
ಪ್ರಾಜೆಕ್ಟ್ ರಿಪೋಟ್೯ ಟೆನ್ಷನ್!
ಉದಾಹರಣೆಗೆ ಸರ್ಕಾರ ನೀಡುವ ಸ್ವಂತ ಉದ್ಯೋಗ ಪಡೆಯಲು ಯಾವುದಾದರು ಯೋಜನೆ ಅಡಿಯಲ್ಲಿ ಸಾಲ ಪಡೆಯಬೇಕಾದರೆ
ನೀವು ಪ್ರಾರಂಭಿಸಬೇಕಾಗಿರುವ ಉದ್ಯೋಗದ ಸಂಪೂರ್ಣ ಮಾಹಿತಿ ಖರ್ಚು ವೆಚ್ಚಗಳು ಹಾಗೂ ಲಾಭದ ವಿವರ ಅಷ್ಟೇ ಅಲ್ಲದೆ ಆ ಪ್ರೊಜೆಕ್ಟನ ಸಂಪೂರ್ಣ ವಿವರವನ್ನು ತಯಾರಿಸಿ ಸಾಲ ನೀಡುವ ಸಂಸ್ಥೆಗೆ ಕೊಡಬೇಕಾಗುತ್ತದೆ.
ಸಾಮಾನ್ಯ ಜನರಿಗೆ ಈ ಪ್ರಾಜೆಕ್ಟ್ ರಿಪೋರ್ಟ್ ರೆಡಿ ಮಾಡುವುದು ಕಷ್ಟವಾಗುತ್ತದೆ ಹೀಗಾಗಿ ಅವರು ಪ್ರಾಜೆಕ್ಟ್ ರಿಪೋರ್ಟ್ ರೆಡಿ ಮಾಡುವವರನ್ನು ಸಂಪರ್ಕಿಸಿದರೆ ಅಲ್ಲಿ 15000-20000 ರೂಪಾಯಿ ಕೊಡಬೇಕಾಗುತ್ತದೆ ಹೀಗಾಗಿ ಯಾರು ಕೂಡ ಸಾಲ ಪಡೆಯಲು ಮುಂದಾಗುತ್ತಿಲ್ಲ.
ಪ್ರಾಜೆಕ್ಟ್ ರಿಪೋಟ್೯ ಪಡೆಯುವುದು ಸುಲಭ!
ಆದರೆ ಸ್ವಂತ ಉದ್ಯೋಗ ಪ್ರಾರಂಭಿಸಲು ಪಿಎಂಇಜಿಪಿ(PMEGP) ಯೋಜನೆ ಅಡಿಯಲ್ಲಿ ಸರ್ಕಾರವು ಸ್ವಂತ ಉದ್ಯೋಗ ಹೊಂದಲು 25 ಲಕ್ಷಗಳವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಇದರಲ್ಲಿ 35% ಸಬ್ಸಿಡಿ ಕೂಡ ಕೊಡಲಾಗುತ್ತಿದೆ.
ಇದರಲ್ಲಿರುವ ಮುಖ್ಯಾಂಶವೆಂದರೆ ನೀವು ಈ ಸಾಲ ಸೌಲಭ್ಯ ಪಡೆಯಲು ಪ್ರಾಜೆಕ್ಟ್ ರಿಪೋರ್ಟ್ ಕೊಡಬೇಕು.
ಆದರೆ ನೀವು ಕೊಡಬೇಕಾದ ಪ್ರಾಜೆಕ್ಟ್ ರಿಪೋರ್ಟ್ ನ್ನು ನೀವು ಸುಲಭವಾಗಿ ತಯಾರಿಸಿಕೊಳ್ಳುವ ವಿಧಾನವನ್ನು ಕೂಡ ಈ ಯೋಜನೆಯ ವೆಬ್ಸೈಟ್ ನಲ್ಲಿ ಕೊಟ್ಟಿರುತ್ತಾರೆ.
ಹೌದು ಪಿಎಂಇಜಿಪಿ(PMEGP) ಎಂದು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಈ ಯೋಜನೆಯ ವೆಬ್ಸೈಟ್ ಓಪನ್ ಆಗುತ್ತದೆ.
ಈ ವೆಬ್ಸೈಟ್ ಆಯ್ಕೆಯನ್ನು ಗೂಗಲ್ ನಲ್ಲಿ ತೋರಿಸಿದಾಗ ಅದರ ಕೆಳಗಡೆ ನಿಮಗೆ ಡೌನ್ಲೋಡ್ ಪ್ರಾಜೆಕ್ಟ್ಸ್ ಎಂಬ ಆಯ್ಕೆ ಕಾಣುತ್ತದೆ
ನೀವು ಅದನ್ನು ಓಪನ್ ಮಾಡಿದರೆ ನಿಮಗೆ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗಗಳ ಪ್ರಾಜೆಕ್ಟ್ ಗಳು ಲಭ್ಯವಾಗುತ್ತವೆ.
https://www.kviconline.gov.in/pmegpeportal/pmegphome/index.jsp
ನೀವು ಯಾವ ಸ್ವಂತ ಉದ್ಯೋಗ ಪ್ರಾರಂಭಿಸಬೇಕೆಂದಿದ್ದೀರೋ ಆ ಉದ್ಯೋಗವನ್ನು ಅದರಲ್ಲಿ ಸರ್ಚ್ ಮಾಡಿ.
ಈ ವೆಬ್ ಸೈಟ್ ನಲ್ಲಿ ಆಯಾ ಉದ್ಯೋಗ ಪ್ರಾರಂಭಿಸಲು ಆಗಬಹುದಾದ ಒಟ್ಟು ವೆಚ್ಚ, ಪ್ರಾಜೆಕ್ಟ್ ವಿವರ, ಅದರಿಂದ ಬರಬಹುದಾದ ಆದಾಯ,
ಇನ್ನು ಹತ್ತು ಹಲವು ವಿವರಗಳೊಂದಿಗೆ ಸಂಪೂರ್ಣ ಪ್ರಾಜೆಕ್ಟ್ ಅನ್ನು ಅಪ್ಲೋಡ್ ಮಾಡಿದ್ದಾರೆ.
ಪ್ರಾಜೆಕ್ಟ್ ಎಡಿಟ್ ಮಾಡಿ ಸಲ್ಲಿಸಿ ಸಾಲ ಪಡೆಯಿರಿ!
ನೀವು ಪ್ರಾರಂಭಿಸಬೇಕೆಂದಿರುವ ಉದ್ಯೋಗದ ಪ್ರಾಜೆಕ್ಟ್ ವಿವರಗಳನ್ನು ಡೌನ್ಲೋಡ್ ಮಾಡಿಕೊಂಡು ಪಿಡಿಎಫ್ ಎಡಿಟರ್ ಮೂಲಕ ಅದರಲ್ಲಿ ನಿಮಗೆ ಬೇಕೆಂದಿರುವ ವಿವರಗಳನ್ನು ಚೇಂಜ್ ಮಾಡಿ
ಹಾಗೂ ನಿಮ್ಮ ಉದ್ಯೋಗದ ಕೆಲವೊಂದು ಅವಶ್ಯಕ ವಿವರಗಳನ್ನು ಹಾಕಿ ಅದನ್ನೇ ನೀವು ಸಾಲವ ಸಂಸ್ಥೆಗೆ ಪ್ರಾಜೆಕ್ಟ್ ರಿಪೋರ್ಟ್ ಆಗಿ ಸಲ್ಲಿಸಬಹುದು.
ಹೀಗೆ ಮಾಡುವುದರಿಂದ ಪ್ರೊಜೆಕ್ಟರ್ ರಿಪೋರ್ಟ್ ಸಲ್ಲಿಸುವ ಟೆನ್ಶನ್ ತಪ್ಪುತ್ತದೆ ಅಲ್ಲದೆ ವೆಬ್ ಸೈಟ್ ನಲ್ಲಿ ಪ್ರಾಜೆಕ್ಟ್ ರಿಪೋರ್ಟ್ ಇರುವುದರಿಂದ ಅದು ರಿಜೆಕ್ಟ್ ಆಗುವ ಸಂಭವಗಳು ಕಡಿಮೆಯಾಗುತ್ತವೆ.
ಸರ್ಕಾರದ ಈ ಅನುಕೂಲದಿಂದಾಗಿ ಪ್ರಾಜೆಕ್ಟ್ ರಿಪೋರ್ಟ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಸಾಕಷ್ಟು ಜನರು ಕೂಡ ಸಾಲ ಸೌಲಭ್ಯ ಪಡೆಯಲು ಮುಂದಾಗಬಹುದು
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚