NABFID & NCCF :: ಈ 5 ಜಿಲ್ಲೆಯ ತೋಟಗಾರಿಕೆ ಬೆಳೆ ರೈತರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!!! ರಾಷ್ಟ್ರೀಯ ಸಹಕಾರ ಗ್ರಾಹಕರ ಮಂಡಳಿ (NCCF) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NABFID)!!
ಕೇಂದ್ರ ಸರ್ಕಾರವು 2025ನೇ ಸಾಲಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಿ ಆದೇಶಿಸಿದ್ದು, ರೈತರಲ್ಲಿ ಸಂತಸ ಮೂಡಿದೆ. ಉಂಡೆ ಕೊಬ್ಬರಿ ಹಾಗೂ ಮಿಲ್ಲಿಂಗ್ ಕೊಬ್ಬರಿಗೆ ಕ್ರಮವಾಗಿ ₹100 ಮತ್ತು ₹420 ಹೆಚ್ಚಿಸುವ ಮೂಲಕ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ ₹12,100 ಮತ್ತು ಮಿಲ್ಲಿಂಗ್ ಕೊಬ್ಬರಿಗೆ ₹11,582 ನಿಗದಿಪಡಿಸಲಾಗಿದೆ.
ಕೃಷಿ ವೆಚ್ಚ ಮತ್ತು ಬೆಲೆ ಆಯೋಗ(ಸಿಎಸಿಪಿ) ನೀಡಿರುವ ಶಿಫಾರಸ್ಸು ಆಧರಿಸಿ ಈ ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಕೇಂದ್ರ ಸಕಾ೯ರ ಇದಕ್ಕಾಗಿ ಒಟ್ಟು 855 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಿದೆ ಎಂದು ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ(coconut market price) 14000/-!
ಈ ನಿರ್ಧಾರವು ತೆಂಗು ಬೆಳೆಗಾರರಲ್ಲಿ ಸ್ವಲ್ಪ ಮಟ್ಟಿಗೆ ಸಂತಸ ತಂದಿದ್ದರೂ ಕೂಡ ಹೆಚ್ಚಿನ ನಿರಾಸೆ ಉಂಟುಮಾಡಿದೆ. ಏಕೆಂದರೆ ಅವರು ಇದಕ್ಕಿಂತ ಹೆಚ್ಚಿನ ಬೆಂಬಲ ಬೆಲೆಯನ್ನು ನಿರೀಕ್ಷೆ ಮಾಡಿದ್ದರು.
ಏಕೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಪ್ರತಿ ಕ್ವಿಂಟಲ್ ₹14,000 ಆಸುಪಾಸಿನಲ್ಲಿ ಇದೆ. ಕೊಬ್ಬರಿ ಬೆಲೆ ₹12,100ಕ್ಕಿಂತ ಕೆಳಗಿಳಿದರೆ ಮಾತ್ರ ಸರ್ಕಾರ ಎಂಎಸ್‌ಪಿ ಅಡಿಯಲ್ಲಿ ಕೊಬ್ಬರಿ ಖರೀದಿಸಲು ಮುಂದಾಗಲಿದೆ.
ಉತ್ಪಾದನಾ ವೆಚ್ಚಕ್ಕಿಂತಲೂ 50% ರಷ್ಟು ಹೆಚ್ಚಿನ ಬೆಂಬಲ ಬೆಲೆ(Minimum Support Price) !
ಈಗಾಗಲೇ ಹೆಚ್ಚಿನ ಬೆಲೆ ಇರುವ ಕಾರಣ ಸಕಾ೯ರ ಖರೀದಿಸಬೇಕಾಗುವುದಿಲ್ಲ. ಬೆಂಬಲ ಬೆಲೆ ಇನ್ನಷ್ಟು ಹೆಚ್ಚಿಸಿದಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಳಿಕೆಯಾದರೂ ರೈತರಿಗೆ ಅನುಕೂಲವಾಗುತ್ತಿತ್ತು.
ಆದರೆ ಈಗ ಬೆಲೆಯಲ್ಲಿ ಇಳಿಕೆಯಾದರೂ ಸಕಾ೯ರದಿಂದ ಹೆಚ್ಚಿನ ಬೆಂಬಲ ಬೆಲೆ ಸಿಗುವುದಿಲ್ಲ ಎಂದು ರೈತರ ನಿರಾಸೆಗೊಳಗಾಗಿದ್ದಾರೆ. ಆದರೆ ಕೇಂದ್ರ ಸಕಾ೯ರವು ರೈತರು ಮಾಡುವ ಉತ್ಪಾದನಾ ವೆಚ್ಚಕ್ಕಿಂತಲೂ 50% ರಷ್ಟು ಹೆಚ್ಚಿನ ಬೆಂಬಲ ಬೆಲೆ ಘೋಷಿಸಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದಿದೆ.
ಇಡೀ ದೇಶದಲ್ಲಿ ಕೊಬ್ಬರಿ ಉತ್ಪಾದನೆಯಲ್ಲಿ ಕನಾ೯ಟಕ ಮೊದಲ ಸ್ಥಾನದಲ್ಲಿದ್ದು, 32.7% ಉತ್ಪಾದನೆ ಮಾಡುತ್ತಿದೆ. ಎರಡನೇ ಸ್ಥಾನದಲ್ಲಿ ತಮಿಳುನಾಡು 25.7% ಹಾಗೂ ಕೇರಳ 25.4% ಹಾಗೂ ಆಂಧ್ರಪ್ರದೇಶ 7.7% ಕೊಬ್ಬರಿ ಉತ್ಪಾದನೆ ಮಾಡುತ್ತಿವೆ.
ಕೇಂದ್ರದ ಕೊಬ್ಬರಿ ಖರೀದಿ ನೊಡೆಲ್ ಏಜೆನ್ಸಿಗಳು(Nodel Agencies)!
ರಾಷ್ಟ್ರೀಯ ಸಹಕಾರ ಗ್ರಾಹಕರ ಮಂಡಳಿ (ಎನ್ ಸಿ ಸಿಎಫ್) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಇವು ಕೊಬ್ಬರಿ ಖರೀದಿಸುವ ಕೇಂದ್ರ ಸಕಾ೯ರದ ನೊಡೆಲ್ ಏಜೆನ್ಸಿಗಳಾಗಿವೆ.
2025ರಿಗಾಗಿ ಕೇಂದ್ರ ಸರ್ಕಾರವು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ (MSP) ಪರಿಷ್ಕರಿಸಿದೆ, ಇದು ತೆಂಗು ಬೆಳೆಗಾರರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಮಾಡಲಾಗಿದೆ. ಈ ನಿಟ್ಟಿನಲ್ಲಿ:
1. ಮಿಲ್ಲಿಂಗ್ ಕೊಬ್ಬರಿ (Milling Copra):
ಮೆಣಸಿನಹಿಟ್ಟು ತಯಾರಿಕೆ ಮುಂತಾದ ಉದ್ದೇಶಗಳಿಗಾಗಿ ಬಳಸಲಾಗುವ ಈ ತರಗತಿಗೆ ಎಂಎಸ್‌ಪಿಯನ್ನು ₹420 ಹೆಚ್ಚಿಸಿ, ₹11,582ಕ್ಕೆ ನಿಗದಿಪಡಿಸಲಾಗಿದೆ.ಈ ಬಗೆಯ ಕೊಬ್ಬರಿ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಲಾಭ ತರುತ್ತದೆ.
2. ಉಂಡೆ ಕೊಬ್ಬರಿ (Ball Copra):
ಈ ಬಗೆಯ ಕೊಬ್ಬರಿ ಹೆಚ್ಚಾಗಿ ತಿನ್ನುವಂತಹ ಉದ್ದೇಶಗಳಿಗೆ ಬಳಸಲಾಗುತ್ತದೆ. ಇದರ ಎಂಎಸ್‌ಪಿ 12000/- ಇತ್ತು ಇದನ್ನು ಈಗ ₹100 ಹೆಚ್ಚಿಸಿ ₹12,100ಗೆ ನಿಗದಿಪಡಿಸಲಾಗಿದೆ.
ಕೇಂದ್ರ ಸರ್ಕಾರವು ಎಂಎಸ್‌ಪಿಯನ್ನು ಹೆಚ್ಚಿಸುವ ಮೂಲಕ ತೆಂಗು ಬೆಳೆಗಾರರಿಗೆ ಬೆಂಬಲ ನೀಡಲು ಪ್ರಯತ್ನಿಸುತ್ತಿದ್ದು, ಕೊಬ್ಬರಿ ಬೆಲೆ ಏರಿಕೆಯಾಗಲು ಕಾರಣವೆಂದರೆ, ಉತ್ಪಾದನಾ ವೆಚ್ಚ ಮತ್ತು ಕೂಲಿಕಾರರ ಸಂಬಳವನ್ನು ಹೆಚ್ಚಾಗಿರುವುದು.
ಕೊಬ್ಬರಿ ಬೆಂಬಲ ಬೆಲೆಯಿಂದ ರೈತರಿಗೆ ಆಗುವ ಪ್ರಯೋಜನಗಳು!
1.ತೆಂಗು ಬೆಳೆಗಾರರ ಲಾಭ: ಈ ಎಂಎಸ್‌ಪಿ ಬೆಳೆಗಾರರಿಗೆ ಕನಿಷ್ಟ ಆದಾಯವನ್ನು ಖಚಿತಪಡಿಸುತ್ತದೆ.
2.ಮಾರುಕಟ್ಟೆ ಪೈಪೋಟಿ: ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆಯು ಎಂಎಸ್‌ಪಿಯೊಡನೆ ಸ್ಪರ್ಧಾತ್ಮಕವಾಗಿರಬಹುದು.
3.ಕಠಿಣ ತೊಂದರೆ: ಕೆಲವು ಬೆಳೆಗಾರರು ಈ ಬೆಲೆಯನ್ನು ತಾವು ನಿರೀಕ್ಷಿಸಿದ ಮಟ್ಟಕ್ಕಿಂತ ಕಡಿಮೆ ಎಂದು ಹೇಳುತ್ತಿದ್ದಾರೆ.
4.ಈ ಹೊಸ ಎಂಎಸ್‌ಪಿ ಅವಲೋಕನವು ತೆಂಗು ಬೆಳೆಗಾರರ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡಬಹುದು.
ಒಟ್ಟಿನಲ್ಲಿ ಎಂಎಸ್ಪಿ ಜಾರಿಯಿಂದ ರೈತರಿಗೆ ನಿಗದಿತ ಕನಿಷ್ಟ ಬೆಂಬಲ ಬೆಲೆ ಸಿಗುತ್ತದೆ. ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು ಇದು ಅನುಕೂಲವಾಗುತ್ತದೆ. ಇದರಿಂದಾಗಿ ತೆಂಗು ಬೆಳೆಗಾರರು ಆಥಿ೯ಕವಾಗಿ ಸಂಕಷ್ಟಕ್ಕೆ ಸಿಲುಕುವುದಿಲ್ಲ. ಸಕಾ೯ರದ ಈ ಕ್ರಮ ರೈತರನ್ನು ಆತಿ೯ಕ ಸಂಕಷ್ಟದಿಂದ ಪಾರು ಮಾಡಲು ತುಂಬಾ ಮುಖ್ಯವಾಗಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ