"Agriculture is our CULTURE"

Land revenue Act(Akrama sakrama):: ಅಕ್ರಮ ಸಕ್ರಮ ಎಂದರೇನು? ಯಾರು ಯೋಜನೆಗೆ ಅಹ೯ರು? ಹೇಗೆ ಸಕಾ೯ರಿ ಜಾಗ ಪಡೆಯಬಹುದು? 

ಇತ್ತೀಚಿಗೆ ಕರ್ನಾಟಕ ಸರ್ಕಾರವು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಬಡ ಜನರಿಗೆ ಸ್ವಂತ ಮನೆ ಅಥವಾ ಕೃಷಿ ಭೂಮಿ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಿರುತ್ತೀರಾ.

ಆದರೆ ಕೆಲವರಿಗೆ ಅಕ್ರಮ ಸಕ್ರಮ ಎಂದರೇನು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಅದಕ್ಕಾಗಿ ನಾವು ಈ ಲೇಖನದಲ್ಲಿ ಅಕ್ರಮ ಸಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದೇವೆ ಆದ್ದರಿಂದ ಲೇಖನವನ್ನು ಪೂರ್ಣವಾಗಿ ಓದಿ. 

ಸಕಾ೯ರಿ ಜಾಗಗಳ ಅತಿಕ್ರಮಣ! 

 ಬಡಜನರು ಅಥವಾ ಭೂಮಿ ಇಲ್ಲದವರು ಸರ್ಕಾರಿ ಭೂಮಿಯಲ್ಲಿಯೇ ಹಲವು ವರ್ಷಗಳ ಕಾಲ ಕೃಷಿಯನ್ನು ಮಾಡುತ್ತಾ ಬಂದಿರುತ್ತಾರೆ ಆದರೆ ಈ ಭೂಮಿಯು ಅವರ ಹೆಸರಿನಲ್ಲಿ ಇರುವುದಿಲ್ಲ ಅದು ಸರ್ಕಾರದ ಭೂಮಿ ಆಗಿರುತ್ತದೆ.

ಇದು ಕೃಷಿ ಭೂಮಿಯ ಬಳಕೆಗೆ ಸಂಬಂಧಿಸಿದ್ದು. ಮನೆಗೆ ಸಂಬಂಧಿಸಿದಂತೆಯೂ ಕೂಡ ಹೀಗೆಯೇ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಸಿಕೊಂಡು ಅಥವಾ ಶೀಟ್ ಹಾಕಿಕೊಂಡು ವಾಸ ಮಾಡುತ್ತಿರುತ್ತಾರೆ

ಇದು ಅವರ ಸ್ವಂತ ಜಾಗವಲ್ಲದಿದ್ದರೂ ಕೂಡ ಬಹಳಷ್ಟು ವರ್ಷಗಳ ಕಾಲ ಸರ್ಕಾರಿ ಜಾಗದಲ್ಲಿಯೇ ಜೀವನ ನಡೆಸುತ್ತಿರುತ್ತಾರೆ. 

ಅಕ್ರಮ-ಸಕ್ರಮ (Akrama sakrama) ಎಂದರೇನು? 

 ಹೀಗೆ ಸರ್ಕಾರಿ ಜಾಗಗಳನ್ನು ತಮ್ಮ ಅವಶ್ಯಕ ವಾಸಸ್ಥಳ ಅಥವಾ ಕೃಷಿಗಾಗಿ ಹಲವಾರು ವರ್ಷಗಳಿಂದ ಬಳಕೆ ಮಾಡಿಕೊಳ್ಳುತ್ತಿರುವವರಿಗೆ ಸರ್ಕಾರವು

ಆ ಜಾಗಗಳನ್ನು ಅವರ ಹೆಸರಿಗೆ ಮಾಡಿಕೊಳ್ಳಲು ಕಾನೂನು ಮೂಲಕ ಅವಕಾಶ ಕಲ್ಪಿಸಿ ಕೊಡುವುದನ್ನು ಅಕ್ರಮ ಸಕ್ರಮ ಎನ್ನುವರು. 

 ಜನರು ಅಕ್ರಮವಾಗಿ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದರು ಕೂಡ ಸರ್ಕಾರವು ಜನರ ಉಪಯೋಗಕ್ಕಾಗಿ ಹಾಗೂ

ಜನರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅವರು ಬಳಸಿಕೊಳ್ಳುವ ಜಾಗಗಳನ್ನು ಅವರ ಹೆಸರಿಗೆ ಬಿಟ್ಟುಕೊಡುವ ಯೋಜನೆಯಾಗಿದೆ. 

ಸಕಾ೯ರಿ ಕಾಯಿದೆಗಳು! 

ಭೂ ಕಂದಾಯ ಕಾಯ್ದೆ 94 ಬಿ ಅಡಿಯಲ್ಲಿ ಕೃಷಿ ಭೂಮಿಯನ್ನು ಇಂತಿಷ್ಟು ವರ್ಷದಿಂದ ಇಷ್ಟು ವರ್ಷದವರೆಗೆ ಅಥವಾ ಈ ಇಸವಿಯಿಂದ

ಈ ಇಸವಿವರೆಗೆ ಕೃಷಿಗಾಗಿ ಬಳಕೆಮಾಡಿಕೊಳ್ಳುತ್ತಿರುವವರು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಆ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಹರು ಎಂದು ಸರ್ಕಾರವು ಆದೇಶ ಹೊರಡಿಸುತ್ತದೆ

ಅಂತಹ ಅಹ೯ ರೈತರು ಮಾತ್ರ ಈ ಯೋಜನೆ ಅಡಿಯಲ್ಲಿ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ. 

 ಅದರಂತೆ ವಾಸಕ್ಕಾಗಿ ಬಳಸಿಕೊಳ್ಳುತ್ತಿರುವ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಭೂ ಕಂದಾಯ ಕಾಯ್ದೆ 94 ಸಿ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ

ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಮನೆ ಕಟ್ಟಿಕೊಂಡ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

ಇನ್ನು ನಗರ ಪ್ರದೇಶದಲ್ಲಿ ಇದ್ದರೆ 94 ಸಿ(ಸಿ) ಅಡಿಯಲ್ಲಿ ಈ ಯೋಜನೆ ಅಡಿಯಲ್ಲಿ ಈ ಇಸವಿಯವರೆಗೆ ಇಂತಿಷ್ಟು ವಷ೯ದಿಂದ

ಅದೇ ಜಾಗದಲ್ಲಿ ವಾಸ ಮಾಡುತ್ತಿರುವವರು ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು ಎಂದು ಸಕಾ೯ರ ಆದೇಶ ಹೊರಡಿಸುತ್ತದೆ.

ಅಂತಹ ಅಹ೯ ಅತಿಕ್ರಮ ಮಾಡಿರುವವರು ಕೂಡ ಈ ಯೋಜನೆ ಅಡಿಯಲ್ಲಿ ಜಾಗವನ್ನು ಸಕ್ರಮ ಮಾಡಿಕೊಳ್ಳಬಹುದು. 

ಅಹ೯ ಬಡಜನರಿಗೆ ಮಾತ್ರ ಅಕ್ರಮ- ಸಕ್ರಮವಾಗುವುದು(Akrama sakrama)! 

ಸಕಾ೯ರವು ನಿವೇಶನ ಅಥವಾ ಕೃಷಿ ಭೂಮಿ ನೀಡಲು ಕೆಲವೊಂದು ನಿಯಮಗಳನ್ನು ಪ್ರಚುರ ಪಡಿಸುತ್ತದೆ. ಅದೆಲ್ಲಾ ನಿಯಮಗಳನ್ನು ಅಹ೯ರಾದಲ್ಲಿ ಮಾತ್ರ ಈ ಯೋಜನೆ ಅಡಿಯಲ್ಲಿ ಅವರು ನಿವೇಶನ ಅಥವಾ ಕೃಷಿ ಭೂಮಿ ಪಡೆಯಬಹುದು. 

ಮುಖ್ಯವಾಗಿ ನಿವೇಶನ ಅಥವಾ ಕೃಷಿ ಭೂಮಿ ಅತಿಕ್ರಮ ಮಾಡಿರುವವರು ಸ್ಥಿರಾಸ್ತಿ ಹೊಂದಿರಬಾರದು. ಸ್ವಂತ ನಿವೇಶನ ಅಥವಾ ಸ್ವಂತ ಕೃಷಿ ಭೂಮಿ ಇದ್ದರೂ ಕೂಡ ಅತಿಕ್ರಮ ಮಾಡಿದ್ದಲ್ಲಿ

ಈ ಯೋಜನೆಗೆ ಅಹ೯ರಾಗುವುದಿಲ್ಲ. ಯಾವುದೇ ಸ್ಥಿರಾಸ್ತಿ ಇಲ್ಲದಿದ್ದಲ್ಲಿ ಮಾತ್ರ ಈ ಯೋಜನೆಯಡಿಯಲ್ಲಿ ಸಕಾ೯ರಿ ಭೂಮಿಯನ್ನು ಪಡೆದುಕೊಳ್ಳಬಹುದಾಗಿದೆ. 

ಧನ್ಯವಾದಗಳು

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"