Free UPSC KPSC CA Couching :: ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಮತ್ತು ಸಿಎ ಉಚಿತ ಕೋಚಿಂಗ್!!! “ಯುವಿಕಾ” ಸ್ಪರ್ಶಾ ಟ್ರಸ್ಟ್‌ನಿಂದ ತರಬೇತಿ!!
ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ “ಯುವಿಕಾ” ಸ್ಪರ್ಶಾ ಟ್ರಸ್ಟ್‌ನಿಂದ ಐಎಎಸ್, ಕೆಎಎಸ್ ಮತ್ತು ಸಿಎ ಉಚಿತ ತರಬೇತಿ!!
Empowering Dreams: Sparsha Trust’s ‘Yuvika’ Initiative – Transforming Lives through Free UPSC, KPSC, and CA Coaching !!
ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ “ಯುವಿಕಾ” ಎಂಬ ವಿಶೇಷ ಕಾರ್ಯಕ್ರಮವನ್ನು ಸ್ಪರ್ಶಾ ಟ್ರಸ್ಟ್ ಆರಂಭಿಸಿದೆ. ಇದರ ಮೂಲಕ ಐಎಎಸ್, ಕೆಎಎಸ್ ಮತ್ತು ಸಿಎ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು.
ಬಡತನದ ಬೇಗೆಯಲ್ಲಿ ಬೆಂದು, ಕಷ್ಟಗಳ ನಡುವೆಯೂ ದೊಡ್ಡ ಕನಸುಗಳನ್ನು ಹೊತ್ತಿರುವ ಪ್ರತಿಭಾವಂತ ಹೆಣ್ಣುಮಕ್ಕಳಿಗಾಗಿ ‘ಸ್ಪರ್ಶಾ ಟ್ರಸ್ಟ್’ (Sparsha Trust) ಒಂದು ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ.
ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಬಳಲುತ್ತಿರುವ ಹೆಣ್ಣುಮಕ್ಕಳನ್ನು ಐಎಎಸ್ (UPSC), ಕೆಎಎಸ್ (KPSC) ಮತ್ತು ಸಿಎ (CA) ನಂತಹ ಉನ್ನತ ಹುದ್ದೆಗಳಿಗೆ ಸಿದ್ಧಗೊಳಿಸಲು ‘ಯುವಿಕಾ’ (Yuvika) ಎಂಬ ಒಂದು ಮಹತ್ವಪೂರ್ಣ ಯೋಜನೆಯನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅಂಶಗಳು ಯಾವುವು?
Important aspects of the program?
ಈ ಯೋಜನೆಯು ಕೇವಲ ತರಬೇತಿಗೆ ಸೀಮಿತವಾಗದೆ, ವಿದ್ಯಾರ್ಥಿನಿಯರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅವರನ್ನು ಬೆಂಬಲಿಸುತ್ತದೆ:-
* 3 ವರ್ಷಗಳ ಉಚಿತ ಸೌಲಭ್ಯಗಳು, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 3 ವರ್ಷಗಳವರೆಗೆ ಉಚಿತ ವಸತಿ ಸೌಕರ್ಯ, ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಉತ್ತಮ ಗುಣಮಟ್ಟದ ಕೋಚಿಂಗ್ ಅನ್ನು ನೀಡಲಾಗುವುದು.
• ವೃತ್ತಿಪರ ಮಾರ್ಗದರ್ಶನ ಸೌಲಭ್ಯ, ಅನುಭವಿ ತಜ್ಞರಿಂದ ನಿರಂತರವಾದ ಮಾರ್ಗದರ್ಶನ ಮತ್ತು ಸೂಕ್ತ ಸಲಹೆಗಳನ್ನು ನೀಡುವ ವ್ಯವಸ್ಥೆ ಇರುತ್ತದೆ.
* ಉದ್ಯೋಗದವರೆಗೂ ಬೆಂಬಲ, ಅಭ್ಯರ್ಥಿಗಳು ಉದ್ಯೋಗವನ್ನು ಪಡೆಯುವವರೆಗೂ ಈ ಪ್ರೋತ್ಸಾಹ ಮತ್ತು ಬೆಂಬಲವು ಮುಂದುವರೆಯುತ್ತದೆ.
ಅರ್ಹತೆಗಳೇನು?
Eligibility?
• ಅರ್ಜಿದಾರರು ಕರ್ನಾಟಕದವರಾಗಿರಬೇಕು.
* ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗೆ 21 ರಿಂದ 27 ವರ್ಷ ವಯಸ್ಸಿನ ಒಳಗಿರಬೇಕು.
• ವಿಶೇಷ ಆದ್ಯತೆ ಸರ್ಕಾರಿ ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳ (Child Care Institutions) ಆಶ್ರಯದಲ್ಲಿ ಬೆಳೆದ ಹೆಣ್ಣುಮಕ್ಕಳು ಮತ್ತು ಪೋಷಕರನ್ನು ಕಳೆದುಕೊಂಡ (ಅನಾಥ) ಹೆಣ್ಣುಮಕ್ಕಳಿಗೆ ಈ ಅವಕಾಶದಲ್ಲಿ ವಿಶೇಷ ಆದ್ಯತೆಯನ್ನು ನೀಡಲಾಗುವುದು.
ಸಂಪರ್ಕಿಸಬೇಕಾದ ವಿವರಗಳು:-
contact information:-
* ಸ್ಥಳ: ಸ್ಪರ್ಶಾ ಟ್ರಸ್ಟ್ ‘ಯುವಿಕಾ‘ ಕೇಂದ್ರ, ಯಲಹಂಕ, ಬೆಂಗಳೂರು ಉತ್ತರ.
• ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ: https://shorturl.at/kOd54
* ದೂರವಾಣಿ ಸಂಖ್ಯೆ: +91 8660096834, +91 8296526507, +91 8431471590
• ಇಮೇಲ್ ವಿಳಾಸ: yuvika@sparsha.org
ಸ್ಪರ್ಶಾ ಟ್ರಸ್ಟ್‌ನ ‘ಯುವಿಕಾ‘ ಯೋಜನೆ ಬರೀ ಶಿಕ್ಷಣದ ಕಾರ್ಯಕ್ರಮ ಅಷ್ಟೇ ಅಲ್ಲ, ಇದು ಸಮಾಜದ ಕಡೆಗಣಿಸಲ್ಪಟ್ಟ ಮತ್ತು ಅವಕಾಶ ಸಿಗದ ಹೆಣ್ಣು ಮಕ್ಕಳನ್ನು ಶಕ್ತಿಯುತ ನಾಯಕಿಯರನ್ನಾಗಿ ಮಾಡುವ ಒಂದು ಮುಖ್ಯವಾದ ಸಾಮಾಜಿಕ ಬದಲಾವಣೆಯಾಗಿದೆ.
ದುಡ್ಡಿಲ್ಲದ ಕಾರಣ ಮತ್ತು ಮನೆಯವರ ಬೆಂಬಲ ಇಲ್ಲದೆ ತುಂಬಾ ಬುದ್ಧಿವಂತ ಹೆಣ್ಣುಮಕ್ಕಳು ತಮ್ಮ ಆಸೆಗಳನ್ನು ಅರ್ಧಕ್ಕೆ ಬಿಟ್ಟುಬಿಡುತ್ತಾರೆ. ಅಂಥ ಹೆಣ್ಣುಮಕ್ಕಳಿಗೆ 3 ವರ್ಷ ಉಚಿತವಾಗಿ ವಸತಿ,
ಊಟ ಮತ್ತು ಉತ್ತಮ ತರಬೇತಿ ಕೊಡುವುದರ ಮೂಲಕ ಈ ಯೋಜನೆ ಅವರಿಗೆ ದುಡ್ಡು ಸಂಪಾದಿಸುವ ಸ್ವಾತಂತ್ರ್ಯ ಮತ್ತು ಗೌರವದ ಜೀವನವನ್ನು ಕೊಡುತ್ತದೆ.
ಐಎಎಸ್, ಕೆಎಎಸ್ ಮತ್ತು ಸಿಎ ತರಹದ ದೊಡ್ಡ ಹುದ್ದೆಗಳಿಗೆ ಈ ಹೆಣ್ಣುಮಕ್ಕಳು ತಯಾರಾದಾಗ ಅದು ಬರೀ ಅವರ ಜೀವನವನ್ನು ಮಾತ್ರ ಬದಲಾಯಿಸದೆ ಇಡೀ ಸಮುದಾಯದ ಯೋಚನೆಯನ್ನು ಬದಲಾಯಿಸುತ್ತದೆ.
ಆಡಳಿತ ಮತ್ತು ಕೆಲಸದ ಜಾಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದಷ್ಟು ಸಮಾಜದಲ್ಲಿ ಗಂಡು ಹೆಣ್ಣು ಸಮಾನತೆ ಮತ್ತು ಮಹಿಳೆಯರ ಪರವಾದ ನಿರ್ಧಾರಗಳು ಬಲವಾಗುತ್ತವೆ.
ಕೊನೆಯದಾಗಿ ಈ ಯೋಜನೆಯು ಬಲಹೀನ ಹೆಣ್ಣುಮಕ್ಕಳಲ್ಲಿ ಧೈರ್ಯ ತುಂಬಿ ಅವರು ಸಮಾಜಕ್ಕೆ ಭಾರವಾಗದೆ ನಾಳಿನ ಸಮಾಜಕ್ಕೆ ಸಹಾಯ ಮಾಡುವ ಶಕ್ತಿಯಾಗಿ ಬೆಳೆಯಲು ಗಟ್ಟಿಯಾದ ಅಡಿಪಾಯ ಹಾಕಿಕೊಡುತ್ತದೆ.
The ‘Yuvika‘ project from Sparsha Trust
Its not more than just a educational program. It’s a major social change that aims to make girls from poor backgrounds strong leaders.
Many smart young women have to give up on their goals because they don’t have enough money or family support. This program helps these girls by giving them free housing, food, and excellent training for three years.
This gives them the chance to be financially independent and live a respectable life. When these women get ready for important jobs like IAS, KAS, and CA, it not only changes their own lives but also the way their whole community thinks.
When more women hold positions in government and professional fields, it strengthens gender equality and leads to more decisions that support women in society.
In the end, this project gives vulnerable girls courage, making sure they become a capable force that helps build a better future, instead of being a burden to society. It sets a strong base for their future lives.
ಧನ್ಯವಾದಗಳು
Thank you.
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V. K
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply