Flood relief fund:: 2100 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ! ಸಚಿವ ಚಲುವರಾಯಸ್ವಾಮಿ ಹೇಳಿಕೆ!
2024 ನೇ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸುವ ಕೃಷಿ ಮೇಳವು ಜಿಕೆವಿಕೆ ಆವರಣದಲ್ಲಿ ನಡೆದಿದ್ದು, ಮೇಳವನ್ನು ಉದ್ಘಾಟಿಸಿ ಮಾತನಾಡಿದ
ಕೃಷಿ ಸಚಿವ ಚಲುವರಾಯಸ್ವಾಮಿರವರು ಆಧುನಿಕ ತಂತ್ರಜ್ಞಾನ ಹೊಂದಿರುವ ಸಮಗ್ರ ಕೃಷಿ ಮಾಡುವುದು ರೈತರಿಗೆ ಲಾಭದಾಯಕವಾಗಿದೆ ಎಂದು ರೈತರಿಗೆ ಕಿವಿಮಾತು ಹೇಳಿದರು.
ಬೆಳೆವಿಮೆ ಪರಿಹಾರ ರೈತರಿಗೆ ಜಮೆ!
ಮುಂದುವರೆದು, ರಾಜ್ಯದಲ್ಲಿ ಈ ವಷ೯ ನೆರೆ ಹಾವಳಿಯಿಂದ ಆಥಿ೯ಕ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ರಾಜ್ಯ ಸಕಾ೯ರದಿಂದ ಈಗಾಗಲೇ 2100 ಕೋಟಿ ಬೆಳೆ ಹಾನಿ ಪರಿಹಾರ ಮೊತ್ತವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರಾಜ್ಯದ ಹಲವಡೆ ವಾಡಿಕೆ ಗಿಂತ ಅಧಿಕ ಮಳೆಯಾಗಿದ್ದು ಇದರಿಂದಾಗಿ ನೆರೆ ಪ್ರವಾಹ ಉಂಟಾಗಿ ಹೊಲಗದ್ದೆಗಳಲ್ಲಿ ನೀರು ನಿಂತು ರೈತರಿಗೆ ಬೆಳೆ ಹಾನಿಯಾಗಿತ್ತು.
ಅದಕ್ಕಾಗಿ ರೈತರು ಬೆಳೆ ಸಮೀಕ್ಷೆ ಮಾಡುವಂತೆ ಸರ್ಕಾರಕ್ಕೆ ಕೋರಿದರು ಸರ್ಕಾರವೂ ಕೂಡ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ಬೆಳೆ ವಿಮೆ ಪರಿಹಾರಕ್ಕೆ ಕ್ರಮ ಕೈಗೊಂಡಿತ್ತು.
ಇದೀಗ ಬೆಳೆ ವಿಮೆ ಪರಿಹಾರ ಮೊತ್ತವು ರೈತರಿಗೆ ತಲುಪಿದ್ದು ರಾಜ್ಯದಲ್ಲಿ 2100 ಕೋಟಿ ರೂಪಾಯಿಗಳ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಕೊಡಲಾಗಿದೆ. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಆಸರೆಯಾಗುವ ಕ್ರಮ ಕೈಗೊಂಡಿದೆ.
1000 ಕೋಟಿ ರೂ. ಸಬ್ಸಿಡಿ!
ಇದಲ್ಲದೇ ರಾಜ್ಯ ಸರ್ಕಾರ ಕಳೆದ ವರ್ಷ ರೈತರಿಗೆ 1000 ಕೋಟಿ ರೂಪಾಯಿ ಸಬ್ಸಿಡಿಯೊಂದಿಗೆ ಕೃಷಿ ಯಂತ್ರೋಪಕರಣಗಳನ್ನು, ನೀರಾವರಿ ಸಲಕರಣೆಗಳನ್ನು ವಿತರಿಸಿದೆ ರೈತರಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಆರ್ಥಿಕ ನೆರವು ಹಾಗೂ ಬೃಹತ್ ಬೆಳೆ ಕಟಾವು ಯಂತ್ರಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಜಿಕೆವಿಕೆ ಸಂಸ್ಥೆಗಳು ಆಹಾರ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು,
ಸಂಶೋಧನೆ ನಡೆಸಿ ಕಡಿಮೆ ನೀರು ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ನೀಡುವ ಹೊಸ ಹೊಸ ತಳಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ರೈತರು ಈ ಬಗ್ಗೆ ವಿಶ್ವವಿದ್ಯಾಲಯ, ಜಿಕೆವಿಕೆ ಸಂಸ್ಥೆಗಳು ಅತವಾ ಕೃಷಿ ಇಲಾಖೆಗಳಿಂದ ಮಾಹಿತಿ ಪಡೆದು ಹೊಸ ಹೊಸ ತಳಿಗಳ ಕೃಷಿ ಮಾಡಿ ಸದುಪಯೋಗ ಪಡೆದುಕೊಂಡು ಉತ್ಪಾದನೆ ಹೆಚ್ಚಿಸಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಳೆ ಪರಿಹಾರ (crop insurance) ಅರ್ಜಿ ಸ್ಥಿತಿ ಪರಿಶೀಲಿಸುವುದು ಹೇಗೆ?
ನೀವು ಮೊದಲಿಗೆ ಸಂರಕ್ಷಣೆ ಎಂಬ ವೆಬ್ಸೈಟಿಗೆ ಭೇಟಿ ನೀಡಬೇಕು ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.samrakshane.karnataka.gov.in/
*ನಂತರ ಅಲ್ಲಿ ವರ್ಷ ಹಾಗೂ ಋತು ಸೆಲೆಕ್ಟ್ ಮಾಡಿ ಗೋ(Go) ಬಟನ್ ಕ್ಲಿಕ್ ಮಾಡಿ
Pic 1: select year
*ನಂತರ ಓಪನ್ ಆಗುವ ಪೇಜ್ ನಲ್ಲಿ ಚಿತ್ರದಲ್ಲಿ ತೋರಿಸಿರುವಂತೆ ಫಾಮ೯ರ್ಸ್ ಆಯ್ಕೆಯಲ್ಲಿರುವ ಚೆಕ್ ಸ್ಟೇಟಸ್ (check status) ಎಂಬ ಆಪ್ಷನ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ 2
Pic 2: click on check status
*ನಂತರ ಓಪನ್ ಆಗೋ ಪೇಜ್ ನಲ್ಲಿ ನಿಮ್ಮ ವಿಮೆ ಪಾವತಿಸಿದ ಅರ್ಜಿಯ ಸಂಖ್ಯೆ ಇದ್ದರೆ ಅದನ್ನು ಅಥವಾ ನಿಮ್ಮ ಆಧಾರ್ ಕಾರ್ಡ್ ನಂಬರ್ ಅಥವಾ ಮೊಬೈಲ್ ನಂಬರ್ ಹಾಕಿ ಹಾಗೂ ಕೊಟ್ಟಿರುವ ಕ್ಯಾಪ್ಟಾ ಎಂಟರ್ ಮಾಡಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ
Pic 3: enter the aadhar/mob no
*ಆಗ ನಿಮಗೆ ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಸಿಗುತ್ತದೆ. ಅದರಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದ್ದರೆ ಕಂಪನಿಯಿಂದ ಅರ್ಜಿ ಸ್ವೀಕರಿಸಲಾಗಿದೆ ಎಂದು ತೋರಿಸಿರುತ್ತಾರೆ. ನಿಮ್ಮ ಹೆಸರಿನ ಮುಂದಿನ ಕೊನೆಯ ಕಾಲಂ ನಲ್ಲಿ ಸೆಲೆಕ್ಟ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿ ಆಗ ಇನ್ನಷ್ಟು ವಿವರ ತೋರಿಸುತ್ತದೆ.
*ಆಗ ಓಪನ್ ಆಗುವ ಪೇಜ್ ನಲ್ಲಿ ವೀವ್ ಡಿಟೇಲ್ಸ್ ಎಂದಿದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿ ಸಿಗುತ್ತದೆ.
*ಅದರಲ್ಲಿ ಯಾವ ಸರ್ವೆ ನಂಬರ್ ಗೆ ವಿಮೆ ಕಟ್ಟಿದ್ದೀರಿ, ಯಾವ ಬೆಳೆ ಎಷ್ಟು ವಿಮೆ ಕಟ್ಟಿದ್ದೀರಿ ಎಂಬೆಲ್ಲಾ ಮಾಹಿತಿ ತೋರಿಸುತ್ತದೆ.
ಹೀಗೆ ನೀವು ನಿಮ್ಮ ಬೆಳೆ ಹಾನಿ ಪರಿಹಾರ(crop insurance) ಅರ್ಜಿಯ ಸ್ಥಿತಿ ಏನು? ಇನ್ನೂ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ಮೊಬೈಲ್ ನಲ್ಲಿಯೇ ಪರಿಶೀಲಿಸಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ