50,000 Compensation for Power Cut to Farmer :: ವಿದ್ಯುತ್ ವ್ಯತ್ಯಯದಿಂದ ಉಂಟಾದ ತೊಂದರೆಗೆ 50 ಸಾವಿರ ಬೆಳೆ ಹಾನಿ ಪರಿಹಾರ!!!
ಗ್ರಾಹಕ ನ್ಯಾಯಲಯದಲ್ಲಿ ಬೀದರ್ ನ ರೈತನಿಗೆ ಅಭೂತಪೂರ್ವ ಯಶಸ್ಸು:: ವಿದ್ಯುತ್ ವ್ಯತ್ಯಯದಿಂದ ಉಂಟಾದ ತೊಂದರೆಗೆ 50 ಸಾವಿರ ಬೆಳೆ ಹಾನಿ ಪರಿಹಾರ!!!!
Recently in news, farmer named Sanjukumar virappa uchche from aurad, bidar district who claims 50000 amount as crop damage compensation. damage is due to variation of electricity supply to the pumpset by JESCOM.
ಸಾವಿರಾರು ರೈತರು ತಾವು ಬೆಳೆದ ಬೆಳೆಗಳು, ಹಾಳಾದಾಗ, ಆ ಬೆಳೆ ಹಾಳಾಗಲು ಮೂಲ ಕಾರಣ ಏನೆಂಬುದನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಹಲವಾರು ಜನ ರೈತರು ತಮ್ಮ ಹಕ್ಕಿನ ಜೊತೆಗೆ ಬೆಳೆದ ಬೆಳೆಯ ಲಾಭವನ್ನು ಕಳೆದುಕೊಳ್ಳುತ್ತ ಸಾಗುತ್ತಾರೆ.
ಆದರೆ ಬೀದರ್ ಜಿಲ್ಲೆಯ ಔರದ್ ಭಾಗದ ಒಬ್ಬ ಸಾಮಾನ್ಯ ರೈತನಾದ “ಶ್ರೀ ಸಂಜು ಕುಮಾರ್ ವೀರಪ್ಪ ಉಚ್ಚೆ” ಅವರು ತಮ್ಮ ನೀರಾವರಿ ತೋಟದ ಪಂಪ್ ಸೆಟ್ ಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆ ಆಗದೇ ಇರುವುದರಿಂದ, ಬೆಳೆ ನಾಶವಾಗಿದೆ.
ಅಲ್ಲದೆ,ಇದನ್ನು ಮನಗಂಡ ರೈತ ಈ ವಿದ್ಯುತ್ ಸಮಸ್ಯೆಗೆ “ಜೆಸ್ಕಾಂ ನೇರ ಹೊಣೆ” ಎಂದು ಗ್ರಾಹಕರ ನ್ಯಾಯಾಲಯದಲ್ಲಿ ದಾವೇ ಹೂಡಿ ಬೆಳೆ ಹಾನಿ ಪರಿಹಾರ ಹಣಕ್ಕೆ ಬೇಡಿಕೆ ಇಟ್ಟರು.
ವಾದ ವಿವಾದ ಆಲಿಸಿದ ಗ್ರಾಹಕರ ನ್ಯಾಯಾಲಯವು, ರೈತನ ಪರಿಸ್ಥಿತಿ ಮತ್ತು ಮನಸ್ಥಿತಿ ಯನ್ನು ಅರಿತು “ಐತಿಹಾಸಿಕ ಆದೇಶ” ನೀಡಿದೆ.
ಈ ಆದೇಶದ ಮಹತ್ವ ತಿಳಿದು ಕೊಳ್ಳುವುದು ಪ್ರತಿಯೊಬ್ಬ “ರೈತರ ಅವಶ್ಯಕತೆ” ಎನ್ನಬಹುದು.
ಆದೇಶದ ಪ್ರಕಾರ, ಕೃಷಿ ಪಂಪ್ ಸೆಟ್ ಗೆ “ಸಮರ್ಪಕ ವಿದ್ಯುತ್ ಪೂರೈಕೆ ಆಗದೆ ಇದ್ದುದರಿಂದ ರೈತನ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ,
ಹಾಗಾಗಿ “ಜೆಸ್ಕಾಂ ಕಂಪನಿ”ಯು ರೈತನಿಗೆ “50 ಸಾವಿರ” ರೂಪಾಯಿಗಳನ್ನು ಬೆಳೆ ಹಾನಿಪರಿಹಾರವನ್ನಾಗಿ
ಮತ್ತು .
5000 ರೂಪಾಯಿಗಳು ದಾವೇ ಹೂಡಿಕೆಯ ಖರ್ಚನ್ನು 45 ದಿನಗಳ ಒಳಗಾಗಿ ರೈತನಿಗೆ ನೀಡಬೇಕೆಂದು ಆದೇಶ ಪಾಲಿಸಬೇಕೆಂದು ಜೆಸ್ಕಾಂ ಕಂಪನಿಗೆ ಸೂಚಿಸಲಾಗಿದೆ.
ಹಾಗಾದರೆ ಗ್ರಾಹಕರ ನ್ಯಾಯಾಲಯದ ಎಂದರೇನು?
what is Consumer Disputes Redressal Commission ?
ಭಾರತದಲ್ಲಿ “ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು” ಸ್ಥಾಪಿಸಲಾದ “ವಿಶೇಷ ನ್ಯಾಯಾಂಗ” ವ್ಯವಸ್ಥೆಯೇ ಗ್ರಾಹಕ ನ್ಯಾಯಾಲಯ. ಇದನ್ನು ಅಧಿಕೃತವಾಗಿ Consumer Disputes Redressal Commission ಎಂದು ಕರೆಯಲಾಗುತ್ತದೆ.
ಗ್ರಾಹಕ ನ್ಯಾಯಾಲಯದ ಉದ್ದೇಶ ಏನು?
Consumer Disputes Redressal Commission objective?
ಗ್ರಾಹಕರಿಗೆ ಆಗುವ ಅನ್ಯಾಯ, ವಂಚನೆ, ದೋಷಪೂರಿತ ಸರಕು/ಸೇವೆಗಳ ವಿರುದ್ಧ ತ್ವರಿತ ನ್ಯಾಯ ಒದಗಿಸುವುದು.
ಕಂಪನಿ ಅಥವಾ ವ್ಯಾಪಾರಿಗಳ ಅಸಮರ್ಪಕ ಸೇವೆಗಳಿಗೆ ಪರಿಹಾರ ಕೊಡಿಸುವುದು.
ಗ್ರಾಹಕನ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ವಿಧಾನ ಬಹಳ ಸರಳವಾಗಿದ್ದು ದೂರು ಸಲ್ಲಿಸುವವರು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ದೂರು ಸಲ್ಲಿಸಬಹುದು.
ಗ್ರಾಹಕ ನ್ಯಾಯಾಲಯಕ್ಕೆ ಆನ್ಲೈನ್ ಮುಖಾಂತರ ದೂರು ಸಲ್ಲಿಸುವ ವಿಧಾನ?
How to file a complaint in Consumer Disputes Redressal Commission on online:-
Step 1:- ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಜಾಲತಾಣ ಪ್ರವೇಶಿಸಬೇಕು.
https://consumerhelpline.gov.in/public/
Click above link
Step 2 :- ಈ ವೆಬ್ಸೈಟ್ನಲ್ಲಿ ದೂರುದಾರರು ತಮ್ಮ “ವೈಯಕ್ತಿಕ ವಿವರ”ಗಳನ್ನು ನೀಡಿ, “ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ” ಇಂದ ಲಾಗಿನ್ ಆಗಬೇಕು.
Step 3:- ಲಾಗಿನ್ ಆದ ನಂತರ ದೂರುದಾರರು ತಮ್ಮ “ದೂರನ್ನು ರಿಜಿಸ್ಟರ್” ಮಾಡಬೇಕು. ಇಲ್ಲಿ ದೂರುದಾರರು “ಸಮಸ್ಯೆಯ ವವಿವರ”ಗಳನ್ನು ಸ್ಪಷ್ಟವಾಗಿ ಬರೆಯಲೇಬೇಕು(ಏನಾಯಿತು, ಯಾವ ದಿನ, ಎಷ್ಟು ನಷ್ಟ).
Step 4:- ನಂತರ “ದಾಖಲೆ”ಗಳನ್ನು(ಬಿಲ್, ರಸೀದಿ, ಒಪ್ಪಂದ, ಸಂದೇಶಗಳು, ಫೋಟೋ). “ಅಪ್‌ಲೋಡ್” ಮಾಡಬೇಕು.
Step 5:- ನಂತರ ಅನ್ವಯವಾಗುವ ನ್ಯಾಯಾಲಯ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.
Step 6:- ಕೊನೆಗೆ Submit ಮಾಡಿದ, ನಂತರ ರಸೀದಿ/ಕೇಸ್ ನಂಬರ್ ಪಡೆಯಬಹುದು.
Step 7:- Submit ಮಾಡಿದ ಕೇಸ್ ಸ್ಥಿತಿಯನ್ನು e-Daakhil ಪೋರ್ಟಲ್‌ನಲ್ಲೇ ಪರಿಶೀಲಿಸಬಹುದು.
ಗ್ರಾಹಕರು ಆಫ್ ಲೈನ್ ಮೂಲಕವು ಸಹ ದೂರು ಸಲ್ಲಿಸ ಬಹುದು.
Consumers can file a complaint through offline also :-
ಹತ್ತಿರದ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಹೋಗಿ.
ಲಿಖಿತ ದೂರು ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳ ಪ್ರತಿಗಳನ್ನು ಜೋಡಿಸಿ.
ನ್ಯಾಯಾಲಯ ಶುಲ್ಕ ಪಾವತಿಸಿ.
ಕೇಸ್ ನಂಬರ್ ಪಡೆದು ವಿಚಾರಣೆಗೆ ಹಾಜರಾಗಬೇಕು.
ಈ ರೀತಿಯಾಗಿ ಗ್ರಾಹಕರು ತಮಗೆ ಯಾವುದೇ ರೀತಿಯ ಮೋಸ ಅನ್ಯಾಯ ಅಥವಾ ತೊಂದರೆ ಆದಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಬಹುದು.
ಸಾಮಾನ್ಯವಾಗಿ ರೈತರು ವಿದ್ಯುತ್ ವ್ಯತ್ಯಯದಿಂದ ಬೆಳೆ ಹಾನಿ ಆದಾಗ ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿಬಿಡುತ್ತಾರೆ
ಅಂತ ರೈತರಿಗೆ ಸಂಜು ಕುಮಾರ್ ವೀರಪ್ಪ ಒಂದು ಜೀವಂತ ಉದಾರಣೆ ಎನ್ನಬಹುದು. ಬೆಳೆ ಹಾನಿ ಎನ್ನುವುದು ಕೇವಲ ಪ್ರಕೃತಿ ವಿಕೋಪಗಳಿಂದ ಹಾನಿ ಆಗುವುದಿಲ್ಲ,
ಕೆಲವೊಮ್ಮೆ ಮನುಷ್ಯ ಮನುಷ್ಯನ ಕೆಲಸಗಳಿಂದಲೂ ಹಾನಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರು ಗ್ರಾಹಕ ನ್ಯಾಯಾಲಯವನ್ನು ಸಂಪರ್ಕಿಸಬಹುದು.
The Consumer Disputes Redressal Commission plays a vital role in protecting consumer rights in India.
It provides a simple, affordable, and speedy justice system for consumers. Sri SANJUKUMAR VEERAPPA UCHCHE Is best living example set by Consumer Disputes Redressal Commission because due to electricity uncertainty he filed a complaint against “JESCOM”. and claim 50000 crop damage compensation.

Uneven flow due to power cut
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply